ಸ್ನಾನ ಮಾಡಲ್ಲ, ಜಗಳನೇ ಆಡಲ್ಲ.. ಭಾರತದಲ್ಲಿ ವಿಚ್ಚೇದನಕ್ಕಾಗಿ ನೀಡಿರುವ ಚಿತ್ರ ವಿಚಿತ್ರ ಕಾರಣಗಳು ಇಲ್ಲಿವೆ ನೋಡಿ.. 

silly reasons for divorce in india: ನಮ್ಮ ದೇಶದಲ್ಲಿ ಇಂತಹ ಕಾರಣಗಳನ್ನು ಮುಂದಿಟ್ಟುಕೊಂಡು ಬಹಳಷ್ಟು ಮಹಿಳೆಯರು ಮತ್ತು ಪುರುಷರು ವಿಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಂತಹ ಪ್ರಕರಣಗಳ ಪೈಕಿ 5 ಪ್ರಕರಣಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮದುವೆಗಳು ಸ್ವರ್ಗದಲ್ಲಿ ತೀರ್ಮಾನ ಆಗಿರುತ್ತವೆ ಎನ್ನುತ್ತಾರೆ. ಇರಬಹುದು, ಆದರೆ ಅದು ಒಳ್ಳೆಯ ರೀತಿಯಲ್ಲಿ ಮುಂದುವರೆಯ ಬೇಕೇ ಬೇಡವೇ ಎಂಬುದದನ್ನು ತೀರ್ಮಾನಿಸುವುದು ಈ ಭೂಮಿಯ ಮೇಲಿನ ಜೋಡಿಗಳಿಗೆ ಬಿಟ್ಟದ್ದು..! ಪ್ರತಿಯೊಬ್ಬ ದಂಪತಿ ಸುಖವಾಗಿ ಬಾಳಲಿ ಎಂದು ಎಲ್ಲರೂ ಬಯಸಿದರೂ, ಗಂಭೀರ ಕಾರಣಗಳ ಕಥೆ ಹಾಗಿರಲಿ, ಚಿತ್ರ ವಿಚಿತ್ರ ಕಾರಣಗಳಿಗೂ ಕೂಡ ವಿಚ್ಚೇದನವಾಗುತ್ತದೆ.ನನ್ನ ಗಂಡನ ತಲೆ ಬೋಳು, ನನ್ನ ಹೆಂಡತಿ ಸ್ನಾನ ಮಾಡುವುದಿಲ್ಲ, ನನ್ನ ಗಂಡ ಅತಿಯಾಗಿ ಪ್ರೀತಿಸುತ್ತಾನೆ. . ಇವೆಲ್ಲಾ ಸಣ್ಣಪುಟ್ಟ ದೂರುಗಳು ಎಂದು ಕೊಂಡಿರಾ? ಖಂಡಿತಾ ಅಲ್ಲ. .ನಮ್ಮ ದೇಶದಲ್ಲಿ ಇಂತಹ ಕಾರಣಗಳನ್ನು ಮುಂದಿಟ್ಟುಕೊಂಡು ಬಹಳಷ್ಟು ಮಹಿಳೆಯರು ಮತ್ತು ಪುರುಷರು ವಿಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಂತಹ ಪ್ರಕರಣಗಳ ಪೈಕಿ 5 ಪ್ರಕರಣಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

  ನನ್ನ ಪತ್ನಿ ನಿತ್ಯವೂ ಸ್ನಾನ ಮಾಡುವುದಿಲ್ಲ
  ಅಲಿಘಡ್‍ನ ವ್ಯಕ್ತಿಯೊಬ್ಬ, ತನ್ನ ಹೆಂಡತಿ ನಿತ್ಯವೂ ಸ್ನಾನ ಮಾಡುವುದಿಲ್ಲ ಎಂಬ ಕಾರಣ ನೀಡಿ ವಿವಾಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದನು. ಆತನ ಪತ್ನಿ ತನ್ನ ಮದುವೆ ಉಳಿಸಿಕೊಳ್ಳಲು ಮಹಿಳಾ ರಕ್ಷಣಾ ಸೆಲ್‍ನಲ್ಲಿ ದೂರು ದಾಖಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂತು. ನಿತ್ಯವೂ ಸ್ನಾನ ಮಾಡದಿರುವ ಸಂಗತಿ, ಮಾತಿಗೆ ಚಕಮಕಿಗೆ ಕಾರಣವಾಗಿತ್ತು, ಅದರಿಂದ ಬೇಸತ್ತ ಗಂಡ ಹೆಂಡತಿಯಿಂದ ದೂರ ಆಗುವ ನಿರ್ಧಾರಕ್ಕೆ ಬಂದಿದ್ದ. ಆ ದಂಪತಿಗೆ ಒಂದು ಮಗು ಕೂಡ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

  “ನಿತ್ಯವೂ ಸ್ನಾನ ಮಾಡುತ್ತಿಲ್ಲ ಎಂಬ ಕಾರಣ ನೀಡಿ, ತನ್ನ ಗಂಡ ತನಗೆ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ನಮಗೆ ಮಹಿಳೆಯೊಬ್ಬರು ದೂರು ನೀಡಿದ್ದರು. ಅವರ ಮದುವೆ ಉಳಿಸಲು, ಆ ದಂಪತಿ ಮತ್ತು ಅವರ ಹೆತ್ತವರಿಗೆ ಕೌನ್ಸೆಲಿಂಗ್ ಮಾಡುತ್ತಿದ್ದೇವೆ” ಎಂದು ಮಹಿಳಾ ರಕ್ಷಣಾ ಸೆಲ್ ಜೊತೆ ಕೆಲಸ ಮಾಡುವ ಕೌನ್ಸೆಲರ್ ಒಬ್ಬರು ತಿಳಿಸಿದ್ದಾರೆ.

  ಮದುವೆಯ ದಿನ ಮಡದಿ ಮುಟ್ಟಿನ ಬಗ್ಗೆ ತಿಳಿಸಿರಲಿಲ್ಲ
  21ನೇ ಶತಮಾನದಲ್ಲೂ ಕೂಡ ಮುಟ್ಟನ್ನು ಅಪವಿತ್ರ ಎಂದೇ ಭಾವಿಸಲಾಗುತ್ತದೆ. ಅದನ್ನು ಜನರು ಯಾವ ಮಟ್ಟಿಗೆ ನಂಬುತ್ತಾರೆ ಎಂಬ ಕುರಿತ ಪ್ರಕರಣವೊಂದು ಇಲ್ಲಿದೆ. ತನ್ನ ಪತ್ನಿ ಮದುವೆಯ ದಿನ ಮುಟ್ಟಾಗಿದ್ದಳು ಎಂಬುದನ್ನು ಕೇಳಿ ತಾನು ಮತ್ತು ತನ್ನ ತಾಯಿ ಶಾಕ್ ಆಗಿದ್ದಾಗಿ ವಡೋದರದ ವ್ಯಕ್ತಿಯೊಬ್ಬ ಹೇಳಿದ್ದಾರೆ. ಅದರಿಂದಾಗಿ ತಮ್ಮ ‘ನಂಬಿಕೆಗೆ ಧಕ್ಕೆ ‘ ಆಗಿದೆ ಎಂದು ಆತ ಹೇಳಿದ್ದಾರೆ. ಅವರ ನಡುವಿನ ಭಿನ್ನಾಭಿಪ್ರಾಯಕ್ಕೆ ಬೇರೆ ಕಾರಣಗಳನ್ನು ನೀಡಲಾಗಿದ್ದರೂ, ಶಿಕ್ಷಕಿಯೊಬ್ಬಳನ್ನು ಮದುವೆ ಆಗಿರುವ ವಿದ್ಯಾವಂತ ವ್ಯಕ್ತಿಯೊಬ್ಬ ನೀಡಿರುವ ಈ ಕಾರಣ ಮಾತ್ರ ಖಂಡಿತಾ ಚಿಂತಿಸುವಂತದ್ದು.

  ಗಂಡ ನನ್ನನ್ನು ಅತಿಯಾಗಿ ಪ್ರೀತಿಸುತ್ತಾರೆ, ನಾವು ಜಗಳವಾಡುವುದೇ ಇಲ್ಲ
  ಅತಿಯಾದ ಪ್ರೀತಿ ಎಂಬುವುದು ಇದೆಯೇ? ಹೌದೆನಿಸುತ್ತದೆ! ಏಕೆಂದರೆ ಮಾಧ್ಯಮ ವರದಿ ಒಂದರ ಪ್ರಕಾರ, ಉತ್ತರ ಪ್ರದೇಶದ ಮಹಿಳೆಯೊಬ್ಬರಿಗೆ ಆಕೆಯ ಗಂಡ ತೋರಿಸುತ್ತಿರುವ ಅತಿಯಾದ ಪ್ರೀತಿಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲವಂತೆ! ಕಳೆದ ವರ್ಷ ಈ ಪ್ರಕರಣ ಬೆಳಕಿಗೆ ಬಂದಿದ್ದು, ಮದುವೆಯಾಗಿ 18 ತಿಂಗಳಾದರೂ ಒಮ್ಮೆಯೂ ಜಗಳವಾಡದ, “ಅತಿಯಾಗಿ ಪ್ರೀತಿಸುವ” ಪತಿಯಿಂದ “ರೋಸಿ ಹೋಗಿದ್ದೇನೆ” ಎಂದು ಹೇಳಿದ್ದಾಳೆ..! ಆಕೆಯ ಪತಿ ಮನೆಯ ಕೆಲಸಗಳನ್ನು ಕೂಡ ಹಂಚಿಕೊಳ್ಳುತ್ತಾನಂತೆ. “ನಾನು ಯಾವಾಗ ತಪ್ಪು ಮಾಡಿದರೂ ಆತ ಅದನ್ನು ಕ್ಷಮಿಸುತ್ತಾನೆ. ನನಗೆ ಆತನೊಡನೆ ವಾದಿಸುವ ಆಸೆ” ಎಂದಿದ್ದಾರೆ ಆಕೆ. ಎಲ್ಲರಂತೆ, ಸಂಬಲ್‍ನ ಷರಿಯಾ ನ್ಯಾಯಾಲಯ ಕೂಡ ಆ ಮಹಿಳೆಯ ದೂರನ್ನು ನೋಡಿ ಗೊಂದಲಕ್ಕೆ ಒಳಗಾಗಿದೆ!

  ಇದನ್ನೂ ಓದಿ: Rashmika Mandanna Trolls: ಒಳಉಡುಪು ಬಳಿಕ ‘ಪುಷ್ಪಾ’ ಲುಕ್​​​​ಗೆ ಟ್ರೋಲ್ ಆದ ನಟಿ ರಶ್ಮಿಕಾ..!

  ಪಬ್ಜಿ ಪಾರ್ಟ್‌ನರ್‌ ಜೊತೆಗಿದ್ದು ಆಡುವ ಆಸೆ
  ಆನ್‍ಲೈನ್ ಗೇಮ್‍ಗಳ ಗೀಳಿನ ಬಗ್ಗೆ ಹೆಚ್ಚಿಗೆ ಹೇಳಬೇಕೆಂದಿಲ್ಲ, ಎಲ್ಲರಿಗೂ ಸ್ಪಷ್ಟವಾಗಿ ಕಾಣಿಸುತ್ತಿರುವ ಸತ್ಯ ಅದು. ಆದರೆ ಪಬ್ಜಿ ಆಟದ ಕಾರಣದಿಂದ 19 ವರ್ಷದ ಮಹಿಳೆ ಒಬ್ಬಳು ತನ್ನ ಗಂಡನಿಗೆ ವಿಚ್ಚೇದನ ಕೊಡ ಹೊರಟಿದ್ದಾಳೆ ಎಂದರೆ ನಂಬುತ್ತೀರಾ? ತನಗೆ ಇಷ್ಟವಾಗುವಷ್ಟು ಹೊತ್ತು ಗಂಡ ಪಬ್ಜಿ ಆಡಲು ಬಿಡುತ್ತಿಲ್ಲ ಎಂಬ ಕಾರಣಕ್ಕಾಗಿ ಆತನಿಂದ ದೂರ ಆಗುವ ನಿರ್ಧಾರಕ್ಕೆ ಬರುವಾಗ, ಆಕೆಯ ಮಗುವಿಗೆ ಒಂದು ವರ್ಷ ವಯಸ್ಸು. ಆಕೆಯ ಹೆತ್ತವರಿಗೂ ಮಗಳ ಈ ಗೀಳು ಇಷ್ಟವಿಲ್ಲ. ಆಕೆ ತನಗೆ ವಿಚ್ಚೇದನ ಪಡೆಯಲು ಸಹಾಯ ಮಾಡಿರೆಂದು 181 ಅಭಯಮ್ ಮಹಿಳಾ ಹೆಲ್ಪ್‌ಲೈನ್‍ಗೆ ಕರೆ ಮಾಡಿದಾಗ ಈ ವಿಷಯ ಬೆಳಕಿಗೆ ಬಂತು. ಆಕೆ ತನ್ನ ಗಂಡನ ಜೊತೆ ಇರುವುದಿಲ್ಲ, ತಾಯಿ ಮನೆ ಹೋಗುವುದಿಲ್ಲ ಎಂದು, ತನ್ನ ಸ್ನೇಹಿತರೊಬ್ಬರನ್ನು ತಲುಪಲು ಸಹಾಯ ಮಾಡುವಂತೆ ಕೇಳಿಕೊಂಡಳು. ನಂತರ ಕೌನ್ಸೆಲಿಂಗ್ ಸಮಯದಲ್ಲಿ ಆ ಸ್ನೇಹಿತರು ಬೇರೆ ಯಾರೂ ಅಲ್ಲ, ಆಕೆಯ ಪಬ್ಜಿ ಆಟದ ಪಾರ್ಟ್‌ನರ್‌ ಎಂದು ತಿಳಿದು ಬಂತು.

  ಗಂಡನಿಗೆ ಬೋಳು ತಲೆ ಇರುವುದು, ಮುಜುಗರ ಹುಟ್ಟಿಸುತ್ತದೆ
  ಬಾಲಿವುಡ್ ಸಿನಿಮಾ ಬಾಲಾ ದ ಕಥೆ ನಿಜಕ್ಕೂ ಉತ್ತರ ಪ್ರದೇಶದಲ್ಲಿ ನಡೆದಂತಿದೆ. ಹೌದು, ಅಲ್ಲಿನ ಮಹಿಳೆಯೊಬ್ಬಳು ತನ್ನ ಗಂಡ ಬೋಳು ತಲೆಯ ವಿಷಯವನ್ನು ಮುಚ್ಚಿಟ್ಟ ಎಂದು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಗಂಡ ಮದುವೆಯ ಸಂದರ್ಭದಲ್ಲಿ ವಿಗ್ ಧರಿಸಿದ್ದನಂತೆ. “ ನನಗೆ ಬಹಳಷ್ಟು ಸಲ ಸ್ನೇಹಿತರು ಮತ್ತು ಸಂಬಂಧಿಕರ ಮುಂದೆ ಮುಜುಗರ ಉಂಟಾಗಿದೆ. ಆತನೊಂದಿಗೆ ಇನ್ನು ಬದುಕುವುದು ನನಗೆ ಕಷ್ಟವಾಗುತ್ತದೆ” ಎಂದು ಆಕೆ ಹೇಳಿದ್ದಾಳೆ.
  First published: