• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Trending: ಬ್ಯಾಂಕ್ ಎಫ್‌ಡಿ ರಿಟರ್ನ್ಸ್‌ಗಿಂತ ಉತ್ತಮ ಆದಾಯ ಗಳಿಸಲು ಇಲ್ಲಿದೆ 7 ಹೂಡಿಕೆ ಆಯ್ಕೆಗಳು!

Trending: ಬ್ಯಾಂಕ್ ಎಫ್‌ಡಿ ರಿಟರ್ನ್ಸ್‌ಗಿಂತ ಉತ್ತಮ ಆದಾಯ ಗಳಿಸಲು ಇಲ್ಲಿದೆ 7 ಹೂಡಿಕೆ ಆಯ್ಕೆಗಳು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಐಟಿ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಎನ್ಎಸ್‌ಸಿ ಠೇವಣಿಗಳು ತೆರಿಗೆ ರಿಯಾಯಿತಿಗೆ ಅರ್ಹತೆ ಪಡೆದಿವೆ. 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕರ ಪರವಾಗಿಯೂ ಪ್ರಮಾಣಪತ್ರಗಳನ್ನು ಸಹ ಖರೀದಿಸಬಹುದು.

 • Share this:

  ಕೋವಿಡ್‌ - 19, ಲಾಕ್‌ಡೌನ್‌ನಿಂದ ಆದಾಯ ನಷ್ಟ ಅನುಭವಿಸಿರುವ ಅನೇಕರು ಹೆಚ್ಚು ಆದಾಯ ಸಿಗುವ ಹಾದಿಗಳನ್ನು ಹುಡುಕುತ್ತಾರೆ, ಫೈನಾನ್ಸ್‌, ನಂಬಿಕಸ್ಥ ವಲ್ಲದ ಬ್ಯಾಂಕ್‌ಗಳಲ್ಲಿ ಇಟ್ಟರೆ ಆದಾಯ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ಅದರ ಬದಲು ಬ್ಯಾಂಕ್‌ನಲ್ಲಿ ಎಫ್‌ಡಿ ಇಡೋಣ ಅಂದ್ರೆ ಅಲ್ಲೂ ಬಡ್ಡಿ ಅಷ್ಟಕಷ್ಟೇ ಅಂತ ಹಲವರು ಗೊಣಗುತ್ತಿರುತ್ತಾರೆ. ಯಾಕೆಂದ್ರೆ ಬ್ಯಾಂಕ್ ಎಫ್‌ಡಿ ಬಡ್ಡಿದರಗಳು 2004-05ರ ಮಟ್ಟಕ್ಕೆ ಇಳಿದಿವೆ. ಕಡಿಮೆ ಅವಧಿಗೆ ಎಫ್‌ಡಿ ಇಡಲು ಹೋದ್ರೆ ಬ್ಯಾಂಕ್ ಉಳಿತಾಯ ಖಾತೆಗಿಂತ ಕಡಿಮೆ ಬಡ್ಡಿಯನ್ನು ನೀಡುತ್ತವೆ. ಹೌದು, ಪ್ರಸ್ತುತ ಬ್ಯಾಂಕ್ ಎಫ್‌ಡಿ ಬಡ್ಡಿದರಗಳು ಉಳಿತಾಯ ಬ್ಯಾಂಕ್ ಖಾತೆಗೆ ಸಮನಾಗಿವೆ. ಉದಾಹರಣೆಗೆ ಎಸ್‌ಬಿಐ ಬ್ಯಾಂಕ್ ವಿವಿಧ ಅವಧಿಗಳಲ್ಲಿ 2.9% ಮತ್ತು 5.4% ರ ನಡುವೆ ಬಡ್ಡಿದರಗಳನ್ನಷ್ಟೇ ನೀಡುತ್ತಿದೆ. ಆದರೂ, ನಿರಾಶರಾಗಬೇಡಿ. ಯಾಕೆಂದ್ರೆ, ಕೆಲವು ಅಂಚೆ ಕಚೇರಿ ಉಳಿತಾಯ ಯೋಜನೆಗಳು, ಎನ್‌ಪಿಎಸ್ ಮತ್ತು ಸಣ್ಣ ಬ್ಯಾಂಕುಗಳ ಬ್ಯಾಂಕ್ ಎಫ್‌ಡಿಗಳೊಂದಿಗೆ ಬ್ಯಾಂಕ್ ಠೇವಣಿಗಿಂತ ಸ್ವಲ್ಪ ಹೆಚ್ಚಿನ ಆದಾಯವನ್ನು ನೀವು ಇನ್ನೂ ಗಳಿಸಬಹುದು. ಈ 7 ಆಯ್ಕೆಗಳು ಇಲ್ಲಿವೆ ನೋಡಿ..


  1) ಅಂಚೆ ಕಚೇರಿ ರಾಷ್ಟ್ರೀಯ ಉಳಿತಾಯ ಮಾಸಿಕ ಆದಾಯ ಖಾತೆ (POMIS)


  ಈ ಖಾತೆಯಲ್ಲಿ ಏಕ ಮಾಲೀಕತ್ವದಲ್ಲಿ ಗರಿಷ್ಠ ₹ 4.5 ಲಕ್ಷ ಮತ್ತು ಜಂಟಿ ಮಾಲೀಕತ್ವದಲ್ಲಿ ಗರಿಷ್ಠ 9 ಲಕ್ಷ ರೂ. ಹೂಡಿಕೆ ಮಾಡಬಹುದು. ಅಂಚೆ ಕಚೇರಿ ರಾಷ್ಟ್ರೀಯ ಉಳಿತಾಯ ಮಾಸಿಕ ಆದಾಯ ಖಾತೆಯನ್ನು ಏಕ ಅಥವಾ ಜಂಟಿ (ಮೂವರು ವಯಸ್ಕರು) ಸಾಮರ್ಥ್ಯದಲ್ಲಿ ತೆರೆಯಬಹುದು. 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸಹ ಪೋಷಕರು / ಗಾರ್ಡಿಯನ್‌ಗಳ ಮೂಲಕ ಖಾತೆ ತೆರೆಯಬಹುದು. POMIS ಮಾಸಿಕ
  6.6% ಬಡ್ಡಿದರವನ್ನು ನೀಡುತ್ತದೆ. ಇದು ಐದು ವರ್ಷಗಳ ಮುಕ್ತಾಯ ಅವಧಿಯನ್ನು ಹೊಂದಿದೆ.


  2) ಆರ್‌ಬಿಐ ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್‌ಗಳು


  ಆರ್‌ಬಿಐ ಉಳಿತಾಯ ಬಾಂಡ್ 7 ವರ್ಷಗಳ ಮುಕ್ತಾಯವನ್ನು ಹೊಂದಿದೆ. ಜುಲೈ 1 ರಿಂದ ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ನೀಡಲು ಭಾರತ ಸರ್ಕಾರ ಅನುಮತಿ ನೀಡಿದೆ. ಜುಲೈ 1 ರಿಂದ ಡಿಸೆಂಬರ್ 31 ರವರೆಗಿನ ಬಡ್ಡಿದರ ಶೇ. 7.15% ಆಗಿದ್ದು, ಆ ಬಡ್ಡಿ ದರವನ್ನು ಮುಂದಿನ ವರ್ಷ ಜನವರಿ 1 ರಂದು ಪಾವತಿಸಲಾಗುವುದು. ಇದರ ಬಡ್ಡಿ ದರವನ್ನು ಪ್ರತಿ 6 ತಿಂಗಳಿಗೊಮ್ಮೆ ಮರುಹೊಂದಿಸಲಾಗುತ್ತದೆ. ಈ ಬಾಂಡ್‌ಗಳು ಸಂಪೂರ್ಣ ತೆರಿಗೆಗೆ ಒಳಪಟ್ಟಿರುತ್ತದೆ ಮತ್ತು ಕಾಲಕಾಲಕ್ಕೆ ಬಾಂಡ್‌ಗಳ ಮೇಲಿನ ಬಡ್ಡಿಯನ್ನು ಪಾವತಿಸುವಾಗ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.


  ಇನ್ನು, ಹೂಡಿಕೆದಾರರು ಕನಿಷ್ಠ 1,000 ರೂಗಳಿಗೆ ಈ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಆದರೆ, ಯಾವುದೇ ಗರಿಷ್ಠ ಮಿತಿಯಿಲ್ಲ. ಹಿರಿಯ ನಾಗರಿಕರಿಗೆ ವಿಶೇಷ ಅಕಾಲಿಕ ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ನೀಡುತ್ತವೆ.

  3) ಎನ್‌ಪಿಎಸ್ ಶ್ರೇಣಿ II


  ಎನ್‌ಪಿಎಸ್ ಶ್ರೇಣಿ II ಸ್ವಯಂಪ್ರೇರಿತ ಖಾತೆಯಾಗಿದೆ ಮತ್ತು ಎನ್‌ಪಿಎಸ್ ಶ್ರೇಣಿ I ಖಾತೆಯನ್ನು ಹೊಂದಿರುವುದು ಶ್ರೇಣಿ II ಖಾತೆಯನ್ನು ತೆರೆಯಲು ಪೂರ್ವಾಪೇಕ್ಷಿತವಾಗಿದೆ. ಶ್ರೇಣಿ II ಖಾತೆಗೆ ನಿಮ್ಮ ಕೊಡುಗೆಗಳಿಗಾಗಿ ನೀವು ಸೆಕ್ಷನ್ 80 ಸಿ ಅಡಿಯಲ್ಲಿ ಕಡಿತವನ್ನು ಪಡೆಯುವ ಕೇಂದ್ರ ಸರ್ಕಾರಿ ನೌಕರರಲ್ಲದಿದ್ದರೆ ನಿಮ್ಮ ವಿವೇಚನೆಯಿಂದ ನೀವು ಶ್ರೇಣಿ II ಖಾತೆಯಿಂದ ಹೂಡಿಕೆ ಮಾಡಬಹುದು ಮತ್ತು ಪಡೆದುಕೊಳ್ಳಬಹುದು.


  ಸರ್ಕಾರಿ ಬಾಂಡ್‌ಗಳು ಮತ್ತು ಸಂಬಂಧಿತ ಸಾಧನಗಳಲ್ಲಿ ಹೂಡಿಕೆ ಮಾಡುವ ಎನ್‌ಪಿಎಸ್ ಶ್ರೇಣಿ II ಖಾತೆ ಯೋಜನೆ G, ಕಳೆದ ಒಂದು ವರ್ಷದಲ್ಲಿ ಎರಡು-ಅಂಕಿಯ ಲಾಭವನ್ನು ನೀಡಿದೆ. ಅಂದರೆ ಸರಾಸರಿ ಆದಾಯ 11.84% ನೀಡಿದೆ. ಇನ್ನೊಂದೆಡೆ, ದೇಶದ ಟಾಪ್‌ ಬ್ಯಾಂಕ್‌ಗಳಲ್ಲೊಂದಾದ ಎಸ್‌ಬಿಐ ಬ್ಯಾಂಕ್‌ನಲ್ಲಿ 1 ವರ್ಷದ ಸ್ಥಿರ ಠೇವಣಿ ಇದ್ದರೆ, ನಿಮಗೆ 5.1% ಬಡ್ಡಿದರವನ್ನು ನೀಡುತ್ತದೆ. ಇತರೆ ಅವಧಿಗಳಿಗೂ ಸಹ ಬ್ಯಾಂಕ್ ಸ್ಥಿರ ಠೇವಣಿಗಳಿಗಿಂತ ಎನ್‌ಪಿಎಸ್ ಯೋಜನೆಯು ಉತ್ತಮವಾಗಿದೆ.


  4) 5 ವರ್ಷದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (ಎನ್‌ಎಸ್‌ಸಿ)


  ಮತ್ತೊಂದು ಅಂಚೆ ಕಚೇರಿ ಉಳಿತಾಯ ಯೋಜನೆಯಾದ ಎನ್‌ಎಸ್‌ಸಿ ತಮ್ಮ ಸ್ಥಿರ ಆದಾಯದ ಬಂಡವಾಳವನ್ನು ವೈವಿಧ್ಯಗೊಳಿಸಲು ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳು (HNI)ಗಳು ಸಾಕಷ್ಟು ಜನಪ್ರಿಯವಾಗಿವೆ. ಬಂಡವಾಳದ ಸುರಕ್ಷತೆಯನ್ನು ಬಯಸುವವರಿಗೆ ಈ ಪ್ರಮಾಣಪತ್ರಗಳು ಸುರಕ್ಷಿತ ಮತ್ತು ಉಪಯುಕ್ತವಾಗಿವೆ. ಪ್ರಸ್ತುತ ಎನ್‌ಎಸ್‌ಸಿಗಳು ವಾರ್ಷಿಕವಾಗಿ 6.8% ಬಡ್ಡಿದರವನ್ನು ಲೆಕ್ಕಹಾಕಿದರೂ, ಮೆಚ್ಯುರಿಟಿ ಅವಧಿಯಲ್ಲಿ ನೀಡಲಾಗುತ್ತದೆ.


  ಐಟಿ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಎನ್ಎಸ್‌ಸಿ ಠೇವಣಿಗಳು ತೆರಿಗೆ ರಿಯಾಯಿತಿಗೆ ಅರ್ಹತೆ ಪಡೆದಿವೆ. 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕರ ಪರವಾಗಿಯೂ ಪ್ರಮಾಣಪತ್ರಗಳನ್ನು ಸಹ ಖರೀದಿಸಬಹುದು. ಮೊದಲ 4 ವರ್ಷಗಳ ಬಡ್ಡಿಯನ್ನು ಮರುಹೂಡಿಕೆ ಮಾಡಲಾಗಿದ್ದರೂ, 5ನೇ ವರ್ಷದಲ್ಲಿ ಗಳಿಸಿದ ಬಡ್ಡಿಯನ್ನು ಅನ್ವಯವಾಗುವ ತೆರಿಗೆ ಸ್ಲ್ಯಾಬ್‌ ದರಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ.

  5) ಹಿರಿಯ ನಾಗರಿಕ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್)


  60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿ ಎಸ್‌ಸಿಎಸ್‌ಎಸ್‌ನಲ್ಲಿ ಹೂಡಿಕೆ ಮಾಡಬಹುದು. ಪ್ರಸ್ತುತ, ಎಸ್‌ಸಿಎಸ್‌ಎಸ್ ವಾರ್ಷಿಕ 7.4% ದರದಲ್ಲಿ ಬಡ್ಡಿಯನ್ನು ಪಾವತಿಸುತ್ತದೆ. ಈ ಯೋಜನೆ ಕೇವಲ 15 ಲಕ್ಷ ರೂ. ಮೀರದ ಒಂದು ಠೇವಣಿಯನ್ನು ಮಾತ್ರ ಅನುಮತಿಸುತ್ತದೆ. ಠೇವಣಿದಾರರು ವೈಯಕ್ತಿಕ ಸಾಮರ್ಥ್ಯದಲ್ಲಿ ಅಥವಾ ಸಂಗಾತಿಯೊಂದಿಗೆ ಜಂಟಿಯಾಗಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ನಿರ್ವಹಿಸಬಹುದು.


  ಇದರ ಮುಕ್ತಾಯ ಅವಧಿ 5 ವರ್ಷಗಳಾಗಿದ್ದು, ಮುಕ್ತಾಯಗೊಂಡ ನಂತರ, ಖಾತೆಯನ್ನು ಇನ್ನೂ ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ಎಸ್‌ಸಿಎಸ್‌ಎಸ್ ಖಾತೆಗಳ ಸಂದರ್ಭದಲ್ಲಿ, ಏಪ್ರಿಲ್, ಜುಲೈ, ಅಕ್ಟೋಬರ್ ಮತ್ತು ಜನವರಿ 1 ರ ಕೆಲಸದ ದಿನದಂದು ತ್ರೈಮಾಸಿಕ ಬಡ್ಡಿಯನ್ನು ಪಾವತಿ ಮಾಡಲಾಗುವುದು.


  6) ಸಣ್ಣ ಬ್ಯಾಂಕ್ ಎಫ್‌ಡಿಗಳು


  ಕೆಲವು ಸಣ್ಣ ಹಣಕಾಸು ಬ್ಯಾಂಕುಗಳು (ಎಸ್‌ಎಫ್‌ಬಿಗಳು) ಆಯ್ದ ಸ್ಥಿರ ಠೇವಣಿಗಳಲ್ಲಿ ಶೇ. 8-9 ರವರೆಗೆ ಬಡ್ಡಿದರಗಳನ್ನು ನೀಡುತ್ತವೆ. ಅಲ್ಲದೆ, ಸಾಮಾನ್ಯ ಗ್ರಾಹಕರಿಗೆ ಹೋಲಿಸಿದರೆ ಹಿರಿಯ ನಾಗರಿಕರು ಈ ಠೇವಣಿಗಳ ಮೇಲೆ 50 ಬೇಸಿಸ್ ಪಾಯಿಂಟ್‌ ಹೆಚ್ಚು ಬಡ್ಡಿ ಪಡೆಯಲಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಮತ್ತು ಇತರ ಟಾಪ್‌ ಬ್ಯಾಂಕ್‌ಗಳಿಗೆ ಹೋಲಿಸಿದರೆ ಈ ಬ್ಯಾಂಕುಗಳು ನೀಡುವ ಬಡ್ಡಿದರಗಳು ಖಂಡಿತವಾಗಿಯೂ ಲಾಭದಾಯಕವಾಗಿವೆ.
  7)ಕಿಸಾನ್ ವಿಕಾಸ್ ಪತ್ರ (ಕೆವಿಪಿ)

  ವಾರ್ಷಿಕವಾಗಿ 6.9% ನಿಗದಿತ ಬಡ್ಡಿದರದಲ್ಲಿ, ಒಬ್ಬ ವಯಸ್ಕ ವ್ಯಕ್ತಿ ಅಥವಾ ಅಪ್ರಾಪ್ತ ವಯಸ್ಕನ ಪರವಾಗಿ ವಯಸ್ಕರು ಕೆವಿಪಿಗಳಲ್ಲಿ ಹೂಡಿಕೆ ಮಾಡಬಹುದು. ಜಾಯಿಂಟ್‌ ಹೋಲ್ಡಿಂಗ್‌ ಮೂಲಕವೂ ಇದರಲ್ಲಿ ಹೂಡಿಕೆ ಮಾಡಬಹುದು. ಕೆವಿಪಿಯನ್ನು ಯಾವುದೇ ವಿಭಾಗೀಯ ಅಂಚೆ ಕಚೇರಿಯಿಂದ ಖರೀದಿಸಬಹುದು. ಪ್ರಮಾಣಪತ್ರವನ್ನು ವಿತರಣೆಯ ದಿನಾಂಕದಿಂದ 2 1/2 ವರ್ಷಗಳ ನಂತರ ಎನ್ಕ್ಯಾಶ್ ಮಾಡಬಹುದು.

  First published: