Lakes in India: ಜೀವನದಲ್ಲಿ ಒಮ್ಮೆಯಾದ್ರೂ ಭೇಟಿ ನೀಡಿ ಭಾರತದ ಈ ಸುಂದರ ಸರೋವರಗಳಿಗೆ...!

ಅಪಾರ ಪ್ರಾಕೃತಿಕ ಸೌಂದರ್ಯ ಹೊಂದಿರುವ ನಮ್ಮ ಭಾರತದಲ್ಲಿ, ವಿಶ್ವದ ಯಾವುದೇ ರಾಷ್ಟ್ರಗಳಿಗೂ ಕಡಿಮೆ ಇಲ್ಲ ಎನ್ನುವಂತಹ ಅದ್ಭುತ ಸರೋವರಗಳಿವೆ. ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಇರುವ ನಯನ ಮನೋಹರ ಸರೋವರಗಳಿಗೆ ಒಮ್ಮೆಯಾದ್ರು ಜೀವನದಲ್ಲಿ ಭೇಟಿ ಕೊಡಲೇಬೇಕು

ಭಾರತದ ಅತಿ ಸುಂದರ ಸರೋವರ

ಭಾರತದ ಅತಿ ಸುಂದರ ಸರೋವರ

 • Share this:
  ಭಾರತ ಪ್ರವಾಸಿಗರ ಪಾಲಿಗೆ ಸ್ವರ್ಗದಂತೆ.. ಕಾಶ್ಮೀರದಿಂದ(Kashmir) ಹಿಡಿದು ಕನ್ಯಾಕುಮಾರಿವರೆಗೆ( Kanyakumari) ಕಾಣಸಿಗುವ ಅತ್ಯದ್ಭುತ ಪ್ರಾಕೃತಿಕ ತಾಣಗಳು ಮನಸ್ಸನ್ನು ಕದಿಯುತ್ತವೆ. ಪಶ್ಚಿಮ ಘಟ್ಟಗಳ ಸಾಲು,(western Ghats) ನೀಲಗಿರಿ ಪರ್ವತ ಶ್ರೇಣಿ, ಹಿಮಾಲಯ ಪರ್ವತ, (Himalaya) ಮೂರು ಸಮುದ್ರಗಳ ಆರ್ಭಟ ಪ್ರವಾಸವನ್ನು ಇಷ್ಟಪಡುವ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನ ತಾಣಗಳಾಗಿರುತ್ತವೆ.. ಇಷ್ಟು ಮಾತ್ರವಲ್ಲದೆ ಕಣ್ಮನ ಸೆಳೆಯುವ ನದಿ(River) ತೊರೆ, ಜಲಪಾತ( Waterfalls) ಅಸಂಖ್ಯಾತ ಸರೋವರಗಳು(Lake) ಪ್ರವಾಸಿಗರನ್ನು ಕೈಬೀಸಿ ಸದಾಕಾಲಕ್ಕೂ ಕರೆಯುತ್ತವೆ.. ಈ ರೀತಿಯಾಗಿ ಕಾಣಸಿಗುವ ಜಲಪಾತ ಸರೋವರಗಳು, ಸ್ವರ್ಗವೇನೋ ಎನ್ನುವಂತೆ ವಾಸಮಾಡುತ್ತವೆ.. ವಿದೇಶಗಳಲ್ಲಿ ಈ ರೀತಿಯ ನೂರಾರು ಬಗೆಯ ಸರೋವರಗಳು ಸಾಕಷ್ಟು ಖ್ಯಾತಿ ಪಡೆದಿವೆ.. ಅದೇ ರೀತಿ ಭಾರತದಲ್ಲಿಯೂ ಸಹ ಅತ್ಯಂತ ಸುಂದರವಾದ ಸರೋವರಗಳು ಇಲ್ಲಿವೆ.. ನೀವೇನಾದ್ರೂ ಪ್ರವಾಸಕ್ಕೆ ಹೋಗಬೇಕು ಅಂದುಕೊಂಡಿದ್ದರೆ ಖಂಡಿತವಾಗಿಯೂ 6 ಸರೋವರಗಳಿಗೆ ಭೇಟಿ ನೀಡಲೇಬೇಕು..

  1) ದಾಲ್ ಸರೋವರ, ಶ್ರೀನಗರ :

  ಕಾಶ್ಮೀರದ ಮುಕುಟದ ರತ್ನ ಅಥವಾ ಶ್ರೀನಗರದ ರತ್ನ ಎಂದೇ ಖ್ಯಾತವಾಗಿರುವ ದಾಲ್ ಸರೋವರ ಕಾಶ್ಮೀರದ ಎರಡನೆಯ ದೊಡ್ಡ ಸರೋವರ. ಇದು 26 ಚದರ ಕಿಲೋಮೀಟರ್ ಗಳಷ್ಟು ವಿಸ್ತಾರವಾಗಿ ಹರಡಿದೆ. ಕಾಶ್ಮೀರಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರು, ದಾಲ್ ಸರೋವರಕ್ಕೆ ಭೇಟಿ ನೀಡಲೇಬೇಕು.. ಯಾಕಂದ್ರೆ ದಾಲ್ ಸರೋವರದಿಂದ ಕಾಣುವ ಹಿಮಾಲಯದ ವಿಹಂಗಮ ನೋಟದ ಜೊತೆಗೆ, ದೋಣಿಮನೆಗಳು ಮತ್ತು ಶಿಖಾರಾವೆಂಬ ಮರದ ಬೋಟ್ ಗಳಲ್ಲಿ ದಾಲ್ ಸರೋವರದಲ್ಲಿ ಸಂಚಾರ ಮಾಡುವುದು ಸ್ವರ್ಗದಲ್ಲಿಯೇ ಸಂಚಾರ ಮಾಡಿದಂತೆ.. ಇನ್ನು ಚಳಿಗಾಲದಲ್ಲಿ ಸಂಪೂರ್ಣವಾಗಿ ಹೆಪ್ಪುಗಟ್ಟುವ ದಾಲ್ ಸರೋವರದಲ್ಲಿ, ಹಲವಾರು ಸ್ನೋ ಗೇಮ್ ಗಳನ್ನು ಕೂಡ ಆಡಬಹುದಾಗಿದೆ.

  2) ಚಂದ್ರತಾಲ್ ಸರೋವರ, ಲಾಹೌಲ್-ಸ್ಪಿತಿ, ಹಿಮಾಚಲ ಪ್ರದೇಶ :

  ಕ್ಯಾಂಪರ್ ಮತ್ತು ಚಾರಣಿಗರಿಗೆ ಸ್ವರ್ಗವಾದ ಚಂದ್ರತಾಲ್ ಸರೋವರ, ಹಿಮಾಲಯದಲ್ಲಿ ಸುಮಾರು 4300 ಮೀಟರ್ ಎತ್ತರದಲ್ಲಿರುವ ಅತ್ಯಂತ ಸುಂದರವಾದ ಸರೋವರಗಳಲ್ಲಿ ಒಂದಾಗಿದೆ. ಸರೋವರದ ಆಕೃತಿ ಅರ್ಧಚಂದ್ರಾಕೃತಿಯಂತೆ ಇರುವುದರಿಂದ ಚಂದ್ರ ತಾಲ್ ಎಂಬ ಹೆಸರು ಬಂದಿದೆ.  ಶುದ್ಧ ನೀಲಿ ಬಣ್ಣದಲ್ಲಿ ಕಾಣಸಿಗುವ ಚಂದ್ರತಾಲ್ ಸರೋವರದ ನೀರು ಆಗಾಗ ಹಸಿರು, ಕಿತ್ತಳೆ ಬಣ್ಣಗಳಿಂದ ಕೂಡಿದ ಎಂಬಂತೆ ಭಾಸವಾಗುತ್ತದೆ.. ಇನ್ನು ನೀವೇನಾದ್ರೂ ಪ್ರವಾಸ ಹೋಗಬೇಕು ಎಂದುಕೊಂಡಿದ್ದರೆ ಚಂದ್ರತಾಲ್ ಸರೋವರಕ್ಕೆ ಭೇಟಿ ನೀಡುವುದು ಉತ್ತಮ..

  ಇದನ್ನೂ ಓದಿ :ಬೆಂಗಳೂರಿನ ಮತ್ತೊಂದು ಕೆರೆಗೆ ಪುನರ್ಜನ್ಮ, ಒಂದು ಕೆರೆಯಿಂದ ಸುತ್ತಲಿನ ಎಲ್ಲಾ ಕೊಳವೆ ಬಾವಿಗಳಲ್ಲಿ ಭರ್ತಿ ನೀರು!

  3) ಅಷ್ಟಮುಡಿ ಸರೋವರ, ಕೊಲ್ಲಂ:

  ದೇವರನಾಡು ಕೇರಳ ಅಪಾರ ಪ್ರಮಾಣದ ಪ್ರಾಕೃತಿಕ ಸೌಂದರ್ಯವನ್ನು ತನ್ನಲ್ಲಿ ಹೊಂದಿದೆ..ಸರೋವರ ಸಮುದ್ರ, ಜಲಪಾತಗಳನ್ನ ದೇವರನಾಡು ಕೇರಳದಲ್ಲಿ ಕಾಣಬಹುದು.. ಅದ್ರಲ್ಲೂ ಕೇರಳದ ಕೊಲ್ಲಂ ನಲ್ಲಿ ಇರುವ ಅಷ್ಟಮುಡಿ ಸರೋವರ ಭಾರತದಲ್ಲಿರುವ ಅತ್ಯಂತ ಸುಂದರವಾದ ಸರೋವರಗಳಲ್ಲಿ ಒಂದು..
  ವ್ಯಾಪಕವಾಗಿ ವಿಸ್ತಾರವಾಗಿರುವ ಅಷ್ಟ ಮುಡಿ ಸರೋವರದಲ್ಲಿ ಕಾಣ ಸಿಗುವ ಹೌಸ್ ಬೋಟ್ ಗಳು ಅಚ್ಚರಿಗೊಳಿಸುತ್ತವೆ.. ನೀವು ಪ್ರವಾಸಕ್ಕೆ ಹೋಗಿ ಪ್ರಶಾಂತತೆಯನ್ನು ಬಯಸುವುದಾದರೆ ಅಷ್ಟಮುಡಿ ಸರೋವರದಲ್ಲಿ ಕಾಣಸಿಗುವ ಹೌಸ್ ಬೋಟ್ ಗಳಲ್ಲಿ ಒಮ್ಮೆ ವಿಹಾರ ಮಾಡಲೇಬೇಕು..

  4)ಸಿಲಿಸೆರ್ ಸರೋವರ, ಅಲ್ವಾರ್ :

  ರಾಷ್ಟ್ರ ರಾಜಧಾನಿ ದೆಹಲಿಯಿಂದ ಸ್ವಲ್ಪ ದೂರದಲ್ಲಿ ಇರುವ, ರಾಜಸ್ಥಾನದ ಅಲ್ವಾರ್ ನಲ್ಲಿ ಭಾರತದ ಅತ್ಯಂತ ಸುಂದರವಾದ ಸರೋವರಗಳಲ್ಲಿ ಒಂದು ಎನಿಸಿಕೊಂಡಿರುವ ಸಿಲಿಸೆರ್ ಸರೋವರ ಇದೆ.

  5)ಕಂಕಾರಿಯಾ ಸರೋವರ, ಗುಜರಾತ್ :

  ಅಹಮದಾಬಾದ್‌ನಲ್ಲಿರುವ ಕಂಕಾರಿಯಾ ಸರೋವರವು ಅತ್ಯಂತ ಜನಪ್ರಿಯವಾದ ವೃತ್ತಾಕಾರದ ಸರೋವರವಾಗಿದೆ. ಅಲ್ಲದೇ ಸರೋವರಕ್ಕೆ ವಾಕಿಂಗ್ ಬರುವ ಮಕ್ಕಳಿಗಾಗಿ ಅಡಿಕೆ ರೈಲುಗಳನ್ನು ನಿರ್ಮಾಣ ಮಾಡಲಾಗಿದ್ದು, ಈ ರೈಲುಗಳು ಮಕ್ಕಳನ್ನು ಸರೋವರದ ಸುತ್ತಲೂ ಕರೆದುಕೊಂಡು ಹೋಗುತ್ತವೆ..

  ಇದನ್ನೂ ಓದಿ :ಸರೋವರಗಳು ಗುಲಾಬಿ ಬಣ್ಣಕ್ಕೆ ತಿರುಗುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ..

  6) ಹುಸೇನ್ ಸಾಗರ್ ಲೇಕ್, ಹೈದರಾಬಾದ್ :

  ಮುತ್ತಿನ ನಗರಿ ಹೈದ್ರಾಬಾದ್ ನಲ್ಲಿ ಇರುವ ಹುಸೇನ್ ಸಾಗರ್ ಸರೋವರವು,ಮನಸ್ಸಿಗೆ ಆಹ್ಲಾದ ನೀಡುವ ಸ್ಥಳಗಳಲ್ಲಿ ಒಂದು..ಹುಸೇನ್ ಸಾಗರ್ ಲೇಕ್ ಒಂದು ಕೃತಕ ಸರೋವರವಾಗಿದ್ದು ಹಝರತ್ ಹುಸೇನ್ ಷಾಹ್ ವಾಲಿಯು 1562ರಲ್ಲಿ ಇದನ್ನ ನಿರ್ಮಾಣ ಮಾಡಿದನು. ಈ ಕೆರೆಯನ್ನು ಮೂಸಿ ನದಿಗೆ ಪೂರಕ ಕೆರೆಯನ್ನಾಗಿ ನಿರ್ಮಿಸಲಾಗಿದೆ. ಹೈದರಬಾದಿಗೆ ನೀರು ಒದಗಿಸಲು ಮತ್ತು ನೀರಾವರಿ ಉದ್ದೇಶಗಳ ಈ ಕೆರೆಯನ್ನು ನಿರ್ಮಿಸಲಾಯಿತು. ಈ ಹುಸೇನ್ ಸಾಗರ್ ಸರೋವರದಲ್ಲಿರುವ ಬುದ್ಧನ ಬೃಹತ್ ಪ್ರತಿಮೆ ಮತ್ತು ಬೋಟಿಂಗ್ ಸೌಲಭ್ಯಗಳು ಸರೋವರದ ಪ್ರಮುಖ ಆಕರ್ಷಣೆ ಕೇಂದ್ರವಾಗಿದೆ
  Published by:ranjumbkgowda1 ranjumbkgowda1
  First published: