• Home
  • »
  • News
  • »
  • trend
  • »
  • Indian Food: ವಿಶ್ವದಲ್ಲೇ ಅತ್ಯುತ್ತಮ ಅಡುಗೆ ಮಾಡೋದ್ಯಾರು? ಭಾರತ ಟಾಪ್​ನಲ್ಲಿ ಇಲ್ಲ!

Indian Food: ವಿಶ್ವದಲ್ಲೇ ಅತ್ಯುತ್ತಮ ಅಡುಗೆ ಮಾಡೋದ್ಯಾರು? ಭಾರತ ಟಾಪ್​ನಲ್ಲಿ ಇಲ್ಲ!

ಭಾರತೀಯ ಆಹಾರ

ಭಾರತೀಯ ಆಹಾರ

ಟೇಸ್ಟ್ ಅಟ್ಲಾಸ್ ಪ್ರಕಾರ, 2022 ರ ಅತ್ಯುತ್ತಮ ಪಾಕಪದ್ಧತಿಗಳ ಜಾಗತಿಕ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನ ಪಡೆದಿದೆ. ಪದಾರ್ಥಗಳ, ಭಕ್ಷ್ಯಗಳ ರುಚಿ, ಜನಪ್ರಿಯತೆಗಾಗಿ ಜನರ ಮತಗಳನ್ನು ಆಧರಿಸಿ ಈ ಸ್ಥಾನಗಳನ್ನು ನೀಡಲಾಗಿದೆ. ಇದರಲ್ಲಿ ಇಟಲಿ ಮೊದಲ ಸ್ಥಾನದಲ್ಲಿದ್ದರೆ ಗ್ರೀಸ್‌ ಎರಡನೆಯ ಸ್ಥಾನ ಹಾಗೂ ಸ್ಪೇನ್‌ ಮೂರನೇ ಸ್ಥಾನ ಪಡೆದುಕೊಂಡಿವೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ಭಾರತೀಯ ಪಾಕ (Indian Food) ಪದ್ಧತಿ ವಿಶೇಷವಾದದ್ದು, ಅನೇಕ ವಿಧದ ಮಸಾಲೆ ಪದಾರ್ಥಗಳಿಂದ ತುಂಬಿರುವ ಇಲ್ಲಿನ ಪಾಕ ವಿಧಾನ ಬೇರೆದೇಶಗಳಿಗಿಂತ ವಿಭಿನ್ನವಾದದ್ದು. ಇದಕ್ಕೀಗ ಜಾಗತಿಕ ಮನ್ನಣೆ ಸಿಗುತ್ತಿದ್ದು, ವಿಶ್ವದ ಅತ್ಯುತ್ತಮ ಪಾಕಪದ್ಧತಿಗಳ ಪಟ್ಟಿಯಲ್ಲಿ ಭಾರತಕ್ಕೆ ಐದನೇ (5th Rank) ಸ್ಥಾನ ಲಭಿಸಿದೆ. ಪದಾರ್ಥ, ಭಕ್ಷ್ಯ, ಪಾನೀಯಗಳ ರುಚಿಗಳಿಗಾಗಿ ಪ್ರೇಕ್ಷಕರ ಮತಗಳನ್ನು ಆಧರಿಸಿ ಈ ರೇಟಿಂಗ್‌ (Rating) ನೀಡಲಾಗಿದೆ. ಇಟಲಿಯು ನಂ.1 ಸ್ಥಾನ ಪಡೆದುಕೊಂಡಿದೆ.


ಟೇಸ್ಟ್ ಅಟ್ಲಾಸ್ ಪ್ರಕಾರ, 2022 ರ ಅತ್ಯುತ್ತಮ ಪಾಕಪದ್ಧತಿಗಳ ಜಾಗತಿಕ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನ ಪಡೆದಿದೆ. ಪದಾರ್ಥಗಳ, ಭಕ್ಷ್ಯಗಳ ರುಚಿ, ಜನಪ್ರಿಯತೆಗಾಗಿ ಜನರ ಮತಗಳನ್ನು ಆಧರಿಸಿ ಈ ಸ್ಥಾನಗಳನ್ನು ನೀಡಲಾಗಿದೆ. ಇದರಲ್ಲಿ ಇಟಲಿ ಮೊದಲ ಸ್ಥಾನದಲ್ಲಿದ್ದರೆ ಗ್ರೀಸ್‌ ಎರಡನೆಯ ಸ್ಥಾನ ಹಾಗೂ ಸ್ಪೇನ್‌ ಮೂರನೇ ಸ್ಥಾನ ಪಡೆದುಕೊಂಡಿವೆ.


ಭಾರತದ ಪಾಕಪದ್ಧತಿಗೆ 4.54 ಅಂಕ
ಅತ್ಯುತ್ತಮ ಪಾಕಪದ್ಧತಿಗಳ ಜಾಗತಿಕ ಪಟ್ಟಿಯಲ್ಲಿ ಭಾರತವು 4.54 ಅಂಕಗಳನ್ನು ಪಡೆದುಕೊಂಡಿದೆ. ದೇಶದ ಅತ್ಯುತ್ತಮ ರೇಟ್ ಮಾಡಿದ ಆಹಾರಗಳಲ್ಲಿ "ಗರಂ ಮಸಾಲಾ, ಮಲಾಯಿ, ತುಪ್ಪ, ಬೆಣ್ಣೆ, ಬೆಳ್ಳುಳ್ಳಿ ನಾನ್, ಕೀಮಾ" ಸೇರಿದಂತೆ ಈ ಪಟ್ಟಿಯಲ್ಲಿ ಒಟ್ಟು 460 ಐಟಂ ಗಳಿವೆ ಎಂದು ಹೇಳಲಾಗಿದೆ. ಇದಲ್ಲದೆ, ಭಾರತೀಯ ಪಾಕಪದ್ಧತಿಗಾಗಿ ಶ್ರೀ ಠಾಕರ್ ಭೋಜನಲೇ (ಮುಂಬೈ), ಕರವಲ್ಲಿ (ಬೆಂಗಳೂರು), ಬುಖಾರಾ (ಹೊಸದಿಲ್ಲಿ), ದಮ್ ಪುಖ್ತ್ (ಹೊಸದಿಲ್ಲಿ), ಕೊಮೊರಿನ್ (ಗುರುಗ್ರಾಮ್) ಸೇರಿದಂತೆ ಇತರ 450 ಹೋಟೆಲ್‌ ಅಥವಾ ರೆಸ್ಟೋರೆಂಟ್‌ ಗಳಲ್ಲಿ ನೀವು ಟ್ರೈ ಮಾಡಬಹುದು ಎಂಬುದಾಗಿ ಹೇಳಲಾಗಿದೆ.


ಇನ್ನು, ಜಪಾನ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಟರ್ಕಿ , ಫ್ರಾನ್ಸ್ ಮತ್ತು ಪೆರು ಕೂಡ ಅತ್ಯುತ್ತಮ ಪಾಕಪದ್ಧತಿಯನ್ನು ಹೊಂದಿರುವ ಟಾಪ್ 10 ದೇಶಗಳಲ್ಲಿ ಸೇರಿವೆ. ಪ್ರಪಂಚದ ಅತ್ಯಂತ ಜನಪ್ರಿಯವಾಗಿರುವ ಚೈನೀಸ್ ಪಾಕಪದ್ಧತಿಯು ಪಟ್ಟಿಯಲ್ಲಿ 11 ನೇ ಸ್ಥಾನದಲ್ಲಿದೆ.


ಇದನ್ನೂ ಓದಿ: Junior Bruce Lee: ಬಾಡಿ ಬಿಲ್ಡರ್‌ಗಳೇ ನಾಚುವಂತೆ ದೇಹ ಹುರಿಗೊಳಿಸಿದ ಬಾಲಕ! ಇವನೇ ನೋಡಿ ಜೂನಿಯರ್ ಬ್ರೂಸ್‌ ಲೀ!


ಈ ಲಿಸ್ಟ್‌ ಹೊಂದಿರುವಂಥ ಟ್ವಿಟ್ಟರ್‌ ಪೋಸ್ಟ್‌ ಅನೇಕ ನೆಟ್ಟಿಗರ ಗಮನ ಸೆಳೆದಿದೆ. ಇದು 36 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಅಲ್ಲದೆ, 15,000 ಕ್ಕೂ ಹೆಚ್ಚು ವಿಭಿನ್ನ ಕಾಮೆಂಟ್‌ಗಳನ್ನು ಪಡೆದಿದೆ. ಕೆಲವರು ಈ ರ‍್ಯಾಂಕಿಂಗ್ ಗಳನ್ನು ಸರಿಯಾಗಿಲ್ಲ ಎಂದರೆ, ಬಹಳಷ್ಟು ಜನರು ತಮ್ಮ ದೇಶದ ಪಾಕಪದ್ಧತಿಯು ಇತರ ಅಡುಗೆಗಳಿಗಿಂತ ಉತ್ತಮವಾಗಿದೆ ಎಂದು ಹೇಳಿದ್ದಾರೆ.


ಕೆಲವರು ಈ ಸ್ಥಾನವನ್ನು ಒಪ್ಪುತ್ತಿಲ್ಲ


ಒಬ್ಬ ಬಳಕೆದಾರ, ನೀವು ಎಂದಾದರೂ ಆಹಾರವನ್ನು ಸೇವಿಸದಿದ್ದರೆ ಇದನ್ನು ಒಪ್ಪುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.  ಇನ್ನೊಬ್ಬರು, "ಹಾಯ್, ದೋಷ ಸಂಭವಿಸಿದೆ ಎಂದು ನಾನು ಭಾವಿಸುತ್ತೇನೆ. ಕೆಲವು ಕಾರಣಗಳಿಗಾಗಿ ಇಂಗ್ಲೆಂಡ್ ಈ ಪಟ್ಟಿಯಲ್ಲಿದೆ" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಇದು ಸಂಪೂರ್ಣ ಅಸಂಬದ್ಧ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನು ಮತ್ತೊಬ್ಬ ಬಳಕೆದಾರರು ಹೇಳಿರುವುದೇನೆಂದರೆ ನಾನು ಈ ಪಟ್ಟಿಯಲ್ಲಿರುವ ಬಹಳಷ್ಟು ದೇಶಗಳಿಗೆ ಹೋಗಿದ್ದೇನೆ. ಇದು ನಿಖರವಲ್ಲದ ಪಟ್ಟಿ ಎಂದು @TasteAtlas ಎಂದು ನಾನು ನಿಮಗೆ ಹೇಳಬಲ್ಲೆ. ನೀವು ಮೊರಾಕೊ, ಇಥಿಯೋಪಿಯಾ, ಮ್ಯಾನ್ಮಾರ್ ಮತ್ತು ಇನ್ನೂ ಅನೇಕ ಆಹಾರಪ್ರೇಮಿ ದೇಶಗಳನ್ನು ಸೇರಿಸಿಲ್ಲ ಎಂಬುದಾಗಿ ಬರೆದಿದ್ದಾರೆ.


ಟಾಪ್​ 10 ಪಟ್ಟಿಯಲ್ಲಿ ಈ ದೇಶಗಳು ಇರಬೇಕಿತ್ತು


ಇನ್ನೊಬ್ಬ ಟ್ವಿಟ್ಟರ್‌ ಬಳಕೆದಾರರು, "ಲೆಬನಾನ್, ಪಾಕಿಸ್ತಾನ, ಥೈಲ್ಯಾಂಡ್, ಜಮೈಕಾ ಟಾಪ್ 10 ರಲ್ಲಿ ಇರಬೇಕು. ಇಂಗ್ಲೆಂಡ್ ಹೇಗೆ ಪಟ್ಟಿಯಲ್ಲಿದೆ? ಜರ್ಮನ್ ಆಹಾರ? ಒಂದು ಟ್ವೀಟ್‌ನಲ್ಲಿ ತುಂಬಾ ಗೊಂದಲ " ಎಂದು ಟೀಕಿಸಿದ್ದಾರೆ. ಇನ್ನೊಬ್ಬ ವ್ಯಕ್ತಿಯು "ಅಮೆರಿಕನ್ ಪಾಕಪದ್ಧತಿ ಎಂದರೇನು? ಓರಿಯೊ?" ಎಂದು ತಮಾಷೆ ಮಾಡಿದ್ದಾರೆ. ಒಟ್ಟಾರೆ, ಒಬ್ಬೊಬ್ಬರ ಅಭಿಪ್ರಾಯ ಬೇರೆ ಬೇರೆಯಾಗಿರುತ್ತದೆ. ಆದ್ರೆ ಅಭಿಪ್ರಾಯಗಳು ಏನೇ ಇರಲಿ, ನಮ್ಮ ದೇಶದ ಪಾಕಪದ್ಧತಿಗೆ ಟಾಪ್‌ 5 ಸ್ಥಾನ ಸಿಕ್ಕಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

First published: