ಇತಿಹಾಸವನ್ನು ಹೆಕ್ಕಿದಷ್ಟು ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಪ್ರತಿ ದೇಶಕ್ಕೂ ತನ್ನದೇ ಆದ ವಿಶಿಷ್ಟ ಇತಿಹಾಸ ಇದ್ದೇ ಇರುತ್ತದೆ. ಹಾಗೆಯೇ ಜಗತ್ತಿನಲ್ಲಿ ಹೊಸ ಹೊಸ ಸಂಶೋಧನೆಗಳು (Research) ಪ್ರತಿದಿನ ನಡೆಯುತ್ತಲೇ ಇವೆ. ನ್ಯೂಯಾರ್ಕ್ನಲ್ಲಿ (New york) ಹೊಸ ಸಂಶೋಧನೆಯಲ್ಲಿ ಪತ್ತೆಯಾದ ಸಣ್ಣ ಬಂಡೆಗಳಲ್ಲಿ 390 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಸಾಗರದ ನೀರು ಪತ್ತೆಯಾಗಿದೆ. ಅದರ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯೋಣ. ಪೆಸಿಫಿಕ್ ವಾಯುವ್ಯ ರಾಷ್ಟ್ರೀಯ ಪ್ರಯೋಗಾಲಯದ (Pacific Northwest National Laboratory) ನೇತೃತ್ವದ ಹೊಸ ಅಧ್ಯಯನದಲ್ಲಿ, ವಿಜ್ಞಾನಿಗಳು 390 ಮಿಲಿಯನ್ ವರ್ಷಗಳಷ್ಟು ಹಳೆಯ ಬಂಡೆಗಳಲ್ಲಿ ಉಪ್ಪುನೀರಿನ ಸಣ್ಣ ಗುಳ್ಳೆಗಳನ್ನು ಪತ್ತೆ ಮಾಡಿದ್ದಾರೆ.
ಸೈನ್ಸ್ ಅಲರ್ಟ್ನ ವರದಿ ಏನ್ ಹೇಳ್ತಿದೆ?
ಸೈನ್ಸ್ ಅಲರ್ಟ್ನ ವರದಿಯು “ಕಬ್ಬಿಣದ ಪೈರೈಟ್ ಬಂಡೆಗಳು ನ್ಯೂಯಾರ್ಕ್ನಲ್ಲಿ ಕಂಡುಬಂದಿವೆ. ದಾಖಲೆಯ ಪ್ರಕಾರ ನೋಡುವುದಾದರೆ ಅತ್ಯಂತ ಹಳೆಯ ನೀರಿನ ಮಾದರಿಯಲ್ಲದಿದ್ದರೂ, ಇವುಗಳು ಅಧ್ಯಯನ ಮಾಡಬೇಕಾದ ಪ್ರಾಚೀನ ಸಾಗರಗಳ ಚಿಕ್ಕ ಅವಶೇಷಗಳಾಗಿವೆ.
ಬಂಡೆಗಳಿಂದ ವಿಷಕಾರಿ ಆರ್ಸೆನಿಕ್ ಸೋರಿಕೆಯನ್ನು ತನಿಖೆ ಮಾಡುವ ಸಂಶೋಧನಾ ತಂಡವು ಈ ಬಂಡೆಗಳನ್ನು ಗುರುತಿಸಿದೆ ಎಂದು ಸುದ್ದಿ ಮಾಧ್ಯಮ ಔಟ್ಲೆಟ್ ಹೇಳಿದೆ” ಎಂದು ಹೇಳುತ್ತಿದೆ.
ಸಂಶೋಧನೆಯ ಅಧ್ಯಯನ ಹೇಳ್ತಿದೆ?
“ಈ ಅಧ್ಯಯನವು ಹೈಡ್ರೋಜನ್ ಇಂಧನ ಅಥವಾ ಇತರ ಸ್ಫೋಟಕ ಅನಿಲಗಳನ್ನು ನೆಲದಡಿಯಲ್ಲಿ ಸುರಕ್ಷಿತವಾಗಿ ಹೇಗೆ ಸಂಗ್ರಹಿಸುವುದು ಎಂಬುದರ ಕುರಿತು ಮಾಹಿತಿಯನ್ನು ನೀಡುತ್ತದೆ” ಎಂದು ಸಂಶೋಧನಾ ವಿಜ್ಞಾನಿಗಳು ಹೇಳಿದ್ದಾರೆ.
ಸಂಶೋಧಕರು ಈಗ ಪತ್ತೆಯಾಗಿರುವ ಸಮುದ್ರದ ನೀರನ್ನು ಪರೀಕ್ಷಿಸಿದಾಗ, ಆ ಸಮಯದಲ್ಲಿ ದೈತ್ಯ ಮೀನುಗಳು, ಅಮೋನಾಯ್ಡ್ಗಳು, ದೈತ್ಯ ಸಮುದ್ರ ಚೇಳುಗಳು ಮತ್ತು ಟ್ರೈಲೋಬೈಟ್ಗಳು ಸಮುದ್ರಗಳಲ್ಲಿ ಸಂಚರಿಸುತ್ತಿದ್ದವು ಎಂಬುದು ಈ ಸಂಶೋಧನೆಯಿಂದ ತಿಳಿದು ಬಂದಿದೆ.
ಫ್ರಾಂಬಾಯ್ಡ್ಸ್ ಎಂದ್ರೇನು?
ಸಂಶೋಧಕರು ಉತ್ಖನನ ಸಮಯದಲ್ಲಿ,ಸಣ್ಣ ಪೈರೈಟ್ ಸ್ಫಟಿಕಗಳನ್ನು ಗುರುತಿಸಿದ್ದಾರೆ, ಇದನ್ನು ಫ್ರಾಂಬಾಯ್ಡ್ಸ್ ಎಂದು ಕರೆದಿದ್ದಾರೆ.
ಜಿಯೋಕೆಮಿಸ್ಟ್ ಏನ್ ಹೇಳ್ತಿದಾರೆ?
"ನಾವು ಮೊದಲು ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಮೂಲಕ ಈ ಮಾದರಿಗಳನ್ನು ಪರೀಕ್ಷೆ ಮಾಡಿದ್ದೇವೆ. ನಾವು ಫ್ರಾಂಬಾಯ್ಡ್ನಲ್ಲಿ ಈ ರೀತಿಯ ಮಿನಿ ಬಬಲ್ಗಳು ಅಥವಾ ಮಿನಿ ವೈಶಿಷ್ಟ್ಯಗಳನ್ನು ಗುರುತಿಸಿದ್ದೇವೆ. ನಮಗೆ ಅವು ಏನೆಂದು ಆಶ್ಚರ್ಯವಾಗಿದೆ" ಎಂದು ವಾಷಿಂಗ್ಟನ್ನ ಯುಎಸ್ ಡಿಪಾರ್ಟ್ಮೆಂಟ್ ಆಫ್ ಎನರ್ಜಿ ಪೆಸಿಫಿಕ್ ನಾರ್ತ್ವೆಸ್ಟ್ ನ್ಯಾಶನಲ್ ಲ್ಯಾಬೋರೇಟರಿ (ಪಿಎನ್ಎನ್ಎಲ್) ಜಿಯೋಕೆಮಿಸ್ಟ್ ಸಾಂಡ್ರಾ ಟೇಲರ್ ಅವರು ಈ ಆವಿಷ್ಕಾರದ ಬಗ್ಗೆ ತಿಳಿಸಿದರು.
“ಈ ಅಧ್ಯಯನವು ವಿಜ್ಞಾನಿಗಳಿಗೆ ಹೈಡ್ರೋಜನ್ ಇಂಧನ ಅಥವಾ ಇತರ ಸ್ಫೋಟಕ ಅನಿಲಗಳನ್ನು ಭೂಗತ ಅಥವಾ ಬಂಡೆಗಳಲ್ಲಿ ಹೇಗೆ ಸುರಕ್ಷಿತವಾಗಿ ಸಂಗ್ರಹಿತವಾಗಿದೆ ಎಂಬುದರ ಕುರಿತು ಜ್ಞಾನವನ್ನು ನೀಡುತ್ತದೆ” ಎಂದು ಸಾಂಡ್ರಾ ಟೇಲರ್ ಅವರು ಹೇಳಿದರು.
ನೀರು ಹಿಡಿದಿಟ್ಟುಕೊಳ್ಳುವ ಸಾಮಾರ್ಥ್ಯ
"ಈ ಸಂಶೋಧನೆಯು ನ್ಯಾನೊಮೀಟರ್ ಪ್ರಮಾಣದಲ್ಲಿ ಖನಿಜಗಳಲ್ಲಿನ ಸಣ್ಣ ಸ್ಪಟಿಕಗಳ ಇರುವಿಕೆಯನ್ನು ತೋರಿಸುತ್ತದೆ. ಅವುಗಳು ನೀರನ್ನು ಹಿಡಿದಿಟ್ಟುಕೊಳ್ಳಬಹುದು ಮತ್ತು ಪ್ರತಿಯಾಗಿ ಅವುಗಳು ಹೈಡ್ರೋಜನ್ ಅನ್ನು ಹೀರಿಕೊಳ್ಳುವ ಸಾಧ್ಯತೆಯಿದೆ ಎಂದು ನಾವು ಗಮನಿಸಿದ್ದೇವೆ. ಆದ್ದರಿಂದ ಭೂಗತ ಹೈಡ್ರೋಜನ್ ಸಂಗ್ರಹಣೆಯನ್ನು ಅರ್ಥಮಾಡಿಕೊಳ್ಳಲು ಎಲ್ಲಾ ಪ್ರಯತ್ನಗಳು ನಡೆದಿವೆ.
ಈ ಸ್ಪಟಿಕ ಗುಳ್ಳೆಗಳು ಯಾವ ಪಾತ್ರವನ್ನು ಹೊಂದಿರಬಹುದು ಎಂಬುದನ್ನು ಪರಿಗಣಿಸುವುದು ಮುಖ್ಯವಾಗಿದೆ. ಅದನ್ನು ಮಾಡಲು ನಾವು ಈ ಸಂಶೋಧನೆಯ ವಿಧಾನವನ್ನು ಅನ್ವಯಿಸಬಹುದು ಎಂದು ಭಾವಿಸುತ್ತೇವೆ" ಎಂಬುದಾಗಿ ಎಂ. ಎಸ್. ಟೇಲರ್ ಅವರು ಹೇಳುತ್ತಾರೆ.
ಇದನ್ನೂ ಓದಿ: Viral News: ಅಬ್ಬಬ್ಬಾ ಏನ್ ಐಡಿಯಾ ಗುರೂ ಇದು; ತಲೆ ಕೂದಲನ್ನು ಹೀಗೂ ತೊಳೆಯಬಹುದು!
ಈ ಸಂಶೋಧನೆಯಲ್ಲಿ ಪತ್ತೆಯಾದ ನೀರು ಪ್ರಾಚೀನ ಭೂಮಿಯ ಹವಾಮಾನದ ಬಗ್ಗೆ ಒಳನೋಟವನ್ನು ನೀಡುತ್ತದೆ. ಈ ನೀರು ಕಾಲಾನಂತರದಲ್ಲಿ ಹೇಗೆ ಬದಲಾಯಿತು ಎಂಬುದನ್ನು ಸಹ ಇದು ತಿಳಿಸಿ ಕೊಡುತ್ತದೆ. ಈ ಸಂಶೋಧನೆಯು ನವೆಂಬರ್ 17 ರಂದು ಅರ್ಥ್ ಮತ್ತು ಪ್ಲಾನೆಟರಿ ಸೈನ್ಸ್ ಲೆಟರ್ಸ್ ಜರ್ನಲ್ನಲ್ಲಿ ಪ್ರಕಟವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ