ವರ್ಲ್ಡ್ ರೆಕಾರ್ಡ್​​​ ಸಾಧನೆ ಮಾಡಿದ 6ರ ಪೋರಿ.. 93 ದೇಶಗಳ ವಿಮಾನಗಳ ಬಗ್ಗೆ ಪಟಪಟ ಹೇಳುವ ಜಾಣೆ

ಅರ್ನಾ ತನ್ನ ಅಪಾರ ಜ್ಞಾಪಕ ಶಕ್ತಿ ಮೂಲಕ ಒಂದೇ ನಿಮಿಷದಲ್ಲಿ ಸುಮಾರು 93 ದೇಶಗಳ ವಿಮಾನ ಸಂಸ್ಥೆಗಳ ಹೆಸರನ್ನು ರೆಕ್ಕೆಯನ್ನು ನೋಡಿ ಹೇಳುತ್ತಾಳೆ.

ಪುಟ್ಟ ಸಾಧಕಿ

ಪುಟ್ಟ ಸಾಧಕಿ

 • Share this:

  ಪ್ರತಿ ಮಗುವು  ಹುಟ್ಟತ್ತಲೇ ತಮ್ಮದೇ ಆದ ವಿಶೇಷ ಪ್ರತಿಭೆಯನ್ನು ಹೊತ್ತು ತರುತ್ತದೆ. ಅವರ ವಿಶೇಷ ಪ್ರತಿಭೆ, ತುಂಟಾಟಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿವೆ. ನೆಟ್ಟಿಗರ ಮನಸೂರೆಗೊಳ್ಳುತ್ತಿವೆ. ಕೆಲವೊಮ್ಮೆ ಮಕ್ಕಳ ಜ್ಞಾಪಕ ಶಕ್ತಿ, ದೇಶ, ರಾಜ್ಯ, ಜಿಲ್ಲೆಗಳ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳುವ ಪರಿ ಇವೆಲ್ಲವನ್ನು ಕೇಳುವವರು ಒಮ್ಮೆಲೆ ಆಶ್ಚರ್ಯಚಕಿತಗೊಳ್ಳುವುದುಂಟು.


  ಇದೇ ವಿಚಾರಕ್ಕೆ ಆರು ವರ್ಷದ ಬಾಲಕಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾಳೆ. ಇವಳು ಮೂಲತಃ ಹರಿಯಾಣದ ಪಂಚಕುಲದವಳು. ಈ ಪ್ರತಿಭಾನ್ವಿತೆಯ ಹೆಸರು ಅರ್ನಾ ಗುಪ್ತಾ.ಈಕೆ ವಿಮಾನದ ರೆಕ್ಕೆಯನ್ನು ನೋಡಿ ದೇಶದ ಹೆಸರನ್ನು ಹೇಳುತ್ತಾಳೆ. ಅಂದರೆ ಆ ವಿಮಾನ ಯಾವ ದೇಶಕ್ಕೆ ಸೇರಿದ್ದು ಎಂದು ತಪ್ಪಿಲ್ಲದೇ ಉತ್ತರಿಸುತ್ತಾಳೆ. ಈ ಸಂಬಂಧದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


  ಇಂಟರ್‌ನ್ಯಾಶನಲ್ ಬುಕ್ ಆಫ್ ರೆಕಾರ್ಡ್‍ನ ಯೂಟ್ಯೂಬ್ ಚಾನಲ್ ಈ ಬಾಲಕಿ ವಿಮಾನಗಳ ಬಾಲ ನೋಡಿ ದೇಶವನ್ನು ಗುರುತಿಸುವ ವಿಡಿಯೋವನ್ನು ಹಂಚಿಕೊಂಡಿದ್ದು, ಪ್ರಪಂಚದಾದ್ಯಂತ ಈ ಬಾಲಕಿಯ ಪ್ರತಿಭೆ ಅನಾವರಣಗೊಂಡಿದೆ.ಅರ್ನಾ ಗುಪ್ತಾ ಜುಲೈ 1 ರಂದು ವಿಮಾನಗಳ ಬಾಲದ ಮೂಲಕ ದೇಶದ ಹೆಸರನ್ನು ಒಂದೇ ನಿಮಿಷದಲ್ಲಿ ಉತ್ತರಿಸಿ ಇಂಟರ್‍ನ್ಯಾಷನಲ್ ಬುಕ್ ಆಫ್ ರೆಕಾರ್ಡ್‍ಗೆ ಭಾಜನರಾಗಿದ್ದಾಳೆ ಎಂಬ ಅಡಿಬರಹದಡಿ ಶೇರ್ ಮಾಡಿದ್ದರು.


  ಅರ್ನಾ ತನ್ನ ಅಪಾರ ಜ್ಞಾಪಕ ಶಕ್ತಿ ಮೂಲಕ ಒಂದೇ ನಿಮಿಷದಲ್ಲಿ ಸುಮಾರು 93 ದೇಶಗಳ ವಿಮಾನ ಸಂಸ್ಥೆಗಳ ಹೆಸರನ್ನು ರೆಕ್ಕೆಯನ್ನು ನೋಡಿ ಹೇಳುತ್ತಾಳೆ. ಈ ಬಾಲಕಿಯ ಪ್ರತಿಭೆಯನ್ನು ನಿಜವಾಗಿಯೂ ಪ್ರತಿಯೊಬ್ಬರು ಒಪ್ಪಲೇಬೇಕು.ಈ ಕುರಿತು ಎಎನ್‍ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಅರ್ನಾ ತಾಯಿ ನೇಹಾ ಅವರು, ಅವಳ ತೀಕ್ಷ್ಣವಾದ ಬುದ್ಧಿವಂತಿಕೆಗೆ ಪ್ರೋತ್ಸಾಹಿಸುವ ಆಲೋಚನೆ ಹೊಂದಿದ್ದೇವೆ. ಅವಳ ಕೌಶಲ್ಯದ ಮೂಲಕ ದೊಡ್ಡ ಸಾಧನೆಗೈಯಬೇಕೆಂಬ ಆಶಯವೂ ಇದೆ ಎಂದು ತಿಳಿಸಿದರು.


  ಇದನ್ನೂ ಓದಿ: ಮನಸಿದ್ದರೆ ಮಾರ್ಗ ಎಂದು ತೋರಿಸಿಕೊಟ್ಟ 65 ವರ್ಷದ ಮಹಿಳೆ; ಯುವ ಜನಕ್ಕೆ ಸ್ಪೂರ್ತಿ ಈಕೆ

  ಈ ಬಾಲಕಿ ಮಾತ್ರವಲ್ಲ, ಇದೇ ರೀತಿಯ ಹಲವಾರು ಮಕ್ಕಳು ತಮ್ಮಲ್ಲಿರುವ ಅಗಾಧ ಜ್ಞಾಪಕ ಶಕ್ತಿಯ ಮೂಲಕ ಹೆಸರು ಗಳಿಸಿದ್ದಾರೆ. ಚೆನ್ನೈನ ದಿಯಾ ಎಂಬ ನಾಲ್ಕು ವರ್ಷದ ಬಾಲಕಿ ಕೂಡ ಜ್ಞಾಪಕ ಶಕ್ತಿಯ ಮೂಲಕ ಪ್ರಖ್ಯಾತಿ ಪಡೆದಿದ್ದಾಳೆ. ಅಲ್ಲದೇ 2019ರಲ್ಲಿ ಹೈ ರೇಂಜ್ ಬುಕ್ ಆಫ್ ವಲ್ರ್ಡ್ ರೆಕಾಡ್ರ್ಸ್ ಸೇರಿದ್ದಳು. ದಿಯಾ ‘ರಾಜಧಾನಿಗಳನ್ನು ಹೊಂದಿರುವ 200 ದೇಶಗಳ ಹೆಸರನ್ನು ಪಠಿಸಿದ ಕಿರಿಯ ಹುಡುಗಿ’ ಎನಿಸಿಕೊಂಡರು. ಅಲ್ಲದೇ ಧ್ವಜ ಫ್ಲ್ಯಾಷ್‍ಕಾರ್ಡ್ ಗಳನ್ನು ನೋಡುವ ಮೂಲಕ ಅವಳು ದೇಶದ ರಾಜಧಾನಿಗಳ ಹೆಸರನ್ನು ಹೇಳುತ್ತಿದ್ದಳು.


  ಇದಲ್ಲದೇ ಪಂಚಕುಲಾದ ಎರಡು ವರ್ಷದ ಅಮಯ್ರಾ ಗುಲಾಟಿ ಎಲ್ಲ ರಾಜ್ಯ ರಾಜಧಾನಿಗಳ ಹೆಸರನ್ನು ಒಂದು ನಿಮಿಷ 13 ಸೆಕೆಂಡುಗಳಲ್ಲಿ ಹೇಳುತ್ತಿದ್ದಳು. ಈ ಮೂಲಕ ದೇಶದ ರಾಜಧಾನಿಗಳ ಹೆಸರನ್ನು ಹೇಳಿದ ಕಿರಿಯೆ ಎಂಬ ಖ್ಯಾತಿಗೆ ಒಳಗಾಗಿದ್ದರು. ಈಕೆ ಎಲ್ಲ ರಾಜ್ಯಗಳ ಹೆಸರನ್ನು ತಪ್ಪಿಲ್ಲದೇ ಹೇಳುತ್ತಿರುವುದನ್ನು ಕಂಡ ನೆಟ್ಟಿಗರು ಅವಳ ಪ್ರತಿಭೆ ಕಂಡು ದಂಗಾಗಿದ್ದರು.

  First published: