• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Bodhi Tree: ಒಂದು ಮರದ ಸೆಕ್ಯುರಿಟಿಗೆ ಬರೋಬ್ಬರಿ 64 ಲಕ್ಷ, ಅಷ್ಟಕ್ಕೂ ಇದರ ವಿಶೇಷತೆಯೇನು ಗೊತ್ತಾ?

Bodhi Tree: ಒಂದು ಮರದ ಸೆಕ್ಯುರಿಟಿಗೆ ಬರೋಬ್ಬರಿ 64 ಲಕ್ಷ, ಅಷ್ಟಕ್ಕೂ ಇದರ ವಿಶೇಷತೆಯೇನು ಗೊತ್ತಾ?

ಮಧ್ಯ ಪ್ರದೇಶದಲ್ಲಿರುವ ಬೋಧಿ ವೃಕ್ಷ

ಮಧ್ಯ ಪ್ರದೇಶದಲ್ಲಿರುವ ಬೋಧಿ ವೃಕ್ಷ

Bodhi Tree: ಮಧ್ಯಪ್ರದೇಶದ ರಾಯ್​​ಸೇನ್​ ಜಿಲ್ಲೆಯಲ್ಲಿರುವ ಸಾಂಚಿ ಸ್ತೂಪದ ಬಳಿ ವಿಶೇಷವಾದ ಮರವೊಂದಿದೆ. ಈ ಮರದ ರಕ್ಷಣೆಗಾಗಿ ಪ್ರತಿನಿತ್ಯ, ಅಂದರೆ ದಿನದ 24 ಗಂಟೆಯೂ ನಾಲ್ಕು ಮಂದಿ ಗ್ರಹರಕ್ಷಕರನ್ನು ಆಯ್ಕೆ ಮಾಡಲಾಗಿದೆ. ಇನ್ನು ಈ ಮರ ಕುತೂಹಲಕಾರಿಯಾದಂತಹ ಇತಿಹಾಸವನ್ನು ಹೊಂದಿದ್ದು, ಇದನ್ನು ಬೋಧಿ ವೃಕ್ಷ ಎಂದೂ ಕರೆಯುತ್ತಾರೆ.

ಮುಂದೆ ಓದಿ ...
 • Share this:

ದೇಶದಲ್ಲಿ ನಮಗೆ ಗೊತ್ತಿರದ ಹಲವು ಸಂಗತಿಗಳಿವೆ. ಪ್ರಸ್ತುತ ದಿನದಲ್ಲಿ ಏನಾದರೊಂದು ಅಚ್ಚರಿಯ ಘಟನೆಗಳು ನಡೆಯುತ್ತಿರುತ್ತದೆ. ನಂತರ ಅದೇ ಸೋಶಿಯಲ್ ಮೀಡಿಯಾದಲ್ಲಿ (Social Media) ಫುಲ್ ವೈರಲ್ ಆಗುತ್ತದೆ. ನಾವೆಲ್ಲರು ಸಾಕಷ್ಟು ರೀತಿಯ ಮರಗಳನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಮರಕ್ಕೆ ಬರೋಬ್ಬರಿ 64 ಲಕ್ಷ ಖರ್ಚು ಮಾಡಿದ್ದಾರಂತೆ. ಯಾಕೆಂದರೆ ಇದರ ವಿಶೇಷತೆಯೇ ಅಷ್ಟಿದೆ. ಇತಿಹಾಸದ (History) ಪುಟದಲ್ಲಿ ಈ ಮರವೂ (Tree) ಒಂದಿದೆ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ಹಾಗಿದ್ರೆ ಅಷ್ಟಕ್ಕೂ ಈ ಮರದ ವಿಶೇಷತೆಯೇನು ಎಂಬುದನ್ನು ತಿಳಿಬೇಕಾದ್ರೆ ಈ ಲೇಖನದಲ್ಲಿದೆ ಕಂಪ್ಲೀಟ್ ಮಾಹಿತಿ.


ಹೌದು, ಮಧ್ಯಪ್ರದೇಶದ ರಾಯ್​​ಸೇನ್​ ಜಿಲ್ಲೆಯಲ್ಲಿರುವ ಸಾಂಚಿ ಸ್ತೂಪದ ಬಳಿ ವಿಶೇಷವಾದ ಮರವೊಂದಿದೆ. ಈ ಮರದ ರಕ್ಷಣೆಗಾಗಿ ಪ್ರತಿನಿತ್ಯ, ಅಂದರೆ ದಿನದ 24 ಗಂಟೆಯೂ ನಾಲ್ಕು ಮಂದಿ ಗ್ರಹರಕ್ಷಕರನ್ನು ಆಯ್ಕೆ ಮಾಡಲಾಗಿದೆ. ಇನ್ನು ಈ ಮರ ಕುತೂಹಲಕಾರಿಯಾದಂತಹ ಇತಿಹಾಸವನ್ನು ಹೊಂದಿದ್ದು, ಇದನ್ನು ಬೋಧಿ ವೃಕ್ಷ (Bodhi Tree) ಎಂದೂ ಕರೆಯುತ್ತಾರೆ.


ಬುದ್ಧನಿಗೆ ಜ್ಞಾನೋದಯವಾದ ಮರವಿದು


ಗೌತಮ ಬುದ್ಧ ತನ್ನ ಲೌಕಿಕ ಜೀವನವನ್ನು ತ್ಯಜಿಸಿ, ಆಧ್ಯಾತ್ಮಿಕ ಜೀವನಕ್ಕಾಗಿ ತೆರಳುತ್ತಾರೆ. ಅದು 2500 ವರ್ಷಗಳ ಹಿಂದೆ ಉತ್ತರ ಭಾರತದಲ್ಲಿ ಬೋಧಿ ಮರದ ಕೆಳಗೆ ಧ್ಯಾನ ಮಾಡುವಾಗ ಬುದ್ಧನಿಗೆ ಈ ಮರದ ಕೆಳಗೆಯೇ ಜ್ಞಾನೋದಯವಾದದ್ದು ಎನ್ನಲಾಗಿದೆ. ಅದರ ನಂತರ ಈ ಮರ ಬೋಧಿ ವೃಕ್ಷ ಅಥವಾ  ಜ್ಞಾನೋದಯದ ವೃಕ್ಷ ಎಂದು ಜನಪ್ರಿಯತೆಯನ್ನು ಪಡೆಯಿತು.


ಇದನ್ನೂ ಓದಿ: Viral News: ಹೆತ್ತವರ ವಿರುದ್ಧವೇ ಕೋರ್ಟ್ ಮೊರೆ ಹೋದ ಮಗಳು; ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್


ನಂತರ ಅಶೋಕ ಚಕ್ರವರ್ತಿ ತನ್ನ ರಾಜಧಾನಿಯಾದ ಅನುರಾಧಪುರದಲ್ಲಿ ನೆಟ್ಟ ಬೋಧಿ ವೃಕ್ಷದ ಕೊಂಬೆಯನ್ನು ದೇವನಂಪಿಯ ರಾಜ ತಿಸ್ಸನಿಗೆ ಕೊಡುಗೆಯಾಗಿ ನೀಡಿದನು. ಅದಕ್ಕಾಗಿ ಆ ಕೊಂಬೆಯನ್ನು ಶ್ರೀಲಂಕಾಗೆ ಕಳುಹಿಸಿದ್ದಾರೆ ಎಂದು ಇತಿಹಾಸದಲ್ಲಿ ದಾಖಲಾಗಿದೆ.


ಮಧ್ಯ ಪ್ರದೇಶದಲ್ಲಿರುವ ಬೋಧಿ ವೃಕ್ಷ


ಸಂಸದರಿಗೆ ಸಹ ಈ ಕೊಡುಗೆಯನ್ನು ನೀಡಿದ್ದರು


2012 ರಲ್ಲಿ, ಶ್ರೀಲಂಕಾದ ಅಂದಿನ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ಆ ಮರದಿಂದ ತೆಳುವಾದ ಕೊಂಬೆಯನ್ನು ತಂದು ಸಂಸದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿ ಸಂಸದ ಸಲಾಮತ್‌ಪುರ ಬಳಿಯ ಗುಡ್ಡದ ಮೇಲೆ ನೆಟ್ಟಿದ್ದರು. ಸದ್ಯ ಆ ಮರ 6 ಮೀಟರ್ ಉದ್ದದಷ್ಟು ಬೆಳೆದಿದ್ದು, ನೀರಿಲ್ಲದೆ ಒಣಗುತ್ತಿದೆ. ಇನ್ನು ಈ ಮರವನ್ನು ಪ್ರತಿ ವಾರ ಮಧ್ಯಪ್ರದೇಶದ ಕೃಷಿ ಇಲಾಖೆಯ ಸಸ್ಯಶಾಸ್ತ್ರಜ್ಞರು ಭೇಟಿ ನೀಡಿ ಚೆಕ್ ಮಾಡುತ್ತಿರುತ್ತಾರೆ.


ತೋಟಗಾರಿಕಾ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ


ಸದ್ಯ ಈ ಮರವನ್ನು ಕಾವಲು ಕಾಯಲು ಮತ್ತು ನೀರುಣಿಸಲು ರಾಜ್ಯದಲ್ಲಿ ಇದುವರೆಗೆ 64 ಲಕ್ಷ ರೂಪಾಯಿವರೆಗೆ ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ. ಇನ್ನು ದಿನದ 24 ಗಂಟೆಯೂ ಮರದ ಬಳಿ ನಾಲ್ವರು ಗೃಹರಕ್ಷಕರು ಬೀಡುಬಿಟ್ಟಿದ್ದಾರೆ.


top videos  ಇನ್ನು ಈ ಮರಕ್ಕೆ ಲೀಫ್ ಕ್ಯಾಟರ್ಪಿಲ್ಲರ್ ಎಂಬ ಕೀಟ ಬಾಧೆಗೊಳಗಾಗಿದ್ದು, ಮರದ ಎಲೆಗಳು ಒಣಗುತ್ತಿರುವುದರಿಂದ ಮರವು ಇದೀಗ ರೋಗವನ್ನು ಎದುರಿಸುತ್ತಿದೆ. ಆದರೆ ಈ ಮರದ ಕೀಟಗಳ ದಾಳಿಗೆ ತೋಟಗಾರಿಕಾ ಇಲಾಖೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಭದ್ರತಾ ಸಿಬ್ಬಂದಿ.

  First published: