Yoga For Migraine : ಈ ಯೋಗಾಸನಗಳನ್ನು ದಿನಾ ಮಾಡಿದ್ರೆ ತಲೆನೋವು ಹತ್ತಿರಕ್ಕೂ ಸುಳಿಯಲ್ವಂತೆ!

Yoga for Migraine : ತಲೆನೋವು ಎನ್ನುವುದು ನಮ್ಮ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರುವುದು. ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ ಮತ್ತು ಕೆಲಸ ಮಾಡಲು ಆಗದು. ಯೋಗಾಭ್ಯಾಸ ಮಾಡಿದರೆ ಅದರಿಂದ ಒತ್ತಡ ದೂರ ಮಾಡಬಹುದು

ಯೋಗಾ

ಯೋಗಾ

  • Share this:
    ಯೋಗವು(Yoga) ಅಂತರರಾಷ್ಟ್ರೀಯ(Inter National) ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಭಾರತೀಯ ಮೂಲದ ವ್ಯಾಯಾಮ(exercise) ಮತ್ತು ಆರೋಗ್ಯ(Health) ನಿರ್ವಹಣೆಗೆ ಬಹಳ ಪರಿಣಾಮಕಾರಿಯಾದ ಚಟುವಟಿಕೆಯಾಗಿದೆ. ವೇದ(Veda) ಸಾಹಿತ್ಯದಲ್ಲಿ ಯೋಗದ  ಉಲ್ಲೇಖವಿದೆ ಮತ್ತು ಶತಮಾನಗಳಿಂದ(Century) ಸಂತರು ಮತ್ತು ಆಧ್ಯಾತ್ಮಿಕ ಗುರುಗಳು ಯೋಗಾಭ್ಯಾಸ ಮಾಡುತ್ತಿದ್ದ ಇತಿಹಾಸವಿದೆ(History). ಪಾಶ್ಚಿಮಾತ್ಯ ಜಗತ್ತಿಗೆ ಯೋಗ ಒಂದು ವರದಾನ. ಹೀಗಾಗಿ ವಿದೇಶಿಗರು ಕೂಡ ಭಾರತೀಯ ಯೋಗ ಪದ್ಧತಿಗೆ ಮಾರುಹೋಗುತ್ತಿದ್ದಾರೆ. ನಮ್ಮ ದೈನಂದಿನ ಜೀವನದಲ್ಲಿ ಕಾಡುವ ಅನೇಕ ಆರೋಗ್ಯ ಸಮಸ್ಯೆಗಳಿಗೆ ಯೋಗ ಒಂದು ವರದಾನವಾಗಿದೆ.
    ಪ್ರತಿನಿತ್ಯ ಯೋಗ ಮಾಡುವುದರಿಂದ ನಮ್ಮ ದೇಹದಲ್ಲಿನ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಒಂದೊಂದು ಯೋಗವು ನಮ್ಮ ದೇಹದಲ್ಲಿನ ಸಮಸ್ಯೆಗಳ ಮೇಲೆ ಪರಿಣಾಮಕಾರಿಯಾಗಿವೆ. ಕೆಲವರಿಗೆ ಬೆಳಗ್ಗೆ ಎದ್ದ ಕೂಡಲೇ ಕಾಡುವ ತಲೆನೋವಿಗೆ ಬೇರೆಲ್ಲ ಔಷಧಿಗಳಿ ಗಿಂತ ಯೋಗವೇ ಮದ್ದು.

    ಕಾಡುವ ತಲೆನೋವಿಗೆ ಮದ್ದು ಯೋಗ

    ತಲೆನೋವು ಎನ್ನುವುದು ನಮ್ಮ ದೈನಂದಿನ ಚಟುವಟಿಕೆ ಮೇಲೆ ಪರಿಣಾಮ ಬೀರುವುದು. ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ ಮತ್ತು ಕೆಲಸ ಮಾಡಲು ಆಗದು. ಯೋಗಾಭ್ಯಾಸ ಮಾಡಿದರೆ ಅದರಿಂದ ಒತ್ತಡ ದೂರ ಮಾಡಬಹುದು. ಕೆಲವೊಂದು ಯೋಗಾಸನದಿಂದ ದೇಹದ ಕೆಲವೊಂದು ಭಾಗಗಳಾಗಿರುವ ಕುತ್ತಿಗೆ, ಭುಜ ಮತ್ತು ಬೆನ್ನು ತೆರೆದುಕೊಳ್ಳುವುದು ಮತ್ತು ಇದರಿಂದ ತಲೆಗೆ ಸರಿಯಾಗಿ ರಕ್ತವು ಸರಬರಾಜು ಆಗುವುದು. ಈ ವೇಳೆ ಒತ್ತಡವು ಕಡಿಮೆಯಾಗುವುದು. ಈ ಆಸನಗಳನ್ನು ಮಾಡಿಕೊಂಡು ತಲೆನೋವು ನಿವಾರಿಸಬಹುದು.

    ಇದನ್ನೂ ಓದಿ :ಈ ಸಿಂಪಲ್​ ಯೋಗಾಸಾನಗಳನ್ನು ಟ್ರೈ ಮಾಡಿ.. ಖಿನ್ನತೆಯಿಂದ ದೂರ ಇರಿ!

    1) ಅಧೋಮುಖ ಶ್ವಾನಾಸನಾ(Downward-facing dog ): ಅಧೋಮುಖ ಶ್ವಾನಾಸನವನ್ನ ಪ್ರತಿನಿತ್ಯ ಮಾಡುವುದರಿಂದ ತೂಕ ಇಳಿಕೆ ರಕ್ತದೊತ್ತಡ ನಿವಾರಣೆ ಮಾಡಿಕೊಳ್ಳಬಹುದು.. ಇದರ ಜೊತೆಗೆ ಪ್ರತಿನಿತ್ಯ ಕಾಡುವ ತಲೆನೋವಿಗೆ ಅಧೋಮುಖ ಶ್ವಾನಾಸನ ಉತ್ತಮ ಪರಿಹಾರ.ಅಧೋಮುಖ ಶ್ವಾನಾಸನಎಂದರೆ ನಾಯಿ ಮುಂದೆ ಬಾಗಿದಾಗ ಹೇಗೆ ಕಾಣಿಸುತ್ತದೆಯೋ ಹಾಗೆ ಇರುವುದು. ಈ ಆಸನದಿಂದ ಕುತ್ತಿಗೆ ಮತ್ತು ಬೆನ್ನು ಮೂಳೆಯ ಮೇಲೆ ಬೀರುವ ಒತ್ತಡ ಆಸನ ಮಾಡುವುದರಿಂದ ಕಡಿಮೆಯಾಗುವುದು.

    2)ಪದೋತ್ತನಾಸನ(wide-legged forward bend pose) : ಪದೋತ್ತನಾಸನ ಅಥವಾ ಅಗಲವಾದ ಕಾಲನ್ನು ಚಾಚಿ, ತಲೆಯನ್ನು ಮುಂದಕ್ಕೆ ಮಾಡುವ ಯೋಗಾ ಪದೋತ್ತನಾಸನ. ಈ ಯೋಗದಿಂದ ನಮ್ಮ ಆಕ್ಸಿಜನ್ ಸರಬರಾಜು ಸರಾಗವಾಗಿ ನಡೆದು ಮೆದುಳು ರಿಫ್ರೆಶ್ ಆಗುತ್ತದೆ.. ನಿಂದಾ ಸುಲಭವಾಗಿ ಕಾಡುವ ಮೈಗ್ರೇನ್‌ ದೂರ ಮಾಡಿಕೊಳ್ಳಬಹುದು. ಕುತ್ತಿಗೆ ನೋವಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಯೋಗಾಸನ ಮದ್ದು

    3) ಬಾಲಾಸನ(child's pose) : ಬಾಲಾಸನ ಒಂದು ಮೃದುವಾದ ವಿಶ್ರಾಂತಿಯ ಭಂಗಿ ಯಾಗಿರುವುದರಿಂದ.. ಬಾಲಾಸನ ಮಾಡುವುದರಿಂದ ನಮ್ಮ ದೇಹದಲ್ಲಿ ಒತ್ತಡ ಕಡಿಮೆಯಾಗುತ್ತದೆ.

    ಇದನ್ನೂ ಓದಿ :60ರ ಇಳಿ ವಯಸ್ಸಿನಲ್ಲೂ ಮಾಡಬಹುದು ಈ 4 ವ್ಯಾಯಾಮ

    4)ಜಾನುಶೀರ್ಶಾಸನ (Head to knee pose) : ಜಾನು ಎಂದರೆ ಮೊಣಕಾಲು ಎಂದರ್ಥ. ಶೀರ್ಷ ಎಂದರೆ ತಲೆ, ತಲೆಯನ್ನು ಬಗ್ಗಿಸಿ ಮೊಣಕಾಲಿನ ಮೇಲೆ ಇಡುವುದರಿಂದ ಈ ಆಸನಕ್ಕೆ ಜಾನು ಶೀರ್ಷಾಸನ ಎಂದು ಹೆಸರು ಬಂದಿದೆ.. ಅಲ್ಲದೆ
    ಇದನ್ನು ರಾಗಿ ಬೀಸುವ ಭಂಗಿಯ ಆಸನ ಎಂದೂ ಕರೆಯಲಾಗುತ್ತದೆ.ಈ ಆಸನವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ.

    5)ಹಸ್ತಪಾದಾಸನ (Standing forward bend pose): ಮುಖವನ್ನು ಮೊಣಕಾಲಿಗೆ ಮುಟ್ಟಿಸಲು ಪ್ರಯತ್ನಿಸುವ ಆಸನವೆ ಹಸ್ತಪಾದಾಸನ.. ಸೂರ್ಯನಮಸ್ಕಾರಗಳಲ್ಲಿ ಒಂದಾಗಿರುವ ಹಸ್ತಪಾದಾಸನ ಪ್ರತಿನಿತ್ಯ ಉಸಿರು ಕಟ್ಟಿಸುವಂತೆ ಮಾಡುತ್ತಿರುವ ಮೈಗ್ರೇನ್ ನಿವಾರಣೆಗೆ ಸಹಕಾರಿಯಾಗಿರುವ ಯೋಗ
    Published by:ranjumbkgowda1 ranjumbkgowda1
    First published: