ಬೆಂಗಳೂರಿನ ಈ 5 ವರ್ಷದ ಬಾಲಕಿ ಕೋಡಿಂಗ್​ನಲ್ಲಿ ವಿಶ್ವದಾಖಲೆ ಬರೆದಿದ್ದಾಳೆ!

World Record: ದೆಹಲಿ ಮೂಲದ ಇಂಟರ್‌ನ್ಯಾಷನಲ್‌ ಬುಕ್ ಆಫ್ ರೆಕಾರ್ಡ್ಸ್ ಎಂಬ ಸಂಸ್ಥೆಯು ಸುನ್ವಿಶಾಳ ಈ ದಾಖಲೆಯನ್ನು ಗುರುತಿಸಿ ಮಾನ್ಯ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಬೆಂಗಳೂರಿನ ಎಸ್.ಜಿ ಪಾಳ್ಯದಲ್ಲಿರುವ ಕ್ರೈಸ್ಟ್ ಕೆಜಿ ಶಾಲೆಯಲ್ಲಿ(Christ KG School)  ವ್ಯಾಸಂಗ ಮಾಡುತ್ತಿರುವ 5 ವರ್ಷದ ಸುನ್ವಿಶಾ ಸಿ ನಾಯರ್, (Sunvisha Si Nair) ಇದೀಗ ಕೋಡಿಂಗ್‌ನಲ್ಲಿ ವಿಶ್ವ ದಾಖಲೆ (World record) ಬರೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ. ಈ ದಾಖಲೆಯ ಮೂಲಕ ಸುನ್ವಿಶಾ ಈಗ, "1 ರಿಂದ 15 ರವರೆಗಿನ ಡೆಸಿಮಲ್ ಹಾಗೂ ಅದಕ್ಕೆ ಪೂರಕವಾದ ಆಕ್ಟಲ್ (Octal), ಹೆಕ್ಸಾಡೆಸಿಮಲ್ (hexadecimal) ಹಾಗೂ ಬೈನರಿ (Binary numbers) ಸಂಖ್ಯೆಗಳ ಕೋಡಿಂಗ್ ಮಾಡಿದ ಜಗತ್ತಿನ ಅತಿ ಕಿರಿಯ ವ್ಯಕ್ತಿ" (youngest person ) ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

4 ವರ್ಷ 11 ತಿಂಗಳ ಸುನ್ವಿಶಾ
ಈ ದಾಖಲೆ ನಿರ್ಮಿಸುವ ಹೊತ್ತಿನಲ್ಲಿ 4 ವರ್ಷ 11 ತಿಂಗಳು, 13 ದಿನದವಳಾಗಿದ್ದ ಸುನ್ವಿಶಾ, ಸಾಮಾನ್ಯವಾಗಿ ನಿತ್ಯ ಬಳಸುವ 1-15 ಸಂಖ್ಯೆಗಳಿಗೆ ಸಮಾನವಾದ ಅವುಗಳ ಬೈನರಿ, ಆಕ್ಟಲ್ ಮತ್ತು ಹೆಕ್ಸಾಡೆಸಿಮಲ್‌ಗಳನ್ನು ಬರೆದಿದ್ದಾಳೆ. ಸಾಮಾನ್ಯ ಸಂಖ್ಯಾ ಪದ್ಧತಿಯು 0-9ವರೆಗೆ 10 ಸಂಖ್ಯೆಗಳನ್ನು ಬಳಸಿದರೆ.

ಇದನ್ನೂ ಓದಿ: ಏಳನೇ ಬಾರಿಗೆ ವಿಶ್ಚದಾಖಲೆ ಬರೆದ ಬಾಲಕಿ; ಗೋಲ್ಡನ್ ಗರ್ಲ್ ಕಿರೀಟ ಮುಡಿಗೇರಿಸಿ ಸಾಧನೆ!

ಹೆಕ್ಸಾಡೆಸಿಮಲ್ ಪದ್ಧತಿಯು 16 ಸಂಖ್ಯೆಗಳನ್ನು ಅಂದರೆ 0-9 ಮತ್ತು ಅವುಗಳಿಗೆ ಪೂರಕವಾಗಿ A,C,B,D,E,Fಗಳನ್ನು ಬಳಸುತ್ತದೆ. ಆಕ್ಟಲ್ ಪದ್ಧತಿಯು ಎಂಟು ಸಂಖ್ಯೆಗಳನ್ನು ಹೊಂದಿರುತ್ತದೆ (0-7) ಹಾಗೂ ಬೈನರಿ ಪದ್ಧತಿಯು 0 ಮತ್ತು 1 ಅನ್ನು ಹೊಂದಿರುತ್ತದೆ.

ಇಂಟರ್‌ನ್ಯಾಷನಲ್‌ ಬುಕ್ ಆಫ್ ರೆಕಾರ್ಡ್ಸ್ ಮಾನ್ಯ
ದೆಹಲಿ ಮೂಲದ ಇಂಟರ್‌ನ್ಯಾಷನಲ್‌ ಬುಕ್ ಆಫ್ ರೆಕಾರ್ಡ್ಸ್ (ಎಂಬ ಸಂಸ್ಥೆಯು ಸುನ್ವಿಶಾಳ ಈ ದಾಖಲೆಯನ್ನು ಗುರುತಿಸಿ ಮಾನ್ಯ ಮಾಡಿದೆ. ಇದಲ್ಲದೆ, ಓದಿನಲ್ಲೂ ಚುರುಕಾಗಿರುವ ಸುನ್ವಿಶಾ ಈಗಾಗಲೇ ಕಲಾಂ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ "ರೇಖಾ ನಕ್ಷೆಯ ಮೇಲೆ ಅತಿ ವೇಗವಾಗಿ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಅವುಗಳ ರಾಜಧಾನಿಗಳನ್ನು ಗುರುತಿಸುವ ಹಾಗೂ ಉಚ್ಛರಿಸುವ" ವ್ಯಕ್ತಿಯಾಗಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿರುವುದು ಅವಳ ಪ್ರತಿಭೆಗಿರುವ ಇನ್ನೊಂದು ಕೈಗನ್ನಡಿ.

ಮಗಳಿಗೆ ಪ್ರೋತ್ಸಾಹ
ಡಿಜಿಟಲ್ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಎಂ.ಟೆಕ್ ಪದವಿಧರೆಯಾಗಿರುವ ಸುನ್ವಿಶಾಳ ತಾಯಿಯಾದ ಸುಪರ್ಣಾ ಸಿ.ಪಿ ಅವರಿಗೆ ತಮ್ಮ ಮಗಳ ಮೇಲೆ ಎಲ್ಲಿಲ್ಲದ ಗೌರವ ಹಾಗೂ ಹೆಮ್ಮೆ. ಅವರೇ ಹೇಳುವಂತೆ, ಸುನ್ವಿಶಾ ಚಿಕ್ಕವಳಿದ್ದಾಗಲೇ ಅವಳಿಗೆ ಅತಿ ವೇಗವಗಿ ಗ್ರಹಿಸುವ, ವಿಷಯ ತಿಳಿದುಕೊಳ್ಳುವ ಸಾಮರ್ಥ್ಯವಿದೆ ಎಂದು ಗೊತ್ತಾಗಿತ್ತು. ಹಾಗಾಗಿ ಅದನ್ನು ಮಗಳಲ್ಲಿ ಮತ್ತಷ್ಟು ಪ್ರೋತ್ಸಾಹಿಸಿದರಂತೆ.

ಕ್ರೈಸ್ಟ್ ಶಾಲೆಗೆ ಹೆಮ್ಮೆ
ಇದೀಗ, ಸುನ್ವಿಶಾ ತನ್ನ ಚಿಕ್ಕ ವಯಸ್ಸಿನಲ್ಲೇ ಕೋಡಿಂಗ್‌ಗೆ ಸಂಬಂಧಿಸಿದಂತೆ ವಿಶ್ವ ದಾಖಲೆ ನಿರ್ಮಿಸಿದ್ದು ಅವಳ ತಾಯಿ ಮಾತ್ರವಲ್ಲದೆ ಇಡೀ ಕ್ರೈಸ್ಟ್ ಶಾಲೆಯ ಸಿಬ್ಬಂದಿ ವರ್ಗ ಹೆಮ್ಮೆ ಪಡುವಂತೆ ಆಗಿದೆ. ನಮಗೆ ಅವಳಲ್ಲಿ ವೇಗವಾಗಿ ವಸ್ತು ಗ್ರಹಿಸುವ ಹಾಗೂ ವಿಷಯ ತಿಳಿದುಕೊಳ್ಳುವ ಸಾಮರ್ಥ್ಯ ಇರುವುದು ಗೊತ್ತಾಗಿತ್ತು. ಹಾಗಾಗಿ ಅದನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಅವರು ಅವಳ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವಂತಹ ಅನೇಕ ಪಜಲ್, ಬಿಲ್ಡಿಂಗ್ ಬ್ಲಾಕ್ಸ್ ರೀತಿಯ ಕ್ರಿಯೆಗಳನ್ನು ಕೊಡುತ್ತಿದ್ದೆವು.

ಇದನ್ನೂ ಓದಿ: ವರ್ಲ್ಡ್ ರೆಕಾರ್ಡ್​​​ ಸಾಧನೆ ಮಾಡಿದ 6ರ ಪೋರಿ.. 93 ದೇಶಗಳ ವಿಮಾನಗಳ ಬಗ್ಗೆ ಪಟಪಟ ಹೇಳುವ ಜಾಣೆ

ಇದೀಗ ಅವಳು ಡೆಸಿಮಲ್ ಸಂಖ್ಯೆಯಿಂದ ಹಿಡಿದು ಅವುಗಳ ಅಕ್ಟಾಗೋನಲ್, ಹೆಕ್ಸಾಗೋನಲ್ ಹಾಗೂ ಬೈನರಿ ಸಂಖ್ಯೆಗಳ ಕೋಡಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ" ಎಂದು ಸಂತಸ ವ್ಯಕ್ತಪಡಿಸುತ್ತ ಕ್ರೈಸ್ಟ್ ವಿಶ್ವವಿದ್ಯಾಲಯದ ಲೈಫ್ ಸೈನ್ಸಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಕೃಷ್ಣಕುಮಾರ್ ವಿ ಹೇಳಿದ್ದಾರೆ.
Published by:vanithasanjevani vanithasanjevani
First published: