214 ಕೆ.ಜಿ ದೇಹ ತೂಕ ಇಳಿಸಿ ಹೊಸ ಜೀವನ ಆರಂಭಿಸಿದ ಏಷ್ಯಾದ ಅತೀ ತೂಕದ ಮಹಿಳೆ..!

ದೇಹ ತೂಕದಿಂದ ಕೊಲೆಸ್ಟ್ರಾಲ್, ಟೈಪ್-2 ಡಯಾಬಿಟಿಸ್, ಉಸಿರಾಟದ ಸಮಸ್ಯೆಗಳು, ಮೂತ್ರಪಿಂಡಗಳ ತೊಂದರೆಗಳೂ ಅಮಿತಾ ಅವರನ್ನು ಆವರಿಸಿದ್ದವು. ಇವುಗಳೆಲ್ಲವನ್ನು ಗಣನೆಗೆ ತೆಗೆದುಕೊಂಡು ಶಸ್ತ್ರಚಿಕಿತ್ಸೆ ನಡೆಸಬೇಕಿದದ್ದು ವೈದ್ಯರಿಗೆ ಸವಾಲಿನ ವಿಷಯವಾಗಿತ್ತು.

zahir | news18
Updated:May 9, 2019, 6:09 PM IST
214 ಕೆ.ಜಿ ದೇಹ ತೂಕ ಇಳಿಸಿ ಹೊಸ ಜೀವನ ಆರಂಭಿಸಿದ ಏಷ್ಯಾದ ಅತೀ ತೂಕದ ಮಹಿಳೆ..!
ಅಮಿತಾ
  • News18
  • Last Updated: May 9, 2019, 6:09 PM IST
  • Share this:
ಬದಲಾದ ಜೀವನಶೈಲಿ ಮತ್ತು ಆಹಾರ ಕ್ರಮಗಳಿಂದ ಇಂದು ಪ್ರತಿಯೊಬ್ಬರಲ್ಲೂ ಬೊಜ್ಜುಗಳ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಒಂದು ವರದಿ ಪ್ರಕಾರ ಶೇ.100 ರಲ್ಲಿ 95 ರಷ್ಟು ಮಂದಿ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ದೇಹದಲ್ಲಿ ಬೊಜ್ಜು ಹೆಚ್ಚಾದಂತೆ ಸ್ಥೂಲಕಾಯತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಹೋಗಲಾಡಿಸಲು ನಾನಾ ರೀತಿಯ ಸಕರ್ಸ್​ ನಡೆಸಿದರೂ ಪರಿಣಾಮ ಮಾತ್ರ ಶೂನ್ಯ ಎನ್ನುವವರಿಗೆ ಮುಂಬೈನ ಅಮಿತಾ ರಾಜಾನಿ ಕಥೆ ಸ್ಪೂರ್ತಿಯಾಗಬಹುದು.

ಏಕೆಂದರೆ ಏಷ್ಯಾದ ಅತಿ ತೂಕದ ಮಹಿಳೆ ಎಂದು ಪ್ರಸಿದ್ಧಿ ಪಡೆದಿದ್ದ ಅಮಿತಾ ಇಂದು ಸ್ಲಿಮ್ ಅ್ಯಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ನಾಲ್ಕು ವರ್ಷದ ಹಿಂದೆ 300 ಕೆ.ಜಿಯಷ್ಟು ದೇಹ ತೂಕವನ್ನು ಹೊಂದಿದ್ದ ಇವರು ನಿಧಾನಕ್ಕೆ ಸ್ಥೂಲಕಾಯತೆಯಿಂದ ಹೊರ ಬಂದಿದ್ದಾರೆ. ಇದಕ್ಕಾಗಿ  ಅಚ್ಚುಕಟ್ಟಿನ ಆರೋಗ್ಯ ಕ್ರಮ ಮತ್ತು ಚಿಕಿತ್ಸೆ ಪದ್ಧತಿಯನ್ನು ಅನುಸರಿಸಿ 214 ಕೆ.ಜಿಯನ್ನು ಇಳಿಸಿದ್ದಾರೆ. ಇಂದು ಅಮಿತಾ ತಮ್ಮ ದೇಹ 86 ಕೆ.ಜಿಗೆ ತಲುಪಿಸಿದ್ದಾರೆ ಎಂದರೆ ನೀವು ನಂಬಲೇಬೇಕು.

ಅಮಿತಾ ಅವರು ಹುಟ್ಟಿದಾಗ ಸಮಾನ್ಯ ಮಕ್ಕಳ ತೂಕವನ್ನೇ ಹೊಂದಿದ್ದರು. ಜನಿಸಿದಾಗ 3.ಕೆಜಿ ಹೊಂದಿದ್ದ ಇವರು ಬೆಳೆಯುತ್ತಿದ್ದಂತೆ ತೂಕವನ್ನು ಹೆಚ್ಚಿಸಿಕೊಳ್ಳುತ್ತಾ ಹೋದರು. ಕೇವಲ 16 ವರ್ಷ ಆದಾಗಲೇ ಅಮಿತಾ ಅವರ ದೇಹ ತೂಕ 126 ಕೆ.ಜಿಗೆ ಏರಿತು. ಈ ಬಗ್ಗೆ ವೈದ್ಯರಿಗೆ ತೋರಿಸಿದರೂ ಸ್ಥೂಲಕಾಯತೆಗೆ ನಿಖರವಾದ ಕಾರಣ ಮಾತ್ರ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಭಾರತದ ಹಾಗೂ ಇಂಗ್ಲೆಂಡ್​ನ ಪ್ರಮುಖ ವೈದ್ಯರು ಪರಿಶೀಲಿಸಿದರೂ ಪರಿಣಾಮ ಮಾತ್ರ ಶೂನ್ಯವಾಗಿತ್ತು. ಬರುಬರುತ್ತಾ ದೇಹ ತೂಕವು ಹೆಚ್ಚುತ್ತಾ ಹೋಯಿತು. ಅಂದರೆ 200 ಕೆ.ಜಿಯನ್ನು ದಾಟಿ ಸಾಮಾನ್ಯ ಚಟುವಟಿಕೆಗಳನ್ನು ಮಾಡಲು ಪರದಾಡುವಂತಾದರು.

ಕಳೆದ 10 ವರ್ಷಗಳಿಂದ ಮನೆಯಿಂದ ಹೊರ ಬರಲಾಗದೇ ತಡವರಿಸಿದ್ದ ಅಮಿತಾ ಅವರು ಸ್ಥೂಲಕಾಯತೆ ವಿರುದ್ಧ ಹೋರಾಡಲು ಕೊನೆಗೂ ನಿರ್ಧರಿಸಿದರು. ಅದಕ್ಕಾಗಿ ಮುಂಬೈಯ ಲೀಲಾವತಿ ಆಸ್ಪತ್ರೆಯ ಡಾಕ್ಟರ್​ ಶಶಾಂಕ್ ಷಾ ಅವರನ್ನು ಭೇಟಿಯಾಗಿ ಚಿಕಿತ್ಸೆಗೆ ಸಲಹೆ ಪಡೆದರು. ಅದರಂತೆ ಲಿಯಿಪೊಸೆಕ್ಷನ್ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಸೂಚಿಸಿದ್ದರು. ಮೊದಲ ಬಾರಿಗೆ ಆಪರೇಷನ್​ಗೆ ತಯಾರಿ ನಡೆಸಿದ ವೈದ್ಯರು ಆಕೆಯನ್ನು ಆಪರೇಷನ್ ಥಿಯೇಟರ್​ಗೆ ಕರೆದುಕೊಂಡು ಹೋಗಲು ಹರಸಾಹಸ ಪಡಬೇಕಾಯಿತು.

ಇದನ್ನೂ ಓದಿ: IPL 2019: ಈ ಬಾರಿಯ ಐಪಿಎಲ್​ ಟ್ರೋಫಿ ಮುಂಬೈ ಮುಡಿಗೆ? ಇಲ್ಲಿದೆ ಕಾರಣ

ಅಂದರೆ ಒಂದು ಸಣ್ಣ ಶಸ್ತ್ರಕ್ರಿಯೆ ನಡೆಸಲು 20 ಜನರ ಸಹಾಯ ಪಡೆಯಬೇಕಾಯಿತು. ಇದರಿಂದ ಚೇತರಿಸಿಕೊಂಡ ಬಳಿಕ ಅಮಿತಾ ಅವರಿಗೆ ಮತ್ತೆರಡು ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಸ್ಲೀವ್ ಗ್ಯಾಸ್ಟ್ರೊಕ್ಟಮಿ ಹಾಗೂ ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿ ನಡೆಸಿದ ವೈದ್ಯರು ಅಮಿತಾ ಅವರ ದೇಹದಲ್ಲಿದ್ದ ಹೆಚ್ಚಿನ ಕೊಬ್ಬನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು.

ತೂಕ ಇಳಿಸಿರುವ ಅಮಿತಾ ರಾಜಾನಿ
ದೇಹ ತೂಕದಿಂದ ಕೊಲೆಸ್ಟ್ರಾಲ್, ಟೈಪ್-2 ಡಯಾಬಿಟಿಸ್, ಉಸಿರಾಟದ ಸಮಸ್ಯೆಗಳು, ಮೂತ್ರಪಿಂಡಗಳ ತೊಂದರೆಗಳೂ ಅಮಿತಾ ಅವರನ್ನು ಆವರಿಸಿದ್ದವು. ಇವುಗಳೆಲ್ಲವನ್ನು ಗಣನೆಗೆ ತೆಗೆದುಕೊಂಡು ಶಸ್ತ್ರಚಿಕಿತ್ಸೆ ನಡೆಸಬೇಕಿದದ್ದು ವೈದ್ಯರಿಗೆ ಸವಾಲಿನ ವಿಷಯವಾಗಿತ್ತು. ಅದರಂತೆ ಮೊದಲ ಬಾರಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರಿಗೆ ಅಮಿತಾ ಅವರನ್ನು 30 ದಿನಗಳ ಕಾಲ ವೈದ್ಯರ ನಿಗಾದಲ್ಲಿರಿಸಲಾಯಿತು. ಇದಾದ ನಂತರ ಎರಡನೇ ಶಸ್ತ್ರ ಚಿಕಿತ್ಸೆಗೆ  ಅವರನ್ನು ಒಳಪಡಿಸಲಾಯಿತು. ಈ ವೇಳೆ ಅಮಿತಾ ರಾಜಾನಿ 140 ಕೆ.ಜಿ ಹೊಂದಿದ್ದರು. ಇದೀಗ ಸಂಪೂರ್ಣ ಚಿಕಿತ್ಸೆಯನ್ನು ಮುಗಿಸಿರುವ ಅಮಿತಾ 214 ಕೆ.ಜಿ ತೂಕದಿಂದ 86 ಕೆ.ಜಿಗೆ ದೇಹವನ್ನು ಇಳಿಸಿಕೊಂಡಿದ್ದಾರೆ. ಅಲ್ಲದೆ ಸ್ಥೂಲಕಾಯತೆಯನ್ನು ಹೋಗಲಾಡಿಸಿ ಹೊಸ ಜೀವನವನ್ನು ಆರಂಭಿಸಿದ್ದಾರೆ. ಈ ಹಿಂದೆ ತನ್ನಿಂದ ಸಾಧ್ಯವಾಗದ ಕೆಲಸಗಳನ್ನು ಇಂದು ಸಂತೋಷದಿಂದ ಮಾಡಿ ಮುಗಿಸುತ್ತಿದ್ದಾರೆ ಅಮಿತಾ ರಾಜಾನಿ.

First published:May 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ