Baby Drives Car: ಒಂಟಿಯಾಗಿ ಅಮ್ಮನ ಕಾರು ಡ್ರೈವ್ ಮಾಡಿದ 4 ವರ್ಷದ ಮಗು, ಆಕ್ಸಿಡೆಂಟ್ ನಂತ್ರ ಅರೆಸ್ಟ್

ನೆದರ್‌ಲ್ಯಾಂಡ್‌ನಲ್ಲಿರುವ ನಾಲ್ಕು ವರ್ಷದ ಪುಟ್ಟ ಬಾಲಕನೊಬ್ಬ ತನ್ನ ತಾಯಿಯ ಕಾರಿನ ಕೀ ಗಳನ್ನು ಮೆಲ್ಲಗೆ ತೆಗೆದುಕೊಂಡು ಹೋಗಿ ಆಕೆಯ ಕಾರನ್ನು ಸ್ಟಾರ್ಟ್‌ ಮಾಡಿ ಅಪಘಾತ ಮಾಡಿದ್ದಾನೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಗಳು ಸಂಭವಿಸಿಲ್ಲ, ಬದಲಾಗಿ ಅಲ್ಲೇ ನಿಲ್ಲಿಸಲಾದ ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.

ಕಾರು ಚಲಾಯಿಸಿದ 4 ವರ್ಷದ ಮಗು

ಕಾರು ಚಲಾಯಿಸಿದ 4 ವರ್ಷದ ಮಗು

  • Share this:
ಕೆಲವೊಮ್ಮೆ ಪುಟ್ಟ ಮಕ್ಕಳು ಮಾಡುವ ಎಡವಟ್ಟುಗಳು ಒಂದೆರಡಲ್ಲ, ಅವುಗಳ ಮೇಲೆ ವಿಶೇಷವಾದ ನಿಗಾ ಇಡಲೇಬೇಕು. ಏಕೆಂದರೆ ಈ ಮಕ್ಕಳು (Children) ಯಾವ ಸಮಯದಲ್ಲಿ ಏನು ಮಾಡುತ್ತವೆ ಎಂದು ಊಹಿಸುವುದಕ್ಕೂ ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದು ಹೇಳಬಹುದು. ಕೆಲವೊಂದು ಘಟನೆಗಳಲ್ಲಿ ಈ ಮಕ್ಕಳು ತಮ್ಮ ಮನೆಯಲ್ಲಿರುವ ಕಾರಿನ (Car) ಕೀಲಿ ಕೈ ಗಳನ್ನು ಯಾರಿಗೂ ಕಾಣದಂತೆ ತೆಗೆದುಕೊಂಡು ಹೋಗಿ ಕಾರಿನ ಬಾಗಿಲನ್ನು (Car Door) ತೆರೆದು ಚಾಲಕನ ಆಸನದಲ್ಲಿ (Driver seat) ಕುಳಿತು ಅಲ್ಲಿರುವ ಸ್ಟೇರಿಂಗ್ ಅನ್ನು ಮನಬಂದಂತೆ ತಿರುಗಿಸುತ್ತವೆ.

ಎಲ್ಲವನ್ನೂ ಗಮನಿಸ್ತಾರೆ ಮಕ್ಕಳು

ಒಟ್ಟಿನಲ್ಲಿ ಈ ಮಕ್ಕಳು ದೊಡ್ಡವರು ಏನು ಮಾಡುತ್ತಾರೆ ಎನ್ನುವುದನ್ನು ಬಹಳ ಚೆನ್ನಾಗಿ ಗಮನಿಸಿರುತ್ತಾರೆ. ಏಕೆಂದರೆ ಕಾರಿನ ಬಾಗಿಲನ್ನು ಹೇಗೆ ತೆರೆಯುವುದು, ಅದು ತೆರೆದ ನಂತರ ಹೇಗೆ ಒಳಗೆ ಹೋಗಿ ಕುಳಿತುಕೊಳ್ಳುವುದು ಮತ್ತು ಕೆಲವೊಮ್ಮೆ ಬೀಗದ ಕೈಯನ್ನು ಹಾಕಿ ಕಾರು ಹೇಗೆ ಶುರು ಮಾಡಬೇಕೆಂದು ಕಲಿತಿರುತ್ತಾರೆ.

ತುಂಬಾ ದೊಡ್ಡ ಎಡವಟ್ಟು

ಹೀಗೆ ಒಮ್ಮೊಮ್ಮೆ ಮಕ್ಕಳು ಏನು ಮಾಡುತ್ತಿದ್ದಾರೆ ಅಂತ ನಾವು ಗಮನಿಸದೆ ಹೋದರೆ ತುಂಬಾ ದೊಡ್ಡ ಎಡವಟ್ಟುಗಳನ್ನು ಮಾಡುತ್ತಾರೆ. ಇಲ್ಲಿಯೂ ಸಹ ಇಂತಹದೇ ಒಂದು ಎಡವಟ್ಟನ್ನು ಈ ನಾಲ್ಕು ವರ್ಷದ ಪುಟ್ಟ ಬಾಲಕ ಮಾಡಿದ್ದಾನೆ ನೋಡಿ.

ತಾಯಿಯ ಕಾರನ್ನೇ ಓಡಿಸಿದ 4 ವರ್ಷದ ಬಾಲಕ

ನೆದರ್‌ಲ್ಯಾಂಡ್‌ನಲ್ಲಿರುವ ನಾಲ್ಕು ವರ್ಷದ ಪುಟ್ಟ ಬಾಲಕನೊಬ್ಬ ತನ್ನ ತಾಯಿಯ ಕಾರಿನ ಕೀ ಗಳನ್ನು ಮೆಲ್ಲಗೆ ತೆಗೆದುಕೊಂಡು ಹೋಗಿ ಆಕೆಯ ಕಾರನ್ನು ಸ್ಟಾರ್ಟ್‌ ಮಾಡಿ ಅಪಘಾತ ಮಾಡಿದ್ದಾನೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಗಳು ಸಂಭವಿಸಿಲ್ಲ, ಬದಲಾಗಿ ಅಲ್ಲೇ ನಿಲ್ಲಿಸಲಾದ ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯರು ನೋಡಿದ ಕಾರಣ ಗೊತ್ತಾಯ್ತು

ಸುದ್ದಿ ಮಾಧ್ಯಮದ ಪ್ರಕಾರ, ಉಟ್ರೆಕ್ಟ್ ಮಧ್ಯೆ ನಗರದ ಪೊಲೀಸರು ಶನಿವಾರ ಮಗುವು ತನ್ನ ಪೈಜಾಮಾ ಮತ್ತು ಬರಿಗಾಲಿನಲ್ಲಿ ಕಾರಿನಿಂದ ಇಳಿದು ಹೋಗುವ ಮುನ್ನ ಆತನ ಕಾರು ಅಲ್ಲೇ ನಿಲ್ಲಿಸಿದ್ದ ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಮಾಹಿತಿ ನೀಡಿದರು. ಚಳಿಯಲ್ಲಿ ಮಗು ಒಂಟಿಯಾಗಿ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ನಂತರ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.






ಸದ್ಯ ಯಾರಿಗೂ ಗಾಯವಾಗಿಲ್ಲ

ಈ ಪುಟ್ಟ ಬಾಲಕನು ಮಾಡಿದ ಅವಾಂತರದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ತಿಳಿಸಿದ್ದಾರೆ. ಬೆಲ್ಜಿಯಂ-ಡಚ್ ರೇಸಿಂಗ್ ಚಾಲಕ ಮತ್ತು 2021 ರ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಎಂಬ "ಹೊಸ ಮ್ಯಾಕ್ಸ್ ವರ್ಸ್ಟಾಪೆನ್" ಅನ್ನು ಕಂಡು ಹಿಡಿದಿರುವುದಾಗಿ ಪೊಲೀಸರು ತಮಾಷೆಯಾಗಿ ತಮ್ಮ ಸಾಮಾಜಿಕ ಮಾಧ್ಯಮದ ಪುಟದಲ್ಲಿ ಹೇಳಿದರು.

ಆ್ಯಕ್ಸಿಡೆಂಟ್ ಮಾಡಿರೋದು 4 ವರ್ಷದ ಮಗು ಎಂದು ಯಾರಿಗೂ ಗೊತ್ತಿರಲಿಲ್ಲ

ಈ ಶೀರ್ಷಿಕೆಯಲ್ಲಿ, ಮಗು ಶನಿವಾರ ತನ್ನ ತಂದೆ ಕೆಲಸಕ್ಕೆಂದು ಹೊರಗೆ ಹೋದಾಗ ಎಚ್ಚರಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ನಂತರ ಅವನು ತನ್ನ ತಾಯಿಯ ಕಾರಿನ ಕೀಲಿಕೈಗಳನ್ನು "ಡ್ರೈವ್‌ಗೆ ಹೋಗಲು" ತೆಗೆದುಕೊಂಡನು. ಹತ್ತಿರದಲ್ಲಿದ್ದ ಎರಡು ವಾಹನಗಳಿಗೆ ಹೋಗಿ ಈ ಕಾರು ಅಪ್ಪಳಿಸಿದ ನಂತರ ಅವನನ್ನು ಕರೆದೊಯ್ಯಲು ಪೊಲೀಸರನ್ನು ಕರೆಸಲಾಯಿತು.

ಇದನ್ನೂ ಓದಿ: Live in relationshipನಲ್ಲಿದ್ದ ಮೂವರನ್ನು ಒಂದೇ ಮಂಟಪದಡಿ ಮದುವೆಯಾದ ವರ!

ಅಪಘಾತಕ್ಕೀಡಾದ ಕಾರು ಮತ್ತು ಈ ಪುಟ್ಟ ಬಾಲಕನಿಗೆ ಸಂಬಂಧವಿದೆ ಎಂದು ಪೊಲೀಸರು ನಂತರ ಕಂಡುಕೊಂಡರು. ಆದರೆ ಅಧಿಕಾರಿಗಳು ಬಾಲಕನ ತಾಯಿಗೆ ದೂರವಾಣಿ ಕರೆ ಮಾಡಿದಾಗ ಅವರ ಪುಟ್ಟ ಮಗ ಕಾರು ಅಪಘಾತಕ್ಕೀಡಾದಾಗ ಚಾಲಕನಾಗಿದ್ದನು ಎಂದು ಅವರು ಆವಾಗ ಅರಿತುಕೊಂಡರು.

ಠಾಣೆಗೆ ಒಯ್ದು ಚಾಕಲೇಟ್, ಟೆಡ್ಡಿಬೇರ್​ ಕೊಟ್ಟ ಪೊಲೀಸರು

ಪೊಲೀಸರು ಮಗುವನ್ನು ಪೊಲೀಸ್ ಠಾಣೆಗೆ ಕರೆದೊಯ್ದರು, ಅಲ್ಲಿ ಅವನಿಗೆ ಹಾಟ್ ಚಾಕೊಲೇಟ್ ಮತ್ತು ಟೆಡ್ಡಿ ಬೇರ್ ನೀಡಲಾಯಿತು, ನಂತರ ಅವನ ತಾಯಿಯೊಂದಿಗೆ ಅವನನ್ನು ಕಳುಹಿಸಿಕೊಡುವ ಮೊದಲು ಒಟ್ಟಿಗೆ ಅವರು ಅಪಘಾತದ ಸ್ಥಳಕ್ಕೆ ಹೋದರು.

ಎಲ್ಲವನ್ನೂ ವಿವರಿಸಿದ ಪೋರ

ಅಲ್ಲಿ ಆ 4 ವರ್ಷದ ಮಗುವನ್ನು ಕಾರು ಹೇಗೆ ಓಡಿಸಿದೆ ಎಂದು ತೋರಿಸಬಹುದೇ ಎಂದು ಕೇಳಲಾಯಿತು. ನಂತರ ಆ ಮಗುವು ತನ್ನ ತಾಯಿಯಿಂದ ಕಾರಿನ ಕೀ ಯನ್ನು ತೆಗೆದುಕೊಂಡು ಹೋಗಿ ಕಾರಿನ ಬಾಗಿಲನ್ನು ತೆರೆದು, ಕೀ ಅನ್ನು ಇಗ್ನಿಷನ್‌ನಲ್ಲಿ ಇರಿಸಿ ಮತ್ತು ಕ್ಲಚ್ ಹಾಗೂ ಗ್ಯಾಸ್ ಪೆಡಲ್‌ಗಳನ್ನು ತನ್ನ ಪಾದಗಳಿಂದ ಒತ್ತಿದ್ದೇನೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: Kicking Cat Into Sea: ಪಾಪದ ಬೆಕ್ಕಿಗೆ ಒದ್ದವನು ಅರೆಸ್ಟ್! ಬೇಕಿತ್ತಾ ಈ ಕೆಲಸ?

ಅಮ್ಮನಿಗೆ ಪೊಲೀಸರ ಸಲಹೆ

ಪೊಲೀಸರು ಆ ಪುಟ್ಟ ಬಾಲಕನ ತಾಯಿಗೆ ಮಗುವಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಮತ್ತು ಭವಿಷ್ಯದಲ್ಲಿ ಕಾರಿನ ಕೀಲಿಕೈಗಳನ್ನು ಮಗುವಿಗೆ ಗೊತ್ತಾಗದ ಸ್ಥಳದಲ್ಲಿ ಇರಿಸಲು ಸಲಹೆ ನೀಡಿದರು.
Published by:Divya D
First published: