• Home
  • »
  • News
  • »
  • trend
  • »
  • Uber Application: 15 ನಿಮಿಷದ ಪ್ರಯಾಣಕ್ಕೆ 32 ಲಕ್ಷ ಬಿಲ್! ಇದು ಉಬರ್ ಅವಾಂತರ

Uber Application: 15 ನಿಮಿಷದ ಪ್ರಯಾಣಕ್ಕೆ 32 ಲಕ್ಷ ಬಿಲ್! ಇದು ಉಬರ್ ಅವಾಂತರ

ಉಬರ್

ಉಬರ್

ಆ್ಯಪ್ ಬಳಸಿ ಕ್ಯಾಬ್ ಬುಕ್ ಮಾಡಿದ ವ್ಯಕ್ತಿಯೊಬ್ಬರು ಅಪ್ಲಿಕೇಶನ್ ನೀಡಿದ ಮಾಹಿತಿಗೆ ಬೆರಗಾಗಿದ್ದಾರೆ ಅವರು ಬೆರಗಾದ ಕಾರಣ ಕೇಳಿದ್ರೆ ನೀವೂ ಆಶ್ಚರ್ಯಪಡ್ತಿರಾ.

  • Share this:

ಮೊಬೈಲ್ ಅಪ್ಲಿಕೇಶನ್​​ಗಳಲ್ಲಿ ಆಗಾಗ ದೋಷಗಳು (Wrong) ಕಂಡುಬರುತ್ತವೆ. ಉಬರ್ ಅಪ್ಲಿಕೇಶನ್ (Uber Application)‌ ಬಳಕೆದಾರರೊಬ್ಬರಿಗೆ ವಿಚಿತ್ರ ಎಂಬಂತ ಸಂದರ್ಭ ಸೃಷ್ಟಿಸಿತ್ತು. ಈ ಅಪ್ಲಿಕೇಶನ್‌ ದೋಷಗಳು ಅದರ ಬಳಕೆದಾರರಿಗೆ ದೊಡ್ಡ ಸಮಸ್ಯೆಯಾಗಬಹುದು. ಯುಕೆಯಲ್ಲಿ ಇದೇ ರೀತಿಯ ಘಟನೆ (Incident) ನಡೆದಿದ್ದು ಆ್ಯಪ್ ಬಳಸಿ ಕ್ಯಾಬ್ ಬುಕ್ ಮಾಡಿದ ವ್ಯಕ್ತಿಯೊಬ್ಬರು ಅಪ್ಲಿಕೇಶನ್ ನೀಡಿದ ಮಾಹಿತಿಗೆ ಬೆರಗಾಗಿದ್ದಾರೆ (Surprised). ಅವರು ಬೆರಗಾದ ಕಾರಣ ಕೇಳಿದ್ರೆ ನೀವೂ ಆಶ್ಚರ್ಯಪಡ್ತಿರಾ. 


ಆಲಿವರ್ ಕಪ್ಲಾನ್ ಎಂಬ ವ್ಯಕ್ತಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿರುವ ಬಕ್ಸ್‌ಟನ್ ಇನ್‌ನಲ್ಲಿ ತನ್ನ ಕೆಲಸ ಮುಗಿಸಿದ ನಂತರ ಉಬರ್ ಮೂಲಕ ಟ್ಯಾಕ್ಸಿಯನ್ನು ಆರ್ಡರ್ ಮಾಡಿದರು. ಸೌತ್ ವೆಸ್ಟ್ ನ್ಯೂಸ್ ಸರ್ವೀಸ್‌ಗೆ ಅವರು ಸುಮಾರು ನಾಲ್ಕು ಮೈಲುಗಳಷ್ಟು ದೂರವಿರುವ ಸ್ಥಳಕ್ಕೆ ಕ್ಯಾಬ್ ಅನ್ನು ಆರ್ಡರ್ ಮಾಡಿದಾಗ ನಿಗದಿತ ಬೆಲೆಯನ್ನು ತೋರಿಸಿದ ಕಾರಣ ಟ್ಯಾಕ್ಸಿ ಬುಕ್ ಮಾಡಿದ್ದರು.


ಉಬರ್ ತೋರಿಸಿದ ಬೆಲೆ ಎಷ್ಟು?


ಕೇವಲ 15 ನಿಮಿಷದ ಅವಧಿಯಲ್ಲಿ ತಲುಪಬಹುದಾದ ಜಾಗಕ್ಕೆ ಉಬರ್ ಅಪ್ಲಿಕೇಶನ್ ಕೇಳಿದ ಮೊತ್ತ ಬರೋಬ್ಬರಿ 32 ಲಕ್ಷ.  ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನ 22 ವರ್ಷದ ಯುವಕ ಆಲಿವರ್ ಕಪ್ಲಾನ್ ಎಂಬವರಿಗೆ ಈ ರೀತಿಯಾಗಿದೆ. ನಂತರ ಈ ಸಮಸ್ಯೆಗೆ ಪರಿಹಾರ ನೀಡಲಾಯಿತು ಮತ್ತು ಅವರ ಹಣ ಹಿಂದಿರುಗಿ ಲಭಿಸಿತು.


ಕ್ಯಾಬ್ ಇಳಿದ ತಕ್ಷಣ ಮೊದಲು ಎಷ್ಟು ನಿಗದಿಮಾಡಲಾಗಿತ್ತೋ ಅಷ್ಟೇ ಹಣವನ್ನು ಪಾವತಿಸಿ ಮನೆ ಸೇರಿದ ಬಳಿಕ ಮರುದಿನ ಬೆಳಿಗ್ಗೆ ಉಬರ್​ನಿಂದ ಉಳಿದ ಹಣ ಪಾವತಿಸುವಂತೆ ನೋಟಿಫಿಕೇಶನ್ ಬಂದಿದೆ ಅದನ್ನು ಸರಿಯಾಗಿ ನೋಡಿದ ನಂತರ ಲಕ್ಷದಷ್ಟು ಹಣ ಪಾವತಿಸುವಂತೆ ಸೂಚಿಸಿರುವುದನ್ನು ತಿಳಿದು ಹೌಹಾರಿದ್ದಾರೆ ಮತ್ತು ಈ ಕುರಿತು ಕಂಪನಿಗೆ ತಿಳಿಸಿದ್ದಾರೆ.


ಇದನ್ನೂ ಓದಿ: ಹಿಂದೆಲ್ಲಾ ಅಂಚೆಯ ಮೂಲಕವೇ ಸಂವಹನ, ವಿಶ್ವ ಅಂಚೆ ದಿನದ ಮಹತ್ವ ತಿಳಿಯೋಣ


ಈ ವಿಷಯ ಕೇಳಿದ ತಕ್ಷ ಎಂದು ಹೌಹಾರಿದ ಆಲಿವರ್ ಕಪ್ಲಾನ್ ‌  ತಲೆಯ ಮೇಲೆ ಕೈಹೊತ್ತು ಕುಳಿತರಾದರೂ ಬಳಿಕ ಕಾರಣ ಹುಡುಕುತ್ತಾ ಹೊರಟಾಗ ನಿಜಾಂಶ ಬಯಲಾಯಿತು. ಡೆಸ್ಟಿನೇಷನ್‌ ನಮೂದಿಸುವ ಜಾಗದಲ್ಲಿ ಒಲಿವರ್‌ ಅವರು ಆಸ್ಪ್ರೇಲಿಯಾದ ಸ್ಥಳವೊಂದನ್ನು ತಪ್ಪಾಗಿ ಆಯ್ಕೆ ಮಾಡಿದ್ದರಂತೆ. ವಾಹನ ಏರುವಾಗ ಮನೆಯ ವಿಳಾಸವಿದ್ದ ಜಾಗದಲ್ಲಿ ಅನ್ಯ ರಾಷ್ಟ್ರದ ವಿಳಾಸ ನಮೂದಿಸಿದಾಗ ಉಬರ್‌ ಆ್ಯಪ್‌ ಭರ್ಜರಿ ಮೊತ್ತವನ್ನು ಲೆಕ್ಕಹಾಕಿಕೊಂಡಿದೆ.


ಇದನ್ನೂ ಓದಿ: ವರ್ಷಕ್ಕೆ 80 ಲಕ್ಷ ಬಾಟಲಿ ಮಾರಾಟ! ಭಾರತೀಯ ಬ್ರಾಂಡ್ ಮದ್ಯ ವಿಶ್ವದಲ್ಲೇ ಅತ್ಯುತ್ತಮವಂತೆ


ಮೊತ್ತವನ್ನು ಮರಳಿ ಪಡೆದ ಪ್ರಯಾಣಿಕ
ವಿಚ್‌ವುಡ್, ಮ್ಯಾಂಚೆಸ್ಟರ್ ಬಾರ್‌ನಿಂದ ವಿಚ್‌ವುಡ್, ವಿಕ್ಟೋರಿಯಾದಲ್ಲಿನ ಆಸ್ಟ್ರೇಲಿಯನ್ ಪಾರ್ಕ್‌ಗೆ ಸ್ಥಳವನ್ನು ಬದಲಾಯಿಸಿ ತಪ್ಪು ಸ್ಥಳವನ್ನು ಆಯ್ಕೆ ಮಾಡಿಕೊಂಡಿತ್ತು. ಆದ್ದರಿಂದ ಹೆಚ್ಚಿನ ಹಣ ಕೇಳಿದೆ ಎಂದು ಹೇಳಲಾಗಿದೆ. ಆದ್ದರಿಂದಲೇ ಹೆಚ್ಚಿನ ಹಣವನ್ನು ಉಬರ್ ಕೇಳಿದೆ ಎಂದು ತಿಳಿಸಲಾಗಿದೆ. ಇದು ಉಬರ್ ಸಮಸ್ಯೆಯಾದ ಕಾರಣ ತಕ್ಷಣ ಸಮಸ್ಯೆ ಸರಿಪಡಿಲಾಯಿತು ಮತ್ತು  ಕಪ್ಲಾನ್ ತಮ್ಮ ಪ್ರಯಾಣದ ಮೊತ್ತವನ್ನು ಮರಳಿ ಪಡೆದರು.


ಕಸ್ಟಮರ್ ಕೇರ್
ಕಸ್ಟಮರ್ ಕೇರ್​ಗೆ ಕರೆ ಮಾಡಿ ಸಮಸ್ಯೆಯ ಕುರಿತು ತಿಳಿಸಿದಾಗ ಅವರಿಗೂ ಒಂದು ಬಾರಿ ಆಶ್ಚರ್ಯವಾಗಿದೆ. ಸಮಸ್ಯೆ ಏನೆಂದು ತಿಳಿಯಲು ಅವರೂ ಸಹ ಕಷ್ಟಪಟ್ಟಿದ್ದಾರೆ. ಕೊನೆಗೆ ಹಲವು ಚರ್ಚೆಗಳ ನಂತರ ತಪ್ಪು ಪ್ರದೇಶವನ್ನು ಆಯ್ಕೆ ಮಾಡಿಕೊಂಡಿರಬಹುದು ಎನ್ನುವ ಸೂಚನೆ ಸಿಕ್ಕಿದೆ. ಒಂದೇ ಹೆಸರಿನಲ್ಲಿ ಹಲವಾರು ಪ್ರದೇಶಗಳಿರುತ್ತವೆ. ಕ್ಯಾಬ್ ಬುಕ್ ಮಾಡುವಾಗ ನಿಮ್ಮ ಹತ್ತಿರದ ಪ್ರದೇಶವನ್ನು ನಿಗದಿಪಡಿಸಿ ಕ್ಯಾಬ್ ಬುಕ್ ಮಾಡಿ ಎಂದು ಉಬರ್ ತಿಳಿಸಿದೆ.

First published: