Cancer Survivor: ಜಸ್ಟ್ ರನ್ನಿಂಗ್ ಮೂಲಕ 2 ರೀತಿಯ ಕ್ಯಾನ್ಸರ್ ಗೆದ್ದ 69ರ ವೃದ್ಧ ತಂಗಪ್ರಸಾದ್!

"ನಾನು ಬೆಳಗ್ಗೆ ಎದ್ದು ಓಡಲು ಪ್ರಾರಂಭಿಸಿದಾಗ, ಕ್ಯಾನ್ಸರ್ ನನ್ನೊಂದಿಗೆ ಹೋರಾಡುವುದು ವ್ಯರ್ಥ ಎಂದು ಅರಿತುಕೊಂಡು ನನ್ನನ್ನು ತೊರೆದಿತು" ಎಂದು ತಂಗಪ್ರಸಾದ್ ಅವರು ಹೇಳುತ್ತಾರೆ.

"ನಾನು ಬೆಳಗ್ಗೆ ಎದ್ದು ಓಡಲು ಪ್ರಾರಂಭಿಸಿದಾಗ, ಕ್ಯಾನ್ಸರ್ ನನ್ನೊಂದಿಗೆ ಹೋರಾಡುವುದು ವ್ಯರ್ಥ ಎಂದು ಅರಿತುಕೊಂಡು ನನ್ನನ್ನು ತೊರೆದಿತು" ಎಂದು ತಂಗಪ್ರಸಾದ್ ಅವರು ಹೇಳುತ್ತಾರೆ.

"ನಾನು ಬೆಳಗ್ಗೆ ಎದ್ದು ಓಡಲು ಪ್ರಾರಂಭಿಸಿದಾಗ, ಕ್ಯಾನ್ಸರ್ ನನ್ನೊಂದಿಗೆ ಹೋರಾಡುವುದು ವ್ಯರ್ಥ ಎಂದು ಅರಿತುಕೊಂಡು ನನ್ನನ್ನು ತೊರೆದಿತು" ಎಂದು ತಂಗಪ್ರಸಾದ್ ಅವರು ಹೇಳುತ್ತಾರೆ.

  • Trending Desk
  • 5-MIN READ
  • Last Updated :
  • Share this:

    ಕ್ಯಾನ್ಸರ್ (Cancer) ರೋಗದ ಹೆಸರು ಕೇಳಿದರೆ ಅನೇಕರು ಬೆಚ್ಚಿ ಬೀಳುತ್ತಾರೆ. ಆದರೆ ಕೆಲವರು ಈ ಕ್ಯಾನ್ಸರ್ ಎಂಬ ಭಯಾನಕ ರೋಗವನ್ನು ಸೋಲಿಸಿದ್ದಾರೆ. ಒಳ್ಳೆಯ ಪೌಷ್ಠಿಕ ಆಹಾರದಿಂದ (Healthy Food) ಮತ್ತು ಜೀವನಶೈಲಿಯನ್ನು (Lifestyle) ಬದಲಾಯಿಸಿಕೊಳ್ಳುವ ಮೂಲಕ ಎಂತಹದೇ ರೋಗವನ್ನಾದರೂ ಜಯಿಸಬಹುದು. ಹೀಗೆ 69 ವರ್ಷ ವಯಸ್ಸಿನ ತಂಗಪ್ರಸಾದ್ (Thangaprasad) ಎಂಬುವರು ಪ್ರತಿದಿನ ಬೆಳಗ್ಗೆ ಬೇಗನೆ ಎದ್ದು ಸುಮಾರು ಕಿಲೋ ಮೀಟರ್ ದೂರ ಓಡುವ ಅಭ್ಯಾಸವನ್ನು ರೂಢಿಸಿಕೊಂಡು ತಮಗಿದ್ದ ಕ್ಯಾನ್ಸರ್ ರೋಗವನ್ನೇ ನಿಗ್ರಹಿಸಿಕೊಂಡಿದ್ದಾರೆ. 


    ತಿರುವನಂತಪುರಂನ ಎಸ್‌ಬಿಟಿಯ ಈ ನಿವೃತ್ತ ಸಹಾಯಕ ಜನರಲ್ ಮ್ಯಾನೇಜರ್ ಅವರ ಜೀವನವು, ಅನಾರೋಗ್ಯವನ್ನು ವ್ಯಾಯಾಮದಿಂದ ಹೇಗೆ ನಿವಾರಿಸಬಹುದು ಮತ್ತು ಜೀವನವನ್ನು ಹೇಗೆ ಪೂರ್ಣವಾಗಿ ಬದುಕಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.


    ಎರಡು ರೀತಿಯ ಕ್ಯಾನ್ಸರ್ ನಿಂದ ಬಳಲುತ್ತಿದ್ದರಂತೆ ತಂಗಪ್ರಸಾದ್


    ತಂಗಪ್ರಸಾದ್ ಅವರು ಎರಡು ರೀತಿಯ ಕ್ಯಾನ್ಸರ್​​​ ನಿಂದ ಬಳಲುತ್ತಿದ್ದು, ಅವರ ಒಂದು ಮೂತ್ರಪಿಂಡವನ್ನು ಸಹ ತೆಗೆದು ಹಾಕಲಾಯಿತು. "ನಾನು ಬೆಳಗ್ಗೆ ಎದ್ದು ಓಡಲು ಪ್ರಾರಂಭಿಸಿದಾಗ, ಕ್ಯಾನ್ಸರ್ ನನ್ನೊಂದಿಗೆ ಹೋರಾಡುವುದು ವ್ಯರ್ಥ ಎಂದು ಅರಿತುಕೊಂಡು ನನ್ನನ್ನು ತೊರೆದಿತು" ಎಂದು ತಂಗಪ್ರಸಾದ್ ಅವರು ಹೇಳುತ್ತಾರೆ.




    ಈ ಹಿಂದೆ ಅವರಿಗೆ ಎರಡು ಬಾರಿ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. 2013 ರಲ್ಲಿ ಅವರಿಗೆ ಮೂತ್ರಪಿಂಡದಲ್ಲಿ ಸೋಂಕು ಇದ್ದುದ್ದರಿಂದ ಆ ಒಂದು ಮೂತ್ರಪಿಂಡವನ್ನು ಸಹ ತೆಗೆದು ಹಾಕಬೇಕಾಯಿತು. ಅದರ ನಂತರ ಎಂದರೆ ಮುಂದಿನ ವರ್ಷವೇ ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. 2017 ರಲ್ಲಿ, ಅವರಿಗೆ ಮತ್ತೊಮ್ಮೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು.


    ಸುಮಾರು 25 ಸುತ್ತುಗಳನ್ನು ಎಂದರೆ 10 ಕಿಲೋ ಮೀಟರ್ ಓಡುತ್ತಾರಂತೆ ತಂಗಪ್ರಸಾದ್


    ಸಾಮಾನ್ಯವಾಗಿ ಹೀಗೆ ಎರಡು ಬಾರಿ ಕ್ಯಾನ್ಸರ್ ಗೆ ಒಳಗಾದವರು ತುಂಬಾನೇ ಜಾಗರೂಕರಾಗಿರಬೇಕು ಮತ್ತು ಹೆಚ್ಚಾಗಿ ತಮ್ಮ ಮನೆಗಳಿಂದ ಹೊರಗೆ ಸಹ ಹೋಗಬಾರದು ಅಂತ ಹೇಳುತ್ತಾರೆ. ಆದರೆ ತಂಗಪ್ರಸಾದ್ ಅವರ ಆಲೋಚನೆಯೇ ಬೇರೆ ಆಗಿತ್ತು. ನಂತರ ಅವರು ಬೆಳಗ್ಗೆ ಎದ್ದು ಓಡಲು ನಿರ್ಧರಿಸಿದರು. ಬಹುಶಃ ಅವರು ತಮ್ಮ ಬಾಲ್ಯದ ಅಭ್ಯಾಸವನ್ನು ಪುನರಾರಂಭಿಸಿದರು ಎಂದು ಹೇಳಬಹುದು.


    ಇದನ್ನೂ ಓದಿ: World cancer day 2023: ಮೈದಾ ಹಿಟ್ಟು ಕ್ಯಾನ್ಸರ್​​​ಗೆ ಕಾರಣವಾಗುತ್ತಾ? ಹಾಗಾದ್ರೆ ತಕ್ಷಣವೇ ತಿನ್ನುವುದನ್ನು ನಿಲ್ಲಿಸಿ


    ಅವರು ಬೆಳಿಗ್ಗೆ 6 ಗಂಟೆಗೆ ತಿರುವನಂತಪುರಂ ಚಂದ್ರಶೇಖರ್ ಕ್ರೀಡಾಂಗಣವನ್ನು ತಲುಪಿ ಮತ್ತು ಅಲ್ಲಿ 25 ಸುತ್ತುಗಳನ್ನು ಓಡುತ್ತಾರೆ. ಆರಂಭದಲ್ಲಿ, ಅವರು 10 ಸುತ್ತುಗಳನ್ನು ಸಹ ಓಡಲು ಸಾಧ್ಯವಾಗುತ್ತಿರಲಿಲ್ಲ. ಈಗ ಅವರು ಸುಮಾರು 25 ಸುತ್ತುಗಳನ್ನು ಓಡಿಕೊಂಡೆ ಹಾಕುತ್ತಾರೆ ಮತ್ತು ಇದು ಸುಮಾರು 10 ಕಿಲೋ ಮೀಟರ್ ವರೆಗೆ ಓಡಿದಂತಾಗುತ್ತದೆ.


    1972 ರಲ್ಲಿ ಕೇರಳ ಮ್ಯಾರಥಾನ್ ಗೆದ್ದಿದ್ದರಂತೆ..


    1972 ರಲ್ಲಿ ಕೊಲ್ಲಂ ಫಾತಿಮಾ ಮಾತಾ ನ್ಯಾಷನಲ್ ಕಾಲೇಜಿನಲ್ಲಿ ನಡೆದ ಕೇರಳ ಮ್ಯಾರಥಾನ್ ನಲ್ಲಿ 10 ಕಿಲೋ ಮೀಟರ್ ಮ್ಯಾರಥಾನ್ ನಲ್ಲಿ ಭಾಗವಹಿಸಿ ಗೆದ್ದಿದ್ದರಂತೆ ತಂಗಪ್ರಸಾದ್. ಇಷ್ಟೇ ಅಲ್ಲದೆ ಅವರು ಇನ್ನಿತರೆ ಕೆಲವು ದೂರದ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿದರೂ, ಅವರು ಬ್ಯಾಂಕ್ ಉದ್ಯೋಗಿಯಾದ ನಂತರ ಅದನ್ನು ನಿಲ್ಲಿಸಿದ್ದರಂತೆ. ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾದಾಗ, ವ್ಯಾಯಾಮದ ಕೊರತೆಯು ಕ್ಯಾನ್ಸರ್ ಗೆ ಒಂದು ಕಾರಣವಾಗಿದೆ ಎಂದು ಅವರು ಅರಿತುಕೊಂಡರು.




    ಅವರು ತಮ್ಮ ವೈದ್ಯರ ಅನುಮತಿಯನ್ನು ಪಡೆದು ಮತ್ತೆ ಓಡಲು ಶುರು ಮಾಡಿದರಂತೆ ಮತ್ತು ಹಾಗೆಯೇ ಅವರು ತಮ್ಮ ಚಿಕಿತ್ಸೆಯನ್ನು ಸಹ ಮುಂದುವರೆಸಿದರು ಮತ್ತು ನಿಯಮಿತವಾಗಿ ಔಷಧಿಗಳನ್ನು ಸಹ ತೆಗೆದುಕೊಂಡರು. "ನಾನು ಓಡಲು ಪ್ರಾರಂಭಿಸಿದ್ದರಿಂದ ಕ್ರಮೇಣವಾಗಿ ನನ್ನಲ್ಲಿ ಆತ್ಮವಿಶ್ವಾಸ ತುಂಬಾನೇ ಜಾಸ್ತಿಯಾಯಿತು ಮತ್ತು ನನ್ನ ಆರೋಗ್ಯವು ಸಹ ಸುಧಾರಿಸಿತು” ಎಂದು ತಂಗಪ್ರಸಾದ್ ಹೇಳುತ್ತಾರೆ.


    ದೆಹಲಿಯಲ್ಲಿ ನಡೆಯುವ ಮ್ಯಾರಥಾನ್ ಮೇಲೆ ಕಣ್ಣಿಟ್ಟ ತಂಗಪ್ರಸಾದ್


    ಈಗ ಮತ್ತೆ ಅವರು ಕೊಚ್ಚಿ ಮತ್ತು ಬೆಂಗಳೂರಿನಲ್ಲಿ ನಾಲ್ಕು ಹಾಫ್ ಮ್ಯಾರಥಾನ್ ಗಳಲ್ಲಿ ಭಾಗವಹಿಸಿದ್ದರು. ಅವರು ಆರಾಮಾಗಿ 21.1 ಕಿಲೋ ಮೀಟರ್ ದೂರವನ್ನು ಓಡಿದರು. ಕೇರಳ ಮಾಸ್ಟರ್ಸ್ ಮೀಟ್ ನಲ್ಲಿ ದೂರದ ಓಟದ ಸ್ಪರ್ಧೆಯಲ್ಲಿ ಅವರು ಚಿನ್ನ ಮತ್ತು ಬೆಳ್ಳಿ ಗೆದ್ದರು. ಮುಂದಿನ ಫೆಬ್ರವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ಮ್ಯಾರಥಾನ್ ಮೇಲೆ ಅವರು ಕಣ್ಣಿಟ್ಟಿದ್ದಾರೆ.




    ತಂಗಪ್ರಸಾದ್ ಅವರ ಪ್ರಕಾರ ಅಜೀರ್ಣವು ಅವರಲ್ಲಿ ಕ್ಯಾನ್ಸರ್ ಗೆ ಕಾರಣವಾಯಿತು. ನಿವೃತ್ತಿಯ ನಂತರ, ಅವರು ತಮ್ಮ ಎರಡನೇ ವರ್ಷದಲ್ಲಿ ಓಡಲು ಪ್ರಾರಂಭಿಸಿದಾಗ ಬದಲಾವಣೆ ಕಂಡುಬಂದಿತು. ಓಟವು ಪ್ರತಿ ಜೀವಕೋಶವು ಕೆಲಸ ಮಾಡಲು ಸಹಾಯ ಮಾಡುತ್ತದೆ, ಸ್ನಾಯು ಶಕ್ತಿಯನ್ನು ಹೆಚ್ಚಿಸುತ್ತದೆ. ನನ್ನ ಸಂಪತ್ತು ಬಲವಾದ ಹೃದಯ ಮತ್ತು ಸ್ನಾಯುಗಳು ಎಂದು ಅವರು ಹೇಳುತ್ತಾರೆ.

    Published by:Kavya V
    First published: