ಅಮೆರಿಕದ(America) ಮೇರಿಲ್ಯಾಂಡ್ನ (Maryland)ಚಾರ್ಲ್ಸ್ ಕೌಂಟಿಯಲ್ಲಿರುವ ತನ್ನ ಮನೆಯಲ್ಲಿ 49 ವರ್ಷದ ವ್ಯಕ್ತಿ ಶವವಾಗಿ(Dead Body) ಪತ್ತೆಯಾಗಿದ್ದಾನೆ. ಹೀಗಾಗಿ ಈತನ ಮನೆಗೆ ತಪಾಸಣೆಗೆಂದು ಹೋದ ಪೊಲೀಸರಿಗೆ(Police) ದೊಡ್ಡ ಶಾಕ್(Shock) ಉಂಟಾಗಿದೆ.ಯಾಕಂದ್ರೆ ಆತನ ಮನೆಯಲ್ಲಿ ಬರೋಬ್ಬರಿ 125ಕ್ಕೂ ಹೆಚ್ಚು ವಿಷಕಾರಿ ಹಾವುಗಳು(Snakes) ಪತ್ತೆಯಾಗಿದ್ದು ಪೊಲೀಸರಿಗೆ ಆಘಾತ ಉಂಟಾಗಿದೆ..ಇವುಗಳಲ್ಲಿ ಹೆಚ್ಚು ವಿಷಕಾರಿ ಮತ್ತು ವಿಷ ಉಗುಳುವ ನಾಗರ ಹಾವುಗಳು ಮತ್ತು ಅತ್ಯಂತ ಅಪಾಯಕಾರಿ ಕಪ್ಪು ಮಾಂಬಾಗಳು ಕೂಡ ಇದ್ದವು. ಸದ್ಯ ಪೊಲೀಸರು ಮೃತವ್ಯಕ್ತಿಯ ಮನೆಯಲ್ಲಿ ಇದ್ದ 125ಕ್ಕೂ ಹೆಚ್ಚು ಬಗೆಯ ಹಾವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವ್ಯಕ್ತಿ ಮೃತಪಟ್ಟಿರುವುದಾಗಿ ನೆರೆ ಮನೆಯವರಿಂದ ಪೊಲೀಸರಿಗೆ ದೂರು
ವಾಷಿಂಗ್ಟನ್ ನಲ್ಲಿ ಇರುವ ಸ್ಥಳೀಯ ಪತ್ರಿಕೆ ಯಾವ ವರದಿಯ ಪ್ರಕಾರ ಕಳೆದ ಬುಧವಾರದಿಂದ ಮನೆಯಿಂದ 49 ವರ್ಷದ ಡೇವಿಡ್ ರಿಸ್ಟನ್ ಮನೆಯಿಂದ ಹೊರಗೆ ಬಂದಿರಲಿಲ್ಲ...ಹೀಗಾಗಿ ಆತನ ನೆರೆಹೊರೆಯವರು ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಏನಾಗಿದ್ದಾನೆ ಎಂಬುದರ ಬಗ್ಗೆ ಮಾಹಿತಿ ನೀಡಲು ಕೋರಿಕೊಂಡಿದ್ದಾರೆ..
ಹೀಗಾಗಿ ಪೊಲೀಸರು ವಿಚಾರಣೆಗೆಂದು ಡೇವಿಡ್ ಮನೆಗೆ ಬಂದಾಗ ಅನುಮಾನಸ್ಪದ ವಾದ ರೀತಿಯಲ್ಲಿ ಡೇವಿಡ್ ಶವವಾಗಿ ಪತ್ತೆಯಾಗಿದ್ದಾನೆ.. ಆದರೆ ಹೀಗೆ ಆತನ ಪತ್ತೆಗೆ ಬಂದ ಪೊಲೀಸರಿಗೆ ಆತನ ಶವ ನೋಡಿ ಆಘಾತವಾಗಿದೆ.. ಬಂದರೆ ಆತನ ಮೃತದೇಹವನ್ನು 14 ಅಡಿ ಉದ್ದದ ಹಳದಿ ಬರ್ಮಾ ಹೆಬ್ಬಾವು ಸೇರಿದಂತೆ 125 ಹಾವುಗಳಿಂದ ಸುತ್ತುವರೆದಿರುವುದು ಕಂಡುಬಂದಿದೆ.
ಇದನ್ನೂ ಓದಿ: ಮರದ ಮೇಲೆ ಕನಸಿನ ಮನೆ: ಇಲ್ಲಿದೆ Green Tree Hutನ ವಿಶೇಷ ಫೋಟೋಗಳು
ಸರಿಸೃಪ ಸಾಕಲು ಪರವಾನಗಿ ಹೊಂದಿದ್ದ ಡೇವಿಡ್
ಏಕಾಂಗಿಯಾಗಿ ಜೀವಿಸುತ್ತಿದ್ದ ರಿಸ್ಟನ್, ಅವರು ಹಾವುಗಳು ಮತ್ತು ಸರೀಸೃಪಗಳನ್ನು ಸಾಕಲು ಪರವಾನಗಿಯನ್ನು ಹೊಂದಿದ್ದರು. ಆದರೆ ಮೇರಿಲ್ಯಾಂಡ್ ಕಾನೂನಿನ ಅಡಿಯಲ್ಲಿ ಯಾವುದೇ ವಿಷಕಾರಿ ಹಾವುಗಳನ್ನು ಹೊಂದುವುದಕ್ಕೆ ಅನುಮತಿ ಇರಲಿಲ್ಲ.
ಹೀಗಿದ್ದರೂ ಸಹ ಡೇವಿಡ್ ತನ್ನ ಮನೆಯಲ್ಲಿ ಕಪ್ಪು ಮಾಂಬಾ ಸೇರಿ ಹಲವಾರು ವಿಷಕಾರಿ ಹಾವುಗಳನ್ನು ಹಾಕಿದ್ದಾನೆ. ಇದರಲ್ಲಿ ಕಪ್ಪು ಮಾಂಬಾ ಹಾವಿನ ವಿಷದ ಕೇವಲ ಎರಡು ಹನಿಗಳು ನರಮಂಡಲವನ್ನು ಸ್ಥಗಿತಗೊಳಿಸುವ ಮೂಲಕ ಮತ್ತು ಪಾರ್ಶ್ವವಾಯುವನ್ನು ಉಂಟುಮಾಡುವ ಮೂಲಕ ಮನುಷ್ಯನನ್ನು ಕೊಲ್ಲಬಹುದು. ಹೀಗಾಗಿ ಡೇವಿಡ್ ಹಾವಿನಿಂದ ಮೃತ ಪಟ್ಟಿರಬಹುದು ಎಂದು ಹೇಳಲಾಗುತ್ತಿದೆ.
ಇನ್ನು ಡೇವಿಡ್ ರಿಸ್ಟನ್ ಹೇಗೆ ಸಾವಿಗೀಡಾಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಮತ್ತು ಯಾವುದಾದರೂ ಹಾವುಗಳೇ ರಿಸ್ಟನ್ನನ್ನು ಕೊಂದಿರಬಹುದೇ ಎಂದು ತನಿಖಾಧಿಕಾರಿಗಳು ಇನ್ನಷ್ಟೇ ಹೇಳಬೇಕಾಗಿದೆ. ರಿಸ್ಟನ್ ತನ್ನ ಮನೆಯನ್ನು ಹಾವಿನ ಸಂಗ್ರಹಾಲಯವಾಗಿ ಪರಿವರ್ತಿಸಿದ್ದಾರೆ ಎಂದು ತಿಳಿದಿರಲಿಲ್ಲ ಎಂದು ನೆರೆಹೊರೆಯವರು ಹೇಳಿದ್ದಾರೆ.
ಅಲ್ಲದೆ ಚಳಿಗಾಲದ ಸಮಯವಾಗಿರುವುದರಿಂದ ಹಾವುಗಳು ಆತನ ಮನೆಯಿಂದ ಹೊರಗೆ ಬಂದಿದ್ದರೆ ನೆರೆಹೊರೆಯವರಿಗೆ ಅಪಾಯ ಆಗುತ್ತಿತ್ತು. ಸದ್ಯ ಭಾರೀ ದುರಂತ ಒಂದು ತಪ್ಪಿದೆ ಎಂದು ನೆರೆಹೊರೆಯವರು ಈಗ ನಿಟ್ಟುಸಿರು ಬಿಡುತ್ತಿದ್ದಾರೆ.
ಇದನ್ನೂ ಓದಿ: ಮಾರ್ಗಮಧ್ಯೆ ಶಿಫ್ಟ್ ಮುಗೀತೆಂದು ವಿಮಾನ ಹಾರಿಸಲು ನಿರಾಕರಿಸಿದ ಪೈಲಟ್, ಮುಂದೇನಾಯ್ತು?
ಡೇವಿಡ್ ಮನೆಯಿಂದ ಹಾವುಗಳ ರಕ್ಷಣೆ
ಇನ್ನು ತಮ್ಮ 30 ವರ್ಷಗಳ ವೃತ್ತಿಜೀವನದಲ್ಲಿ ಇದುವರೆಗೆ ನೋಡಿದ ಹಾವುಗಳ ಅತಿದೊಡ್ಡ ಖಾಸಗಿ ಸಂಗ್ರಹಗಾರವಾಗಿದೆ ಎಂದು ಚಾರ್ಲ್ಸ್ ಕೌಂಟಿ ಅನಿಮಲ್ ಕಂಟ್ರೋಲ್ ಮುಖ್ಯಸ್ಥ ಎಡ್ ಟಕರ್ ಅವರು ಹೇಳಿದ್ದಾರೆ.
ಪ್ರಾಣಿ ನಿಯಂತ್ರಣ ಅಧಿಕಾರಿಗಳು ವರ್ಜೀನಿಯಾ ಮತ್ತು ಉತ್ತರ ಕೆರೊಲಿನಾದಲ್ಲಿನ ಉರಗ ತಜ್ಞರನ್ನು ಸಂಪರ್ಕಿಸಿ, ಹಾವುಗಳನ್ನು ಸುರಕ್ಷಿತವಾಗಿ ಅವುಗಳನ್ನು ಸಂಗ್ರಹಿಸಿಟ್ಟ ಗೂಡಿನಿಂದ ತೆಗೆಯಲು ಸಹಾಯ ಮಾಡಿದರು. ನಂತರ ಅವುಗಳನ್ನು ಪ್ಲಾಸ್ಟಿಕ್ ತೊಟ್ಟಿಗಳಲ್ಲಿ ವಾಹನಗಳಿಗೆ ಲೋಡ್ ಮಾಡಲಾಯಿತು.
ವಿಷಕಾರಿಯಲ್ಲದ ಹಾವುಗಳನ್ನು ವರ್ಜೀನಿಯಾಕ್ಕೆ ಸಾಗಿಸಲಾಯಿತು. ಆದರೆ ವಿಷಕಾರಿ ಹಾವುಗಳನ್ನು ಉತ್ತರ ಕೆರೊಲಿನಾಗೆ ಸಾಗಿಸಲಾಯಿತು ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ