Viral Video: 72 ಆಗಿದ್ರು 30ರಂತೆ ಕಾಣ್ತಾರೆ! ಈ ಬಾಡಿ ಬಿಲ್ಡರ್​ನ ಫಿಟ್​ನೆಸ್​​ಗೆ ಹುಡುಗಿರು ಫಿದಾ!

ಇವರ ವಯಸ್ಸು 72. ಆದರೆ ಈಗಲೂ 30 ಅಥವಾ 40 ವಯಸ್ಸಿನ ಆಸುಪಾಸಿನ ವ್ಯಕ್ತಿಯಂತೆ ಕಾಣುತ್ತಾರೆ. ಈ ಇಳಿವಯಸ್ಸಿನಲ್ಲಿ ತಮ್ಮ ವಯಸ್ಸಿನ ಕಾರಣಕ್ಕೆ ಖ್ಯಾತರಾಗಿದ್ದಾರೆ.

ಕ್ಸಿನ್‍ಮಿನ್ ಯಾಂಗ್

ಕ್ಸಿನ್‍ಮಿನ್ ಯಾಂಗ್

  • Share this:

ಕೆಲವು ವಯಸ್ಸಾದ ವ್ಯಕ್ತಿಗಳನ್ನು ನೋಡಿದರೆ ಇವರಿಗೆ ವಯಸ್ಸೇ ಆಗುವುದಿಲ್ಲವೇ..? ಇನ್ನು ಹೇಗೆ ಇವರು ಚಿರ ಯುವಕರಂತೆ ಕಾಣುತ್ತಾರಲ್ಲ ಎಂದು ಹುಬ್ಬೇರಿಸುವುದುಂಟು. ಹೌದು ಕೆಲವರು ತಮ್ಮ ಇಳಿವಯಸ್ಸಿನಲ್ಲಿ ಯೌವನಸ್ಥರಾಗಿ ಕಾಣುತ್ತಾರೆ.ಇದೀಗ ಚೀನಾದ ಒಬ್ಬ ಬಾಡಿ ಬಿಲ್ಡರ್ ಕೂಡ ತಮ್ಮ ವಯಸ್ಸಿನ ಕಾರಣಕ್ಕೆ ವೈರಲ್ ಆಗಿದ್ದಾರೆ. ಇವರ ವಯಸ್ಸು 72. ಆದರೆ ಈಗಲೂ 30 ಅಥವಾ 40 ವಯಸ್ಸಿನ ಆಸುಪಾಸಿನ ವ್ಯಕ್ತಿಯಂತೆ ಕಾಣುತ್ತಾರೆ. ಈ ಇಳಿವಯಸ್ಸಿನಲ್ಲಿ ತಮ್ಮ ವಯಸ್ಸಿನ ಕಾರಣಕ್ಕೆ ಖ್ಯಾತರಾಗಿದ್ದಾರೆ.ಈ ವೃದ್ಧನ ಹೆಸರು ಕ್ಸಿನ್‍ಮಿನ್ ಯಾಂಗ್. ಇವರು ಮೂಲತಃ ಚೀನಾದವರು. ಇವರ ವಯಸ್ಸು 72. ಈಗಲೂ ಸಹ ಬಾಡಿ ಬಿಲ್ಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.


ಇವರು 1984ರಿಂದಲೂ ಫಿಟ್‍ನೆಸ್ ಸೂತ್ರವನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದೇ ಯೌವ್ವನದ ಗುಟ್ಟಾಗಿದ್ದು, ಇಲ್ಲಿಂದ ಬಾಡಿ ಬಿಲ್ಡಿಂಗ್ ತರಬೇತಿ ಪಡೆಯಲು ಪ್ರಾರಂಭಿಸಿದರು. ಇದುವರೆಗೂ ಸುಮಾರು 100ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.


ಚೀನಾ ಆಯೋಜಿಸಿದ್ದ ರಾಷ್ಟ್ರೀಯ ಬಾಡಿ ಬಿಲ್ಡಿಂಗ್ ಚಾಂಪಿಯನ್‍ಶಿಪ್‍ನಲ್ಲಿ ವಿಜೇತರಾದ ಒಂದು ವರ್ಷದ ನಂತರ ಬಾಡಿ ಬಿಲ್ಡಿಂಡ್ ಅನ್ನು ವೃತ್ತಿಯಾಗಿ ಸ್ವೀಕರಿಸಿದರು.


ಯಾಂಗ್ ಸುಮಾರು 30 ವರ್ಷಗಳಿಂದ ಇದೇ ವೃತ್ತಿಯಲ್ಲೂ ಮುಂದುವರೆದರೂ ಸರಿಯಾದ ಮಾನ್ಯತೆ ಸಿಕ್ಕಿರಲಿಲ್ಲ. ರೆಡ್ಡಿಟ್ ತೋರ್ಪಡಿಸಿದ ವ್ಯಕ್ತಿ ಪರಿಚಯದ ಮೂಲಕ ಅಂದರೆ 2019ರ ನಂತರ ಮುನ್ನೆಲೆಗೆ ಬಂದರು. ರೆಡ್ಡಿಟ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ವೇಳೆ ಯಾಂಗ್ ವಯಸ್ಸು ಚರ್ಚೆಗೆ ಗ್ರಾಸವಾಯಿತು. ಇವರಿಗೆ ವಯಸ್ಸು 72 ಅಲ್ಲ, ಕೇವಲ 30 ಅಥವಾ 40 ಅಥವಾ 50 ಇರಬಹುದು ಎಂದು ಚರ್ಚೆ ನಡೆಯಿತು.


ಇವರ ನಿಜವಾದ ವಯಸ್ಸು 70 ಎಂಬುದನ್ನು ಜನರು ನಂಬದಿರುವುದು ನಿಜವಾಗಿಯೂ ತಮಾಷೆಯಾಗಿ ಕಾಣುತ್ತಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದರು. ದಕ್ಷಿಣದ ಹೈನಾನ್ ದ್ವೀಪದ ಸನ್ಯಾದಲ್ಲಿ ವಾಸಿಸುತ್ತಿರುವ ಯಾಂಗ್, ದೇಶದ ಮೊದಲ ಬಾಡಿ ಬಿಲ್ಡರ್ ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ಜೊತೆಗೆ ಫಿಟ್‍ನೆಟ್ ಕೂಡ ಚರ್ಚೆಗೆ ಗ್ರಾಸವಾಗಿತ್ತು.


ಯಾಂಗ್ ಕೇವಲ ತಮ್ಮ ವಯಸ್ಸನ್ನು ಮರೆಮಾಚುವಂತೆ ಇರುವುದು ಮಾತ್ರವಲ್ಲ, ಇವರ ರಕ್ತದೊತ್ತಡ, ಬ್ಲಡ್ ಲಿಪಿಡ್ ಮತ್ತು ಅವರ ಮೂಳೆಯ ಸಾಮರ್ಥ್ಯವೂ30 ವರ್ಷದ ವ್ಯಕ್ತಿಯಂತೆ ಸದೃಢವಾಗಿದೆ.


ಕೆಲವು ವರ್ಷಗಳಿಂದ ಬಾಡಿ ಬಿಲ್ಡಿಂಗ್‍ಗಾಗಿಯೇ ಆರೋಗ್ಯ ಸೇರಿದಂತೆ ಇನಿತರ ವಿಷಯಗಳಲ್ಲಿಯೂ ಶಿಸ್ತುಬದ್ಧ ಜೀವನ ನಡೆಸಿದ್ದೇನೆ. ನಾನು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಇದುವರೆಗೂ ಮಾಡಿರುವ ಸಾಧನೆಯ ಬಗ್ಗೆ ನನಗೆ ಈಗಲೂ ಹೆಮ್ಮೆ ಇದೆ. ನನ್ನ ಫಿಟ್‍ನೆಸ್ ಕಾರಣ ಸಾಕಷ್ಟು ಮಂದಿ ದೇಹದಾರ್ಢ್ಯ ತರಬೇತಿಯಲ್ಲಿ ಪಾಲ್ಗೊಳ್ಳಲು ಉತ್ತೇಜಿತರಾಗಿದ್ದಾರೆ ಎಂದು 2018 ರಲ್ಲಿ ಪ್ರೊಡಕ್ಷನ್‌ ಎಂಬ ಚೀನಾದ ಫಿಟ್ನೆಸ್ ಮಾಧ್ಯಮ ಕಂಪನಿ ಹೇಳಿದ್ದರು.


ಯಾಂಗ್ ತಮ್ಮ ಯೌವನಾವಸ್ಥೆ ಕಾಪಾಡಿಕೊಳ್ಳಲು ಕೆಲವು ಆಹಾರ ಪದ್ಧತಿಯನ್ನು ಈಗಲೂ ಅಳವಡಿಸಿಕೊಂಡಿದ್ದಾರೆ. ಬೆಳಗಿನ ಉಪಾಹಾರಕ್ಕೆ 6 ಮೊಟ್ಟೆಗಳು, ಟೊಮ್ಯಾಟೋ, ಸೌತೆಕಾಯಿ ತಿನ್ನುತ್ತೇನೆ. ಕೆಲವೊಮ್ಮೆ ಓಟ್ಸ್ ಮತ್ತು ಚಿಕನ್ ತಿನ್ನುತ್ತೇನೆ. ಇದನ್ನು ಸತತ 10 ವರ್ಷಗಳಿಂದ ಅನುಸರಿಸುತ್ತಿದ್ದೇನೆ ಎಂದು ಹೇಳಿದರು.1988ರಲ್ಲಿ ಏಷ್ಯಾ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ್ದು ನನ್ನ ಜೀವನದ ಸಾರ್ಥಕ ಕ್ಷಣ. ಶಾಂಘೈನಲ್ಲಿ 2005ರಲ್ಲಿ ಆಯೋಜಿಸಿದ್ದ ಚಾಂಪಿಯನ್ಶಿಪ್‍ನಲ್ಲಿ 70 ಕೆಜಿ ತೂಕದ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದುಕೊಂಡೆ. ನಾನು ಈಗಲೂ ಪ್ರತಿದಿನ ವರ್ಕ್‌ಔಟ್‌ ಮಾಡುತ್ತೇನೆ. ಖಾಸಗಿಯಾಗಿ ತರಬೇತಿ ನೀಡುತ್ತೇನೆ. ನನ್ನ ವಯಸ್ಸು 80 ತಲುಪುವವರೆಗೂ ದೇಹದಾರ್ಢ್ಯ ತರಬೇತಿಯನ್ನು ನಿಲ್ಲಿಸುವ ಯೋಚನೆ ಇಲ್ಲ ಎನ್ನುತ್ತಾರೆ.

First published: