Viral Post: ಈ ವ್ಯಕ್ತಿ ಬರೋಬ್ಬರಿ 53 ಮಹಿಳೆಯರನ್ನು ಮದ್ವೆಯಾಗಿದ್ದಾನಂತೆ! ಇದಕ್ಕೆ ಕಾರಣ ಕೂಡ ಇದೆಯಂತೆ

ಸೌದಿ ಅರೇಬಿಯಾದ ಅಬು ಅಬ್ದುಲ್ಲಾ ಅನ್ನುವವನೇ 53 ಮದುವೆಯಾಗಿರೋ ಭೂಪ. ಅಷ್ಟಕ್ಕೂ ಆತನ ಪ್ರಕಾರ ಆತ ಮದುವೆಯಾಗಿದ್ದು ಸ್ಥಿರತೆ ಬೇಕು ಅನ್ನೋ ಕಾರಣಕ್ಕಂತೆ. ಮನಸ್ಸಿಗೆ ಶಾಂತಿ ಬೇಕು ಅಂತ. ಅಲ್ದೇ ಯಾರದ್ದೇ ಒತ್ತಾಯದಿಂದ ಅಲ್ಲ ಅಂತ ಈ ಭೂಪನೇ ಹೇಳಿಕೊಂಡಿದ್ದಾನೆ.

53 ಮದುವೆಯಾಗಿರುವ ಅಬು ಅಬ್ದುಲ್ಲಾ

53 ಮದುವೆಯಾಗಿರುವ ಅಬು ಅಬ್ದುಲ್ಲಾ

 • Share this:
  ನಮ್ಮಲ್ಲಿ ಒಬ್ಬರಿಗೆ ಒಂದು ಮದುವೆ (Marriage) ಕಾಮನ್.‌ ಕೆಲವೊಮ್ಮೆ ಎರಡು ಮದುವೆಯಾಗಿರೋರನ್ನೂ ಕಾಣ್ತೇವೆ. ತುಂಬಾ ರೇರ್‌ ಕೇಸ್‌ ಗಳಲ್ಲಿ ಮೂರು ಮದುವೆ ಆಗ್ತಾರೆ. ಆದರೆ ಇಲ್ಲೊಬ್ಬ ಮನುಷ್ಯ (Man) ಒಂದೆರಡಲ್ಲ ಬರೋಬ್ಬರಿ 53 ಮದುವೆಯಾಗಿದ್ದಾನೆ. ಯಾಕೆ ಇಷ್ಟೊಂದು ಮದುವೆಯಾದ ಅಂತ ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರಾ. ಹೌದು… ಸೌದಿ ಅರೇಬಿಯಾದ (Saudi Arabia) ಅಬು ಅಬ್ದುಲ್ಲಾ ಅನ್ನುವವನೇ 53 ಮದುವೆಯಾಗಿರೋ ಭೂಪ. ಅಷ್ಟಕ್ಕೂ ಆತನ ಪ್ರಕಾರ ಆತ ಮದುವೆಯಾಗಿದ್ದು ಸ್ಥಿರತೆ ಬೇಕು ಅನ್ನೋ ಕಾರಣಕ್ಕಂತೆ. ಮನಸ್ಸಿಗೆ ಶಾಂತಿ (Peace of mind) ಬೇಕು ಅಂತ. ಅಲ್ದೇ ಯಾರದ್ದೇ ಒತ್ತಾಯದಿಂದ ಅಲ್ಲ ಅಂತ ಈ ಭೂಪನೇ ಹೇಳಿಕೊಂಡಿದ್ದಾನೆ.

  ಅಷ್ಟಕ್ಕೂ 63 ವರ್ಷದ ಈ ಭೂಪನನ್ನು ಸೌದಿ ಮೂಲದ ಮಾಧ್ಯಮವೊಂದು ಈ ಶತಮಾನದ ಬಹುತ್ನಿತ್ವವಾದಿ ಅಂತಲೇ ಕರೆದಿದೆ. ಅಲ್ಲದೇ ಈತ ಈಗ ಸದ್ಯ ಮತ್ತೊಂದು ಮದುವೆಯಾಗಿದ್ದು ಮತ್ತೆ ಮದುವೆಯಾಗೋ ಯಾವುದೇ ಪ್ಲಾನ್‌ ಇಲ್ಲ ಅಂತ ಹೇಳಿದ್ದಾನಂತೆ!

  ಮದುವೆ ಬಗ್ಗೆ ಏನಂತಾರೆ ನೋಡಿ ಈ ವ್ಯಕ್ತಿ 
  ಈತ ಹೇಳೋ ಪ್ರಕಾರ ಈತನಿಗೆ ಮೊದಲ ಸಲ ಮದುವೆಯಾದಾಗ ಇಷ್ಟೊಂದು ಮದುವೆಯಾಗುವ ಯಾವುದೇ ಆಯೋಚನೆ ಇರಲಿಲ್ಲವಂತೆ. ನಾನು ಆರಾಮಾಗಿದ್ದೆ. ನನಗೆ ಮಕ್ಕಳೂ ಇದ್ದರು. ʼನಾನು ಮೊದಲ ಮದುವೆಯಾದಾಗ ನನಗೆ 20 ವರ್ಷ ವಯಸ್ಸು. ನಂತರದಲ್ಲಿ ಸ್ವಲ್ಪ ಸಮಸ್ಯೆ ಆಯ್ತು. ಅದಾದ್ಮೇಲೆ ನಾನು ಮತ್ತೊಂದು ಮದುವೆಯಾಗೋಕೆ ನಿರ್ಧರಿಸಿದೆ. ಆಗ ನನಗೆ 23 ವರ್ಷ. ಅಲ್ದೇ ನನ್ನ ಈ ನಿರ್ಧಾರವನ್ನ ನನ್ನ ಹೆಂಡತಿಗೂ ತಿಳಿಸಿದ್ದೆʼ ಅಂತ ಅಬ್ದುಲ್‌ ಹೇಳುತ್ತಾನೆ.

  ಇದನ್ನೂ ಓದಿ:  Weird Laws: ಈ ದೇಶದಲ್ಲಿ ಹೆಂಡತಿ ಬರ್ತ್‌ ಡೇ ಮರೆಯುವಂತಿಲ್ಲ; ಮಹಿಳೆಯರು, ಪುರುಷರ ಒಳ ಉಡುಪು ಒಟ್ಟಿಗೆ ಒಣಗಿಸುವಂತಿಲ್ಲ!  ನಂತರ ಮದುವೆಗಳು ಹೀಗೆ ಆಗಿಹೋಗ್ತು. ತನಗೆ 2 ನೇ ಹೆಂಡತಿಯ ಜೊತೆಗೂ ಸಮಸ್ಯೆಗಳು ಎದುರಾದ್ವು. ಹೀಗಾಗಿ 3ನೇ ಹಾಗೂ 4ನೇ ಮದುವೆಯಾದೆ. ಹಾಗೆ ಮದುವೆಯಾಗೋವಾಗ ತನ್ನ ಮೊದಲನೇ, 2ನೇ ಹಾಗೂ 3ನೇ ಪತ್ನಿಗೆ ಡೈವೋರ್ಸ್‌ ಕೂಡ ನೀಡಿದ್ದಾಗಿ ಹೇಳಿದ್ದಾನೆ. ಹೀಗೆ 53 ಮದುವೆಯಾದ ಅಬ್ದುಲ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಸೆನ್ಸೇಷನಲ್‌ ವಿಡಿಯೋಕ್ಕೆ ಹಲವು ನೆಟ್ಟಿಗರು ಕಾಮೆಂಟ್‌ ಹಾಕಿದ್ದಾರೆ. ಕೆಲವರು ಈ ಘನಕಾರ್ಯಕ್ಕೆ ಆಶೀರ್ವಾದ ಮಾಡಿದರೆ, ಇನ್ನು ಕೆಲವರು ಇದು ತಪ್ಪು ಎಂದಿದ್ದಾರೆ.

  ಖುಷಿಯಾಗಿಡುವ ಹೆಂಡತಿ ಹುಡುಕಲು ಇಷ್ಟೊಂದು ಮದ್ವೆಯಂತೆ  
  ಅರೆಬಿ ಪತ್ರಿಕೆಯೊಂದು ವರದಿ ಮಾಡಿರೋ ಪ್ರಕಾರ ಈ ತ ಇಷ್ಟೊಂದು ಮದುವೆಯಾಗೋದಿಕ್ಕೆ ಕಾರಣ ಆತನನ್ನು ಖುಷಿಯಾಗಿಡುವ ಹೆಂಡತಿಗಾಗಿ ಆತ ಹುಡುಕುತ್ತಿದ್ದನಂತೆ. ಅಲ್ದೇ ಆತನ ತನ್ನ 4ನೇ ಪತ್ನಿಗೆ ಡೈವೋರ್ಸ್‌ ನೀಡಿದ ಬಳಿಕ ಮದುವೆಯಾಗುತ್ತ ಹೋದನಂತೆ.

  53 ಮದುವೆಯಾಗಿರೋ ಅಬ್ದುಲ್‌ ಹೇಳೋ ಪ್ರಕಾರ ಆತನ ಅತ್ಯಂತ ಚಿಕ್ಕ ಅವಧಿಯ ಮದುವೆ ಎಂದರೆ ಒಂದು ರಾತ್ರಿಯದ್ದು. ಹೀಗಂತ ಹೇಳಿದ್ದು ಸ್ವತಃ ಅಬ್ದುಲ್‌. ಅಲ್ದೇ, ಪ್ರಪಂಚದ ಪ್ರತಿಯೊಬ್ಬ ಪುರುಷನು ಒಬ್ಬ ಮಹಿಳೆಯನ್ನು ಹೊಂದಲು ಮತ್ತು ಅವಳೊಂದಿಗೆ ಶಾಶ್ವತವಾಗಿ ಉಳಿಯಲು ಬಯಸುತ್ತಾನೆ.. ಸ್ಥಿರತೆ ಅನ್ನೋದು ಯುವ ಮಹಿಳೆಯಲ್ಲಿ ಕಂಡುಬರುವುದಿಲ್ಲ, ಅದು ಕಂಡುಬರೋದು ವಯಸ್ಸಾದವರೊಂದಿಗೆ". ಅಷ್ಟಕ್ಕೂ ನಾನು ಹೆಚ್ಚಾಗಿ ಮದುವೆಯಾಗಿದ್ದು ಸೌದಿ ಮಹಿಳೆಯರನ್ನೇ ಎಂದೂ ಅಬ್ದುಲ್‌ ಹೇಳಿದ್ದಾನೆ.

  ವಿದೇಶಿಯರನ್ನೂ ಮದುವೆಯಾಗಿದ್ದಾರೆ ಈ ವ್ಯಕ್ತಿ 
  ಇನ್ನು ತಾನು ಬ್ಯುಸಿನೆಸ್‌ ಟ್ರಿಪ್‌ ಗಾಗಿ ವಿದೇಶಕ್ಕೆ ಹೋಗಿದ್ದಾಗ ವಿದೇಶೀ ಮಹಿಳೆಯರನ್ನೂ ಮದುವೆಯಾಗಿದ್ದಾಗಿ ಹೇಳಿದ್ದಾನೆ. ಅಲ್ಲಿ ಅವರೊಂದಿಗೆ ತಾನು 3-4 ತಿಂಗಳು ಉಳಿದಿದ್ದೇನೆ. ಹಾಗೇ ಕೆಟ್ಟದರಿಂದ ನನ್ನನ್ನು ನಾನು ರಕ್ಷಿಸಿಕೊಳ್ಳಲು ನಾನು ಅವರನ್ನು ಮದುವೆಯಾದೆ ಎಂದು ಹೇಳಿದ್ದಾನೆ.

  ಇದನ್ನೂ ಓದಿ:  Makkah: ಮೆಕ್ಕಾದಲ್ಲೂ ಹಾರಾಡಿದ ತ್ರಿವರ್ಣ ಧ್ವಜ! ವಿದೇಶಿ ನೆಲದಲ್ಲಿ ಭಾರತೀಯರ ದೇಶಭಕ್ತಿ

  ಅಂದಹಾಗೆ ಇಸ್ಲಾಂ ಧರ್ಮದಲ್ಲಿ ಹೆಚ್ಚು ಅಂದರೆ ನಾಲ್ಕು ಮದುವೆಯಾಗೋವರೆಗೂ ಒಪ್ಪಿಗೆ ಇದೆ. ಆದ್ರೆ ಸೌದಿಯ ಈ ಭೂಪ ಆಗಿದ್ದು ಮಾತ್ರ 53 ಮದುವೆ. ಅದಕ್ಕೆ ಅಬ್ದುಲ್‌ ಕೊಟ್ಟಿರೋ ಸಮರ್ಥನೆ ಕೇಳಿದರೆ ಯಾರಿಗಾದರೂ ಆಶ್ಚರ್ಯ ಆಗದೇ ಇರದು.
  Published by:Ashwini Prabhu
  First published: