ಎರಡು ದಿನ ಸೇಮ್ ತಿಂಡಿ ತಿಂದರೆ ಸಾಕು ಅಮ್ಮಾ ನಾಳೆಗೆ ಬೇರೇನಾದ್ರೂ ಮಾಡು ಅಂತಾರೆ ಮಕ್ಕಳು. ಮಕ್ಕಳು ಎಂದಲ್ಲ ಎಲ್ಲ ವಯಸ್ಸಿನವರಿಗೂ ಒಂದೇ ತೆರನಾದ ತಿಂಡಿ ತಿಂಡಿ ಹಿಡಿಸುವುದಿಲ್ಲ. ನಾಳೆ ಏನು ಮಾಡ್ಲಿ ಎಂದು ಅಮ್ಮ ಸುಮ್ಮನೆ ನಿಮ್ಮ ತಲೆ ತಿನ್ನುವುದಲ್ಲ, ಅಮ್ಮನಿಗೂ ಒಂದೇ ತಿಂಡಿ ಇಷ್ಟವಾಗಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ಹುಟ್ಟಿದಾಗಿನಿಂದ ಬರೀ ಒಂದೇ ತಿಂಡಿ ತಿಂದು ಬದುಕಿದ್ದಾನೆ. ಅಬ್ಬಾ ನೆನೆದುಕೊಂಡರೇ ತಲೆ ಸುತ್ತುತ್ತೆ ಅಲ್ವಾ? ದಿನವ ಮೂರು ಹೊತ್ತೂ ಒಂದೇ ತಿಂಡಿ ಹೇಗೆ ತಿನ್ನೋಕೆ ಸಾಧ್ಯ? ಇದನ್ನೇ 50 ವರ್ಷದಿಂದ ಮಾಡುತ್ತಿದ್ದಾನೆ ಈ ವ್ಯಕ್ತಿ. ಈತನಿಗೆ ರೋಗವೂ ಇಲ್ಲ, ಏನೂ ಇಲ್ಲ, ಆದರೆ ಈಗೊಂದು ಡೌಟ್ ಏನಂದ್ರೆ ಈತನಿಗೆ ನಾಲಗೆಗೆ ರುಚಿಯೂ ಸಿಕ್ತಿಲ್ವಾ ಹೇಗೆ?
ಅಮೆರಿಕಾದ ವ್ಯಕ್ತಿಯೊಬ್ಬರು 50 ವರ್ಷಗಳಿಂದ ನಿರಂತರ ಮೆಕ್‌ಡೊನಾಲ್ಡ್ ಬರ್ಗರ್ ತಿನ್ನುತ್ತಿದ್ದು ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಡಾನ್ ಗೊರ್ಸ್‌ಕೆ (Don Gorske) ಎಂಬ ಅಮೆರಿಕನ್ ವ್ಯಕ್ತಿಯನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ತಮ್ಮ ಜೀವಮಾನದಲ್ಲೇ ಅತೀಹೆಚ್ಚು ಬರ್ಗರ್ ತಿಂದ ವ್ಯಕ್ತಿ ಎಂದು ಗುರುತಿಸಿ ಗಿನ್ನೆಸ್ ಪುಟಕ್ಕೆ ಸೇರಿಸಿದೆ.
ಬರ್ಗರ್ ಇದ್ರೆ ಸಾಕು, ಬೇರೇನು ಬೇಡ ಇವನಿಗೆ
ಮೇ.17 ರಂದು ಇವರು ಮೆಕ್‌ಡೊನಾಲ್ಡ್ ಬರ್ಗರ್ ತಿನ್ನಲು ಶುರು ಮಾಡಿದ 50ನೇ ವರ್ಷವನ್ನು ಆಚರಿಸಲಾಗುತ್ತಿದೆ. ಈತ ಬಹುತೇಕ ನಿರಂತರ ಈ ಬರ್ಗರ್ ತಿನ್ನುತ್ತಿದ್ದರು ಎಂದು ತಿಳಿದು ಬಂದಿದೆ. ಕಳೆದ 50 ವರ್ಷದಲ್ಲಿ ಡಾನ್ ಗೊರ್ಸ್‌ಕೆ ಕೇವಲ ತಮ್ಮ ಜೀವಮಾನದಲ್ಲಿ 8 ದಿನ ಮಾತ್ರ ಬರ್ಗರ್ ತಿಂದಿಲ್ಲವಂತೆ. ಇವರು ಪ್ರತಿದಿನ ಎರಡು ದೊಡ್ಡ ಮೆಕ್ ಬರ್ಗರ್‌ನ್ನು ತಿಂದಿದ್ದಾರೆ.
1972ರಲ್ಲಿ ತಿಂದಿದ್ರು ಮೊದಲ ಬರ್ಗರ್
ಇವರು ತಾವಿರುವ ವಿಸ್ಕಾನ್ಸಿನ್ ಪ್ರದೇಶದ ಸಮೀಪದ ಫಾಂಡ್ ಡು ಲ್ಯಾಕ್‌ನಲ್ಲಿರುವ ಮೆಕ್ ಡೊನಾಲ್ಡ್ ರೆಸ್ಟೋರೆಂಟ್‌ಗೆ ತಮ್ಮ ದೊಡ್ಡ ಮ್ಯಾಕ್ 50ನೇ ವರ್ಷಾಚರಣೆ ಮಾಡಲು ಆಗಮಿಸಿದ್ದರು. ಇದೇ ಮೆಕ್ ಡೊನಾಲ್ಡ್ ರೆಸ್ಟೋರೆಂಟ್‌ನಲ್ಲಿ ಅವರು 1972ರಲ್ಲಿ ತಮ್ಮ ಮೊದಲ ಬರ್ಗರ್‌ನ್ನು ಸೇವಿಸಿದ್ದರು.
ಗಿನ್ನೆಸ್ ವರ್ಲ್ಡ್ ರೆಕಾರ್ಡ್
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯೂ ಈ ಬರ್ಗರ್ ಫ್ರೆಮಿ ಡಾನ್ ಗೊರ್ಸ್ಕೆ ಅವರ ಫೋಟೋವನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಮೆಕ್ ಡೊನಾಲ್ಡ್ ಸಂಸ್ಥೆ ಅದರ ಹಳೆಯ ಗ್ರಾಹಕನನ್ನು ಅವರ 50ನೇ ವರ್ಷಾಚರಣೆಯಂದು ಹೇಗೆ ಸ್ವಾಗತಿಸಿತು ಎಂಬುದನ್ನು ತೋರಿಸುತ್ತಿದೆ. ಮೆಕ್ ಡೊನಾಲ್ಸ್ ರೆಸ್ಟೋರೆಂಟ್‌ನವರು ಹೊರಭಾಗದಲ್ಲಿ ಒಂದು ಬೋರ್ಡ್‌ನ್ನು ಹಾಕಿದ್ದರು.
ಇದನ್ನೂ ಓದಿ: Humaira Asghar: ಕಾಡ್ಗಿಚ್ಚಿನ ಮುಂದೆ ನಿಂತು ಟಿಕ್ ಟಾಕ್ ವಿಡಿಯೋ ಮಾಡಿದ ಪಾಕಿಸ್ತಾನಿ ನಟಿ! ಮುಂದೆ ಆಗಿದ್ದೇನು ಗೊತ್ತಾ?
ಅದರಲ್ಲಿ ಕಂಗ್ರಾಟ್ಸ್ ಡಾನ್ ಮೆಕ್ ಜೊತೆ 50 ವರ್ಷವನ್ನು ಕಳೆದಿದ್ದೀರಿ ಎಂದು ಬರೆದಿದ್ದರು. ಅಲ್ಲದೇ ಆ ಬೋರ್ಡ್‌ನಲ್ಲಿ ಡಾನ್ ಗೊರ್ಸ್ಕೆ ಅವರು ಮೆಕ್ ಡೊನಾಲ್ಡ್ ಬರ್ಗರ್‌ನ್ನು ತಿನ್ನುತ್ತಿರುವ ಅನೇಕ ಹಳೆಯ ಫೋಟೋಗಳಿದ್ದವು. ಈ ಪೋಸ್ಟ್‌ನ್ನು 65,000 ಹೆಚ್ಚು ಜನರು ಇಷ್ಟ ಪಟ್ಟಿದ್ದಾರೆ.
ಬರ್ಗರ್ನಷ್ಟು ಬೇರೆ ಯಾವುದೂ ಇಷ್ಟವಿಲ್ಲ
ನಾನು ಬರ್ಗರ್‌ನ್ನು ಇಷ್ಟ ಪಡುವಂತೆ ಯಾವ ಫುಡ್ ಅನ್ನು ಇಷ್ಟ ಪಟ್ಟಿಲ್ಲ. ಇದು ವಿಶ್ವದಲ್ಲೇ ಅತ್ಯುತ್ತಮ ಸ್ಯಾಂಡ್ವಿಚ್. ನಾನೇನದರು ಇಷ್ಟ ಪಟ್ಟರೆ ನಾನು ಅದನ್ನು ಕೊನೆಯವರೆಗೂ ಇಷ್ಟ ಪಡುವೆ ಎಂದು ಡಾನ್ ಗೊರ್ಸ್ಕೆ ಅವರು ಹೇಳಿದ್ದಾರೆ.
ಇದನ್ನೂ ಓದಿ: SpiceJet Airhostesses Dance: ಕೆಲಸದ ಮಧ್ಯೆ ನಟಿಯೊಂದಿಗೆ ಕುಣಿದು ನಲಿದ ಗಗನಸಖಿಯರು, ವಿಡಿಯೋ ಇಲ್ಲಿದೆ
ಅಂದಾಜು ಇದುವರೆಗೆ 30,000 ಕ್ಕೂ ಹೆಚ್ಚು ಬರ್ಗರ್‌ನ್ನು ತಿಂದಿರುವ ಡಾನ್ ಗೊರ್ಸ್ಕೆ ಅವರ ಆರೋಗ್ಯ ಉತ್ತಮವಾಗಿದೆ. ರಕ್ತ ಹಾಗೂ ಸಕ್ಕರೆ ಪ್ರಮಾಣ ಉತ್ತಮ ಹಂತದಲ್ಲಿದೆ. ರಕ್ತದೊತ್ತಡ ಪ್ರಮಾಣವೂ ಉತ್ತಮವಾಗಿದೆ. ಅವರು ಉತ್ತಮ ಆರೋಗ್ಯಕ್ಕಾಗಿ ದಿನವೂ ಆರು ಮೈಲುಗಳಷ್ಟು ನಡೆಯುತ್ತಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ