Bridge Theft: ಅಧಿಕಾರಿಗಳ ಸಹಾಯದಿಂದಲೇ 60 ಅಡಿ ಉದ್ದ, 12 ಅಡಿ ಎತ್ತರದ ಸೇತುವೆ ಕದ್ದ ಕಳ್ಳರು

ರೋಹ್ತಾಸ್ ಜಿಲ್ಲೆಯ ಬಿಕ್ರಮ್‌ಗಂಜ್ ಉಪವಿಭಾಗದ ಪ್ರದೇಶದಲ್ಲಿರುವ 60 ಅಡಿ ಉದ್ದದ ಕಬ್ಬಿಣದ ಸೇತುವೆ(iron Bridge)ಯನ್ನೇ ಕಳ್ಳರು ಎಗರಿಸಿದ್ದಾರೆ. ಅದು ಸ್ಥಳೀಯ ಇಲಾಖೆಯ ಅಧಿಕಾರಿಗಳ ಸಹಾಯ ಪಡೆದು ಕಳ್ಳತನ ಮಾಡಿರೋದು ಆಶ್ಚರ್ಯಕರ ವಿಷಯ.

ಸೇತುವೆ

ಸೇತುವೆ

  • Share this:
ಕೆಲವೊಮ್ಮೆ ನಂಬಲು ಅಸಾಧ್ಯ ಅನ್ನೋ ತರಹದ ಘಟನೆಗಳು ನಡೆಯುತ್ತಿರುತ್ತವೆ. ಕಳ್ಳತನ(Theft)ಗಳು ಕಣ್ಮುಂದೆಯೇ ನಡೆದ್ರೂ ತಿಳಿದಿರುವದಿಲ್ಲ. ಈ ರೀತಿಯ ಕಳ್ಳತನದ ದೃಶ್ಯ(Theft Video)ಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿರುತ್ತವೆ. ಬಿಹಾರದ ರೋಹ್ತಾಸ್ ಜಿಲ್ಲೆಯ ಬಿಕ್ರಮ್‌ಗಂಜ್ ಉಪವಿಭಾಗದ ಪ್ರದೇಶದಲ್ಲಿರುವ 60 ಅಡಿ ಉದ್ದದ ಕಬ್ಬಿಣದ ಸೇತುವೆ(iron Bridge)ಯನ್ನೇ ಕಳ್ಳರು ಎಗರಿಸಿದ್ದಾರೆ. ಅದು ಸ್ಥಳೀಯ ಇಲಾಖೆಯ ಅಧಿಕಾರಿಗಳ ಸಹಾಯ ಪಡೆದು ಕಳ್ಳತನ ಮಾಡಿರೋದು ಆಶ್ಚರ್ಯಕರ ವಿಷಯ. ಈ ಕಳ್ಳತನ ಶುಕ್ರವಾರ ಬೆಳಕಿಗೆ ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಕಳ್ಳರ (Thieves) ಜಾಣತನವನ್ನು ಹೊಗಳುವ ಮೂಲಕ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಚೀಮಾರಿ ಹಾಕಿದ್ದಾರೆ.

ಈ ಸೇತುವೆಯ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಸೇತುವೆಗಾಗಿ ಬಳಸಿದ್ದ ಕಬ್ಬಿಣದ ವಸ್ತುಗಳನ್ನು ದೋಚಿದ್ದಾರೆ. ಎಲ್ಲರ ಮುಂದೆಯೇ ಒಟ್ಟು 3 ದಿನ ಈ ಕಳ್ಳತನ ನಡೆದಿದೆ.

ಮೂರು ದಿನ ಸೇತುವೆ ಕತ್ತರಿಸಿದ ಕಳ್ಳರು

ಪೊಲೀಸರ ಪ್ರಕಾರ, ಕಳ್ಳರು ಜೆಸಿಬಿಗಳು, ಪಿಕಪ್ ವ್ಯಾನ್ ಗಳು, ಗ್ಯಾಸ್ ಕಟರ್ಗಳು ಮತ್ತು ವಾಹನಗಳೊಂದಿಗೆ ಆಗಮಿಸಿದ್ದರು. ಮೂರು ದಿನಗಳಲ್ಲಿ ಇಡೀ ಸೇತುವೆಯನ್ನು ಕತ್ತರಿಸಿ, ಕಬ್ಬಿಣದ ತುಂಡುಗಳನ್ನು ವಾಹನಗಳಲ್ಲಿ ತುಂಬಿಸಿಕೊಂಡು ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ:  Viral News: ಚಲಿಸುವ ಬೈಕ್ ನಿಂದಲೇ 10 ಲಕ್ಷ ದೋಚಿದ ಚಾಲಾಕಿ ಕಳ್ಳ..!

ಇಲಾಖಾ ಅಧಿಕಾರಿಗಳೆಂಬ ನೆಪದಲ್ಲಿ ಬಂದಿದ್ದ ಕಳ್ಳರಯ ಸ್ಥಳೀಯ ಇಲಾಖೆಯ ಸಿಬ್ಬಂದಿಯ ಸಹಾಯವನ್ನೂ ಪಡೆದು ಹಗಲು ಹೊತ್ತಿನಲ್ಲಿಯೇ ಸೇತುವೆಯನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

60 ಅಡಿ ಉದ್ದ, 12 ಅಡಿ ಎತ್ತರದ ಸೇತುವೆ

ನೀರಾವರಿ ಇಲಾಖೆಯ ಅಧಿಕಾರಿಗಳಂತೆ ಕೆಲವರು ಗ್ರಾಮಕ್ಕೆ ಬಂದಿದ್ದರು. ಪಾಳು ಬಿದ್ದಿದ್ದ ಕಾಲುವೆ ಸೇತುವೆಯನ್ನು ಜೆಸಿಬಿ ಹಾಗೂ ಗ್ಯಾಸ್ ಕಟರ್‌ ಗಳ ಮೂಲಕ ಸಂಪೂರ್ಣವಾಗಿ ಕಿತ್ತು ಹಾಕಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 60 ಅಡಿ ಉದ್ದ ಹಾಗೂ 12 ಅಡಿ ಎತ್ತರದ ಸೇತುವೆ ಕಳ್ಳತನ ಆಗಿರೋದಕ್ಕೆ ಇಲಾಖೆ ಹಿರಿಯ ಅಧಿಕಾರಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಅಧಿಕಾರಿಗಳಿಂದ ಪೊಲೀಸ್ ಠಾಣೆಯಲ್ಲಿ ದೂರು

ತಮ್ಮನ್ನು ಕಳ್ಳತನದಲ್ಲಿ ಭಾಗಿ ಮಾಡಿಕೊಳ್ಳಲಾಗಿದೆ ಮತ್ತು ಬಂದವರು ಅಧಿಕಾರಿಗಳಲ್ಲ ಎಂಬ ವಿಷಯ ಸ್ಥಳೀಯ ಸಿಬ್ಬಂದಿಗೆ ತಡವಾಗಿ ತಿಳಿದಿದೆ. ಕಳ್ಳತನ ವಿಷಯ ಮನವರಿಕೆ ಆಗುತ್ತಿದ್ದಂತೆ ಅಧಿಕಾರಿಗಳು ನಸ್ರಿಗಂಜ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ:  Viral News: ನವಜೋಡಿಗೆ ಪೆಟ್ರೋಲ್, ಡೀಸೆಲ್ ಬಾಟೆಲ್ ಗಿಫ್ಟ್ ನೀಡಿದ ಗೆಳೆಯರ ಬಳಗ


1972ರಲ್ಲಿ ಸೇತುವೆ ನಿರ್ಮಾಣ

ಈ ತರಹದ ಸೇತುವೆಗಳ ಕಾಮಗಾರಿ ನಿಧಾನವಾಗಿ ನಡೆಯವ ಮಾಹಿತಿಯನ್ನು ಇಲಾಖೆ ಮುಂಚಿತವಾಗಿಯೇ  ನೋಟಿಸ್ ನೀಡಿತ್ತು ಎಂದು ಜೆಇ ಯೋಗೇಂದ್ರ ಹೇಳಿದ್ದಾರೆ. 1972ರಲ್ಲಿ ಆಮಿಯಾವರದ ಅರಾ ಕಾಲುವೆಯ ಕಬ್ಬಿಣದ ಸೇತುವೆಯನ್ನು ನಿರ್ಮಿಸಲಾಗಿತ್ತು.

ಜೈಲಿಗೆ ಹೋಗಿ ಬಂದರೂ ಮತ್ತೆ ಕಳ್ಳತನ ಮಾಡಿ ಸಿಕ್ಕಿಬಿದ್ದ ಖತರ್ನಾಕ್​ ಗ್ಯಾಂಗ್

ಬೇರೆ ಬೇರೆ ಕಡೆಗಳಲ್ಲಿ ಕಳ್ಳತನ ಮಾಡಿದ್ದ ಖತರ್ನಾಕ್​ ಕಳ್ಳರ ಗುಂಪು ಒಂದೊಂದು ಕೇಸ್​​ನಲ್ಲಿ ಸಿಕ್ಕಿಹಾಕಿಕೊಂಡು ಜೈಲು ಸೇರಿತ್ತು. ಜೈಲಿನಿಂದ ರಿಲೀಸ್ ಆದ ಕೂಡಲೇ ಇವರು ಮತ್ತೆ ತಮ್ಮ ಹಳೆಯ ಚಾಳಿಯನ್ನೇ ಮುಂದುವರೆಸಿದ್ದರು. ಆದರೆ ಅವರ ನಸೀಬು ಕೆಟ್ಟು ಮತ್ತೆ ಕಳ್ಳತನದ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಜೈಲು ಪಾಲಾಗಿದ್ದಾರೆ. ನಾಯಿ ಬಾಲ ಯಾವತ್ತಿದ್ರೂ ಡೊಂಕೇ ಅಂತಾರಲ್ಲ, ಹಾಗೆ ಆಗಿದೆ ಈ ಖತರ್ನಾಕ್​ ಕಳ್ಳರ ಕಥೆ. ಕಳ್ಳತನದ ಕೇಸ್​ನಿಂದಲೇ ಜೈಲಿಗೆ ಹೋಗಿದ್ದ ಅವರು, ಬಿಡುಗಡೆಯಾದ ಬಳಿಕ ಮತ್ತೆ ಕಳ್ಳತನ ಮಾಡಿ ಕಂಬಿ ಎಣಿಸುತ್ತಿದ್ದಾರೆ.

ಜೈಲಿನಲ್ಲೇ ಫ್ರೆಂಡ್ ಶಿಪ್ ಮಾಡಿಕೊಂಡ ಆರು ಜನರ ಗ್ಯಾಂಗ್ ಹೊರ ಬಂದಮೇಲೆ ಬೆಂಗಳೂರು ಪೊಲೀಸರು ತಲೆಕೆಡಿಸಿಕೊಂಡಿದ್ದರು. ಬೆಂಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲೂ ಕೈ ಚಳಕ ತೋರಿಸಿದ್ದ ಈ ಗ್ಯಾಂಗ್ ಕೊನೆಗೂ ರಾಜಗೋಪಾಲ್ ನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಗುಂಪಿನ ನಾಯಕ ದೊಡ್ಡಬಳ್ಳಾಪುರದ ಕೆಂಚಪ್ಪ. ಇವನ ಜೊತೆಗಿದ್ದ ಮಹಮ್ಮದ್ ಇಬ್ರಾಹಿಂ, ನವೀನ್, ಹರೀಶ್ ಜೇಮ್ಸ್, ವೆಂಕಟೇಶ್ ಬಂಧಿತ ಆರೋಪಿಗಳಾಗಿದ್ದಾರೆ.
Published by:Mahmadrafik K
First published: