5 ಅಡಿ 7 ಇಂಚಿನೊಳಗಿನ ಪುರುಷರು 'ಮಾನವ ಹಕ್ಕು' ಹೊಂದಿಲ್ಲ ಎಂದು ಹೇಳಿದ ಜಪಾನಿನ ಗೇಮರ್ (Japanese Gamer) ಒಬ್ಬರನ್ನು ವಜಾ ಮಾಡಲಾಗಿದೆ. ವೃತ್ತಿಪರ ಆಟಗಾರ್ತಿ ಕನಾ “ತನುಕಾನಾ” ತಾನಿ ಎಂಬ ಮಹಿಳೆಯು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾಳೆ. ಈ ಹೇಳಿಕೆಯು ಜಪಾನಿನಲ್ಲಿ ಕೋಲಾಹಲ ಸೃಷ್ಟಿಸಿದೆ. ಟ್ವಿಟ್ಟರ್ ನಲ್ಲಿ ಹೇಳಿಕೆಯ ವಿಚಾರವಾಗಿ ಮಹಿಳೆಯ ವಿರುದ್ಧ ಅನೇಕ ಟೀಕೆ ಟಿಪ್ಪಣಿಗಳು ಕಂಡು ಬಂದಿದ್ದವು. ಪ್ರಸ್ತುತ ಜಪಾನಿನ ಈ ಗೇಮಿಂಗ್ ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಮಹಿಳೆಯನ್ನು ಕ್ರೀಡೆಯಿಂದ ವಜಾಗೊಳಿಸಲಾಗಿದೆ. ಜಪಾನ್ನಲ್ಲಿ ಗೇಮಿಂಗ್ (Gaming Industry) ಒಂದು ದೊಡ್ಡ ಕ್ರೀಡೆಯಾಗಿದೆ. ಈ ವೃತ್ತಿಪರ ಆJapanದ ಭಾಗಿಯಾಗಿದ್ದ ತನುಕಾನಾ ತಾನಿ ಎಂಬ ಮಹಿಳೆಯೊಬ್ಬರು ಪುರುಷರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 5 ಅಡಿ 7 ಇಂಚಿನೊಳಗಿನ ಪುರುಷರು 'ಮಾನವ ಹಕ್ಕು' (Human Rights) ಹೊಂದಿಲ್ಲ ಎಂದು ಹೇಳಿದ್ದಾರೆ.
ಪುರುಷರ ಬಗ್ಗೆ ಈಕೆಯ ಕಾಮೆಂಟ್ಗಳು ಜಪಾನಿನ ಟ್ವಿಟರ್ನಲ್ಲಿ ವಿವಾದವನ್ನು ಉಂಟುಮಾಡಿತು. ನಂತರ ಆಟದ ಪ್ರಾಯೋಜಕರು ತನುಕಾನಾ ತಾನಿಯನ್ನು ಆಟದಿಂದ ವಜಾ ಗೊಳಿಸಿದರು. ಅನೇಕ ವಿರೋಧದ ನಂತರ ಮಹಿಳೆಯು ಕೂಡ ಟ್ವಿಟ್ಟರ್ ನಲ್ಲಿ ಕಾಮೆಂಟ್ ಅಳಿಸಿ ಕ್ಷಮೆಯಾಚಿಸಿದ್ದಾರೆ.
ಜಪಾನಿನ ಪುರುಷರು ಎತ್ತರವು 5 ಅಡಿ 7 ಇಂಚುಗಳಿಗಿಂತ ಕಡಿಮೆಯಿದೆ, ಅಂತಹ ಪುರುಷರು ಮೂಳೆ-ಉದ್ದಗೊಳಿಸುವ ಶಸ್ತ್ರಚಿಕಿತ್ಸೆಗೆ ಹೋಗಬೇಕು ಅಂತ ಮಹಿಳೆ ಕುಳ್ಳಗಿರುವ ವ್ಯಕ್ತಿಗಳನ್ನು ಬಹಿರಂಗವಾಗಿ ಟೀಕಿಸಿದ್ದಳು. ಜಪಾನಿನಲ್ಲೆ ಸರ್ವೇ ಸಾಮಾನ್ಯ ಎಲ್ಲಾ ವ್ಯಕ್ತಿಗಳ ಎತ್ತರ ಸರಿಸುಮಾರು 5 ಅಡಿ ಮಿತಿಯಲ್ಲಿ ಬರುತ್ತದೆ.
ಹೇಳಿಕೆಗೆ ಪಶ್ಚಾತ್ತಾಪ ಪ್ರಮುಖ ಮಹಿಳಾ ಗೇಮರ್ ಆಗಿರುವ "ತನುಕಾನಾ" ತಾನಿ ಲೈವ್ ಸ್ಟ್ರೀಮಿಂಗ್ ಸಮಯದಲ್ಲಿ ಈ ಟೀಕೆಗಳನ್ನು ಮಾಡಿದ್ದಾರೆ. ಈಕೆ ಹೇಳಿಕೆಯ ನಂತರ ಸೈಕ್ಲೋಪ್ಸ್ ಅಥ್ಲೆಟಿಕ್ ಗೇಮಿಂಗ್, ಮಹಿಳೆ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ಕೊನೆಗೊಳಿಸಿತು. ತನುಕಾನಾನ ಬಳಸಿದ 'ಮಾನವ ಹಕ್ಕುಗಳು' ಎಂಬ ಪದದ ಸುತ್ತಾ ಭಾರಿ ಚರ್ಚೆ ನಡೆದಿದೆ. ಗೇಮಿಂಗ್ನಲ್ಲಿ ಇದು ವಿಭಿನ್ನ ಅರ್ಥವನ್ನು ಹೊಂದಿದೆ, ಈ ಪದವು ತಾರತಮ್ಯವನ್ನು ಸೂಚಿಸಿದೆ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದರು.
ಇನ್ನೂ ಕಾನಾ "ತನುಕಾನಾ" ತಾನಿ, ನಾನು ಈ ಹೇಳಿಕೆಗೆ ಬಗ್ಗೆ ಪಶ್ಚಾತ್ತಾಪ ಪಡುತ್ತೇನೆ, ಇದು ವೃತ್ತಿಪರ ಸ್ಪೋರ್ಟ್ಸ್ ಅಥ್ಲೀಟ್ ನೀಡುವ ಹೇಳಿಕೆಯಲ್ಲ ಎಂದು ಟೀಕೆಗಳಿಗೆ ಕ್ಷಮೆಯಾಚಿಸುವಾಗ, ಎತ್ತರದ ವ್ಯಕ್ತಿಗಳ ಮೇಲಿನ ಪ್ರೀತಿಯನ್ನು ಕಳಪೆಯಾಗಿ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು.
ಮಾಡಿಕೊಂಡಿದ್ದ ಒಪ್ಪಂದವೇ ಕೊನೆ ಸೈಕ್ಲೋಪ್ಸ್ ಅಥ್ಲೆಟಿಕ್ ಗೇಮಿಂಗ್ ಸಹ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ತಾರತಮ್ಯ ಅಥವಾ ಅವಮಾನಗಳಲ್ಲಿ ನಂಬಿಕೆ ಇಲ್ಲ. ಮಿಸ್ ತನುಕಾನಾ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸುತ್ತಿದ್ದೇವೆ ಎಂದಿದ್ದಾರೆ.
ಗೇಮರ್ ಈ ಮೊದಲು ಸಹ ಇಂತಹ ಟೀಕೆಗಳನ್ನು ಮಾಡಿದ್ದರು ಎಂದು ಕೆಲ ವರದಿಗಳು ತಿಳಿಸಿವೆ. ಕಪ್ ಗಾತ್ರದ ಸ್ತನಗಳನ್ನು ಹೊಂದಿರುವವರು ಮಾನವ ಹಕ್ಕುಗಳನ್ನು ಹೊಂದಿರುವುದಿಲ್ಲ ಎಂದು ಅವರು ಈ ಮೊದಲು ವಿವಾದಾತ್ಮಕ ಹೇಳಿಕೆ ನೀಡಿದ್ದರು ಎನ್ನಲಾಗಿದೆ.
ಜಪಾನ್ನಲ್ಲಿ ಗೇಮಿಂಗ್ ಒಂದು ದೊಡ್ಡ ಕ್ರೀಡೆಯಾಗಿದೆ. ವಿಡಿಯೋ ಗೇಮ್ ಬಗ್ಗೆ ಹೆಚ್ಚು ಟ್ವೀಟ್ ಮಾಡಿದ ದೇಶಗಳ ಪಟ್ಟಿಯನ್ನು. ಜೂನ್ 2021ರವರೆಗೆ ಸಂಗ್ರಹಿಸಿದ ಡೇಟಾದ ಆಧಾರದ ಮೇಲೆ ಗುರುತಿಸಲಾಗಿದೆ. ಈ ಪ್ರಕಾರ Twitter ನಲ್ಲಿ ಹತ್ತು ದೇಶಗಳನ್ನು ಗುರುತಿಸಲು ಸಾಧ್ಯವಾಯಿತು.
ಈ ಪಟ್ಟಿಯಲ್ಲಿ ಜಪಾನ್ ಮೊದಲ ಸ್ಥಾನದಲ್ಲಿದೆ, ನಂತರ ಯುನೈಟೆಡ್ ಸ್ಟೇಟ್ಸ್ ಮತ್ತು ದಕ್ಷಿಣ ಕೊರಿಯಾ. ಬ್ರೆಜಿಲ್ 4ನೇ ಸ್ಥಾನದಲ್ಲಿದ್ದರೆ, ಫಿಲಿಪೈನ್ಸ್ ಮತ್ತು ಭಾರತ ಮೊದಲು 6 ಮತ್ತು 7ನೇ ಸ್ಥಾನ ಪಡೆದಿದ್ದವು. ಯುಕೆ, ಫ್ರಾನ್ಸ್ ಮತ್ತು ಸ್ಪೇನ್ ಟಾಪ್ 10 ಸ್ಥಾನವನ್ನು ಪಡೆದು ಕೊಂಡಿವೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ