Viral Story: ಗಂಡನಿಗೆ ವಿಚ್ಛೇದನ ನೀಡಿ ನಾಯಿಯನ್ನು ಮದುವೆಯಾದ 47 ವರ್ಷದ ಮಹಿಳೆ!

ಕ್ರೊಯೇಷಿಯಾದಲ್ಲಿ ವಾಸಿಸುವ ಮಹಿಳೆ ಅಮಂಡಾ ರಾಡ್ಜರ್ಸ್ ತನ್ನ ಸಂಗಾತಿಯಿಂದ ವಿಚ್ಛೇದನ ಪಡೆದ ನಂತರ ಆಕೆಯಲ್ಲಿ ಒಂಟಿತನ ಆವರಿಸಿತು. ಬಳಿಕ ಸರಿಯಾದ ಪಾಟ್ನರ್​ ಜತೆಗೆ ವಿವಾಹವಾಗಲು ಮುಂದಾಗುತ್ತಾಳೆ.

ಅಮಂಡಾ ರೇಜರ್ಸ್

ಅಮಂಡಾ ರೇಜರ್ಸ್

  • Share this:
    ವಿವಾಹವಾದ (Wedding) ನಂತರ ಕೆಲವೊಂದು ಅಡಚಣೆಯಿಂದ ದಂಪತಿಗಳು ದೂರ ದೂರವಾಗುವ ಪ್ರಸಂಗಗಳನ್ನು ನಾವು ಕೇಳಿರುತ್ತೇವೆ. ಕೆಲವೊಮ್ಮೆ ದಂಪತಿಗಳ ಕಲಹಗಳು ವಿಚ್ಛೇದನದ (Divorce) ಮೂಲಕ ಅಂತ್ಯಗೊಂಡು ಕೊನೆಗೆ ದೂರಗುವವರು ಇದ್ದಾರೆ. ಆದರೆ ಅಂತಹವರಲ್ಲಿ ಕೆಲವರು ಡೈವೋರ್ಸ್​ ಆದ ಬಳಿಕ ಸರಿಯಾದ ಸಂಗಾತಿಯನ್ನು ಆರಿಸಿಕೊಂಡು ವಿವಾಹವಾಗುತ್ತಾರೆ. ಆ ಬಳಿಕ ಹಿಂದಿನ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತಾ ಜೀವನ ಸಾಗಿಸಲು ಪ್ರಯತ್ನಿಸುತ್ತಾರೆ. ಆದರೆ ಇಲ್ಲೊಂದು ಘಟನೆಯಿಂದ ಮಹಿಳೆಯೊಬ್ಬಳು ತನ್ನ ಪತಿಗೆ ವಿಚ್ಛೇದನ ನೀಡುವ ಮೂಲಕ ದೂರವಾಗುತ್ತಾಳೆ. ಬಳಿಕ ಆಕೆಯಲ್ಲಿ ಆವರಿಸಿದ ಒಂಟಿತನವನ್ನ ಹೋಗಲಾಡಿಸಲು ಆಕೆ ಲೈಫ್​ ಪಾಟ್ನರ್​ (Life Partner) ಹುಡುಕುತ್ತಾಳೆ. ಆಕೆಗೆ ಲೈಫ್​ ಪಾಟ್ನರ್​ ಕೂಡ ಸಿಗುತ್ತದೆ. ಆದರೆ ಆತ ಯಾರು? ಎಂದು ತಿಳಿದರೆ ನಿಮಗೆ ಅಚ್ಚರಿ ಆಗೋದರಲ್ಲಿ ಅನುಮಾನವೇ ಇಲ್ಲ..

    ಕ್ರೊಯೇಷಿಯಾದಲ್ಲಿ ವಾಸಿಸುವ ಮಹಿಳೆ ಅಮಂಡಾ ರಾಡ್ಜರ್ಸ್ ತನ್ನ ಸಂಗಾತಿಯಿಂದ ವಿಚ್ಛೇದನ ಪಡೆದ ನಂತರ ಆಕೆಯಲ್ಲಿ ಒಂಟಿತನ ಆವರಿಸಿತು. ಬಳಿಕ ಸರಿಯಾದ ಪಾಟ್ನರ್​ ಜತೆಗೆ ವಿವಾಹವಾಗಲು ಮುಂದಾಗುತ್ತಾಳೆ. ಆದರೆ ಎರಡನೇ ಬಾರಿಗೆ ವಿವಾಹವಾಗಲು ಹೊರಟಾಗ ಅಮಂಡಾ ರಾಡ್ಜರ್ಸ್ ಮನುಷ್ಯನನ್ನು ವಿವಾಹವಾಗಲು ಹಿಂಜರಿದು, ನಾಯಿಯನ್ನು (Dog) ತನ್ನಜೀವನ ಸಂಗಾತಿಯನ್ನಾಗಿ ಆರಿಸುವ ಮೂಲಕ ವಿವಾಹವಾಗುತ್ತಾಳೆ!.

    ಅಮಂಡಾ ಹೆಣ್ಣು ನಾಯಿಯನ್ನು ವಿವಾಹವಾದಳು. ಆಕೆಯ ಅದ್ದೂರಿ ಮದುವೆಯಲ್ಲಿ ಸುಮಾರು 200 ಮಂದಿ ಪಾಲ್ಗೊಂಡಿದ್ದರು. 47 ವರ್ಷದ ಅಮಂಡಾ ರಾಡ್ಜರ್ಸ್ ಅವರು ಈ ಮದುವೆಯಿಂದ ತುಂಬಾ ಸಂತೋಷವಾಗಿದ್ದರು. ತನಗೆ ಬೇಕಾದುದನ್ನು ಶೆಬಾದಲ್ಲಿ (ಹೆಣ್ಣು ನಾಯಿ) ಅಮಂಡಾ ರಾಡ್ಜರ್ಸ್ ಅವರು ಪಡೆದುಕೊಂಡಿದ್ದಾರಂತೆ.

    ಗಂಡನಿಗಿಂತ ಹೆಚ್ಚು ಪ್ರೀತಿಸುತ್ತೇನೆ!

    ವಿಚ್ಛೇದನದ ನಂತರ ಅಮಂಡಾ ರಾಡ್ಜರ್ಸ್ ಹಲವಾರು ತಿಂಗಳುಗಳ ಕಾಲ ಒಂಟಿಯಾಗಿದ್ದರು.  ನಂತರ ಅವರು ತಮ್ಮ ಹೊಸ ಸಂಗಾತಿ ಶೆಬಾದೊಂದಿಗೆ (ನಾಯಿ) ತುಂಬಾ ಸಂತೋಷವಾಗಿದ್ದಾರೆ. ಶೆಬಾ ತನ್ನ ಮೊದಲ ಪತಿಗಿಂತ ಹೆಚ್ಚು ಸಂತೋಷವಾಗಿರುತ್ತದೆ. ಅಮಂಡಾ ರಾಡ್ಜರ್ಸ್ ನಾಯಿಯನ್ನು ಸಂಪೂರ್ಣ ಸಂಪ್ರದಾಯಗಳೊಂದಿಗೆ ಮದುವೆಯಾದಳು ಮತ್ತು ಚುಂಬಿಸುವ ಮೂಲಕ ಸಂಗಾತಿಯನ್ನಾಗಿ ಆರಿಸಿಕೊಂಡಳು.

    ಇದನ್ನು ಓದಿ: Alto Car: ಹೊಚ್ಚ ಹೊಸ ಅವತಾರದಲ್ಲಿ ಬರಲಿದೆ ಆಲ್ವೋ ಕಾರು! ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಯ್ತು ನೂತನ ಕಾರಿನ ವಿಡಿಯೋ!

    ಅಮಂಡಾ ರೇಜರ್ಸ್ ಈ ಬಗ್ಗೆ ಮಾತನಾಡಿ  'ಅವಳು ನನ್ನ ಜೀವನದ ಪ್ರಮುಖ ಭಾಗ. ಅವಳು ನನ್ನನ್ನು ನಗುವಂತೆ ಮಾಡುತ್ತಾಳೆ, ನನ್ನನ್ನು ಸಂತೋಷಪಡಿಸುತ್ತಾಳೆ ಮತ್ತು ನಾನು ಅಸಮಾಧಾನಗೊಂಡಾಗ ನನಗೆ ಬೆಂಬಲವನ್ನು ನೀಡುತ್ತಾಳೆ.

    ಸ್ವಯಂ ನಿರ್ಮಿತ ಮದುವೆಯ ಉಡುಗೆ

    ಅಮಂಡಾ ರೇಜರ್ಸ್ ಅವರು ಬಾಲ್ಯದಿಂದಲೂ ವಧುವಿನ ಉಡುಪಿನಲ್ಲಿ ತನ್ನನ್ನು ನೋಡಲು ಬಯಸಿದ್ದರು. ಎರಡನೇ ಬಾರಿಗೆ ತನ್ನ ಕನಸನ್ನು ಪೂರೈಸಲು, ಅವಳು ಸ್ವತಃ ವಧುವಿನ ಉಡುಪನ್ನು ವಿನ್ಯಾಸಗೊಳಿಸಿದಳು. ತನ್ನ ನಿರ್ಧಾರದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, 'ಶೆಬಾಳನ್ನು ಮದುವೆಯಾಗುವುದು ತುಂಬಾ ಆಹ್ಲಾದಕರ ಭಾವನೆ, ಅವಳು ನನಗೆ ಎಂದಿಗೂ ತೊಂದರೆ ಕೊಡುವುದಿಲ್ಲ, ನನ್ನ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾಳೆ. ಟಿವಿ ಶೋವೊಂದರಲ್ಲಿ, ಅಮಂಡಾ ತಾನು ಎರಡು ತಿಂಗಳ ವಯಸ್ಸಿನ ಶೆಬಾನನ್ನು ಪ್ರೀತಿಸುತ್ತಿದ್ದೆ ಎಂದು ಹೇಳಿದರು.

    ಅಮಂಡಾ ರೇಜರ್ಸ್ ಮತ್ತು ಶೆಬಾ (ನಾಯಿ)


    ಇದನ್ನು ಓದಿ: Old Car: ಹಳೇ ಕಾರ್ ಮತ್ತೆ ರೋಡಿಗೆ..ಡೀಸೆಲ್ ಕಾರ್​​ಗೆ ಹೊಸಾ ರೂಪ ಕೊಡ್ತಿದೆ ಸರ್ಕಾರ!

    ಹೊಸ ಸಂಬಂಧದ ಬಗ್ಗೆ ಉತ್ಸುಕತೆ

    ಟಿವಿ ಕಾರ್ಯಕ್ರಮದ ಸಮಯದಲ್ಲಿ ಜನರು ಅಮಂಡಾ ಅವರನ್ನು ಕೇಲವು ಪ್ರಶ್ನೆಗಳನ್ನು ಕೇಳುತ್ತಾರೆ. ಅದರಲ್ಲೊಬ್ಬ ನಾಯಿಯನ್ನು ಸಾಕಿದ ನಂತರ ಶೆಬಾನನ್ನು ಮದುವೆಯಾಗುವ ಆಲೋಚನೆ ಹೇಗೆ ಬಂತು? ಎಂದು ಕೇಳಿದನು. ಅದಕ್ಕೆ ಅಮಂಡಾ ಪ್ರೀತಿಯಲ್ಲಿ ಹಲವು ವಿಧಗಳಿವೆ. ಆದರೆ ನನ್ನ ಮತ್ತು ಶೆಬಾ ನಡುವಿನ ಸಂಬಂಧವು ತುಂಬಾ ಆಳವಾಗಿದೆ ಮತ್ತು ಈ ಹೊಸ ಸಂಬಂಧದ ಬಗ್ಗೆ ತುಂಬಾ ಕುತೂಹಲವಿದೆ ಎಂದು ಹೇಳಿದರು.
    Published by:Harshith AS
    First published: