ಜಿಮ್​ನಲ್ಲಿ 72ರ ಅಜ್ಜಿಯ ಸಖತ್ ವರ್ಕೌಟ್: ವೈರಲ್ ಆಯ್ತು ವಿಡಿಯೋ

ಹೌದು, ಮೇವೆದರ್​ ಮಾಡುವ ಕಸರತ್ತುಗಳನ್ನು 72ರ ಅಜ್ಜಿ ಸಲೀಸಾಗಿ ಮಾಡಿ ಮುಗಿಸುತ್ತಾರೆ. ಇದೆಲ್ಲವನ್ನು ಗಮನಿಸಿ ಜಿಮ್​ ಪಟುವೊಬ್ಬರು ಲಾರೆನ್​ ವರ್ಕೌಟ್​ ಅನ್ನು ವಿಡಿಯೋ ಮಾಡಿದ್ದಾರೆ.

zahir | news18
Updated:February 6, 2019, 12:48 PM IST
ಜಿಮ್​ನಲ್ಲಿ 72ರ ಅಜ್ಜಿಯ ಸಖತ್ ವರ್ಕೌಟ್: ವೈರಲ್ ಆಯ್ತು ವಿಡಿಯೋ
ಲಾರೆನ್
zahir | news18
Updated: February 6, 2019, 12:48 PM IST
ವಯಸ್ಸಾಗುತ್ತಿದ್ದಂತೆ ಪ್ರತಿಯೊಂದಕ್ಕೂ ಇನ್ನೊಬ್ಬರನ್ನು ಆಶ್ರಯಿಸುವುದು ಸಾಮಾನ್ಯ. ಒಬ್ಬರ ಕೈ ಹಿಡಿದು ನಡೆದರೆ ಅದೇ ಹೆಚ್ಚು ಎಂದು ಭಾವಿಸುವವರ ಮಧ್ಯೆ ವೃದ್ಧೆಯೊಬ್ಬರು ಜಿಮ್​ನಲ್ಲಿ ಸಖತ್​ ವರ್ಕೌಟ್​ ಮಾಡಿ ಸುದ್ದಿಯಾಗಿದ್ದಾರೆ.

72ರ ಹರೆಯದ ಲಾರೆನ್​ ಎಂಬ ಮಹಿಳೆಯು ಯುವಕರೇ ನಾಚುವಂತೆ ಸಲೀಸಾಗಿ ಜಿಮ್​ನಲ್ಲಿ ಕಸರತ್ತು ನಡೆಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಲಾರೆನ್​ ಮಾಡುತ್ತಿರುವುದು ಸಾಮಾನ್ಯ ವ್ಯಾಯಾಮವಲ್ಲ. ಬದಲಾಗಿ ಮಾಜಿ ಬಾಕ್ಸಿಂಗ್ ಚಾಂಪಿಯನ್ ಫ್ಲಾಯ್ಡ್​ ಮೇವೆದರ್​ ಮಾಡುವಂತಹ ಅತ್ಯಂತ ಕಷ್ಟಕರ ತಾಲೀಮು.

ಹೌದು, ಮೇವೆದರ್​ ಮಾಡುವ ಕಸರತ್ತುಗಳನ್ನು 72ರ ಅಜ್ಜಿ ಸಲೀಸಾಗಿ ಮಾಡಿ ಮುಗಿಸುತ್ತಾರೆ. ಇದೆಲ್ಲವನ್ನು ಗಮನಿಸಿ ಜಿಮ್​ ಪಟುವೊಬ್ಬರು ಲಾರೆನ್​ ವರ್ಕೌಟ್​ ಅನ್ನು ವಿಡಿಯೋ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಖತ್​ ವೈರಲ್​ ಆಗಿದ್ದು, ಲಾರೆನ್​ ಅವರ ವರ್ಕೌಟ್​ಗೆ ತಲೆಬಾಗಿದ್ದಾರೆ.
First published:February 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...