• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral News: ಆಹಾರದ ಜೊತೆಗೆ 5000 ವರ್ಷಗಳಷ್ಟು ಹಳೆಯ ಫ್ರಿಡ್ಜ್ ಪತ್ತೆ ಹಚ್ಚಿದ ಪುರಾತತ್ತ್ವಜ್ಞರು!

Viral News: ಆಹಾರದ ಜೊತೆಗೆ 5000 ವರ್ಷಗಳಷ್ಟು ಹಳೆಯ ಫ್ರಿಡ್ಜ್ ಪತ್ತೆ ಹಚ್ಚಿದ ಪುರಾತತ್ತ್ವಜ್ಞರು!

ವೈರಲ್​ ಆದ ಫ್ರಿಡ್ಜ್​

ವೈರಲ್​ ಆದ ಫ್ರಿಡ್ಜ್​

ಇರಾಕ್‌ನಲ್ಲಿ ಪತ್ತೆಯಾದ ಹೋಟೆಲ್ ಅವಶೇಷಗಳು ಪುರಾತತ್ತ್ವಜ್ಞರು ದಕ್ಷಿಣ ಇರಾಕ್‌ನಲ್ಲಿ ಸುಮಾರು 5,000 ವರ್ಷಗಳಷ್ಟು ಹಿಂದಿನ ಹೋಟೆಲಿನ ಅವಶೇಷಗಳನ್ನು ಪತ್ತೆಹಚ್ಚಿದ್ದು ಈ ಹಿಂದೆ ದೈನಂದಿನ ಜೀವನ ಹೇಗಿತ್ತು ಎಂಬುದನ್ನು ಈ ಸಂಶೋಧನೆ ತಿಳಿಯಪಡಿಸಲಿದೆ ಹಾಗೂ ಮತ್ತಷ್ಟು ಮಾಹಿತಿಗಳನ್ನು ಒದಗಿಸಲಿದೆ ಎಂಬುದು ವರದಿಯಾಗಿದೆ.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Share this:

ಶತಮಾನಗಳಷ್ಟು ವರ್ಷಗಳ ಹಿಂದೆ ನಾಗರಿಕತೆ ಇತ್ತೇ ಇಲ್ಲವೇ? ಆ ಕಾಲದಲ್ಲಿ ಜನಜೀವನ (Life style) ಹೇಗಿತ್ತು? ಇಂದಿನ ಆಧುನಿಕ ವ್ಯವಸ್ಥೆಗಳು ಆ ಸಮಯದಲ್ಲಿ ಪ್ರವರ್ಧಮಾನದಲ್ಲಿತ್ತೇ ಎಂಬುದನ್ನು ಪತ್ತೆಹಚ್ಚಲು ಕೆಲವೊಂದು ಸಂಶೋಧನೆಗಳು ನೆರವು ನೀಡುತ್ತವೆ. ನಾಗರಿಕತೆ ಬೆಳೆದಂತೆ ಹೊಸ ಹೊಸ ಆವಿಷ್ಕಾರಗಳು ಕಂಡುಬಂದವು ಹಾಗೂ ಈ ಆವಿಷ್ಕಾರಗಳು ಬೆಳಕಿಗೆ ಬರಲು ಪುರಾತತ್ವ ತಂಡ ಹಾಗೂ ಉತ್ಖನನ ಕ್ರಮಗಳು ನೆರವಾಗಿವೆ. ಈ ಪತ್ತೆಹಚ್ಚುವಿಕೆಗಳು ಆ ಕಾಲದಲ್ಲಿದ್ದ ವೈಭವ ಹಾಗೂ ಜನರ ಬದುಕಿನ ನಿಖರ ಪರಿಚಯವನ್ನು ಮಾಡಿಕೊಡುತ್ತವೆ. ಇರಾಕ್‌ನಲ್ಲಿ ಪತ್ತೆಯಾದ ಹೋಟೆಲ್ (Hotel) ಅವಶೇಷಗಳು ಪುರಾತತ್ತ್ವಜ್ಞರು (Archaeologists) ದಕ್ಷಿಣ ಇರಾಕ್‌ನಲ್ಲಿ ಸುಮಾರು 5,000 ವರ್ಷಗಳಷ್ಟು ಹಿಂದಿನ ಹೋಟೆಲಿನ ಅವಶೇಷಗಳನ್ನು ಪತ್ತೆಹಚ್ಚಿದ್ದು ಈ ಹಿಂದೆ ದೈನಂದಿನ ಜೀವನ ಹೇಗಿತ್ತು ಎಂಬುದನ್ನು ಈ ಸಂಶೋಧನೆ ತಿಳಿಯಪಡಿಸಲಿದೆ ಹಾಗೂ ಮತ್ತಷ್ಟು ಮಾಹಿತಿಗಳನ್ನು ಒದಗಿಸಲಿದೆ ಎಂಬುದು ವರದಿಯಾಗಿದೆ.


ಸುಮೇರಿಯನ್ ನಾಗರಿಕತೆಯ ಆರಂಭ


ಇತ್ತೀಚೆಗೆ, ಯುಎಸ್-ಇಟಾಲಿಯನ್ ತಂಡವು ಸಮಕಾಲೀನ ನಗರದ ನಾಸಿರಿಯಾದ ಈಶಾನ್ಯದಲ್ಲಿ ಪ್ರಾಚೀನ ಲಗಾಶ್ ಅವಶೇಷಗಳಲ್ಲಿ ಕೆಲವೊಂದು ಪತ್ತೆಹಚ್ಚುವಿಕೆಗಳನ್ನು ವರದಿ ಮಾಡಿದ್ದು ಈ ನಗರವು ಪ್ರಾಚೀನ ಇರಾಕ್‌ನ ಸುಮೇರಿಯನ್ ನಾಗರಿಕತೆಯ ಆರಂಭಿಕ ನಗರ ಕೇಂದ್ರಗಳಲ್ಲಿ ಒಂದಾಗಿದೆ ಎಂಬುದಾಗಿ ಉಲ್ಲೇಖಗೊಂಡಿದೆ.


ಈಗ ಅಲ್-ಹಿಬಾ ಎಂದು ಹೆಸರಿಸಲಾಗಿರುವ ಈ ಪಟ್ಟಣವು ಪುರಾತತ್ವ ಶಾಸ್ತ್ರಜ್ಞರಿಗೆ ಮಹತ್ವದ ಪ್ರಾಮುಖ್ಯ ತಾಣ ಎಂದೆನಿಸಿದ್ದು ಈ ಹಿಂದೆ ಅನೇಕ ಐತಿಹಾಸಿಕ ಆವಿಷ್ಕಾರಗಳನ್ನು ಮಾಡಲಾಗಿದೆ.


ಅನ್ವೇಷಣೆಗಳಿಂದ ತಿಳಿದು ಬಂದಿರುವ ಮಾಹಿತಿಗಳೇನು?


ಪುರಾತತ್ವ ಶಾಸ್ತ್ರಜ್ಞರು ಬೆಂಚುಗಳು, ಓವನ್, ಪುರಾತನ ಆಹಾರದ ಅವಶೇಷಗಳು ಹಾಗೆಯೇ 5000 ವರ್ಷಗಳಷ್ಟು ಹಳೆಯದಾದ ಫ್ರಿಡ್ಜ್‌ನಂತಿರುವ ಪರಿಕರವನ್ನು ಪತ್ತೆಹಚ್ಚಿದ್ದಾರೆ.


ಆಹಾರವನ್ನು ತಂಪಾಗಿರಿಸುವ ಉದ್ದೇಶಕ್ಕಾಗಿ ಇದನ್ನು ಬಳಸಲಾಗುತ್ತಿತ್ತು ಎಂಬುದು ತಜ್ಞರ ಅಭಿಪ್ರಾಯವಾಗಿದ್ದು ಇದರೊಂದಿಗೆ ಶಂಕುವಿನಾಕಾರದ ಬಟ್ಟಲುಗಳನ್ನು ತಂಡವು ಕಂಡುಹಿಡಿದಿದೆ.


5000 years old fridge along with food found by archaeologists
ವೈರಲ್​ ಆದ ಫ್ರಿಡ್ಜ್​


ರೆಸ್ಟೋರೆಂಟ್ ಪತ್ತೆಹಚ್ಚಿರುವ ತಂಡ


ಪ್ರಾಜೆಕ್ಟ್ ಡೈರೆಕ್ಟರ್, ಹೋಲಿ ಪಿಟ್‌ಮ್ಯಾನ್ ಪತ್ತೆಹಚ್ಚಿದ ವಸ್ತುಗಳ ಕುರಿತು ಕೆಲವೊಂದು ಮಾಹಿತಿಗಳನ್ನು ಸುದ್ದಿಸಂಸ್ಥೆ ಪಿಟಿಐಗೆ ನೀಡಿದ್ದು ರೆಫ್ರಿಜರೇಟರ್ ಪತ್ತೆಯಾಗಿದೆ ಹಾಗೂ ನೂರಾರು ಜನರಿಗೆ ಆಹಾರ ಉಣಬಡಿಸುವ ಪಾತ್ರೆಗಳು, ಜನರು ಕುಳಿತುಕೊಳ್ಳುವ ಬೆಂಚ್‌ಗಳು, ರೆಫ್ರಿಜರೇಟರ್‌ನ ಹಿಂಬದಿಯಲ್ಲಿ ಕೆಲವೊಂದು ಪರಿಕರಗಳು ಹಾಗೂ ಅಡುಗೆ ಮಾಡಲು ಬಳಸುವ ಪಾತ್ರೆ ಪರಿಕರಗಳು ಹಾಗೂ ಓವನ್‌ ಕೂಡ ಪತ್ತೆಯಾಗಿದೆ ಎಂದು ಪಿಟ್‌ಮ್ಯಾನ್ ತಿಳಿಸಿದ್ದಾರೆ.


ಇದನ್ನೂ ಓದಿ: ಅಬ್ಬಬ್ಬಾ! ಈತನದ್ದು ಸಾಮಾನ್ಯ ಸಾಹಸವಲ್ಲ, ಗುಂಡಿಗೆ ಗಟ್ಟಿ ಇದ್ದೋರು​ ಮಾತ್ರ ಈ ವಿಡಿಯೋ ನೋಡಿ


ಪತ್ತೆಹಚ್ಚಿದ ಸ್ಥಳದ ಬಗ್ಗೆ ಹಾಗೂ ಪರಿಕರಗಳ ಬಗ್ಗೆ ತಿಳಿಸುತ್ತಾ ಪಿಟ್‌ಮ್ಯಾನ್ ಈ ಸ್ಥಳ ರೆಸ್ಟೋರೆಂಟ್ ಮಾದರಿಯಲ್ಲಿದ್ದ ಯಾವುದಾದರೂ ಪುರಾತನ ಸ್ಥಳವಾಗಿರಬಹುದು ಎಂಬುದಾಗಿ ನಮಗೆ ತೋರುತ್ತಿದ್ದು ಮನೆಯಲ್ಲಿನ ಅಡುಗೆ ಕೋಣೆಯಂತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ. ಜನರು ಹೆಚ್ಚಾಗಿ ಕುಳಿತು ಆಹಾರ ಸೇವಿಸುತ್ತಿದ್ದ ಹೋಟೆಲ್‌ನಂತಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.


ಬಿಯರ್ ಪಾಕ ವಿಧಾನ ಪತ್ತೆ


ಸುಮೇರಿಯನ್ನರು ಮದ್ಯಪ್ರಿಯರು ಹಾಗೂ ನೀರಿಗಿಂತ ಹೆಚ್ಚಾಗಿ ಅವರು ಮದ್ಯವನ್ನೇ ಸೇವಿಸುತ್ತಿದ್ದರು ಎಂದು ತಿಳಿಸಿರುವ ಪಿಟ್‌ಮ್ಯಾನ್, ರೆಸ್ಟೋರೆಂಟ್ ಆಗಿ ಈ ಸ್ಥಳವನ್ನು ಸುಮೇರಿಯನ್ನರು ಬಳಸುತ್ತಿದ್ದುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಉತ್ಖನನ ಮಾಡಿದ ದೇವಾಲಯದ ಬಳಿ ಬಿಯರ್ ಪಾಕ ವಿಧಾನವು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.


ವರದಿಗಳ ಪ್ರಕಾರ, ಪುರಾತತ್ತ್ವಜ್ಞರು ಪ್ರಾಚೀನ ಬಿಯರ್ ಪಾಕವಿಧಾನವನ್ನು ಪತ್ತೆಹಚ್ಚಿದ್ದಾರೆ. ಪೆನ್ ಮ್ಯೂಸಿಯಂ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಬಾಗ್ದಾದ್‌ನಲ್ಲಿರುವ ಸ್ಟೇಟ್ ಬೋರ್ಡ್ ಆಫ್ ಆಂಟಿಕ್ವಿಟೀಸ್ ಮತ್ತು ಹೆರಿಟೇಜ್ ನಡುವಿನ ಜಂಟಿ ಯೋಜನೆಯ ಭಾಗವಾಗಿ 2019 ರಲ್ಲಿ ಸ್ಥಳದಲ್ಲಿ ಉತ್ಖನನವನ್ನು ಪುನರಾರಂಭಿಸಲಾಗಿದೆ ಎಂಬುದು ವರದಿಯಾಗಿದೆ.


ಉತ್ಖನನಕ್ಕೆ ಆಧುನಿಕ ತಂತ್ರಗಳ ಬಳಕೆ


ಉತ್ಖನನದ ಮಾಹಿತಿಗಳನ್ನು ಸುರಕ್ಷಿತಗೊಳಿಸಲು ತಂಡವು ಆಧುನಿಕ ತಂತ್ರಗಳಾದ ಡ್ರೋನ್ ಹಾಗೂ ಅತ್ಯಾಧುನಿಕ ಶೈಲಿಯ ಫೋಟೋಗ್ರಾಫ್ ಟೆಕ್ನಿಕ್‌ಗಳನ್ನು ಬಳಸಿಕೊಂಡಿವೆ ಎಂದು ವರದಿಯಾಗಿದೆ.
ಈ ಟೆಕ್ನಿಕ್‌ಗಳಿಂದ ಆ ಪ್ರದೇಶದಲ್ಲಿ ವಾಸವಾಗಿದ್ದ ಸುಮೇರಿಯನ್ ನಾಗರಿಕತೆ ಹಾಗೂ ಅವರ ಜೀವನಶೈಲಿಯ ಬಗ್ಗೆ ಇನ್ನಷ್ಟು ಅರಿತುಕೊಳ್ಳಲಾಗಿದೆ ಎಂದು ಪುರಾತತ್ವ ತಂಡ ಸ್ಪಷ್ಟಪಡಿಸಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು