Viral News: 70ನೇ ವರ್ಷಕ್ಕೆ ಮೊದಲ ಮಗುವನ್ನು ಹೆತ್ತ ಮಹಾತಾಯಿ, ಇದು ನಮ್ ದೇಶದ್ದೇ ವಿಚಿತ್ರ!

Baby at 70 years: ಮದುವೆಯಾಗಿ 45 ವರ್ಷ ಆಗಿದೆ, ನನ್ನ ವಯಸ್ಸು 70. ನೀವು ಏನು ಮಾಡುತ್ತೀರಾ ನನಗೆ ಗೊತ್ತಿಲ್ಲ, ಒಂದು ಮಗು ಪಡೆಯುವಂತೆ ಚಿಕಿತ್ಸೆ ನೀಡಿ ಎಂದು ಆಕೆ ಅದೆಷ್ಟು ದೃಢವಾಗಿ ಹೇಳಿದಳು ಎಂದರೆ ವೈದ್ಯರು ಒಪ್ಪಿಬಿಟ್ಟರು. ಈ ವಯಸ್ಸಿನಲ್ಲಿ ಕೈಯಲ್ಲಿ ಮಗು ಹಿಡಿದು ಬೊಚ್ಚು ಬಾಯಿಯಲ್ಲಿ ನಗುತ್ತಿದ್ದಾರೆ ಪೋಷಕರು.

ಖುಷಿಯ ತುತ್ತತುದಿಯಲ್ಲಿ ತಂದೆ-ತಾಯಿ

ಖುಷಿಯ ತುತ್ತತುದಿಯಲ್ಲಿ ತಂದೆ-ತಾಯಿ

  • Share this:

Woman gives birth at 70 years of Age: ಸಾಮಾನ್ಯವಾಗಿ ಮಹಿಳೆಯರಿಗೆ 50 ವರ್ಷ ವಯಸ್ಸು ಆಗಿದೆ ಎಂದರೆ ಅವರಿಗೆ ಮೊಮ್ಮಕ್ಕಳು (Children and Grandchildren) ಇರುತ್ತಾರೆ ಮತ್ತು ಅವರ ಜೊತೆ ಆಟವಾಡುತ್ತಾ ತಮ್ಮ ಸಮಯ ಕಳೆಯುತ್ತಾ ಇರುವುದು ನಮಗೆಲ್ಲಾ ತಿಳಿದಿರುವ ಸಂಗತಿಯಾಗಿದೆ. ಆದರೆ ಇಲ್ಲಿ ಒಬ್ಬ 70 ವರ್ಷ ವಯಸ್ಸಿನ ಮಹಿಳೆಯು ತನ್ನ ಮೊಮ್ಮಕ್ಕಳು ಮತ್ತು ಮರಿ ಮೊಮ್ಮಕ್ಕಳೊಂದಿಗೆ ಆಟ ಆಡುತ್ತಾ ತನ್ನ ಸಮಯ ಕಳೆಯ ಬೇಕಾದ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ (Delivery) ನೀಡಿದ್ದಾರೆ. ನೀವು ಇದನ್ನು ಸುಲಭವಾಗಿ ನಂಬಲಿಕ್ಕಿಲ್ಲ, ಆದರೆ ಇದು ನಿನ್ನೆ ಮೊನ್ನೆ ನಡೆದಿರುವುದು ಅಲ್ಲ. ಸುಮಾರು ಒಂದು ತಿಂಗಳ ಹಿಂದೆ ಗುಜುರಾತಿನ ಕಛ್‌ನಲ್ಲಿ (Kutch in Gujarat) ನಡೆದಿದೆ ಮತ್ತು ಇದು ಸಾಧ್ಯವಾಗಿದ್ದು ಐವಿಎಫ್ (IVF) ಮೂಲಕ ಹಾಗೂ ಈ ಪ್ರಕ್ರಿಯೆಯು ಭುಜ್‌ ವೈದ್ಯರಿಗೆ ದೊಡ್ಡ ಸವಾಲಾಗಿತ್ತು ಎಂದು ಹೇಳಬಹುದು.


ಈ ವಯಸ್ಸಿನಲ್ಲಿ ಇದು ಅಸಾಧ್ಯವೇ ಸರಿ, ಆದರೆ ಜಿವುಬೆನ್ ವಾಲಾಭಾಯಿ ರಬಾರಿ ಧೈರ್ಯದ ಮನೋಭಾವದಿಂದ ವೈದ್ಯರು ಈ ಅಸಾಧ್ಯವಾದುದನ್ನು ಸಾಧ್ಯವಾಗಿಸಿದರು. ಜಿವುಬೆನ್ ಮೂಲತಃ ರಾಪರ್ ತಾಲ್ಲೂಕಿನ ಮೋರಾ ಗ್ರಾಮದ ನಿವಾಸಿಯಾಗಿದ್ದು ತನ್ನ ವಯಸ್ಸನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳನ್ನು ಹೊಂದಿಲ್ಲ.


ನನಗೆ ಒಂದೇ ಒಂದು ಆಸೆ ವೈದ್ಯರೇ...

ನಾನು ಸುಮಾರು 65 ರಿಂದ 70 ಬೇಸಿಗೆಕಾಲವನ್ನು ನೋಡಿದ್ದೇನೆ ಎಂದು ಜಿವುಬೆನ್ ವೈದ್ಯರಿಗೆ ಹೇಳಿದ್ದರು. ಈ ವಯಸ್ಸಿನಲ್ಲಿ ತಾವು ಒಂದು ಮಗುವಿಗೆ ಜನ್ಮ ನೀಡಲೇಬೇಕು ಎನ್ನುವ ಅವರ ಸ್ಥಿರವಾದ ನಿರ್ಧಾರವೇ ನಾವು ಈ ಪ್ರಕ್ರಿಯೆ ಪ್ರಾರಂಭಿಸುವಂತೆ ಮಾಡಿತು ಎಂದು ವೈದ್ಯರು ಹೇಳುತ್ತಾರೆ.


ಆಕೆಯ ಭಾವುಕತೆಗೆ ಕರಗಿದ ವೈದ್ಯಲೋಕ

ಈ ವೃದ್ಧ ದಂಪತಿಗಳ ಬಯಕೆಗೆ ನಾವು ಮಣಿಯಲೇ ಬೇಕಾಯಿತು ಮತ್ತು ಅವರ ಮೊದಲ ಮಗು, ಅವರು ಮದುವೆಯಾದ ಸರಿ ಸುಮಾರು 45 ವರ್ಷಗಳ ನಂತರ ಜನಿಸಿದೆ ಎಂದು ವೈದ್ಯರು ಹೇಳುತ್ತಾರೆ. ಈ ವಯಸ್ಸಿನಲ್ಲಿ ಗರ್ಭಧಾರಣೆಯ ಅಪಾಯ ತೆಗೆದುಕೊಳ್ಳದಂತೆ ಜಿವುಬೆನ್‌ಗೆ ವೈದ್ಯರು ಸಲಹೆ ಮಾಡಿದ್ದರಂತೆ. ಆದರೆ ಮಗುವನ್ನು ಪಡೆಯುವ ಬಗ್ಗೆ ಅವರು ಸಾಕಷ್ಟು ಭಾವುಕರಾಗಿದ್ದರು ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Viral News: ಒಂದೇ ವರ್ಷದಲ್ಲಿ 20 ಮಕ್ಕಳನ್ನು ಪಡೆದ ಮಹಾತಾಯಿ ! ಆಗಲೇ ಮುಂದಿನ ಮಗುವಿಗೆ ಪ್ಲಾನಿಂಗ್ !

ಸ್ತ್ರೀರೋಗ ತಜ್ಞ ಡಾ. ನರೇಶ್ ಭಾನುಶಾಲಿ, "ನಾವು ಮೊದಲು ಔಷಧಿಗಳನ್ನು ನೀಡುವ ಮೂಲಕ ಅವರ ಋತುಚಕ್ರವನ್ನು ನಿಯಮಿತವಾಗಿ ಆಗುವಂತೆ ಮಾಡಿದ್ದೇವೆ. ನಂತರ ವಯಸ್ಸಿನ ಕಾರಣದಿಂದಾಗಿ ಕುಗ್ಗಿದ ಅವರ ಗರ್ಭಾಶಯವನ್ನು ಅಗಲಗೊಳಿಸಿದ್ದೇವೆ. ನಂತರ ಬ್ಲಾಸ್ಟೋಸಿಸ್ಟ್ ತಯಾರಾಗುವಂತೆ ಮಾಡಿ ಅದನ್ನು ಗರ್ಭಾಶಯಕ್ಕೆ ವರ್ಗಾಯಿಸಿದೆವು.


ಆಕೆಯ ಸ್ಕ್ಯಾನಿಂಗ್ ನೋಡಿ ವೈದ್ಯರೇ ಶಾಕ್!

ಎರಡು ವಾರಗಳ ನಂತರ ವೈದ್ಯರು ಜಿವುಬೆನ್ ಅವರ ಸೋನೋಗ್ರಫಿ ಮಾಡಿದರು ಮತ್ತು ಭ್ರೂಣವು ಬೆಳೆಯುವುದನ್ನು ನೋಡಿ ಖುದ್ದು ವೈದ್ಯರೇ ಆಶ್ಚರ್ಯಪಟ್ಟರು. ನಂತರ ಸಮಯಕ್ಕೆ ಸರಿಯಾಗಿ ಹೃದಯ ಬಡಿತವನ್ನು ಕಂಡುಕೊಂಡರು ಮತ್ತು ಅದರಲ್ಲಿ ಯಾವುದೇ ದೋಷ ಕಾಣಲಿಲ್ಲ ಮತ್ತು ಆದ್ದರಿಂದ, ಗರ್ಭಧಾರಣೆಯೊಂದಿಗೆ ಮುಂದುವರೆದರು.


ಇದನ್ನೂ ಓದಿ: Radford Family: 3ನೇ ಬಾರಿಗೆ ಅಜ್ಜಿಯಾದ 22 ಮಕ್ಕಳ ತಾಯಿ! ಮನೆಯಲ್ಲಿ ಸಂಭ್ರಮವೋ ಸಂಭ್ರಮ

ತಾಯಿಗೆ ವೈದ್ಯರು ಎಂಟು ತಿಂಗಳ ಗರ್ಭಧಾರಣೆಯ ನಂತರ ಸಿ-ಸೆಕ್ಷನ್ ಮಾಡಿದರು ಮತ್ತು ಮಗು ಹಾಗೂ ತಾಯಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಒಟ್ಟಿನಲ್ಲಿ ಒಂದು ಮಗುವಿಗೆ ಜನ್ಮ ನೀಡಬೇಕು ಎಂಬ ತಾಯಿಯ ಭಾವನಾತ್ಮಕ ಹಂಬಲ ಈಡೇರಿದೆ ಎಂದು ಹೇಳಬಹುದು.


Published by:Soumya KN
First published: