• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral News: ಅಮ್ಮನಿಗೆ ಸ್ಪೆಷಲ್ ಲೆಟರ್ ಬರೆದ ಪುಟ್ಟ ಪೋರ, ಕಣ್ಣಲ್ಲಿ ನೀರು ತರಿಸುತ್ತೆ ಈ ಕಥೆ

Viral News: ಅಮ್ಮನಿಗೆ ಸ್ಪೆಷಲ್ ಲೆಟರ್ ಬರೆದ ಪುಟ್ಟ ಪೋರ, ಕಣ್ಣಲ್ಲಿ ನೀರು ತರಿಸುತ್ತೆ ಈ ಕಥೆ

ವೈರಲ್​ ಆದ ಲೆಟರ್​

ವೈರಲ್​ ಆದ ಲೆಟರ್​

ಮಕ್ಕಳು ಹಠ ಮಾಡೋದು ಕಾಮನ್​ ಅಲ್ವಾ? ಹಾಗಂತ ಪೋಷಕರು ಮಕ್ಕಳನ್ನು ದೂರ ಮಾಡಿಕೊಳ್ಳಲು ಇಷ್ಟ ಪಡೋಲ್ಲ.

  • Share this:

ತಾಯಿಯ (Mother) ಬಗ್ಗೆ ಹೇಳು ನೂರಾರು ವಿಷಯಗಳಿವೆ. ಅದೆಷ್ಟೇ ಕಷ್ಟಗಳು ಇದ್ರು ಕೂಡ ತನಗೇನೂ ಕಷ್ಟಗಳೇ ಇಲ್ಲದಂತೆ ನಟಿಸಿ, ತನ್ನ ಮನೆಯನ್ನು ಎಷ್ಟ ಚೆನ್ನಾಗಿ ನಿಭಾಯಿಸುತ್ತಾಳೆ. ತಾಯಿ ಆದಮೇಲೂ ಕೂಡ ಆಕೆ ಅದೆಷ್ಟೋ ಸಮಯದ ಜನಕ ಪ್ರತೀ ತಿಂಗಳು ಋತುಚಕ್ರವನ್ನು (Periods) ಅನುಭವಿಸುತ್ತಾಳೆ ಅದರ ಮಧ್ಯದಲ್ಲಿಯೂ ಆಕೆ ಮನೆಯನ್ನು ಚೆನ್ನಾಗಿ ನಿರ್ವಹಿಸಿಕೊಂಡು ಮುನ್ನಡೆಯುತ್ತಾಳೆ. ಹೀಗೆ ಕಷ್ಟ ಪಟ್ಟು ನೋಡಿಕೊಂಡ ತಾಯಿಯನ್ನು ಮಕ್ಕಳು ದೊಡ್ಡವರಾದ ಮೇಲೆಯೂ ಆಕೆಯನ್ನು ಹಾಗೆಯೇ ನೋಡಿಕೊಳ್ಳಬೇಕು ಅಲ್ವಾ? ಆದರೆ ಇತ್ತೀಚಿಗಿನ ಕಾಲದಲ್ಲಿ ವೃದ್ಧಾಶ್ರಮ ಬೆಳೆಯುತ್ತಿರುವುದು ವಿಷಾಧನೀಯ (Sadness) ಸಂಗತಿ ಅಂತಲೇ ಹೇಳಬಹುದು.


ಸಣ್ಣವರಿದ್ದಾಗ ನಾವು ಅದೆಷ್ಟೋ ಬಾರಿ ನಾವು ನಮ್ಮ ಪೋಷಕರಿಗೆ ತೊಂದರೆಯನ್ನು ಕೊಟ್ಟಿರುತ್ತೇವೆ. ಅದೇ ರೀತಿಯಾಗಿ  ಬೆಳೆಯುತ್ತಾ ಅಪ್ಪ ಅಮ್ಮನಿಗೆ ಗೌರವವನ್ನು ಕೊಡಲು ಕೊಡುತ್ತೇವೆ. ಇದೀಗ ಒಂದು ಪುಟಾಣಿ ಹುಡುಗ ಅಮ್ಮನಿಗೆ ಲೆಟರ್​ ಬರೆದಿದ್ದಾನೆ. ಈ ಫೋಟೋ ಸಖತ್​ ವೈರಲ್​ ಆಗ್ತಾ ಇದೆ.


ಹೀಗೆ ಕೇಳುತ್ತಾ ಹೋದ್ರೆ ನಮ್ಮದು, ನಿಮ್ಮದು ಕೂಡ ಬಾಲ್ಯ ಜೀವನದ ಅನೇಕ  ಅನುಭವ ಬುತ್ತಿಗಳ ಉದಾಹರಣೆಗಳು ಸಿಗುತ್ತವೆ ಅಲ್ವಾ? ಇನ್ನು ಹಳ್ಳಿಗಳಲ್ಲಿ ಇರುವವರ ಅನುಭವವೇ ಬೇರೆ ಬಿಡಿ. ಮರಕೋತಿ ಆಡೋದು, ಬಿಸಿಲಿನಲ್ಲಿ ಮಣ್ಣಿನ ಮೇಲೆ ಕುಳಿತುಕೊಂಡು ಆಟ ಆಡೋದು ಹೀಗೆ ಅದೆಷ್ಟೋ ಉದಾಹರಣೆಗಳು ಸಿಗುತ್ತೆ ಬಿಡಿ. ಆದರೆ ಇಲ್ಲೊಂದು ವೈರಲ್​ ಆಗ್ತಾ ಇರುವ ಘಟನೆಯೇ ಬೇರೆ.


ಇದನ್ನೂ ಓದಿ: ಕಿಸ್​ ಕೊಟ್ಟ 5 ನಿಮಿಷಕ್ಕೇ ಕೈ ಕೊಟ್ಟ ಹುಡುಗಿ, ನೋವಿನಲ್ಲಿ ಮತ್ತೊಬ್ಬರನ್ನು ತಬ್ಬಿಕೊಂಡ ಡಾಕ್ಟರ್​ ಬ್ರೋ!


ಹೌದು, ಈ ಪುಟಾಣಿ ಹುಡುಗ ಅಮ್ಮನಿಗೆ ತುಂಬಾ ಗೋಳು ಕೊಡುತ್ತಾ ಇದ್ದ. ಹೀಗಾಗಿ ಅದೆಷ್ಟೋ ಬಾರಿ ತಾಯಿ ಅತ್ತಿದ್ದಳು, ಬೇಸರ ಮಾಡಿಕೊಂಡಿದ್ದರೂ ಕೂಡ ಮಗನ ಜೊತೆ ಮತ್ತೆ ಆಟವಾಡೀಕೆ ಬರುತ್ತಾ ಇದದಳು. ಇವೆಲ್ಲಾ ಆ ಹುಡುಗನಿಗೆ ಗೊತ್ತಾಗ್ತಾ ಇರ್ಲಿಲ್ಲ.


ಒಂದು ದಿನ ಈ ವಿಷಯಗಳೆಲ್ಲಾ ಮಗನಿಗೆ ಮನಪರಿವರ್ತನೆ ಆಗಿ, ಒಂದು ಲೆಟರ್​ ಬರೆದಿದ್ದಾನೆ.  ಈಗ ತಾನೇ ಅಕ್ಷಕರ ಕಲಿಯುತ್ತಾ ಇರುವ ಹಾಗೆ ಅನಿಸ್ತಾ ಇದೆ ಈ ಲೆಟರ್​ ನೋಡಿದ್ರೆ.



" ಪ್ರೀತಿಯ ಅಮ್ಮ ನನ್ನಿಂದ ನೀವು ತುಂಬಾ ಕಷ್ಟಕರ ದಿನವನ್ನು ಅನುಭವಿಸಿದ್ದೀರಾ, ದಯವಿಟ್ಟು ನನ್ನನ್ನು ಕ್ಷಮಿಸಿ" ಎಂದು ಆಂಗ್ಲದಲ್ಲಿ ಹಾಕಿಕೊಂಡಿದ್ದಾನೆ ಮಗ. ಹಾಗೆಯೇ ಇದನ್ನು ತನ್ನ ತಾಯಿಗೆ ಪ್ರೀತಿಯಿಂದ ನೀಡಿದ್ದಾನೆ.


ಇದರಿಂದ ತಾಯಿ ತುಂಬಾ ಭಾವುಕಳಾಗಿದ್ದು, ಈ ಲೆಟರ್​ನ್ನು ನನ್ನ ಜೀವನ ಪರ್ಯಂತವಾಗಿ ಇಟ್ಟುಕೊಂಡಿರಯತ್ತೇನೆ, ಕಳೆಕೊಳ್ಳುವುದಿಲ್ಲ ಎಂದು  ತಾಯಿ ಹೇಳಿದ್ದಾರೆ. ಮತ್ತು ಆಕೆ ಟ್ವಿಟ್ಟರ್​ ಖಾತೆಗೆ ಹಾಕಿದಾಗ ಹಲವಾರು ಕಮೆಂಟ್​ಗಳು ಬಂದಿದೆ.


ಹಲವಾರು ಲೈಕ್ಸ್​ಗಳು ಪಡೆದುಕೊಂಡಿದ್ದು, ಇಂತಹ ತಾಯಿ ಮತ್ತು ಮಗನನ್ನು ಪಡೆದ ಇವರೇ ಪುಣ್ಯವಂತರು ಎಂದು ಹೇಳಿಕೊಂಡಿದ್ದಾರೆ. ನನ್ನ ಮಗನೂ ಕೂಡ ಇಂತ ಲೆಟರ್​ ಬರಿತಾ ಇರ್ತಾನೆ, ಹಾಗೆಯೇ ಮಾರನೆಯ ದಿನ ಹಠ ಮಾಡುತ್ತಾನೆ ಎಂದು ನಗುವ ಎಮೋಜಿ ಹಾಕಿಕೊಂಡಿದ್ದಾರೆ.




ನಿಮ್ಮ ಮನೆಯ ಮಕ್ಕಳು ಕೂಡ ಹೀಗೆ ಮಾಡುತ್ತಾರಾ ಎಂದು  ಕಾಮೆಂಟ್​ ಮಾಡಿ. ಹಾಗೆಯೇ ಈ ವೈರಲ್​ ಆದ ಕಥೆ ಮತ್ತು ಲಟರ್​ನ್ನು ನಿಮ್ಮ ಮನೆಯ ಪುಟಾಣಿ ಮಕ್ಕಳಿಗೆ ತೋರಿಸಿ. ಏನ್​ ಅಂತಾರೆ ಅಂತ ತಿಳಿಯೋಣ.

First published: