• Home
  • »
  • News
  • »
  • trend
  • »
  • Swimming: 70 ರ ವಯಸ್ಸಿನಲ್ಲೂ ಎರಡು ಕೈಗಳನ್ನು ಕಟ್ಟಿಕೊಂಡು ನದಿಯಲ್ಲಿ ಹೇಗೆ ಈಜಾಡಿದ್ದಾರೆ ನೋಡಿ ಈ ವೃದ್ಧೆ

Swimming: 70 ರ ವಯಸ್ಸಿನಲ್ಲೂ ಎರಡು ಕೈಗಳನ್ನು ಕಟ್ಟಿಕೊಂಡು ನದಿಯಲ್ಲಿ ಹೇಗೆ ಈಜಾಡಿದ್ದಾರೆ ನೋಡಿ ಈ ವೃದ್ಧೆ

ಎರಡು ಕೈಗಳನ್ನು ಕಟ್ಟಿಕೊಂಡು ಈಜಿದ 70 ವರ್ಷದ ವೃದ್ಧೆ

ಎರಡು ಕೈಗಳನ್ನು ಕಟ್ಟಿಕೊಂಡು ಈಜಿದ 70 ವರ್ಷದ ವೃದ್ಧೆ

ಕೇರಳದ ವಲಸ್ಸೆರಿ ರಿವರ್ ಸ್ವಿಮ್ಮಿಂಗ್ ಕ್ಲಬ್ ಭಾನುವಾರದಂದು ಒಂದು ಕಾರ್ಯಕ್ರಮವನ್ನು ಆಯೋಜಿಸಿತ್ತು. ಅಲ್ಲಿ ಒಂದು ವಿಶೇಷವೆಂದರೆ 70 ವರ್ಷದ ಮಹಿಳೆಯೊಬ್ಬರು 780 ಮೀಟರ್ ಅಗಲದ ಪೆರಿಯಾರ್ ನದಿಯಲ್ಲಿ ತನ್ನ ಎರಡು ಕೈಗಳನ್ನು ಕಟ್ಟಿಕೊಂಡು ಈಜಿದರು.

  • Share this:

‘ಯಾವುದಕ್ಕೂ ನೀರಿನಲ್ಲಿ ಈಜು (Swim) ಕಲಿತಿರುವುದು ಒಳ್ಳೆಯದು, ಮುಂದೆ ಎಂದಾದರೂ ನೀರಿಗೆ ಇಳಿದರೆ ಈಜು ಗೊತ್ತಿರುವುದು ನಮ್ಮ ಪ್ರಾಣವನ್ನು ಕಾಪಾಡುತ್ತೆ’ ಅಂತ ಮನೆಯಲ್ಲಿ ಪೋಷಕರು (Parents) ನಮಗೆ ಚಿಕ್ಕವರಾಗಿದ್ದಾಗ ಅನೇಕ ಬಾರಿ ಈ ಮಾತನ್ನು ಹೇಳಿರುತ್ತಾರೆ. ಇಷ್ಟೇ ಅಲ್ಲದೆ ಪ್ರತಿದಿನ ನೀರಿನಲ್ಲಿ ಈಜಾಡುವುದರಿಂದ ಆರೋಗ್ಯಕ್ಕೂ (Health) ಸಹ ತುಂಬಾನೇ ಒಳ್ಳೆಯದು ಎಂದು ಅನೇಕರು ಹೇಳುತ್ತಾರೆ. ಕೆಲವೊಮ್ಮೆ ಈ ದೋಣಿ ದುರಂತಗಳಲ್ಲಿ ಸಾವನ್ನಪ್ಪಿದ (Death) ಜನರನ್ನು ನೋಡಿದಾಗ ನಮಗೆ ‘ಅಯ್ಯೋ ಪಾಪ ಈಜು ಗೊತ್ತಿದ್ದರೆ, ಕಾಲೋ, ಕೈಯೋ ಬಡಿದುಕೊಂಡು ಬದುಕುಳಿತ್ತಿದ್ದರೆನೋ’ ಅಂತ ಅನ್ನಿಸುತ್ತದೆ. ಹೌದು.. ನಾವು ಜೀವನದಲ್ಲಿ ಕಲಿಯುವ ಪ್ರತಿಯೊಂದು ವಿದ್ಯೆಯು ನಮಗೆ ಜೀವನದಲ್ಲಿ ಕೆಲಸಕ್ಕೆ (Work) ಬರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಪೆರಿಯಾರ್ ನದಿಯಲ್ಲಿ ಈಜಿದ 70 ವರ್ಷದ ವೃದ್ದೆ
ಇಲ್ಲಿಯೂ ಸಹ ಈಜು ಎನ್ನುವುದು ಎಲ್ಲಾ ವಯೋಮಾನದ ಜನರು ಕಲಿಯಲೆಬೇಕಾದಂತಹದ್ದು, ಇದನ್ನು ಜನರು ಹೆಚ್ಚು ಹೆಚ್ಚಾಗಿ ಕಲಿತುಕೊಳ್ಳಲಿ ಎಂದು ಪ್ರೋತ್ಸಾಹಿಸಲು, ಕೇರಳದ ವಲಸ್ಸೆರಿ ರಿವರ್ ಸ್ವಿಮ್ಮಿಂಗ್ ಕ್ಲಬ್ ಭಾನುವಾರದಂದು ಒಂದು ಕಾರ್ಯಕ್ರಮವನ್ನು ಆಯೋಜಿಸಿತ್ತು. ಅಲ್ಲಿ ಒಂದು ವಿಶೇಷವೆಂದರೆ 70 ವರ್ಷದ ವೃದ್ದೆಯೊಬ್ಬರು 780 ಮೀಟರ್ ಅಗಲದ ಪೆರಿಯಾರ್ ನದಿಯಲ್ಲಿ ತನ್ನ ಎರಡು ಕೈಗಳನ್ನು ಕಟ್ಟಿಕೊಂಡು ಈಜಿದರು.


ಅಲುವಾದ ಥೈಕಟ್ಟುಕರದ ಆರಿಫಾ ವಿ.ಕೆ ಎಂಬುವ ವೃದ್ದೆ ಮದಪಂ ಕಡವುದಿಂದ ಮಣಪ್ಪುರಂ ದೇಸೋಮ್ ಕಡವುವರೆಗೆ ಈಜುತ್ತಿದ್ದ ಕುನ್ನುಂಪುರಂನ 11 ವರ್ಷದ ಭರತ್ ಕೃಷ್ಣ ಮತ್ತು ಅಶೋಕಪುರಂನ 38 ವರ್ಷದ ಧನ್ಯಾ ಕೆ.ಜಿ ಅವರ ಜೊತೆಯಲ್ಲಿ ಈಜಿದ್ದಾರೆ.


ಈಜಿನ ಬಗ್ಗೆ ಆರಿಫಾ ಅವರು ಹೇಳಿದ್ದೇನು?
"ಅದೇ ಅಕಾಡೆಮಿಯಲ್ಲಿ ತರಬೇತಿ ಪಡೆದ ನನ್ನ ಮಕ್ಕಳನ್ನು ನೋಡಿ ನಾನು ಈಜು ಕಲಿಯಲು ನಿರ್ಧರಿಸಿದೆ. ನನ್ನ ಕುಟುಂಬದ ಒಂಬತ್ತು ಸದಸ್ಯರು ಈಜಲು ತಿಳಿದಿದ್ದಾರೆ. ಈ ವರ್ಷದ ಆರಂಭದಲ್ಲಿ, ನಾನು ಪೆರಿಯಾರ್ ನದಿಯಾದ್ಯಂತ ಈಜಿದೆ. ನನ್ನ ತರಬೇತುದಾರ ಸಾಜಿ ವಲಸ್ಸೆರಿ ಅವರು ನನ್ನ ಎರಡು ಕೈಗಳನ್ನು ಕಟ್ಟಿ ಈಜಲು ಪ್ರಯತ್ನಿಸಲು ನನಗೆ ಆತ್ಮವಿಶ್ವಾಸವನ್ನು ನೀಡಿದರು.


ಇದನ್ನೂ ಓದಿ: Veena-Vani Twins: ಅಪರೂಪದ ಸಾಧನೆ ಮಾಡಿದ ಹೈದ್ರಾಬಾದ್​​ನ ಸಯಾಮಿ ಅವಳಿ ಸೋದರಿಯರು


ಈ ಪ್ರಯತ್ನದಿಂದ ನಾನು ಹಂಚಿಕೊಳ್ಳಲು ಬಯಸುವ ಸಂದೇಶವೆಂದರೆ ಎಲ್ಲರೂ ಈಜುವುದು ಹೇಗೆಂದು ಕಲಿಯಬೇಕು. ಮುಳುಗುವ ಪ್ರಕರಣಗಳ ಸಂಖ್ಯೆಯನ್ನು ಪರಿಗಣಿಸಿ, ಜನರು ಹಿಂಜರಿಯಬಾರದು" ಎಂದು ಆರಿಫಾ ಅವರು ಹೇಳಿದರು.


ಈಜು ಕಲಿಯಲು ಇಲ್ಲ ವಯಸ್ಸು
ಈ ಎಲ್ಲಾ  ಈಜುಪಟುಗಳಿಗೆ ಕಳೆದ ಒಂದು ವಾರದಿಂದ ಸಾಜಿ ಮತ್ತು ಅವರ ತಂಡವು ವಿಶೇಷ ತರಬೇತಿಯನ್ನು ನೀಡಿತು. ಇದನ್ನು ಪ್ರಯತ್ನಿಸುವ ಮೊದಲು ಪ್ರತಿಯೊಬ್ಬರೂ ಸರಿಯಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದರು. ಮೂವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ನುರಿತ ಈಜುಗಾರರ ಗುಂಪು ದೋಣಿಗಳಲ್ಲಿ ಅವರನ್ನು ಹಿಂಬಾಲಿಸಿತು. ಅವರು ಬೆಳಿಗ್ಗೆ 8 ಗಂಟೆ ಸುಮಾರಿಗೆ ಪ್ರಾರಂಭಿಸಿದರು ಮತ್ತು ಬೆಳಿಗ್ಗೆ 8.45 ರ ಸುಮಾರಿಗೆ ಯಶಸ್ವಿಯಾಗಿ ಇದನ್ನು ಈಜಿ ಮುಗಿಸಿದರು.


"ಜನರು ಈಜು ಕಲಿಯಲು ವಯಸ್ಸು ಅಡ್ಡಿಯಾಗುವುದಿಲ್ಲ. ಈ ಸಂದೇಶವನ್ನು ಹರಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಳೆದ ದಿನವೂ ರಾಜ್ಯದಲ್ಲಿ ಮುಳುಗಿದ ಪ್ರಕರಣಗಳು ವರದಿಯಾಗಿದ್ದವು. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿರುವುದರಿಂದ ಇದು ಪೋಷಕರಿಗೆ ಒಂದು ಸಂದೇಶವಾಗಿದೆ" ಎಂದು ಸಾಜಿ ಹೇಳಿದರು.


ವಲಸ್ಸೆರಿ ರಿವರ್ ಸ್ವಿಮ್ಮಿಂಗ್ ಕ್ಲಬ್
ಎರ್ನಾಕುಲಂ ಗ್ರಾಮೀಣ ಪೊಲೀಸ್ ವ್ಯಾಪ್ತಿಯ ಮೂಲಕ ಪೆರಿಯಾರ್ ನದಿಯು ಹಾದುಹೋಗುತ್ತದೆ, ಅಲ್ಲಿ ಕಳೆದ ವರ್ಷ 102 ಜನರು ಮುಳುಗಿದ್ದರು. ಇದರಲ್ಲಿ 77 ಅಪಘಾತಗಳು ಸಂಭವಿಸಿದ್ದರೆ, 25 ಆತ್ಮಹತ್ಯೆಗಳಾಗಿವೆ. ಆಕಸ್ಮಿಕವಾಗಿ ಮುಳುಗಿದ ಘಟನೆಗಳಲ್ಲಿ, 62 ಪುರುಷರು ಮತ್ತು 15 ಮಹಿಳೆಯರು ಇದ್ದರು. ಇದನ್ನೆಲ್ಲಾ ನೋಡಿ 2010 ರಲ್ಲಿ ಅಲುವಾ ಮೂಲದ ಸಾಜಿ ವಲಸ್ಸೆರಿ ಅವರು ವಲಸ್ಸೆರಿ ರಿವರ್ ಸ್ವಿಮ್ಮಿಂಗ್ ಕ್ಲಬ್ ಅನ್ನು ಪ್ರಾರಂಭಿಸಿದರು.


ಇದನ್ನೂ ಓದಿ: Viral Post: ನಾಯಿಗಳಿಗೂ ಮದುವೆಯಂತೆ: ಹಾಗಿದ್ರೆ ಈ ವಧು-ವರರು ಹೇಗಿದ್ದಾರೆ ನೋಡಿ


ಸುಮಾರು 45 ಜನರನ್ನು ಬಲಿತೆಗೆದುಕೊಂಡ 2009 ರ ತೆಕ್ಕಾಡಿ ದೋಣಿ ದುರಂತದಿಂದ ಪಾಠಗಳನ್ನು ಕಲಿಯುವ ಮೂಲಕ ಅವರು ಈ ತರಬೇತಿ ಉಪಕ್ರಮವನ್ನು ಪ್ರಾರಂಭಿಸಿದರು. ಅವರು ಇದುವರೆಗೆ 5,700ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ತರಬೇತಿ ನೀಡಿದ್ದಾರೆ, ಅವರಲ್ಲಿ 700 ವಿಕಲಚೇತನರು ಅಥವಾ ಹಿರಿಯ ನಾಗರಿಕರು ಸೇರಿದ್ದಾರೆ. ಈ ವರ್ಷದ ಬೇಸಿಗೆ ರಜೆಯಲ್ಲಿ, 720 ಜನರು ಸಾಜಿಯವರಿಂದ ಈಜು ಕಲಿತರು ಮತ್ತು ಅವರಲ್ಲಿ 130 ಜನರು ಪೆರಿಯಾರ್ ನಲ್ಲಿ ಈಜಲು ಸಾಧ್ಯವಾಯಿತು.

Published by:Ashwini Prabhu
First published: