ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಯ ಕೆಲವು ಸಿಬ್ಬಂದಿಗಳಲ್ಲಿ ಮಾನವೀಯತೆಯೇ ಮರೆಯಾಗಿದೆ. ಅದಕ್ಕೆ ಉದಾಹರಣೆಯಾಗಿ ಅನೇಕ ಘಟನೆಗಳು ಕಣ್ಣ ಮುಂದೆ ಬಂದಿವೆ. ಇದೀಗ ಮತ್ತೊಂದು ಸಾಕ್ಷಿ ಎಂಬಂತೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆಯೊಂದರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಉತ್ತರ ಪ್ರದೇಶದ ದೇವೊರಿಯಾಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತೀವ್ರ ಅಸ್ವಸ್ಥನಾಗಿದ್ದ. ಹಾಗಾಗಿ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನನ್ನು ಪರೀಕ್ಷಿಸಿದ ವೈದ್ಯರು ನಿರ್ದಿಷ್ಟವಾದ ವಾರ್ಡ್ಗೆ ಕರೆದೊಯ್ಯುವಂತೆ ವಾರ್ಡ್ಬಾಯ್ಗೆ ಸೂಚಿಸಿದ್ದರು.
ಅಸ್ವಸ್ಥನಾಗಿದ್ದ ಕಾರಣ ಆ ವ್ಯಕ್ತಿಗೆ ನಡೆದುಕೊಂಡು ಹೋಗಲು ಸಾಧ್ಯವೇ ಇರಲಿಲ್ಲ, ಹಾಗಾಗಿ ಆತನನ್ನು ಸ್ಟ್ರೆಚ್ಚರ್ ಮೇಲೆ ಮಲಗಿಸಿ ವಾರ್ಡ್ಗೆ ಕರೆದುಕೊಂಡು ಹೋಗುವಂತೆ ಆತನ ಮಗಳು ವಾರ್ಡ್ಬಾಯ್ ಜೊತೆ ಹೇಳಿದಳು. ಆದರೆ ವಾರ್ಡ್ಬಾಯ್ ಕನಿಕರವಿಲ್ಲದೆ ಆಕೆಯ ಬಳಿ ಲಂಚ ಕೇಳಿದ್ದಾನೆ.
ವಾರ್ಡ್ಗೆ ಕರೆದುಕೊಂಡು ಹೋಗಿ ಎಂದು ಮನವಿಯಿಟ್ಟ ಮಹಿಳೆಯ ಬಳಿ 30 ರೂ. ಲಂಚ ಕೇಳಿದ್ದಾನೆ. ಹಾಗಿದ್ದರೆ ಮಾತ್ರ ಸ್ಟ್ರೆಚ್ಚರ್ ದೂಡುವುದಾಗಿ ಹೇಳಿದ್ದಾನೆ. ಆದರೆ ಆತನಿಗೆ ಕೊಡಲು ಅಷ್ಟೊಂದು ಹಣವಿಲ್ಲದಿರುವುದರಿಂದ ತಾಯಿ ಮತ್ತು ಆಕೆಯ ಮಗ 6 ವರ್ಷದ ಬಾಲ ಸ್ಟ್ರೆಚ್ಚರ್ ದೂಡಿಕೊಂಡು ವಾರ್ಡ್ಗೆ ಕರೆದೊಯ್ದಿದ್ದಾರೆ.
देवरिया, जहां से उ.प्र. राज्य सरकार में दो मंत्री आते है, वहां के जिला अस्पताल की ये हालत है कि पर्याप्त कर्मचारी नहीं है लोगों को स्ट्रेचर पर ले जाने के लिए। वार्ड भी अलग अलग नहीं बने हैं,जैसे कि ये महामारी इस अस्पताल के लिए मात्र एक साधारण फ्लू हो। ऐसे लड़ेंगे हम कोरोना से? pic.twitter.com/9CtymqFbWN
— Keshav Chand Yadav (@keshavyadaviyc) July 20, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ