80 KG ಭಾರ ಎತ್ತಿದ್ದ 7 ವರ್ಷದ ಬಾಲಕಿ!; ವೈಟ್​ಲಿಫ್ಟಿಂಗ್​ ಸ್ಪರ್ಧೆಯಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದಳು!

ಅಮೆರಿಕದ ಒಟ್ಟಾವಾ ಮೂಲದ ಬಾಲಕಿ ರೋರಿ ವಾನ್​​​ 11 ಮತ್ತು 13 ವರ್ಷದ ಒಳಗಿನ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಳು. 30 ಕೆ.ಜಿ ವಿಭಾಗದ ವೈಟ್​ ಲಿಫ್ಟಿಂಗ್​ ಸ್ಙರ್ಧೆ ಇದಾಗಿತ್ತು.  

ರೋರಿ ವಾನ್​

ರೋರಿ ವಾನ್​

 • Share this:
  7 ವರ್ಷ ಪ್ರಾಯದ ಬಾಲಕಿಯೊಬ್ಬಳು 80ಕೆ.ಜಿ ಭಾರ ಎತ್ತುವ ಮೂಲಕ ಎಲ್ಲರ ಹುಬ್ಬೇರಿಸವಂತೆ ಸಾಧನೆ ಮಾಡಿದ್ದಾಳೆ.

  ಅಮೆರಿಕದ ಒಟ್ಟಾವಾ ಮೂಲದ ಬಾಲಕಿ ರೋರಿ ವಾನ್​​​ 11 ಮತ್ತು 13 ವರ್ಷದ ಒಳಗಿನ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಳು. 30 ಕೆ.ಜಿ ವಿಭಾಗದ ವೈಟ್​ ಲಿಫ್ಟಿಂಗ್​ ಸ್ಙರ್ಧೆ ಇದಾಗಿತ್ತು.  ಈ ವೇಳೆ 80 ಕೆ.ಜಿ ಭಾರವನ್ನು ಎತ್ತುವ ಮೂಲಕ ಅಮೆರಿಕದ ಅತ್ಯಂತ ಕಿರಿಯ ಯುವ ರಾಷ್ಟ್ರೀಯ ಚಾಂಪಿಯನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.

  ರೋರಿ ವಾನ್​​ 32 ಕೆ.ಜಿ, 42 ಕೆ.ಜಿ ಮತ್ತು 61 ಕೆ.ಜಿ ಭಾರ ಎತ್ತಿದ ಬಳಿಕ 80 ಕೆ.ಜಿ ಎತ್ತಿದ್ದಾಳೆ.  ರೋರಿ ವಾನ್​​ ತನ್ನ 5ನೇ ಹುಟ್ಟುಹಬ್ಬದ ಸಮಯದಲ್ಲಿ ಜಿಮ್ನಾಸ್ಟಿಕ್​​​ ತರಬೇತಿಗೆ ಸೇರುತ್ತಾಳೆ. ಈಕೆ ವಾರಕ್ಕೆ 9ಗಂಟೆಗಳ ಕಾಲ ವೈಟ್​ಲಿಫ್ಟಿಂಗ್​ ತರಬೇತಿ ಪಡೆಯುತ್ತಾಳೆ.
  View this post on Instagram


  A post shared by Rory van Ulft (@roryvanulft)


  ಸಾಮನ್ಯವಾಗಿ 11 ವರ್ಷ ಪ್ರಾಯದವರು 40 ಕೆ.ಜಿ ಭಾರವನ್ನು ಕಷ್ಟದಲ್ಲಿ ಎತ್ತುತ್ತಾರೆ. ಆದರೆ 7 ವರ್ಷದ ರೋರಿ ವಾನ್​​ ಮಾತ್ರ ಸರಿಯಾದ ಟ್ರೈನಿಂಗ್​ ಪಡೆಯುವ ಮೂಲಕ 80ಕೆ.ಜಿ ಭಾರವನ್ನು ಎತ್ತಿ ಸುದ್ದಿಯಾಗಿದ್ದಾಳೆ.  ಸದ್ಯ ಆಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಆನೇಕರು ಆಕೆಯ ಸಾಧನೆಗೆ ಭೇಷ್​​​ ಎಂದಿದ್ದಾರೆ​.
  Published by:Harshith AS
  First published: