Pocket Moneyಯಿಂದಲೇ ಮನೆ ಖರೀದಿಸಿದ 6 ವರ್ಷದ ಪೋರಿ..! ಹೇಗೆ ಗೊತ್ತೇ?

ಇಂದು ಈ ಮಕ್ಕಳು ತಾವು ಹಣಗಳಿಸಿ ಮನೆಯೊಂದನ್ನು ಖರೀದಿಸಿ ಅದರ ಮೇಲೆ ಹೂಡಿಕೆ ಮಾಡಿದ್ದಾರೆ. ಅವರ ಈ ಕ್ರಮವು ಮುಂದಿನ 10 ವರ್ಷಗಳಲ್ಲಿ ಅವರಿಗೆ ಉತ್ತಮ ಫಲ ಕೊಡಲಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಸ್ವಂತ ಮನೆ (Own home) ಹೊಂದಿರಬೇಕೆಂದು ಆಸೆ ಪಡುತ್ತಾರೆ. ಅದಕ್ಕಾಗಿಯೇ ತಮ್ಮ ದುಡಿಮೆಯಲ್ಲಿ ಸಾಕಷ್ಟು ಹಣ ಉಳಿತಾಯ ಮಾಡುತ್ತಿರುತ್ತಾರೆ. ಕೆಲವರು ಸಾಲ ಮಾಡಿ ಮನೆ ಕೊಂಡು ದುಡಿದು ಬಡ್ಡಿ (Pay interest) ತೀರಿಸುತ್ತಿರುತ್ತಾರೆ. ಆದರೆ ಇಂದು ಮನೆಗಳು ಎಷ್ಟು ದುಬಾರಿಯಾಗಿವೆ (Expensive) ಎಂಬುದು ಒಮ್ಮೆ ಊಹಿಸಲು ಸಹ ಅಸಾಧ್ಯ. ಮಧ್ಯಮ ವರ್ಗದ ಮನುಷ್ಯನ (Middle-class man) ಬಹುತೇಕ ಜೀವನವೇ ಮನೆಯೊಂದನ್ನು ಕೊಂಡುಕೊಳ್ಳಲು ಅಥವಾ ನಿರ್ಮಾಣ ಮಾಡಲು ದುಡಿಯಬೇಕಾಗಿದೆ.

ಆಸ್ಟ್ರೇಲಿಯಾ ದೇಶದ ಪೋರಿ
ಅಂಥದ್ದರಲ್ಲಿ ದೂರದ ಆಸ್ಟ್ರೇಲಿಯಾ ದೇಶದಿಂದ ಅಚ್ಚರಿ ಪಡುವಂತಹ ಸುದ್ದಿಯೊಂದು ವರದಿಯಾಗಿದೆ. ಆ ದೇಶದಲ್ಲಿರುವ ಕೇವಲ 6 ವರ್ಷ ಪ್ರಾಯದ ಪುಟ್ಟ ಹುಡುಗಿಯೊಬ್ಬಳು ತನ್ನ ಸಹೋದರ ಹಾಗೂ ಸಹೋದರಿ ಜೊತೆಗೂಡಿ ಕೋಟ್ಯಾಂತರ ರೂ ಮೌಲ್ಯದ ಮನೆಯೊಂದನ್ನು ಖರೀದಿಸಿದ್ದಾಳೆ ಎಂದರೆ ನೀವು ಸಹ ಇದು ನಿಜವೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬಹುದು. ಆದರೆ ಇದು ನಿಜವಾಗಿಯೂ ನಡೆದ ಘಟನೆ. ಹಾಗಾದರೆ, ಅವಳ ಪೋಷಕರು ಅವಳಿಗೆ ಮನೆ ಖರೀದಿಸಲು ಬೇಕಾದ ಪೂರ್ಣ ಹಣ ನೀಡಿರಬೇಕು ಎಂದು ನೀವು ಅಂದುಕೊಂಡರೆ ಅದೂ ಸಹ ತಪ್ಪು. ಆದರೆ, ಅವಳ ಪೋಷಕರು ಅವಳಿಗೆ ಹಣ ನೀಡಿದ್ದಾರಾದರೂ ಅದು ಅಲ್ಪ ಪ್ರಮಾಣ ಮಾತ್ರ.

ಇದನ್ನೂ ಓದಿ: ಮರದ ಒಂದು ಸಣ್ಣ ಕೊಂಬೆಯನ್ನೂ ಕತ್ತರಿಸದೆ ಮೂರಂತಸ್ತಿನ ಮನೆ ಕಟ್ಟಿದ್ದಾರೆ, ಏನ್ ಸಖತ್ತಾಗಿದೆ ನೋಡಿ!

ಹಾಗಾದರೆ, ಆ ಪುಟ್ಟ ಹುಡುಗಿ ಹಣವನ್ನು ಹೊಂದಿಸಿದ್ದಾದರೂ ಹೇಗೆ? ಅದಕ್ಕೆ ಉತ್ತರವೆಂದರೆ ಆ ಹುಡುಗಿ ತಾನು ಉಳಿತಾಯ ಮಾಡುತ್ತಿದ್ದ ತನ್ನ 'ಪಾಕೆಟ್ ಮನಿ' ಯ ಸಹಾಯದಿಂದ. ಕೋವಿಡ್-19 ತರುವಾಯ ಆಕೆ ವಾಸಿಸುತ್ತಿದ್ದ ಪ್ರದೇಶದ ಸುತ್ತಮುತ್ತಲಿನಲ್ಲಿ ಸಾಂಕ್ರಾಮಿಕ ಸಮಯದ ಪರಿಣಾಮದಿಂದಾಗಿ ರಿಯಲ್ ಎಸ್ಟೇಟ್ ವ್ಯವಹಾರ ತಳಕಚ್ಚಿ ಮನೆಗಳ ಬೆಲೆಗಳು ನಾಟಕೀಯವಾಗಿ ಕುಸಿದಿದ್ದವು.

ಪಾಕೆಟ್ ಮನಿಯ ಹಣ
36ರ ಪ್ರಾಯದ ಕ್ಯಾಮ್ ಮ್ಯಾಕ್ ಲೆಲ್ಲನ್ ಒಬ್ಬ ರಿಯಲ್ ಎಸ್ಟೇಟ್ ವೃತ್ತಿಯಲ್ಲಿದ್ದು ಕೋವಿಡ್ ನಂತರ ಬೆಲೆ ಕುಸಿದಿದ್ದ ಆಸ್ತಿಗಳ ಬೆಲೆ ಕೆಲ ಸಮಯದಲ್ಲೇ ಮತ್ತೆ ಏರುವ ಬಗ್ಗೆ ವಿಶ್ವಾಸ ಹೊಂದಿದ್ದರು. ಇದೇ ಸಮಯದಲ್ಲಿ ಆತ ತನ್ನ ಮಕ್ಕಳು ಆಸ್ತಿಯಲ್ಲಿ ಹೂಡಿಕೆ ಮಾಡಲಿ ಎಂಬ ವಿಚಾರದಿಂದ ಅವರು ಮನೆಯೊಂದನ್ನು ಕೊಂಡುಕೊಳ್ಳಲು ಉತ್ತೇಜಿಸಿದನು. ಅಲ್ಲದೆ, ಹಣದ ಬೆಲೆ ಅವರಿಗೆ ಗೊತ್ತಾಗಲಿ ಎಂದು ಯೋಚಿಸಿ ಸ್ವಲ್ಪ ಹಣ ತಾನು ನೀಡುತ್ತೇನೆ, ಮಿಕ್ಕ ಹಣಕ್ಕಾಗಿ ಅವರು ತಮ್ಮ ಪಾಕೆಟ್ ಮನಿಯನ್ನು ಏರಿಸಿ ಉಳಿಸಿಕೊಂಡು ಹೋಗಲು ತಿಳಿಸಿದ. ಅದರಂತೆ ಮಕ್ಕಳು ತಮ್ಮ ಪಾಕೆಟ್ ಮನಿಯ ಹಣ ಉಳಿಸಿಕೊಂಡರು.

ಮಕ್ಕಳು 4.5 ಲಕ್ಷ ರೂ. ಗಳಿಕೆ
ಡೈಲಿ ಸ್ಟಾರ್ ವರದಿ ಮಾಡಿರುವಂತೆ, ಕ್ಯಾಮ್ ತನ್ನ ಮಕ್ಕಳ ಪಾಕೆಟ್ ಮನಿಯನ್ನು ಹಾಗೆಯೇ ಸುಮ್ಮನೆ ಏರಿಸಲಿಲ್ಲ. ಬದಲಾಗಿ ಅವರು ಮನೆಯಲ್ಲಿ ಅವರಿಗೆ ಮನೆಗೆಲಸಗಳನ್ನು ನಿರ್ವಹಿಸಲು ಸಹಾಯ ಮಾಡಿದ್ದಕ್ಕೆ ಪ್ರತಿರೂಪವಾಗಿ ಹಣ ನೀಡಿ ಉತ್ತೇಜಿಸಿದ. ಇದರಿಂದಾಗಿ ಆ ಮಕ್ಕಳು 4.5 ಲಕ್ಷ ರೂ. ಗಳಿಸಿದ್ದರು. ಆ ಹಣಕ್ಕೆ ತನ್ನ ಹಣ ಸೇರಿಸಿ ಕ್ಯಾಮ್ ಮಕ್ಕಳ ಹೆಸರಿನಲ್ಲಿ ಮನೆಯನ್ನು ಖರೀದಿಸಿದ ಎಂದು ವಿವರಿಸಲಾಗಿದೆ.

ಹೂಡಿಕೆ ಕೂಡ ಮಾಡಿದ್ದಾರೆ
ಇಂದು ಈ ಮಕ್ಕಳು ತಾವು ಹಣಗಳಿಸಿ ಮನೆಯೊಂದನ್ನು ಖರೀದಿಸಿ ಅದರ ಮೇಲೆ ಹೂಡಿಕೆ ಮಾಡಿದ್ದಾರೆ. ಅವರ ಈ ಕ್ರಮವು ಮುಂದಿನ 10 ವರ್ಷಗಳಲ್ಲಿ ಅವರಿಗೆ ಉತ್ತಮ ಫಲ ಕೊಡಲಿದೆ. ಏಕೆಂದರೆ ಈಗ ಖರೀದಿಸಿರುವ ಆ ಮನೆಯ ಬೆಲೆ ಮುಂದಿನ 10 ವರ್ಷಗಳಲ್ಲಿ ಎರಡರಷ್ಟಾಗಲಿದೆ. ಈ ಮೂಲಕ ಅವರು ಹೂಡಿಕೆ ಬಗ್ಗೆ ವಾಸ್ತವಿಕವಾದ ಅನುಭವ ಪಡೆದಂತಾಗುತ್ತದೆ ಎಂದು ಹೇಳುತ್ತಾರೆ ಕ್ಯಾಮ್.

ಇದನ್ನೂ ಓದಿ: ಉದ್ಯೋಗಿಗಳು ಕೆಲಸ ಬಿಡದೇ ಇರಲಿ ಎಂದು ಎಲ್ರಿಗೂ ಮನೆ ಗಿಫ್ಟ್ ಮಾಡಿದ ಕಂಪೆನಿ, ಇದಪ್ಪಾ ಅದೃಷ್ಟ!

ಈ ಮುಂಚೆ ಕ್ಯಾಮ್ ರಿಯಲ್ ಎಸ್ಟೇಟ್ ಕಾರ್ಯ ಹೊಂದಿರುವ ಓಪನ್ ಕಾರ್ಪ್ ಸಂಸ್ಥೆಯ ಸಹ ಸಂಸ್ಥಾಪಕರು ಹಾಗೂ ನಿರ್ದೇಶಕರಾಗಿದ್ದಾರೆ. ಅವರು ಹೂಡಿಕೆ ಉದ್ಯಮದ ಮೇಲೆ ಸಾಕಷ್ಟು ಆಸಕ್ತಿ ಹೊಂದಿದ್ದು ಕಳೆದ ವರ್ಷವೇ "ಮೈ 4 ಇಯರ್ ಓಲ್ಡ್, ಪ್ರಾಪರ್ಟಿ ಇನ್ವೆಸ್ಟರ್" ಎಂಬ ಪುಸ್ತಕ ಬರೆದು ಪ್ರಕಟಿಸಿದ್ದರು. ಆ ಪುಸ್ತಕ ಪ್ರಕಟವಾದ ಒಂದೇ ವರ್ಷದಲ್ಲಿ ಬೆಸ್ಟ್ ಸೆಲ್ಲರ್ ಮನ್ನಣೆಗೆ ಪಾತ್ರವಾಗಿತ್ತು.
Published by:vanithasanjevani vanithasanjevani
First published: