Neeraj Chopra: ಚಿನ್ನದ ಹುಡುಗ ನೀರಜ್ ಚೋಪ್ರಾ ಭಾರತೀಯರ ಹೃದಯವನ್ನು ಗೆದ್ದುಬಿಟ್ಟಿದ್ದಾನೆ. ಅವನ ಸಾಧನೆ ಕಡಿಮೆಯದ್ದಲ್ಲ. ಜಾವೆಲಿನ್ ಥ್ರೋ ಎನ್ನುವ ಎಲ್ಲರಿಗೂ ಪರಿಚಯ ಇದ್ದ ಆಟವನ್ನು ಮತ್ತಷ್ಟು ಫೇಮಸ್ ಮಾಡಿದ ಕೀರ್ತಿ ನೀರಜ್ಗೆ ಸಲ್ಲುತ್ತದೆ. ಅನೇಕ ವರ್ಷಗಳಿಂದ ನೀರಜ್ ಜಾವೆಲಿನ್ ಥ್ರೋನಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಿರಂತರ ತರಬೇತಿ ಮತ್ತು ಶ್ರಮ ಇದ್ದೇ ಇದೆ. ಆದ್ರೆ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆಯುವುದು ಅಂದ್ರೆ ಸುಮ್ಮನೆ ಮಾತಲ್ಲ. ಇದಕ್ಕೆ ನೀರಜ್ ಶ್ರಮದ ಜೊತೆಜೊತೆಗೇ ತರಬೇತಿಯೂ ಅಷ್ಟೇ ಮುಖ್ಯ. ಒಲಿಂಪಿಕ್ಸ್ಗೆ ನೀರಜ್ನ್ನು ರೆಡಿ ಮಾಡೋಕೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಬರೋಬ್ಬರಿ 7 ಕೋಟಿ ರೂಪಾಯಿ ಖರ್ಚು ಮಾಡಿದೆಯಂತೆ. ಆತನ ಟ್ರೇನಿಂಗ್ ಗೆ ಅಂತಲೇ 177 ಜಾವೆಲಿನ್ಗಳನ್ನು ತರಿಸಿ ಮೀಸಲಿಡಲಾಗಿತ್ತು. ಅಲ್ಲದೇ ಜಾವೆಲಿನ್ ಎಸೆಯುವ ಯಂತ್ರವೊಂದನ್ನೂ ತರಿಸಲಾಗಿತ್ತು, ಅದರ ಬೆಲೆ 74.28 ಲಕ್ಷ ರೂಪಾಯಿಗಳು.
ಈ ಎಲ್ಲಾ ಲೆಕ್ಕವನ್ನು ಕ್ರೀಡಾ ಅಧಿಕಾರಿಗಳೇ ನೀಡಿದ್ದಾರೆ. ಒಲಿಂಪಿಕ್ಸ್ಗೆ ಮುನ್ನ ನೀರಜ್ ಚೋಪ್ರಾಗೆ ವಿದೇಶದಲ್ಲಿ ಬರೋಬ್ಬರಿ 450 ದಿನಗಳ ವಿಶೇಷ ತರಬೇತಿ ಕೊಡಿಸಲಾಗಿತ್ತು. ಅದಲ್ಲದೇ ಪಟಿಯಾಲಾದ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ 1167 ದಿನಗಳನ್ನು ನೀರಜ್ ಕಳೆದಿದ್ದಾನೆ. ಇದೆಲ್ಲವೂ ಆತನ ಗೆಲುವಿಗೆ ದೊಡ್ಡ ಮಟ್ಟಿಗೆ ಸಹಕಾರಿಯಾಗಿದೆ.
ನಿರ್ದಿಷ್ಟವಾಗಿ ನೀರಜ್ಗೆ ಅಂತಲೇ ಕೆಲವು ಪರ್ಸನಲ್ ಟ್ರೇನಿಂಗ್ ಸೆಶನ್ಗಳನ್ನೂ ನೀಡಲಾಗಿತ್ತಂತೆ. ನೀರಜ್ ಈ ಎಲ್ಲದರಲ್ಲೂ ಬಹಳ ಶ್ರಮವಹಿಸಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದೆಲ್ಲದರ ಫಲವೇ ಒಲಿಂಪಿಕ್ಸ್ನಲ್ಲಿ ಅವರಿಗೆ ಒಲಿದ ಬಂಗಾರದ ಪದಕ. ಬಂಗಾರದ ಪದಕ ಗೆದ್ದು ಈಗಾಗಲೇ ಸಾಕಷ್ಟು ದಿನಗಳಾಗಿದ್ರೂ ನೀರಜ್ ಸಾಧನೆಯ ಸಂಭ್ರಮ ಇನ್ನೂ ಮುಂದುವರೆದಿದೆ.
ಇನ್ನು ಇತ್ತೀಚೆಗೆ ನೀರಜ್ ತಾವು 2019ರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆಗ ಅವರು ಮೊಣಕೈ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಒಂದು ಚಿತ್ರ ಆಸ್ಪತ್ರೆಯ ಹಾಸಿಗೆ ಮೇಲಿನದ್ದಾದ್ರೆ ಮತ್ತೊಂದು ಅದೇ ಕೈಯಲ್ಲಿ ಚಿನ್ನದ ಪದಕ ಹಿಡಿದುಕೊಂಡಿದ್ದು. ತನ್ನ ಆ ಕಷ್ಟದ ಸಂದರ್ಭದಲ್ಲಿ ನೆರವಾದ ವೈದ್ಯರನ್ನು ಅವರು ಸ್ಮರಿಸಿಕೊಂಡಿದ್ದರು.
Journey to the 🥇@Neeraj_chopra1's Gold is a cumulative effect of his grit, determination & a supporting ecosystem that stood by him. Here's how 🇮🇳's favourite javelin thrower fulfilled the entire country's dream of winning 🥇 at the #Olympics#Cheer4India@PMOIndia @afiindia pic.twitter.com/28DajW0f7S
— SAIMedia (@Media_SAI) August 13, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ