ಶ್ವಾನ ನಿಯತ್ತಿನ ಪ್ರಾಣಿ. ಮಾಲೀಕ ಹೇಳಿದಂತೆ ಕೇಳುವ ಪ್ರಾಣಿ. ಈಗಂತೂ ನಾಯಿಯನ್ನು ಸಾಕುವುದು ಟ್ರೆಂಡ್ ಆಗಿದೆ. ಯುವಕರಿಗಿಂತ ಹೆಚ್ಚಾಗಿ ಯುವತಿಯರು ಮನೆಯಲ್ಲಿ ಶ್ವಾನವನ್ನು ಸಾಕುತ್ತಾರೆ. ಅದರ ಜೊತೆಗೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಹಾಗಾಗಿ ಹೆಚ್ಚಿನ ಯುವತಿಯರು ನಾಯಿ ಪ್ರೇಮಿಗಳು ಎಂದರೆ ತಪ್ಪಾಗಲಾರದು.
ನಾಯಿ ನಿಯತ್ತಿನ ಪ್ರಾಣಿ ಅನ್ನಿಸಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಅಷ್ಟೇ ಏಕೆ ಇತಿಹಾಸ ಪುಟದಲ್ಲಿ ಅಚ್ಚಳಿಯಾದ ಶ್ವಾನಗಳಿವೆ. ಬಾಹ್ಯಕಾಶಕ್ಕೂ ನಾಯಿ ಸಂಚರಿಸಿದೆ. ಹಾಗಾಗಿ ಇತಿಹಾಸದಲ್ಲಿ ಗುರುತಿಸಿಕೊಂಡ 5 ಶ್ವಾನಗಳ ಕುರಿತ ಮಾಹಿತಿ ಇಲ್ಲಿದೆ.
ವೆಲ್ಕ್ರೋ ಆವಿಷ್ಕಾರ ಪ್ರೇರೆಪಿಸಿದ ಶ್ವಾನ
![]()
ಕೋಕ್ಲರ್
1940 ರ ಆರಂಭದಲ್ಲಿ, ಸ್ವಿಸ್ ಸಂಶೋಧಕ ಜಾರ್ಜ್ ಡಿ ಮೆಸ್ಟ್ರಾಲ್ ತನ್ನ ನಾಯಿಯನ್ನು ವಾಕ್ ಮಾಡಲು ಕರೆದೊಯ್ದರು. ಮನೆಗೆ ಹಿಂತಿರುಗಿದಾಗ ತನ್ನ ನಾಯಿಯ ಮೈ ಮೇಲಿದ್ದ ಬಟ್ಟೆಯ ಮೇಲೆ ಕೋಕ್ಲರ್ (ಸಣ್ಣ ಹುಲ್ಲು) ಅಂಟಿಕೊಂಡಿರುವುದನ್ನು ಕಂಡುಕೊಂಡರು ಮನೆಗೆ ಬಂದ ಜಾರ್ಜ್ ಡಿ ಮೆಸ್ಟ್ರಾಲ್ ಸೂಕ್ಷ್ಮದರ್ಶಕ ಬಳಸಿಕೊಂಡು ಕೋಕ್ಲರ್ ಅನ್ನು ಗಮನಿಸಿದರರು. ಅದು ಕೊಕ್ಕೆ ಆಕಾರವನ್ನು ಹೊಂದಿರುವುದನ್ನು ಕಂಡುಹಿಡಿದರು. ಈ ಆವಿಷ್ಕಾರವನ್ನು ವೆಲ್ಕ್ರೋ ಎಂದು ಕರೆಯಲ್ಪಡುವ ಹೊಸ ಆವಿಷ್ಕಾರವೆಂದು ಜನಪ್ರಿಯತೆ ಪಡೆಯಿತು.
ಲೈಕಾ
![]()
ಲೈಕಾ
ಜಾಗತಿಕವಾಗಿ ಮತ್ತು ಇತಿಹಾಸ ಪುಟ ಸೇರಿದ ಶ್ವಾನವಿದು. 1957 ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಿದ ಮೊದಲ ಜೀವಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಸ್ಪುಟ್ನಿಕ್ 2 ಮೂಲಕ ಲೈಕಾ ಬಾಹ್ಯಕಾಶಕ್ಕೆ ತೆರಳಿತು. ಸೋವಿಯತ್ ಒಕ್ಕೂಟವು ಜೀವಂತ ಜೀವಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೊದಲ ಪ್ರಯತ್ನ ನಡೆಸಿ ಪ್ರಪಂಚದಾದ್ಯಂತ ಗಮನಸೆಳೆಯಿತು. ಲೈಕಾ ಕಕ್ಷೆಯನ್ನು ತಲುಪುವಾಗ ಅಲ್ಲಿನ ವಾತವೃನಕ್ಕೆ ಸರಿ ಹೊಂದದೆ ಸಾವನ್ನಪ್ಪಿತು ಎಂದು ಡಾ. ಸ್ಟಾನ್ಲಿ ಕೋರೆನ್ ಹೇಳಿದ್ದಾರೆ.
ಪೆರಿಟಾಸ್: ನಾಗರಿಕತೆಯನ್ನು ಉಳಿಸಿದ ಶ್ವಾನ
![]()
ಪೆರಿಟಾಸ್
ಅಲೆಕ್ಸಾಂಡರ್ ದಿ ಗ್ರೇಟ್ ಪ್ರಾಬಲ್ಯದ ಸಮಯದಲ್ಲಿ ಪೆರಿಟಾಸ್ ಎಂಬ ಶ್ವಾನವಿತ್ತು. ಇದು ಪಾಶ್ಚಿಮಾತ್ಯ ನಾಗರೀಕತೆಗೆ ಮತ್ತು ಅವರ ಧೈಯ್ಯಕ್ಕೆ ಸಹಕರಿಸಿತ್ತು ಎಂದು ಉಲ್ಲೇಖವಿದೆ. ಪೆರಿಟಾಸ್ ಈಗ ಅಳಿದುಹೋಗಿರುವ ಪುರಾತನ ಗ್ರೀಸ್ನ ತಳಿಯಾಗಿದೆ, ಮಾಸ್ಟಿಫ್ನ ಪೂರ್ವಜ ಎಂದು ಭಾವಿಸಲಾಗಿದೆ.
ಜೋಫಿ: ವಿಶ್ವದ ಮೊದಲ ಚಿಕಿತ್ಸಾ ನಾಯಿ
![]()
ಜೋಫಿ
ಸಿಗ್ಮಂಡ್ ಫ್ರಾಯ್ಡ್ ದವಡೆ-ನೆರವಿನ ಚಿಕಿತ್ಸೆಯಲ್ಲಿ ಪ್ರವರ್ತಕರಾಗಿದ್ದರು. ಅಷ್ಟು ಮಾತ್ರವಲ್ಲದೆ ಮನೋವಿಶ್ಲೇಷಣೆಯ ಪಿತಾಮಹ ಎಂದು ಗುರುತಿಸಿಕೊಂಡವರು. ಸಿಗ್ಮಂಡ್ ಫ್ರಾಯ್ಡ್ ಅವರು ಜೋಫಿ ಹೆಸರಿನ ನಾಯಿಗೆ ಚಿಕಿತ್ಸೆ ಮೊದಲ ಚಿಕಿತ್ಸೆ ನೀಡಿದರು. ಹಾಗಾಗಿ ಜೋಫಿ ವಿಶ್ವದ ಮೊದಲ ಚಿಕಿತ್ಸಾ ಪಡೆದ ಶ್ವನಾವಾಗಿದೆ.
ಬುಡ್ಡಿ
![]()
ಬುಡ್ಡಿ
ಮೋರಿಸ್ ಫ್ರಾಂಕ್ ಎಂಬಾತ 6 ವರ್ಷವಿದ್ದಾಗ ಕುದುರೆ ಸವಾರಿ ಮಾಡುವ ವೇಳೆ ಬಿದ್ದು ತನ್ನ ಎಡಗಣ್ಣಿನ ದೃಷ್ಟಿ ಕಳೆದುಕೊಂಡನು. ಹತ್ತು ವರ್ಷಗಳ ನಂತರ ಬಾಕ್ಸಿಂಗ್ ಪಂದ್ಯ ಆಡಿದಾಗ ಎರಡು ಕಣ್ಣು ಕಳೆದುಕೊಳ್ಳಬೇಕಾಯಿತು. 1927 ರಲ್ಲಿ ನಡೆದ ಘಟನೆ ಇದಾಗಿದ್ದು, ಮೋರಿಸ್ ಫ್ರಾಂಕ್ 20 ವರ್ಷವಿದ್ದಾಗ ಫ್ರಾಂಕ್ ವಾಂಡರ್ಬಿಲ್ಟ್ ವಿಶ್ವವಿದ್ಯಾನಿಲಯ ವಿದ್ಯಾಭ್ಯಾಸ ಮಾಡುತ್ತಿದ್ದರು. ಆ ಸಮಯದಲ್ಲಿ ಆತನಿಗೆ ತಂದೆ ಪತ್ರವೊಂದು ಬರೆಯುತ್ತಾರೆ. ಪತ್ರದಲ್ಲಿ ಅಮೇರಿಕನ್ ಶ್ವಾನ ತರಬೇತುದಾರರು ಬರೆದ "ದಿ ಸೀಯಿಂಗ್ ಐ" ಎಂಬ ಲೇಖನ ಇರುತ್ತದೆ. ಇದನ್ನು ಗಮನನಿಸಿ. ಮೋರಿಸ್ ಫ್ರಾಂಕ್ ಬುಡ್ಡಿ ಹೆಸರಿನ ಜರ್ಮನ್ ಶೆಫರ್ಡ್ ಜಾತಿಗೆ ಸೇರಿದ ನಾಯಿಯನ್ನು ಸಾಕುತ್ತಾನೆ. ಇದರ ಮೂಲಕ ಸಹಾಯ ಪಡೆದುಕೊಳ್ಳುತ್ತಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ