Cobra Bite: 7 ವರ್ಷದ ಬಾಲಕಿಯ ಕುತ್ತಿಗೆಗೆ ಸುತ್ತಿಕೊಂಡಿದ್ದ ನಾಗರಹಾವು! ಬಿಡಿಸಲು ಹೋದಾಗ ಕಚ್ಚಿತು!

ಹುಡುಗಿಯ ತಂದೆ ಪದ್ಮಾಕರ್ ಗಡ್ಕರಿ ಅವರು ಸಹ ಸಹಾಯಕ್ಕಾಗಿ ನೆರೆಹೊರೆಯವರನ್ನು ಕರೆದರು. ಹಾವು ಹಿಡಿಯುವವರನ್ನು ಅಂತಿಮವಾಗಿ ಸ್ಥಳಕ್ಕೆ ಕರೆಸಿದಾಗ ಹಾವು ಮಧ್ಯರಾತ್ರಿ 1:45 ರವರೆಗೆ ಬಾಲಕಿಯ ಕುತ್ತಿಗೆಗೆ ಹಾವು ಹಾಗೆ ಸುತ್ತಿಕೊಂಡಿತ್ತು.

ನಾಗರಹಾವು (Photo: Google)

ನಾಗರಹಾವು (Photo: Google)

  • Share this:

ನಾವು ಮನೆಯಲ್ಲಿ ಏನೋ ಕೆಲಸ ಮಾಡುತ್ತಿದ್ದು, ಹಾಗೆಯೇ ನಮ್ಮ ಕಣ್ಣು ಮನೆಯ ಮುಂದೆ ಇರುವಂತಹ ಚಿಕ್ಕ ತೋಟದಲ್ಲಿ ಒಂದು ಚಿಕ್ಕ ಹಾವನ್ನು ದೂರದಿಂದ ನೋಡಿದರೆ ಸಾಕು ಭಯ ಪಡುತ್ತೇವೆ. ಅದರಲ್ಲಿಯೂ ನಾಗರಹಾವನ್ನು ನಾವು ನೋಡಿದರೆ ಕೇಳಬೇಕೆ? ಆದರೆ ಇಲ್ಲೊಂದು ಭಯಾನಕ ಘಟನೆ ನಡೆದಿದ್ದು, ಅದನ್ನು ಕೇಳಿದರೆ ಎಂತವರಿಗೂ ಭಯವಾಗುವುದು ಸಹಜ. ದೊಡ್ಡ ನಾಗರಹಾವೊಂದು ಸುಮಾರು ಎರಡು ಗಂಟೆಗಳ ಕಾಲ 7 ವರ್ಷದ ಬಾಲಕಿಯ ಕುತ್ತಿಗೆಯಲ್ಲಿ ಸುರುಳಿ ಸುತ್ತಿಕೊಂಡು ನಂತರ ಆ ನಾಗರಹಾವು ಆ ಬಾಲಕಿಯನ್ನು ಕಚ್ಚಿ ಹೋಗಿರುವ ಘಟನೆಯು ಕಳೆದ ವಾರ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಬೋರ್ಖೇಡಿ ಗ್ರಾಮದಲ್ಲಿ ನಡೆದಿದೆ.


ಆ ಪುಟ್ಟ ಬಾಲಕಿಯ ಹೆಸರು ಪಾರಿ ಆಗಿದ್ದು, ತನ್ನ ಕುತ್ತಿಗೆಗೆ ಸುತ್ತಿಕೊಂಡಂತಹ ನಾಗರಹಾವನ್ನು ಓಡಿಸಲು ಅವಳ ಪೋಷಕರು ತುಂಬಾ ಪ್ರಯತ್ನಿಸಿದರು. ಹಾವು ರಕ್ಷಕನು ವಿಷಯ ತಿಳಿದು ಮನೆಗೆ ಬಂದು ಆ ನಾಗರಹಾವನ್ನು ಅವಳ ಕುತ್ತಿಗೆಯಿಂದ ತೆಗೆಯಲು ಪ್ರಯತ್ನಿಸಿದಾಗ, ಅದು ಆ ಪುಟ್ಟ ಬಾಲಕಿಯನ್ನು ಕಚ್ಚಿತು. ಪಾರಿ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.


ಒಂದು ಸುದ್ದಿ ಮಾಧ್ಯಮದ ವರದಿಯ ಪ್ರಕಾರ ಸೆಪ್ಟೆಂಬರ್ 11 ರಂದು ರಾತ್ರಿ 11:45 ರ ಸುಮಾರಿಗೆ ಹಾಸಿಗೆಯ ಮೇಲೆ ಮಲಗಿದ್ದಂತಹ ಪಾರಿ ಕುತ್ತಿಗೆಗೆ ನಾಗರಹಾವೊಂದು ಸುತ್ತಿಕೊಂಡಿರುವುದನ್ನು ಅವರ ತಾಯಿ ಹೇಮಲತಾ ಮೊದಲು ನೋಡಿದರು. ನೋಡಿದ ತಕ್ಷಣ ತುಂಬಾನೇ ಭಯಭೀತಳಾಗಿದ್ದರೂ ಸಹ ತನ್ನ ಮಗಳನ್ನು ಶಾಂತವಾಗಿರಲು ಮತ್ತು ಅವಳಿರುವಂತಹ ಸ್ಥಳದಿಂದ ಅತ್ತ ಇತ್ತ ಚಲಿಸದಂತೆ ಕೇಳಿಕೊಂಡಳು.


ಏತನ್ಮಧ್ಯೆ, ಹುಡುಗಿಯ ತಂದೆ ಪದ್ಮಾಕರ್ ಗಡ್ಕರಿ ಅವರು ಸಹ ಸಹಾಯಕ್ಕಾಗಿ ನೆರೆಹೊರೆಯವರನ್ನು ಕರೆದರು. ಹಾವು ಹಿಡಿಯುವವರನ್ನು ಅಂತಿಮವಾಗಿ ಸ್ಥಳಕ್ಕೆ ಕರೆಸಿದಾಗ ಹಾವು ಮಧ್ಯರಾತ್ರಿ 1:45 ರವರೆಗೆ ಬಾಲಕಿಯ ಕುತ್ತಿಗೆಗೆ ಹಾವು ಹಾಗೆ ಸುತ್ತಿಕೊಂಡಿತ್ತು.


ಪಾರಿ ಹಾವು ತನ್ನ ಕುತ್ತಿಗೆಗೆ ಸುತ್ತಿಕೊಂಡಾಗ ಮಲಗಿದ್ದಳು, ಆ ಎರಡು ಗಂಟೆಗಳ ಕಾಲ ಸಹ ಅವಳು ಎಚ್ಚರವಾಗಿದ್ದರೂ ಸಹ ಹಾಸಿಗೆಯ ಮೇಲೆ ಇದ್ದಳು. ಸ್ಥಳಕ್ಕೆ ಬಂದ ಹಾವು ರಕ್ಷಕನು ಅವಳ ಕುತ್ತಿಗೆಯಿಂದ ಅದನ್ನು ತೆಗೆಯಲು ಪ್ರಯತ್ನಿಸುತ್ತಿದ್ದಾಗ, ಅದು ಅವಳ ಎಡಗೈಯ ಮೊಣಕೈ ಬಳಿ ಕಚ್ಚಿ ಅಲ್ಲಿಂದ ಸರಸರನೆ ವೇಗವಾಗಿ ಹೋಯಿತು.


ಇದನ್ನು ಓದಿ⇒ Truck drivers: ವಾರದಲ್ಲಿ 2 ದಿನ ರಜೆ ಮತ್ತು ಬೋನಸ್..ಇಲ್ಲಿ ಲಾರಿ ಚಾಲಕರಾದವರಿಗೆ ಸಿಗುತ್ತೆ 72 ಲಕ್ಷಕ್ಕಿಂತ ಹೆಚ್ಚು ಸಂಬಳ!

ಹಾವು ಕಚ್ಚಿದ ನಂತರ ಪೋಷಕರು ಬಾಲಕಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ವೈದ್ಯರು ಮೊದಲು ಅವಳಿಗೆ ವಿಷಪೂರಿತ ಹಾವು ಕಚ್ಚಿದೆಯೇ ಎಂದು ಪರಿಶೀಲಿಸಿದರು. ಹಾವು ವಿಷಪೂರಿತವಾಗಿದೆ ಎಂದು ದೃಢಪಟ್ಟ ನಂತರ, ಹಾವಿನ ವಿಷ ನಿರೋಧಕ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು. ಹಾವಿನ ಕಡಿತದಿಂದ ಬಾಲಕಿಯ ಎಡಗೈ ಊದಿಕೊಂಡಿತ್ತು.


ತಕ್ಷಣದ ವೈದ್ಯಕೀಯ ಸಹಾಯದಿಂದಾಗಿ, ಪಾರಿ ಅಪಾಯದಿಂದ ಪಾರಾಗಿದ್ದಾರೆ. ಆಕೆಯ ಸ್ಥಿತಿ ಸ್ಥಿರವಾಗಿದೆ ಮತ್ತು ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಎಂಜಿಐಎಂಎಸ್ ವಿಭಾಗದ ಮುಖ್ಯಸ್ಥರಾದ ಡಾ. ಮನೀಶ್ ಜೈನ್ ತಿಳಿಸಿದ್ದಾರೆ.

First published: