• Home
  • »
  • News
  • »
  • trend
  • »
  • Trending: ಮಗ-ಸೊಸೆಯ ಮಗುವಿಗೆ ಜನ್ಮ ನೀಡಿದ ತಾಯಿ; ಇದು ಅಚ್ಚರಿಯಾದ್ರೂ ಸತ್ಯ

Trending: ಮಗ-ಸೊಸೆಯ ಮಗುವಿಗೆ ಜನ್ಮ ನೀಡಿದ ತಾಯಿ; ಇದು ಅಚ್ಚರಿಯಾದ್ರೂ ಸತ್ಯ

ಮಗ-ಸೊಸೆಯ ಮಗುವಿಗೆ ಜನ್ಮ ನೀಡಿದ ತಾಯಿ

ಮಗ-ಸೊಸೆಯ ಮಗುವಿಗೆ ಜನ್ಮ ನೀಡಿದ ತಾಯಿ

ತಾಯಿಯೊಬ್ಬಳು ಬಾಡಿಗೆ ತಾಯ್ತನದಿಂದ ತನ್ನ ಮಗ ಮತ್ತು ಸೊಸೆಯ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಪೀಪಲ್ ಪತ್ರಿಕೆಯ ವರದಿಯೊಂದು ತಿಳಿಸಿದೆ.

  • Share this:

ಬಂಜೆತನ ಅಥವಾ ಇನ್ಯಾವುದೋ ಆರೋಗ್ಯ ಸಮಸ್ಯೆಯಿಂದ(Health Problem) ಮಕ್ಕಳಿಲ್ಲದೇ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮೊದಲೆಲ್ಲಾ ಮಕ್ಕಳಾಗುತ್ತಿಲ್ಲ(Baby) ಎಂಬ ಕೊರಗಿಗೆ ಪರಿಹಾರಗಳು ತುಂಬಾ ವಿರಳವಾಗಿದ್ದವು. ಆದರೆ ವೈದ್ಯಕೀಯ(Medical) ಲೋಕ ಈಗ ಅಚ್ಚರಿಯ ಘಟನೆಗೆ ಸಾಕ್ಷಿಯಾಗುತ್ತಿದೆ.


ಹೌದು, ಈಗ ಆಧುನಿಕ ಸಮಯದಲ್ಲಿ ಅನೇಕ ರೀತಿಯ ಮಾರ್ಗಗಳನ್ನು ವೈದ್ಯರು ಕಂಡುಕೊಂಡಿದ್ದಾರೆ ಅಂತ ಹೇಳಬಹುದು. ಈಗ ಮಕ್ಕಳು ಆಗದೆ ಇರುವ ದಂಪತಿಗಳು ಹೆಚ್ಚಾಗಿ ಈ ಬಾಡಿಗೆ ತಾಯ್ತನದಿಂದ ಎಂದರೆ ಸರೋಗೆಸಿಯಿಂದ ಮತ್ತು ಪ್ರಣಾಳ ಶಿಶು ಪ್ರಕ್ರಿಯೆಯಿಂದ ಮಕ್ಕಳನ್ನು ಪಡೆಯುತ್ತಿದ್ದಾರೆ, ಸ್ವಲ್ಪ ಹಣ ಖರ್ಚಾಗುತ್ತದೆ. ಆದರೆ ಒಬ್ಬ ಹೆಣ್ಣಿನ ಮಡಿಲು ಒಂದು ಮಗುವಿನಿಂದ ತುಂಬುವುದು ಅಂತಾದರೆ ಈ ವಿನೂತನ ಪ್ರಕ್ರಿಯೆಗಳು ಒಳ್ಳೆಯದೇ ಅಂತ ಹೇಳಬಹುದು.


ಸ್ವಂತ ಮಗ-ಸೊಸೆಗೆ ಮಕ್ಕಳ ಭಾಗ್ಯ ಒದಗಿಸಿಕೊಟ್ಟ ತಾಯಿ


ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಬಾಡಿಗೆ ತಾಯ್ತನದ ಹಲವಾರು ಕಥೆಗಳನ್ನು ನಾವು ನೋಡುತ್ತಿದ್ದೇವೆ. ಇಂತಹ ಒಂದು ಘಟನೆಯಲ್ಲಿ, ತಾಯಿಯೊಬ್ಬಳು ಬಾಡಿಗೆ ತಾಯ್ತನದಿಂದ ತನ್ನ ಮಗ ಮತ್ತು ಸೊಸೆಯ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಪೀಪಲ್ ಪತ್ರಿಕೆಯ ವರದಿಯೊಂದು ತಿಳಿಸಿದೆ. ಸೊಸೆಗೆ ಹಿಸ್ಟೆರೆಕ್ಟಮಿ, ಗರ್ಭಾಶಯದ ಬಹುತೇಕ ಭಾಗವನ್ನು ತೆಗೆದು ಹಾಕಲಾದ ಶಸ್ತ್ರಚಿಕಿತ್ಸೆಯ ನಂತರ ಮಗ ಮತ್ತು ಸೊಸೆಗೆ ಮಗುವನ್ನು ಪಡೆಯಲು ಹೆಚ್ಚಿನ ಆಯ್ಕೆಗಳು ಉಳಿದಿರಲಿಲ್ಲ ಎಂದು ವರದಿಯೊಂದು ಹೇಳಿತ್ತು.


ಇದನ್ನೂ ಓದಿ: Mother Gift to Son: ಮಗನಿಗೆ ಹೊಸ ಬಂಗಲೆ ತೋರಿಸಿ ಸಪ್ರೈಸ್ ಕೊಟ್ಟ ತಾಯಿ! ಮಗನ ರಿಯಾಕ್ಷನ್ ವೈರಲ್


ಜೆಫ್ ಹಾಕ್ ಅವರ 56 ವರ್ಷ ವಯಸ್ಸಿನ ತಾಯಿ ನ್ಯಾನ್ಸಿ ಹಾಕ್ ಅವರಿಗೆ ಬಾಡಿಗೆ ತಾಯ್ತನದ ಮೂಲಕ ತಮಗೆ ಮತ್ತು ತಮ್ಮ ಹೆಂಡತಿ ಕ್ಯಾಂಬ್ರಿಯಾಗೆ ಮಗು ನೀಡುವಂತೆ ಕೇಳಿದರು. ಆಗ ನ್ಯಾನ್ಸಿ ಅವರಿಗೆ ಇದು ಹೇಗೆ ಸಾಧ್ಯವಾಗುತ್ತದೆ ಅನ್ನೋದರ ಬಗ್ಗೆ ಸ್ವಲ್ಪ ತಳಮಳವಿತ್ತು. ಆದಾಗ್ಯೂ, ಈ ಒಂದು ಐಡಿಯಾ ಇವರ ಕುಟುಂಬಕ್ಕೆ ಮಗುವನ್ನು ಕರುಣಿಸಿದೆ ಮತ್ತು 56 ವರ್ಷದ ಅವರು ತಮ್ಮ ಐದನೇ ಮಗುವಿಗೆ ಜನ್ಮ ನೀಡಿದರು. ಅಜ್ಜಿಯ ಮೂಲಕ ಜನಿಸಿದ ಹೆಣ್ಣು ಮಗು ದುರದೃಷ್ಟವಶಾತ್‌ ಬದುಕುಳಿಯಲಿಲ್ಲ ಎನ್ನುವುದೇ ದುಃಖಕರ ಸಂಗತಿ.


ಮಗು ಬಂದಿದ್ದು ಸುಂದರವಾದ ಕ್ಷಣ ಎಂದ ಜೆಫ್ ಹಾಕ್


ವೆಬ್ ಡೆವಲಪರ್ ಆಗಿರುವ ಹಾಕ್, ಇಡೀ ಅನುಭವವನ್ನು ಒಂದು "ಸುಂದರವಾದ ಕ್ಷಣ" ಎಂದು ಕರೆದರು. "ಎಷ್ಟು ಜನರು ತಮ್ಮ ತಾಯಿ ಅವರಿಗಾಗಿ ಮಗುವಿಗೆ ಜನ್ಮ ನೀಡುವುದನ್ನು ನೋಡುತ್ತಾರೆ" ಎಂದು ಅವರು ಹೇಳಿದರು.


56 ವರ್ಷ ವಯಸ್ಸಿನ ನ್ಯಾನ್ಸಿ ಅವರು ಒಂಬತ್ತು ಗಂಟೆಗಳ ಕಾಲ ಹೆರಿಗೆ ನೋವಿನಲ್ಲಿದ್ದರು ಮತ್ತು ಇದೊಂದು "ಗಮನಾರ್ಹ ಮತ್ತು ಆಧ್ಯಾತ್ಮಿಕ ಅನುಭವ" ಎಂದು ಕರೆದರು ಎಂದು ವರದಿಯಾಗಿದೆ.


ಮಗುವಿನ ಅಗಲಿಕೆ ಬಗ್ಗೆ ನ್ಯಾನ್ಸಿ ಹೇಳಿದ್ದೇನು?


"ಇದೊಂದು ತುಂಬಾನೇ ಕೃತಜ್ಞತೆಯ ಘಳಿಗೆ, ಆದರೆ ಮಗುವಿನ ಅಗಲಿಕೆಯಿಂದ ಸ್ವಲ್ಪ ದುಃಖವಾಗಿದ್ದು ಇದೊಂದು ಮಿಶ್ರ ಭಾವನೆಯಾಗಿದೆ" ಮಗುವಿನ ಅಜ್ಜಿಗೆ ಗೌರವಾರ್ಥವಾಗಿ, ಆ ಪುಟ್ಟ ಮಗಳಿಗೆ ಹನ್ನಾ ಎಂದು ಹೆಸರಿಡಲಾಗಿದೆ.


ಉತಾಹ್ ಟೆಕ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಅಜ್ಜಿ, ತನಗೆ ಖಂಡಿತ ಹೆಣ್ಣು ಮಗು ಆಗುತ್ತೆ ಎಂದು ಸಹ ನೀರೀಕ್ಷಿಸಿದ್ದರಂತೆ. ಈ ಬಗ್ಗೆ ಮಾತನಾಡಿದ ಕ್ಯಾಂಬ್ರಿಯಾ, ಯಾವುದೇ ಪರೀಕ್ಷೆ ಮಾಡಿಸದೆ ನಮ್ಮ ಅತ್ತೆ ಹೆಣ್ಣು ಮಗು ಆಗುತ್ತೆ ಎಂಬ ವಿಶ್ವಾಸವನ್ನು ಹೊಂದಿದ್ದರು. ನ್ಯಾನ್ಸಿ ಎಂಬ ಹೆಸರು ಹನ್ನಾದಿಂದ ಬಂದಿದೆ. ಇವೆರಡೂ ಅನುಗ್ರಹವನ್ನು ಸೂಚಿಸುತ್ತವೆ ಎಂದು ಹೇಳಿದರು.


ಇದನ್ನೂ ಓದಿ: Viral News: 21 ದಿನದ ಹೆಣ್ಣು ಶಿಶುವಿನ ಹೊಟ್ಟೆಯಲ್ಲಿದ್ದವು 8 ಭ್ರೂಣಗಳು! ಇದು ನಿಮ್ಮನ್ನು ಬೆಚ್ಚಿ ಬೀಳಿಸುವ ಸುದ್ದಿ


"ಅಜ್ಜಿಯೊಬ್ಬಳು ತನ್ನ ಮೊಮ್ಮಗಳಿಗೆ ಹೀಗೆ ಜನ್ಮ ನೀಡುವುದು ತುಂಬಾನೇ ಅಪರೂಪವಾದ ಘಟನೆಯಾಗಿದೆ. ವಯಸ್ಸು ನಿಜವಾಗಿಯೂ ಯಾವುದಕ್ಕೂ ಅಡ್ಡಿಯಲ್ಲ" ಎಂದು ಡಾ. ರಸೆಲ್ ಫೌಲ್ಕ್ ಹೇಳಿದ್ದಾರೆ. "ನಿಜವಾಗಿಯೂ, ಇದೆಲ್ಲವೂ ಅವರ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿರುತ್ತದೆ" ಎಂದು ಅವರು ವಿವರಿಸುತ್ತಾರೆ.

Published by:Latha CG
First published: