Healthy Food : ಪ್ರತಿದಿನ ಈ ಬೀಜಗಳನ್ನು ಮರೆಯದೇ ತಿನ್ನಿ.. ರೋಗರುಜಿನಗಳಿಗೆ ಹೇಳಿ ಟಾಟಾ ಬೈ ಬೈ..!

Benefits of seeds :ಸೂರ್ಯಕಾಂತಿ ಬೀಜಗಳಲ್ಲಿ ರೋಗ ನಿರೋಧಕ ಶಕ್ತಿ ಗಳು ಸಮೃದ್ಧವಾಗಿವೆ. ಅಲ್ಲದೆ ಥಯಾಮಿನ್, ರಿಬೋಫ್ಲಾವಿನ್, ನಿಯಾಸಿನ್, ಪ್ಯಾಂಟೊಥೆನಿಕ್ ಆಸಿಡ್, ಫೋಲೇಟ್, ಕೋಲೀನ್, ವಿಟಮಿನ್ ಬಿ 6, ವಿಟಮಿನ್ ಸಿ ಮತ್ತು ವಿಟಮಿನ್ ಇ ಯಂತಹ ವಿಟಮಿನ್ ಗಳು ಹೆಚ್ಚಾಗಿ ಇರುವುದರಿಂದ ನಮ್ಮ ದೇಹದಲ್ಲಿ ಚರ್ಮದ ಸಮಸ್ಯೆ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು,

ಬೀಜಗಳು

ಬೀಜಗಳು

 • Share this:
  ಯಾವಾಗ ನಾವು ಜಡ ಜೀವನ ಶೈಲಿಗೆ(Lazy life style) ಮಾರು ಹೋಗುತ್ತೇವೆ ಆಗ ನಮಗೆ ಇಲ್ಲದ ಕಾಯಿಲೆಗಳು (health problems) ಅಂಟಿಕೊಳ್ಳಲು ಪ್ರಾರಂಭವಾಗುತ್ತವೆ.ಕೆಲವು ತಾತ್ಕಾಲಿಕವಾಗಿ ಕಾಡುವ ಕಾಯಿಲೆಗಳು ಸಣ್ಣ ಪ್ರಮಾಣದಲ್ಲಿ ತೊಂದರೆ(problem) ಕೊಟ್ಟರೆ, ಇನ್ನು ಕೆಲವು ದೀರ್ಘಕಾಲ ಕಾಡುವ ಕಾಯಿಲೆಗಳಾಗಿ ನಮ್ಮನ್ನು ಇಡೀ ಜೀವನ ಪರ್ಯಂತ ಸವೆಯುವಂತೆ ಮಾಡುತ್ತವೆ.ಹೀಗಾಗಿ ನಮ್ಮ ನಿತ್ಯದ ಆಹಾರದಲ್ಲಿ
  ಕಾರ್ಬೋಹೈಡ್ರೇಟ್‌ಗಳು, (Carbohydrates)ಪ್ರೋಟೀನ್,(protein) ಡೈರಿ, ಹಣ್ಣುಗಳು(Fruits) ಮತ್ತು ತರಕಾರಿಗಳು(Vegetables) ಮತ್ತು ಕೊಬ್ಬುಗಳು ಇರುವ ಅಂಶ ಸೇರಿಸಬೇಕು... ದುರದೃಷ್ಟವಶಾತ್, ನಾವು ಯಾವಾಗಲೂ ನಮ್ಮ ಆಹಾರದಲ್ಲಿ ಇವೆಲ್ಲವನ್ನೂ ಸೇರಿಸಲು ಸಾಧ್ಯವಾಗುವುದಿಲ್ಲ..ನಮಗೆ ರೋಗ ನಿರೋಧಕ ಶಕ್ತಿಗಳು ಕಡಿಮೆಯಾಗುತ್ತದೆ.. ಆದರೆ ಪ್ರತಿನಿತ್ಯ ನಮ್ಮ ಆಹಾರದಲ್ಲಿ ಕೆಲವು ತರಕಾರಿ ಬೀಜಗಳನ್ನು ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿಗಳನ್ನು ಹೆಚ್ಚಳ ಮಾಡಿಕೊಳ್ಳಬಹುದಾಗಿದೆ

  ನಮ್ಮ ಆರೋಗ್ಯ ನಮ್ಮ ರಕ್ಷಣೆ ಹೀಗಾಗಿ ಇರಲಿ ಪ್ರತಿನಿತ್ಯ ಈ 5 ಬೀಜಗಳ ಸೇವನೆ

  1) ಸೂರ್ಯಕಾಂತಿ ಬೀಜಗಳು: ಸೂರ್ಯನಷ್ಟೇ ಸಿಕ್ಕಾಪಟ್ಟೆ ಪವರ್ಫುಲ್ ಆಗಿರೋದು ಸೂರ್ಯಕಾಂತಿ ಬೀಜಗಳು.. ಹೀಗಾಗಿ ಸೂರ್ಯಕಾಂತಿಯಿಂದ ಮಾಡಿದ ಎಣ್ಣೆಯನ್ನು ಸಾಮಾನ್ಯವಾಗಿ ಆಹಾರ ಪದಾರ್ಥಗಳನ್ನು ತಯಾರಿಸಲು ಬಳಸಲಾಗುವುದು. ಅದು ಆಹಾರದ ರುಚಿಯನ್ನು ಹೆಚ್ಚಿಸಿ ಉತ್ತಮ ಆರೋಗ್ಯವನ್ನು ನೀಡುವುದು. ಅದೇ ರೀತಿ ಸೂರ್ಯಕಾಂತಿಯ ಬೀಜಗಳು ಸಹ ಹಲವಾರು ಆರೋಗ್ಯ ಗುಣಗಳನ್ನು ಒಳಗೊಂಡಿದೆ.ಸೂರ್ಯಕಾಂತಿ ಬೀಜಗಳಲ್ಲಿ ರೋಗ ನಿರೋಧಕ ಶಕ್ತಿ ಗಳು ಸಮೃದ್ಧವಾಗಿವೆ. ಅಲ್ಲದೆ ಥಯಾಮಿನ್, ರಿಬೋಫ್ಲಾವಿನ್, ನಿಯಾಸಿನ್, ಪ್ಯಾಂಟೊಥೆನಿಕ್ ಆಸಿಡ್, ಫೋಲೇಟ್, ಕೋಲೀನ್, ವಿಟಮಿನ್ ಬಿ 6, ವಿಟಮಿನ್ ಸಿ ಮತ್ತು ವಿಟಮಿನ್ ಇ ಯಂತಹ ವಿಟಮಿನ್ ಗಳು ಹೆಚ್ಚಾಗಿ ಇರುವುದರಿಂದ ನಮ್ಮ ದೇಹದಲ್ಲಿ ಚರ್ಮದ ಸಮಸ್ಯೆ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು, ಸೇರಿ ಹಲವಾರು ಸಮಸ್ಯೆಗಳನ್ನು ಸೂರ್ಯಕಾಂತಿ ಬೀಜಗಳು ನಿವಾರಣೆ ಮಾಡುತ್ತದೆ.

  ಇದನ್ನೂ ಓದಿ : ಕಲ್ಲಂಗಡಿ ಬೀಜಗಳನ್ನು ಬಿಸಾಡುವ ಮುನ್ನ ಅದರ ಪ್ರಯೋಜನಗಳನ್ನು ಒಮ್ಮೆ ನೋಡಿ

  2) ಎಳ್ಳು : ಚಳಿಗಾಲದ ಸಂದರ್ಭದಲ್ಲಿ ಎದುರಾಗುವ ಶೀತ ಕೆಮ್ಮು ಅಥವಾ ಇತರ ಸಮಸ್ಯೆಗಳಿಗೆ ಸುತ್ತಮುತ್ತಲಿನ ತಾಪಮಾನ ಪ್ರಮುಖ ಕಾರಣವಾಗಿರುತ್ತದೆ. ನಮ್ಮ ದೇಹದ ತಾಪಮಾನ ಹೊರಗಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ನಮಗೆ ಆರೋಗ್ಯ ಸಮಸ್ಯೆಗಳು ಕಂಡುಬರಲು ಪ್ರಾರಂಭವಾಗುತ್ತವೆ. ಇದಕ್ಕೆ ನಮ್ಮ ದೇಹದ ದುರ್ಬಲ ರೋಗ ನಿರೋಧಕ ಶಕ್ತಿ ಕೂಡ ಕಾರಣವಾಗಿರಬಹುದು. ಆದರೆ ಬಿಳಿ ಎಳ್ಳು ಅಥವಾ ಕಪ್ಪುಎಳ್ಳು ಸೇವನೆ ಮಾಡುವುದರಿಂದ ಅಥವಾ ನಮ್ಮ ಆಹಾರ ಪದ್ಧತಿಯಲ್ಲಿ ಆಗಾಗ ಎಳ್ಳೆಣ್ಣೆ ಬಳಕೆ ಮಾಡಿಕೊಳ್ಳುವುದರಿಂದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು. ಎಳ್ಳಿನಲ್ಲಿ ವಿಟಮಿನ್ ಡಿ ಮತ್ತು ಪೊಟ್ಯಾಷಿಯಂ ಅಂಶ ಕೂಡ ಹೆಚ್ಚಾಗಿ ಸಿಗುವುದರಿಂದ ಕಫದೋಷ ಕೀಲುನೋವು ಹಾಗೂ ದೇಹದ ತಾಪಮಾನ ಹೆಸರಿಡುವುದು ಸೇರಿ ಹಲವು ಆರೋಗ್ಯಕಾರಿ ಪ್ರಯೋಜನಗಳು ಇವೆ.

  3)ಸೆಣಬಿನ ಬೀಜ :ಸೆಣಬಿನ ಬೀಜದಲ್ಲಿ ಪ್ರೋಟೀನ್, ನಾರಿನಂಶ, ಒಮೆಗಾ 6 ಮತ್ತು 3, ಕಬ್ಬಿಣಾಂಶ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತು, ಜೀವಸತ್ವಗಳಾದ ಎ,ಸಿ,ಇ ಮತ್ತು ಇತರ ಖನಿಜಾಂಶಗಳಿಂದ ಕೂಡಿರುತ್ತದೆ. ಇದನ್ನು ಗಣನೀಯವಾಗಿ ಆಹಾರ ವಸ್ತುಗಳಲ್ಲಿ ಸೇರಿಸಿ, ಸವಿಯುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ. ಇದರಿಂದ ತೂಕ ನಷ್ಟ ಚರ್ಮದ ಆರೋಗ್ಯ, ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ.

  4) ಕುಂಬಳಕಾಯಿ ಬೀಜಗಳು :ಪ್ರೋಟೀನ್, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಎಲ್ಲಾ ಪೋಷಕಾಂಶಗಳ ಹೊರತಾಗಿ, ನಮ್ಮ ದೇಹಕ್ಕೆ ಸಿಗಬೇಕಾದ ವಿಟಮಿನ್ ಗಳಲ್ಲಿ ಕೆ ವಿಟಮಿನ್ ಕೂಡ ಒಂದು..ಆದರೆ ಅನೇಕ ಆಹಾರಗಳನ್ನು ಕೆ ವಿಟಮಿನ್ ಸಿಗುವುದಿಲ್ಲ.. ಇದು ಮೂಳೆ ದುರ್ಬಲತೆಗೆ ಕಾರಣವಾಗುವುದು.. . ವಿಟಮಿನ್ ಕೆ ಮೂಳೆಗಳಲ್ಲಿ ಕ್ಯಾಲ್ಸಿಯಂ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಅವುಗಳನ್ನು ಬಲವಾಗಿ ಮಾಡುತ್ತದೆ. ಅದಕ್ಕಾಗಿಯೇ ದುರ್ಬಲವಾದ ಮೂಳೆಗಳು ಅಥವಾ ಸಂಧಿವಾತ ಸಮಸ್ಯೆ ಹೊಂದಿರುವವರಿಗೆ ಕುಂಬಳಕಾಯಿ ಬೀಜಗಳು ಅಗತ್ಯವಾದ ಶಕ್ತಿಗಳನ್ನು ನೀಡುತ್ತವೆ.

  ಇದನ್ನೂ ಓದಿ :ತ್ವಚೆಯ ಜತೆಗೆ ಆರೋಗ್ಯಕ್ಕೂ ಒಳ್ಳೆಯದು ಈ ಕಾಮಕಸ್ತೂರಿ

  5)ಸಬ್ಜಾ ಬೀಜಗಳು :ತುಳಸಿ ಬೀಜಗಳು ಎಂದೂ ಕರೆಯಲ್ಪಡುವ ಸಬ್ಜಾ ಬೀಜಗಳು ಭಾರತ ಮತ್ತು ಮೆಡಿಟರೇನಿಯನ್ ಪ್ರದೇಶದ ಸ್ಥಳೀಯಬೀಜಗಳಾಗಿವೆ. ಈ ಬೀಜಗಳು ದೇಹವನ್ನು ತಂಪಾಗಿಸುತ್ತದೆ ಮತ್ತು ಸುಡುವ ಬೇಸಿಗೆಯ ತಿಂಗಳುಗಳಲ್ಲಿ ಸೇವಿಸವುದು ಉತ್ತಮ ಎನ್ನಲಾಗುತ್ತದೆ. ಸಬ್ಜಾ ಬೀಜಗಳು ಆಮ್ಲೀಯತೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.ಅಲ್ಲದೇ, ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ, ನಿಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ನಿಮ್ಮ ಕರುಳನ್ನು ಆರೋಗ್ಯಕರವಾಗಿರಿಸಲು ಸಹಕಾರಿ. ಜೊತೆಗೆ, ವಿಸೆನಿನ್, ಓರಿಯೆಂಟಿನ್ ಮತ್ತು ಬೀಟಾ ಕ್ಯಾರೋಟಿನ್ ನಂತಹ ಫ್ಲೇವನಾಯ್ಡ್‌ಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ, ಶೀತ ಮತ್ತು ಜ್ವರವನ್ನು ದೂರವಿಡುತ್ತವೆ.
  Published by:ranjumbkgowda1 ranjumbkgowda1
  First published: