HOME » NEWS » Trend » 72 YEAR OLD PENSIONER WHO CALLS HIMSELF MAGNETO BECOMES GERMANYS MOST TATTOOED MAN STG LG

ಅತೀ ಹೆಚ್ಚು ಟ್ಯಾಟೂ ಹಾಕಿಸಿಕೊಂಡಿರುವ ಜರ್ಮನಿಯ ವೃದ್ಧ; ಮ್ಯಾಗ್ನೆಟೋ ಎಂಬ ಹೆಗ್ಗಳಿಕೆಗೆ ಪಾತ್ರ

ಅವರು ತಮ್ಮ ಜೀವನದಲ್ಲಿ 240 ಬಾರಿ ಟ್ಯಾಟೂ ಹಾಕಿಸಿಕೊಳ್ಳಲು ಹೋಗಿದ್ದಾರೆ. ಅದರಲ್ಲಿ ಒಟ್ಟು 720 ಗಂಟೆಗಳು (ಇದು ಸರಿ ಸುಮಾರು ಒಂದು ತಿಂಗಳು) ಟ್ಯಾಟೂ ಹಾಕಿಸಿಕೊಳ್ಳಲು ಸಮಯ ಕಳೆದಿದ್ದಾರೆ. ಅವರ ಎಲ್ಲಾ ಟ್ಯಾಟೂಗಾಗಿ ಸುಮಾರು ಡಾಲರ್ 30,000 ಅಂದರೆ 21,84,861 ರೂಪಾಯಿ ಗಳಷ್ಟು ಹಣ ಖರ್ಚು ಮಾಡಿದ್ದಾರೆ

news18-kannada
Updated:March 14, 2021, 11:04 AM IST
ಅತೀ ಹೆಚ್ಚು ಟ್ಯಾಟೂ ಹಾಕಿಸಿಕೊಂಡಿರುವ ಜರ್ಮನಿಯ ವೃದ್ಧ; ಮ್ಯಾಗ್ನೆಟೋ ಎಂಬ ಹೆಗ್ಗಳಿಕೆಗೆ ಪಾತ್ರ
ಅವರು ತಮ್ಮ ಜೀವನದಲ್ಲಿ 240 ಬಾರಿ ಟ್ಯಾಟೂ ಹಾಕಿಸಿಕೊಳ್ಳಲು ಹೋಗಿದ್ದಾರೆ. ಅದರಲ್ಲಿ ಒಟ್ಟು 720 ಗಂಟೆಗಳು (ಇದು ಸರಿ ಸುಮಾರು ಒಂದು ತಿಂಗಳು) ಟ್ಯಾಟೂ ಹಾಕಿಸಿಕೊಳ್ಳಲು ಸಮಯ ಕಳೆದಿದ್ದಾರೆ. ಅವರ ಎಲ್ಲಾ ಟ್ಯಾಟೂಗಾಗಿ ಸುಮಾರು ಡಾಲರ್ 30,000 ಅಂದರೆ 21,84,861 ರೂಪಾಯಿ ಗಳಷ್ಟು ಹಣ ಖರ್ಚು ಮಾಡಿದ್ದಾರೆ
  • Share this:
ಕೆಲವು ವರ್ಷಗಳ ಹಿಂದೆ ದೇಹದ ಮೇಲೆ ಅಥವಾ ಕೈಯ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಪದ್ದತಿಯಿತ್ತು. ತಂತ್ರಜ್ಞಾನ ಬೆಳೆದಂತೆ ಹಚ್ಚೆಯಲ್ಲೂ ಹೊಸ ರೂಪ ಜನ್ಮ ತಾಳಿತು. ಈಗ ಅದೇ ಹಚ್ಚೆ ಟ್ಯಾಟೂ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಟ್ಯಾಟೂ ಮಾಡಲು ಹಲವಾರು ವಿದ್ಯುತ್ ಚಾಲಿತ ಸಾಧನಗಳು ಆವಿಷ್ಕಾರಗೊಂಡಿದ್ದು, ವಿವಿಧ ಬಣ್ಣಗಳಲ್ಲಿ ಟ್ಯಾಟೂ ಲಭ್ಯವಿದ್ದು ಯುವ ಜನಾಂಗವನ್ನು ಸೆಳೆಯುತ್ತಿದೆ.

ಅನೇಕ ಜನರು ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಒಂದು ಟ್ಯಾಟೂ ಅನ್ನಾದರೂ ಹಾಕಿಸಿಕೊಳ್ಳಲು ಬಯಸುತ್ತಾರೆ. ಸಾಮಾನ್ಯವಾಗಿ ಹೆಸರು, ಚಿಹ್ನೆ ಅಥವಾ ಅವರಿಗೆ ಸಂತೋಷವನ್ನುಂಟುಮಾಡುವ ಯಾವುದಾದರೂ ಆಗಿರಬಹುದು - ಧರ್ಮದಿಂದ ಸಾಹಿತ್ಯದವರೆಗೆ ಹಚ್ಚೆಯ ರೂಪದಲ್ಲಿ ಹಾಕಿಸಿಕೊಳ್ಳುತ್ತಾರೆ. ಆದರೆ ಹೆಚ್ಚಿನ ಜನರು ತಮ್ಮ ದೇಹದ ಮೇಲೆ ಕೆಲವು ಶಾಯಿ-ಕಲೆಗಳನ್ನು ಹಾಕಿಸಿಕೊಳ್ಳುತ್ತಾರೆ.

ಆದರೆ, 72 ವರ್ಷದ ವೂಲ್ಫ್ ಗ್ಯಾಂಗ್ ಕಿರ್ಸ್ಕ್ ಎಂಬುವವರು, ತಮ್ಮ ದೇಹದ ಮೇಲೆ ಹತ್ತು-ಇಪ್ಪತ್ತು ಟ್ಯಾಟೂ ಗುರುತುಗಳಿಂದ ತೃಪ್ತರಾಗಲಿಲ್ಲ. ಬದಲಿಗೆ ಅವರು 86 ಟ್ಯಾಟೂಗಳಲ್ಲದೆ, ಅವರು 17 ಇಂಪ್ಲಾಂಟ್‌ಗಳನ್ನು ಸಹ ಮಾಡಿಸಿಕೊಂಡಿದ್ದಾರೆ. ಅವರ ದೇಹದಲ್ಲಿ ಸುಮಾರು ಶೇ. 98 ರಷ್ಟು ಟ್ಯಾಟೂಗಳನ್ನು ಹಾಕಲಾಗಿದೆ. ಇವರು ಜರ್ಮನಿಯ ಅತಿ ಹೆಚ್ಚು ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ ಎಂಬ ದಾಖಲೆಯನ್ನು ಮಾಡಿದ್ದಾರೆ. ಅವರ ಪಾದದ ಅಡಿಭಾಗವನ್ನು ಹೊರತುಪಡಿಸಿ ದೇಹದ ಇತರೆ ಭಾಗಗಳಾದ ತೋಳುಗಳು, ಮುಖ, ಮುಂಡ, ಕಾಲುಗಳು, ಕಣ್ಣುಗಳು ಮತ್ತು ತುಟಿಗಳು ಸೇರಿ ಎಲ್ಲ ಕಡೆಯೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಅವರ ಕೆಲವು ಟ್ಯಾಟೂಗಳು ಕಾಂತೀಯವಾಗಿರುವುದರಿಂದ ಮತ್ತು ಕಾಗದದ ತುಣುಕುಗಳಂತಹ ಸಣ್ಣ ಲೋಹದ ವಸ್ತುಗಳು ನಿರಂತರವಾಗಿ ದೇಹದ ಚರ್ಮಕ್ಕೆ ಆಕರ್ಷಿಸುತ್ತಿರುವುದರಿಂದ, ಅವರು ತನ್ನನ್ನು ಮ್ಯಾಗ್ನೆಟೋ ಎಂದು ಅಡ್ಡಹೆಸರು ಇಟ್ಟುಕೊಂಡಿದ್ದಾರೆ. ಬರ್ಲಿನ್‌ನ ನಿವೃತ್ತ ಅಂಚೆ ಕಚೇರಿ ಕೆಲಸಗಾರರಾಗಿದ್ದ ವೂಲ್ಫ್ ಗ್ಯಾಂಗ್ ಕಿರ್ಸ್ಕ್, 1989 ರಲ್ಲಿ ಬರ್ಲಿನ್ ಗೋಡೆಯ ಪತನದ ನಂತರವೇ ತಮಗೆ ಹಚ್ಚೆಯ ಮೇಲೆ ಉತ್ಸಾಹ ಪ್ರಾರಂಭವಾಯಿತು ಎಂದು ಹೇಳಿದರು.

ಗಡಿಯಲ್ಲಿ ಶಿವಸೇನೆ ಕಿರಿಕ್: ಉದ್ವಿಗ್ನ ವಾತಾವರಣ; ಎರಡನೇ ದಿನವೂ ಸಾರಿಗೆ ಸಂಚಾರ ಬಂದ್

ಅಂಚೆ ಕಚೇರಿಯಲ್ಲಿ ಕೆಲಸ ಮಾಡುವಾಗ ಅವರು ಟ್ಯಾಟೂ ಹಾಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಅವರ ಮೊದಲ ದೇಹದ ಟ್ಯಾಟೂ ಪಡೆಯಲು ಜರ್ಮನಿಯ ಪುನರೇಕೀಕರಣದವರೆಗೂ ಕಾಯಬೇಕಾಯಿತು ಎಂದು ಮ್ಯಾಗ್ನೆಟೋ ಹೇಳುತ್ತಾರೆ. ಅವರು ತಮ್ಮ 46 ವರ್ಷದವನಾಗುವವರೆಗೂ ಒಂದೇ ಟ್ಯಾಟೂವನ್ನು ಹೊಂದಿದ್ದರು. ಅವರು ಮೊದಲ ಟ್ಯಾಟೂ "ನನ್ನ ಕಣ್ಣಿನ ಕೆಳಗೆ ಒಂದು ಕಣ್ಣೀರು ಸಿಕ್ಕಿತು." ಎಂದು ದೇಹದ ಮೇಲೆ ಬರೆಸಿಕೊಂಡಿದ್ದರು.

ಅವರು ತಮ್ಮ ಜೀವನದಲ್ಲಿ 240 ಬಾರಿ ಟ್ಯಾಟೂ ಹಾಕಿಸಿಕೊಳ್ಳಲು ಹೋಗಿದ್ದಾರೆ. ಅದರಲ್ಲಿ ಒಟ್ಟು 720 ಗಂಟೆಗಳು (ಇದು ಸರಿ ಸುಮಾರು ಒಂದು ತಿಂಗಳು) ಟ್ಯಾಟೂ ಹಾಕಿಸಿಕೊಳ್ಳಲು ಸಮಯ ಕಳೆದಿದ್ದಾರೆ. ಅವರ ಎಲ್ಲಾ ಟ್ಯಾಟೂಗಾಗಿ ಸುಮಾರು ಡಾಲರ್ 30,000 ಅಂದರೆ 21,84,861 ರೂಪಾಯಿ ಗಳಷ್ಟು ಹಣ ಖರ್ಚು ಮಾಡಿದ್ದಾರೆ. ಅವರ ಟ್ಯಾಟೂನಿಂದ ಪ್ರಸಿದ್ಧರಾದ ಕಾರಣದಿಂದಾಗಿ, ಮಾಡೆಲಿಂಗ್ ಅಥವಾ ಫೋಟೋಶೂಟ್ ಮಾಡಲು ವೂಲ್ಫ್ ಗ್ಯಾಂಗ್ ಕಿರ್ಸ್ಕ್ ಅವರನ್ನು ಹೆಚ್ಚಾಗಿ ಸಂಪರ್ಕಿಸಲಾಗುತ್ತಿದೆ.ವೂಲ್ಫ್ ಗ್ಯಾಂಗ್ ಕಿರ್ಸ್ಕ್ ಅವರು ತಮ್ಮ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಲ್ಲದೇ, ಅವರು ಕಣ್ಣುಗುಡ್ಡೆಯಲ್ಲೂ ಸಹ ಕಪ್ಪು ಟ್ಯಾಟೂ ಹಾಕಿಸಿಕೊಂಡಿರುವುದು ವಿಶೇಷ. ಜರ್ಮನಿ ದೇಶದ ವೂಲ್ಫ್ ಗ್ಯಾಂಗ್ ಕಿರ್ಸ್ಕ್ ಹಚ್ಚೆ ವಿಷಯದಲ್ಲಿ ಪ್ರಖ್ಯಾತಿ ಗಳಿಸಿದ್ದಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಜನರು ವೂಲ್ಫ್ ಗ್ಯಾಂಗ್ ಕಿರ್ಸ್ಕ್ ರನ್ನು ಭೇಟಿಯಾಗಿ ಅವರೊಂದಿಗೆ ಆಟೋಗ್ರಾಫ್ ಪಡೆದುಕೊಳ್ಳುತ್ತಾರೆ ಮತ್ತು ಫೋಟೋಗಳನ್ನು ತೆಗೆದುಕೊಳ್ಳಲು ಬಯಸುತ್ತಾರೆ.
Youtube Video

ಮುಂಚೆ ಚಿಕ್ಕದಾಗಿ ಹೆಸರು ಅಥವಾ ಚಿತ್ರವನ್ನು ಬರೆಸಿಕೊಳ್ಳುತ್ತಿದ್ದರು. ಆದರೆ ಈಗ ಟ್ಯಾಟೂ ಎಂಬ ಹೊಸ ಫ್ಯಾಷನ್ ಗೆ ಮಾರು ಹೋಗಿರುವ ಜನ ಸಮೂಹ ಮೈ ತುಂಬಾ ಟ್ಯಾಟೂ ಹಾಕಿಸಿಕೊಳ್ಳುವ ಗೀಳಿಗೆ ಬಿದ್ದಿರುವುದು ವಿಚಿತ್ರವೆನಿಸಿದೆ.
Published by: Latha CG
First published: March 14, 2021, 11:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories