Viral Story: ಗಂಡನ ಸಂತೋಷಕ್ಕಾಗಿ 3 ಗೆಳತಿಯರು ಬೇಕಾಗಿದ್ದಾರೆ! ಇವರಿಗೆ ಹೆಂಡತಿಯೇ ನೀಡುತ್ತಾಳಂತೆ ವೇತನ!

ಪತಿ-ಪತ್ನಿಯರ ಸಂಬಂಧದಲ್ಲಿ ನಂಬಿಕೆ ಇಲ್ಲದಿದ್ದರೆ ಆ ಸಂಬಂಧ ಉಳಿಯುವುದಿಲ್ಲ. ಮುರಿದ ನಂಬಿಕೆಗೆ ಹಲವು ಕಾರಣಗಳನ್ನು ಒಳಗೊಂಡಿರುತ್ತವೆ. ಪತಿ-ಪತ್ನಿಯರ ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಉಪಸ್ಥಿತಿಯು ಇದ್ದರೆ ಅದು ಸಂಬಂಧದಲ್ಲಿನ ನಂಬಿಕೆಯ ನಷ್ಟಕ್ಕೆ ಕಾರಣವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪತಿ-ಪತ್ನಿಯರ ಅಕ್ರಮ ಸಂಬಂಧದಿಂದ ವಿವಾಹ ವಿಚ್ಛೇದನಕ್ಕೆ (Divorce) ಒಳಗಾಗುವ ಅನೇಕ ಪ್ರಕರಣಗಳನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ ಇಬ್ಬರ ನಡುವೆ ಜಗಳ (Fight) ನಡೆದು ಸಾವಿನ ಮೂಲಕ ಸಮಸ್ಯೆ ಅಂತ್ಯಗೊಳಿಸಿದ ಪ್ರಕರಣಗಳು ಇವೆ. ಆದರೆ ಹೆಂಡತಿಯೇ (Wife) ತನ್ನ ಗಂಡನಿಗಾಗಿ (Husband) ಗೆಳತಿಯರನ್ನು ಮನೆಗೆ ಕರೆತರುವ ಅಪರೂಪದ ಪ್ರಕರಣದ ಬಗ್ಗೆ ಕೇಳಿದ್ದೀರಾ. ಇಂತಹದೊಂದು ಪ್ರಕರಣ ಈಗ ಬೆಳಕಿಗೆ ಬಂದಿದೆ. ವಿವಾಹಿತ ಮಹಿಳೆಯೊಬ್ಬಳು ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

    ಪತಿ-ಪತ್ನಿಯರ ಸಂಬಂಧದಲ್ಲಿ ನಂಬಿಕೆ ಇಲ್ಲದಿದ್ದರೆ ಆ ಸಂಬಂಧ ಉಳಿಯುವುದಿಲ್ಲ. ಮುರಿದ ನಂಬಿಕೆಗೆ ಹಲವು ಕಾರಣಗಳನ್ನು ಒಳಗೊಂಡಿರುತ್ತವೆ. ಪತಿ-ಪತ್ನಿಯರ ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಉಪಸ್ಥಿತಿಯು ಇದ್ದರೆ ಅದು ಸಂಬಂಧದಲ್ಲಿನ ನಂಬಿಕೆಯ ನಷ್ಟಕ್ಕೆ ಕಾರಣವಾಗುತ್ತದೆ. ಅಷ್ಟೇ ಏಕೆ ಪತಿಯ ವಿವಾಹೇತರ ಸಂಬಂಧಗದಿಂದಾಗಿ ಹಲವರು ವಿಚ್ಛೇದನ ಪಡೆದವರು ಇದ್ದಾರೆ. ಆದರೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿರುವ ವಿಡಿಯೋದಲ್ಲಿ ಪತ್ನಿ ತನ್ನ ಪತಿಗಾಗಿ ಹೊಸ ಗೆಳತಿಯನ್ನು ಮನೆಗೆ ಕರೆತಂದಿದ್ದಾಳೆ.

    ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಹಾಕಿದ್ದು, ನನ್ನ ಪ್ರೀತಿಯ ಪತಿಗೆ ಮೂವರು ಗೆಳತಿಯರು ಬೇಕಾಗಿದ್ದು, ಪ್ರತಿಯಾಗಿ ಅವರಿಗೆ ತಿಂಗಳಿಗೆ ರೂ.32 ವೇತನ ನೀಡುವುದಾಗಿ ವಿವಾಹಿತ ಮಹಿಳೆ ಹೇಳಿದ್ದಾಳೆ. ಈ ಗೆಳತಿಯರು ಪತಿಯನ್ನು ಸಂತೋಷವಾಗಿಡುವುದರ ಜೊತೆಗೆ ಮನೆಗೆಲಸಕ್ಕೂ ಸಹಾಯ ಮಾಡಬೇಕು ಎಂದು ಆಕೆ ಪ್ರಕಟಣೆಯಲ್ಲಿ ತಿಳಿಸಿದ್ದಾಳೆ.

    ಇದನ್ನೂ ಓದಿ: Inventions: ಪ್ರಪಂಚದಾದ್ಯಂತ ಜನರ ಜೀವನವನ್ನೇ ಬದಲಿಸಿದ 10 ಆವಿಷ್ಕಾರಗಳಿವು!

    44 ವರ್ಷದ ಫಾತಿಮಾ ತನ್ನ ಪತಿಗಾಗಿ ಈ ಜಾಹೀರಾತು ನೀಡಿದ್ದಾಳೆ. ಈ ಘೋಷಣೆಯೊಂದಿಗೆ ಪತಿಗೂ ಒಬ್ಬಾಕೆ ಗೆಳತಿ ಸಿಕ್ಕಿದ್ದಾಳೆ. ಇನ್ನೂ ಎರಡು ಹುದ್ದೆಗಳು ಖಾಲಿ ಇವೆ.

    ಮಾಹಿತಿಯಂತೆಯೇ,  ಫಾತಿಮಾ ಟಿಕ್‌ಟಾಕ್‌ನಲ್ಲಿ ಈ ಬಗ್ಗೆ ವೀಡಿಯೊವನ್ನು ಹಂಚಿಕೊಂಡಿದ್ದಾಳೆ. ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮಹಿಳೆಯರು ಎಚ್‌ಐವಿ ಪರೀಕ್ಷೆಗೆ ಒಳಗಾಗಬೇಕು. ಅವರು 30-35 ವರ್ಷಗಳ ನಡುವೆ ಇರಬೇಕು. ಪ್ರೌಢಶಾಲೆ ಅಥವಾ ಪದವಿ ಪದವಿಯನ್ನು ಹೊಂದಿರಬೇಕು. ಈ ಮಹಿಳೆಯರು ಉಚಿತವಾಗಿ ಮನೆಯಲ್ಲಿಯೇ ಇರಬಹುದಾಗಿದೆ. ಮತ್ತು ತಿನ್ನಬಹುದು. ಈ ವಿಡಿಯೋ ಥಾಯ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



    ಇದನ್ನೂ ಓದಿ: Flood: ಪ್ರವಾಹದಲ್ಲಿ ಸಿಲುಕಿದ ಸಾಕು ನಾಯಿಯನ್ನು ರಕ್ಷಿಸಿ ಛಾವಣಿಯ ಮೇಲೆ ಕುಳಿತ ಹುಡುಗಿ!

    ಖಿನ್ನತೆಯಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಫಾತಿಮಾ ಈ ವಿಡಿಯೋದಲ್ಲಿ ಹೇಳಿದ್ದಾಳೆ. ಈಗ ಕುಟುಂಬದಲ್ಲಿ ಒಬ್ಬ ಗರ್ಲ್ ಫ್ರೆಂಡ್ ಇದ್ದಾಳೆ. ಈ ವೀಡಿಯೋದಲ್ಲಿ ನಾವು ಮನೆಯಲ್ಲಿ ಸಂತೋಷದಿಂದ ಬದುಕುತ್ತೇವೆ ಮತ್ತು ಒಬ್ಬರನ್ನೊಬ್ಬರು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಹೇಳಲಾಗಿದೆ. ನಮ್ಮ ನಡುವೆ ಯಾವುದೇ ಜಗಳಗಳು ಇರುವುದಿಲ್ಲ. ಪತಿಗೆ ತನಗೆ ಬೇಕಾದ ವ್ಯಕ್ತಿಯೊಂದಿಗೆ ಬದುಕಲು ಸ್ವಾತಂತ್ರ್ಯ ನೀಡುವುದಾಗಿಯೂ ಈ ವಿಡಿಯೋದಲ್ಲಿ ಪತ್ನಿ ಹೇಳಿದ್ದಾಳೆ. ಅನಾರೋಗ್ಯದ ಕಾರಣ ಪ್ರತಿನಿತ್ಯ ನಿದ್ರೆ ಮಾತ್ರೆ ಸೇವಿಸಬೇಕಾಗಿದೆ ಎಂದು ಫಾತಿಮಾ ತಿಳಿಸಿದ್ದಾಳೆ.

    ಇದೊಂದು ವಿಚಿತ್ರ ಸಂಗತಿಯಾಗಿದೆ. ಫಾತಿಮಾ ತನ್ನ ಗಂಡನಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಫೋಸ್ಟ್​ ಬರೆಯುವ ಮೂಲಕ ತನ್ನೊಳಗಿನ ವಿಚಾರವನನ್ನು ಹಂಚಿಕೊಂಡಿದ್ದಾಳೆ. ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಆಗುತ್ತಿದ್ದಂತೆಯೇ ವೈರಲ್​ ಆಗಿದೆ. ಸದ್ಯ ಬಹುತೇಕ ಸೈಟ್​ಗಳಲ್ಲಿ ಈ ಸುದ್ದಿ ಓಡಾಡುತ್ತಿದೆ. ಇದೊಂದು ತಮಾಷೆ ಸಂಗತಿಯಂತೆ ಕಂಡರೂ. ಫಾತಿಮಾ ತನ್ನ ನಿಜ ಸಂಗತಿಯನ್ನು ಬರೆದು ಹಾಕಿದಂತೆ ತೋರುತ್ತದೆ. ಒಟ್ಟಿನಲ್ಲಿ ಗಂಡನಿಗಾಗಿ ಫಾತಿಮಾ ಮೂರು ಗೆಳತಿಯರನನ್ನು ಮನೆಗೆ ಬರಮಾಡಿಕೊಳ್ಳುವ ಮನಸ್ಸು ಮಾಡಿದ್ದಾಳೆ.
    Published by:Harshith AS
    First published: