Viral Story: ಮನೆಯಲ್ಲಿ 50ಕ್ಕೂ ಹೆಚ್ಚು ಇಲಿಗಳನ್ನು ಸಾಕುವ ಮಹಿಳೆ! ಇದು ಆಕೆಯ ಪ್ರಾಣಿ ಪ್ರೀತಿಯಂತೆ

Rats: ಅಮೆರಿಕದ ಸೇನೆಯಿಂದ ನಿವೃತ್ತರಾಗಿರುವ ಮಿಚೆಲ್ ರೇಬನ್ ಅವರಿಗೆ 51 ವರ್ಷ ವಯಸ್ಸಾಗಿದ್ದು, ಕ್ಯಾಲಿಫೋರ್ನಿಯಾ ದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ ಮತ್ತು ಮನೆಯಲ್ಲಿ ವಿವಿಧ ರೀತಿಯ ಪ್ರಾಣಿಗಳನ್ನು ಸಾಕಿದ್ದಾರೆ. ಡೈಲಿ ಮೇಲ್ ವರದಿಯ ಪ್ರಕಾರ, 50 ಕ್ಕೂ ಹೆಚ್ಚು ಇಲಿಗಳನ್ನು ತಮ್ಮ ಸಾಕುಪ್ರಾಣಿಗಳಂತೆ ಸಾಕುತ್ತಿದ್ದಾರೆ.

ಮಿಚೆಲ್ ರೇಬನ್

ಮಿಚೆಲ್ ರೇಬನ್

  • Share this:
    ಸಾಮಾನ್ಯವಾಗಿ ಮನೆಗಳಲ್ಲಿ ನಾಯಿ (Dog) ಮತ್ತು ಬೆಕ್ಕುಗಳನ್ನು (Cat) ಸಾಕುಪ್ರಾಣಿಗಳಾಗಿ ಸಾಕುವುದನ್ನು ನೀವು ನೋಡಿರಬಹುದು. ಕೆಲವರು ಮನೆಯ ಹೊರಭಾಗದಲ್ಲಿ ಹಸು (Cow), ಹಂದಿ (Pig) ಮುಂತಾದ ಪ್ರಾಣಿಗಳನ್ನೂ ಸಾಕುತ್ತಾರೆ, ಏಕೆಂದರೆ ಇದು ಆದಾಯ ನೀಡುವ ಪ್ರಾಣಿಗಳಾದ್ದರಿಂದ ಸರಿಯಾದ ಪೋಷಣೆಯೊಂದಿಗೆ ಸಾಕುತ್ತಾರೆ. ಆದರೆ ಇಲಿಗಳನ್ನು (Rats) ಸಾಕುವ ಹವ್ಯಾಸವಿರುವವರು ಯಾರಾದರು ಇದ್ದಾರೆಯೇ? ಇದಕ್ಕೆ ಪ್ರತಿಕ್ರಿಯೆಯಾಗಿ, ಮಿಚೆಲ್ ರೇಬನ್ ಎಂಬ ಮಹಿಳೆಗೆ ಇಲಿ ಸಾಕುವ ಹುಚ್ಚು. ಆಕೆಯ ಮನೆಯಲ್ಲಿ ಒಂದಲ್ಲ, ಎರಡಲ್ಲಾ 50ಕ್ಕೂ ಹೆಚ್ಚು ಇಲಿಗಳಿವೆ, ಮಕ್ಕಳಂತೆಯೇ ಅವುಗಳನ್ನು ಸಾಕುತ್ತಾಳೆ. ಮುದ್ದಿಸುತ್ತಾಳೆ. ಆದರೆ ಆಕೆಗೆ ಇಂತಹದೊಂದು ಹವ್ಯಾಸ (Hobby) ಬೆಳೆದದ್ದು ಹೇಗೆ ಗೊತ್ತಾ? ಈ ಸ್ಟೋರಿ ಓದಿ..

    ಅಮೆರಿಕದ ಸೇನೆಯಿಂದ ನಿವೃತ್ತರಾಗಿರುವ ಮಿಚೆಲ್ ರೇಬನ್ ಅವರಿಗೆ 51 ವರ್ಷ ವಯಸ್ಸಾಗಿದ್ದು, ಕ್ಯಾಲಿಫೋರ್ನಿಯಾ ದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ ಮತ್ತು ಮನೆಯಲ್ಲಿ ವಿವಿಧ ರೀತಿಯ ಪ್ರಾಣಿಗಳನ್ನು ಸಾಕಿದ್ದಾರೆ. ಡೈಲಿ ಮೇಲ್ ವರದಿಯ ಪ್ರಕಾರ, 50 ಕ್ಕೂ ಹೆಚ್ಚು ಇಲಿಗಳನ್ನು ತಮ್ಮ ಸಾಕುಪ್ರಾಣಿಗಳಂತೆ ಸಾಕುತ್ತಿದ್ದಾರೆ.

    ಇಲಿಗಳನ್ನು ಮಕ್ಕಳಂತೆಯೇ ನೋಡಿಕೊಳ್ಳುವ ಮಹಿಳೆ

    ಪ್ರಾಣಿ ಪ್ರಿಯೆ ಎಂದು ಕರೆಸಿಕೊಳ್ಳುವ ಮಿಚೆಲ್ ರೇಬನ್ ಇಲಿಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಾಳೆ. 2018 ರಲ್ಲಿ ಮೊದಲ ಬಾರಿಗೆ, ಮಿಚೆಲ್ ಎಲ್ವಿಸ್ ಮತ್ತು ಚಕ್ ಎಂಬ ಎರಡು ಇಲಿಗಳನ್ನು ತಂದರು. ನಂತರ ಅವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇತ್ತು. ಸದ್ಯ ಇವರ ಮನೆಯಲ್ಲಿ ಒಟ್ಟು 50 ಕ್ಕೂ ಹೆಚ್ಚು ಇಲಿಗಳಿವೆ. ಆಕೆ ತನಗೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾಳೆ. ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳುವುದು ಮಾತ್ರವಲ್ಲದೆ ತಮ್ಮ ಮಕ್ಕಳು ಎಂದು ಕರೆಯುತ್ತಾರೆ.

    ಇದನ್ನೂ ಓದಿ: Zomato Delivery Man: ಜೊಮ್ಯಾಟೋ ಫುಡ್ ಡೆಲಿವರಿ ಬಾಯ್’ಗೆ ಬೈಕ್ ಖರೀದಿಗೆ ನೆರವಾದ ಸೋಷಿಯಲ್ ಮೀಡಿಯಾ

    ಬೆಕ್ಕು ಕೂಡ ಇಲಿಗಳೊಂದಿಗೆ ಬೆಳೆದಿದೆ!

    ಈಗ ಇದಕ್ಕಿಂತ ದೊಡ್ಡ ವಿಸ್ಮಯವವೊಂದು ಇಲ್ಲಿದೆ. ಅದೇನೆಂದರೆ ಇಲಿಗಳನ್ನು ನೋಡಿ ನಾಲಿಗೆಯನ್ನು ನೆಕ್ಕುವ ಬೆಕ್ಕು ಸಹ ಅವುಗಳ ಜೊತೆಯಲ್ಲಿದೆ, ಮಹಿಳೆಯ ಪ್ರಕಾರ, ಅವಳ ಇಲಿಗಳು ಸ್ನೇಹಪರ ಸ್ವಭಾವದವು ಮತ್ತು ತಿನ್ನುವಾಗ ಅವಳ ಬಳಿಗೆ ಬರುತ್ತವೆ. ಪ್ರತಿಯೊಂದು ಇಲಿ ತನ್ನದೇ ಆದ ಸ್ವಭಾವವನ್ನು ಹೊಂದಿದೆ ಮತ್ತು ಮನೆಯಲ್ಲಿ ವಾಸಿಸುವಾಗ ಯಾವುದೇ ತಪ್ಪು ಮಾಡುವುದಿಲ್ಲ. ಮಿಚೆಲ್ ಬೆಕ್ಕು ಮತ್ತು ಇಲಿ ಮಾತ್ರವಲ್ಲ, 4 ಸಾಕು ನಾಯಿಗಳು ಮತ್ತು 2 ಹಂದಿಗಳನ್ನು ಸಾಕಿದ್ದಾರೆ. ಪ್ರತಿ ಪ್ರಾಣಿಗೆ ವಾಸಿಸಲು ಪ್ರತ್ಯೇಕ ಸ್ಥಳ ಮತ್ತು ಆಹಾರ ಮತ್ತು ಪಾನೀಯವನ್ನು ಅವರು ಇರಿಸಿದ್ದಾರೆ.

    ಇದನ್ನೂ ಓದಿ iPhone 13 Pro ಬಳಕೆದಾರರಿಗೆ ಮ್ಯಾಕ್ರೋ ಫೋಟೋಗ್ರಫಿ ಚಾಲೆಂಜ್​ ಹಮ್ಮಿಕೊಂಡ ಆ್ಯಪಲ್; ಜನಮನ ಗೆದ್ದ 10 ಬೆಸ್ಟ್​​ ಫೋಟೋಗಳು ಇಲ್ಲಿವೆ

    ಜಗತ್ತಿನಲ್ಲಿ ಪ್ರಾಣಿ ಪ್ರಿಯರಿಗೇನು ಕಡಿಮೆಯಿಲ್ಲ. ಕೆಲವರಂತೂ ಸಾಕು ಪ್ರಾಣಿಗಳನ್ನು ಮುದ್ದಿಸಿ ಸಾಕುತ್ತಾರೆ. ಇನ್ನೂ ಕೆಲವರು ತಮ್ಮ ಜೊತೆಯಲ್ಲೇ ಇರಿಸಿಕೊಳ್ಳುತ್ತಾರೆ. ಮನೆಯ ಕೋಣೆಯಲ್ಲಿ ಮಲಗುವಾಗ, ಹೊರಗೆ ಓಡಾಡುವಾಗಲೂ ಸಹ ಸಾಕು ಪ್ರಾಣಿಯನ್ನು ಕರೆದುಕೊಂಡು ಹೋಗುತ್ತಾರೆ. ಅಷ್ಟರಮಟ್ಟಿಗೆ ಸಾಕು ಪ್ರಾಣಿಗಳ ಮೇಲೆ ಪ್ರೀತಿ ಇರಿಸಿಕೊಂಡಿರುತ್ತಾರೆ.

    ಕೆಲವೊಮ್ಮ ಸಾಕು ಪ್ರಾಣಿಗಳು ಮಾಲೀಕ ಸತ್ತಾಗ ಬೇಸರಿಸು ದೃಶ್ಯವನ್ನು ನೋಡಬಹುದಾಗಿದೆ. ಸಾಕು ಪ್ರಾಣಿಗಳು ಮನುಚ್ಯರನ್ನೆ ಬೇಗನೆ ನೆಚ್ಚಿಕೊಳ್ಳುತ್ತವೆ. ಇತ್ತೀಚೆಗೆ ತಮಿಳುನಾಡಿನಲ್ಲಿ ವ್ಯಕ್ತಿಯೋರ್ವ ತನ್ನ ಸಾಕು ನಾಯಿ ಸಾವನ್ನಪಿದ್ದಕ್ಕಾಗಿ ಮತ್ತು ಅದನ್ನು ನೆನಪಿಸಿಕೊಳ್ಳಲೆಂದು ಸ್ಮಾರಕವನ್ನು ನಿರ್ಮಿಸಿದ್ದಾನೆ. ಈ ಸುದ್ದಿ ಸಾಂಆಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತು. ಅದರಂತೆಯೇ ಈ ಮಹಿಳೆಗೆ ಇಲಿ ಸಾಕುವ ಅಭ್ಯಾಸವಿದೆ, ಅದರಂತೆಯೇ ಮನೆಯಲ್ಲಿ ಇಲಿಗಳನ್ನು ಸಾಕುತ್ತಿದ್ದಾಳೆ. ಸಾಕು ಪ್ರಾಣಿಯನ್ನು ಸಾಕಿದಂತೆಯೇ ಇಲಿಯನ್ನು ಸಾಕುವುದಾದರೆ ಹೆಚ್ಚೇನು ಅಚ್ಚರಿ ಪಡೆಬೇಕಾಗಿಲ್ಲ.
    Published by:Harshith AS
    First published: