Viral Story: ಮದುವೆಯೂ ಆಗಿಲ್ಲ, ಗೆಳತಿಯೂ ಇಲ್ಲ, ಆದ್ರೆ ಈ ಯಂಗ್​ ಹೀರೋ 48 ಮಕ್ಕಳ ತಂದೆ!

ಪತಿ-ಪತ್ನಿ ಮುದ್ದಾದ ಮಗುವಿಗಾಗಿ ಹಾತೊರೆಯುವುದು ಸಹಜ. ಕೆಲವೊಂದು ಬಾರಿ ಪತಿಯಲ್ಲಿನ ಸಮಸ್ಯೆ ಅಥವಾ ಪತ್ನಿಯಲ್ಲಿ ಸಮಸ್ಯೆಯಿಂದ ಮಕ್ಕಳು ಆಗದೇ ಇರಬಹುದು. ಆದರೆ ಇದಕ್ಕಾಗಿ ಕೆಲವು ಜೋಡಿಗಳು ಸಿಕ್ಕ ಸಿಕ್ಕ ದೇವಸ್ಥಾನ, ಮಂದಿರ, ಮಸೀದಿಗಳನ್ನು ಸುತ್ತುವುದು, ಹರಕೆ ಕಟ್ಟುವುದನ್ನು ಕಂಡಿರಬಹುದು.

ಕೈಲ್ ಗೋರ್ಡಿ

ಕೈಲ್ ಗೋರ್ಡಿ

  • Share this:
    ನಾವಿಬ್ಬರು ನಮಗಿಬ್ಬರು ಎನ್ನುವ ಕಾಲವಿದು. ಆದರೆ ಇಲ್ಲೊಬ್ಬ ವ್ಯಕ್ತಿಯ ಕಥೆ ಕೇಳಿದ್ರೆ, ನಾನೊಬ್ಬನೆ ನನಗೆ 48 ಮಕ್ಕಳು (Childrens) ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಅಂದಹಾಗೆಯೇ ಇವರ ನಿಜವಾದ ಕಥೆ (Story) ಕೇಳಿದ್ರೆ ನಿಮಗೆ ಹೆಮ್ಮೆ ಅನಿಸಬಹುದು. ಏಕೆಂದರೆ ಈ ವ್ಯಕ್ತಿ ಮಕ್ಕಳು ಆಗದ ದಂಪತಿಗೆ (Couples) ಸಹಾಯ ಮಾಡುತ್ತಾರೆ. ಆದರೆ ಈ ವ್ಯಕ್ತಿ ಯಾರು? ಇವರ ಹಿನ್ನಲೆ ಏನು? ತಿಳಿದುಕೊಳ್ಳಲೇಬೇಕು.

    ಪತಿ-ಪತ್ನಿ ಮುದ್ದಾದ ಮಗುವಿಗಾಗಿ ಹಾತೊರೆಯುವುದು ಸಹಜ. ಕೆಲವೊಂದು ಬಾರಿ ಪತಿಯಲ್ಲಿನ ಸಮಸ್ಯೆ ಅಥವಾ ಪತ್ನಿಯಲ್ಲಿ ಸಮಸ್ಯೆಯಿಂದ ಮಕ್ಕಳು ಆಗದೇ ಇರಬಹುದು. ಆದರೆ ಇದಕ್ಕಾಗಿ ಕೆಲವು ಜೋಡಿಗಳು ಸಿಕ್ಕ ಸಿಕ್ಕ ದೇವಸ್ಥಾನ, ಮಂದಿರ, ಮಸೀದಿಗಳನ್ನು ಸುತ್ತುವುದು, ಹರಕೆ ಕಟ್ಟುವುದನ್ನು ಕಂಡಿರಬಹುದು. ಆದರೆ ದೇಹದಲ್ಲಿರುವ ಸಮಸ್ಯೆಯ ಪರಿಹಾರಕ್ಕೆ ದೇವರ ಮೇಲೆ ಭಾರ ಹಾಕಿ ಕೊನೆಗೆ ಮಕ್ಕಳಾಗಲು ಲಕ್ಷಾಂತರ ಹಣ ಖರ್ಚು ಮಾಡುತ್ತಾರೆ. ಆದರೆ ನಿಜ ಸಂಗತಿ ಏನೆಂದರೆ ಕೆಲವರಿಗೆ ವಿರ್ಯಾಣುಗಳ ಸಂಖ್ಯೆ ಕಡಿಮೆ ಇರುತ್ತದೆ. ಇದಕ್ಕಾಗಿ ವೈದ್ಯರ ಮೊರೆ ಹೋದರೆ ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ.

    ಅಮೆರಿಕದ ಮೂಲದ 31 ವರ್ಷದ ಕೈಲ್ ಗೋರ್ಡಿ ಮಕ್ಕಳಾಗದ ದಂಪತಿಗೆ ತನ್ನ ವಿರ್ಯ ದಾನ ಮಾಡಿ ಸಹಾಯ ಮಾಡುತ್ತಿದ್ದಾರೆ. ಇದೇ ವಿಚಾರಕ್ಕೆ ಕೈಲ್ ಗೋರ್ಡಿ ಸುದ್ದಿಯಲ್ಲಿದ್ದಾರೆ. ಅಂದಹಾಗೆಯೇ, ಇಲ್ಲಿಯವರೆಗೆ ಆತನಿಂದ 48 ಮಕ್ಕಳು ಜನಿಸಿದ್ದಾರೆ. ಈ ಕಾರಣಕ್ಕೆ ಹೈಲೈಟ್​ ಆಗಿದ್ದಾರೆ.

    ಲಾಸ್ ಏಂಜಲೀಸ್‌ನ ಕೈಲ್ ಗೊರ್ಡಿ ಸಂತಾನಹೀನ ದಂಪತಿಗೆ ವೀರ್ಯ ದಾನ ಮಾಡುತ್ತಾರೆ. ಅಚ್ಚರಿಯ ಸಂಗತಿ ಎಂದರೆ ಕೈಲ್ ಗೋರ್ಡಿ ಇದುವರೆಗೂ ಮದುವೆಯಾಗಿಲ್ಲ. ಅಷ್ಟು ಮಾತ್ರವಲ್ಲದೆ, ಗೆಳತಿಯನ್ನು ಹೊಂದಿಲ್ಲ. ಆದರೆ ಡೇಟಿಂಗ್​ ಮಾಡುತ್ತಾರೆ.

    ಕೈಲ್ ಗೋರ್ಡಿ ಯಾರೊಂದಿಗಾದರೂ ಡೇಟಿಂಗ್ ಮಾಡುವಾಗ ಆತ ತನ್ನ ವೀರ್ಯವನ್ನು ದಾನ ಮಾಡುವ ಬಗ್ಗೆ ಹೇಳುತ್ತಿದ್ದರೆ. ಆದರೆ ಈ ವಿಚಾರ ಬಹುತೇಕರಿಗೆ ಇಷ್ಟವಾಗಿಲ್ಲ. ಇದೇ ಕಾರಣಕ್ಕೆ ಕೈಲ್​ನೊಂದಿಗೆ ಡೇಟಿಂಗ್​ ಮಾಡಲು ಹುಡುಗಿಯರು ಹಿಂದೇಟು ಹಾಕುತ್ತಿದ್ದರು.

    ಇದನ್ನೂ ಓದಿ: NOKIA 8210 Phone: ಇದು 4G ಫೀಚರ್ ಫೋನ್, 1 ಬಾರಿ ಚಾರ್ಜ್ ಮಾಡಿದ್ರೆ 1 ತಿಂಗಳು ಬರುತ್ತೆ!

    ಕೈಲ್ ಗೋರ್ಡಿಗೆ ಡೇಟಿಂಗ್​ ಮಾಡುವ ಮೂಲಕ ಸಂಬಂಧ ಹೊಂದುವ ಆಸೆ. ಆದರೆ ಆತನ ಆಸೆ ಇನ್ನು ಈಡೇರಿಲ್ಲ. ಅಷ್ಟು ಮಾತ್ರವಲ್ಲದೆ ಕೈಲ್ ಗೋರ್ಡಿಗೆ ಇದುವರೆಗೂ ಮದುವೆಯಾಗಿಲ್ಲ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಕೈಲ್, ಅದರ ಬಗ್ಗೆ ಹೆಚ್ಚೇನು ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನು ಕೆಲವು ಜೋಡಿಗಳಿಗೆ ವೀರ್ಯ ದಾನ ಮಾಡಿ ಮಕ್ಕಳಾಗದ ಜೋಡಿಗೆ ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇದೀಗ ಈ ಘಟನೆ ವೈರಲ್ ಆಗಿದೆ.

    ಮಕ್ಕಳಿಗಾಗಿ ಹತಾಶರಾಗಿರುವವರಿಗೆ ಕೈಲ್ ಗೋರ್ಡಿ ತನ್ನ ವೀರ್ಯವನ್ನು ದಾನ ಮಾಡುತ್ತಾರೆ. ಕಡಿಮೆ ವೀರ್ಯಾಣುಗಳ ಸಂಖ್ಯೆಯಿಂದಾಗಿ ಗರ್ಭಿಣಿಯಾಗಲು ಸಾಧ್ಯವಾಗದವರು ಆತನನ್ನು ಸಂಪರ್ಕಿಸುತ್ತಾರಂತೆ. ಬಹುತೇಕ ವಿವಾಹಿತರ ಸಂಕಷ್ಟವನ್ನು ಅರಿತುಕೊಂಡು ಕೈಲ್ ಗೋರ್ಡಿ ತಮ್ಮ ವೀರ್ಯವನ್ನು ಅಗತ್ಯವಿರುವ ಮಹಿಳೆಯರಿಗೆ ನೇರವಾಗಿ ದಾನ ಮಾಡುತ್ತಾರೆ.

    ಕೆಲವೊಂದು ದಂಪತಿ ವೀರ್ಯ ದಾನಿಗಳು ಯಾರೆಂದು ತಿಳಿದಿಲ್ಲದ ಕಾರಣ ವೀರ್ಯ ಬ್ಯಾಂಕ್‌ಗಳನ್ನು ಬಳಸಲು ಹಿಂಜರಿಯುತ್ತಾರೆ ಎಂದು ಕೈಲ್ ಹೇಳುತ್ತಾರೆ.

    ಕೈಲ್‌ನಿಂದಾಗಿ ಕಳೆದ 8 ವರ್ಷಗಳಲ್ಲಿ 4 ಡಜನ್ ಮಹಿಳೆಯರು ತಾಯಂದಿರಾಗಿದ್ದಾರೆ. ಕೈಲ್ “ನಾನು 10 ವರ್ಷಗಳಿಂದ ಯಾರೊಂದಿಗೂ ಡೇಟಿಂಗ್ ಮಾಡಿಲ್ಲ. ನಾನು ವೀರ್ಯ ದಾನಿ ಎಂದು ಹುಡುಗಿಯರಿಗೆ ಹೇಳಿದಾಗ, ಅವರು ನನ್ನ ಬಗ್ಗೆ ಆಸಕ್ತಿ ಹೊಂದಲು ನಿರಾಕರಿಸುತ್ತಾರೆ‘‘ ಎಂದು ಹೇಳಿದರು.

    ಇದನ್ನೂ ಓದಿ: Viral Video: ಹಣ್ಣು ಮಾರುವ ಮಹಿಳೆಗೆ ಶಾಲಾ ಮಕ್ಕಳು ಹೇಗೆ ಸಹಾಯ ಮಾಡ್ತಿದ್ದಾರೆ ಗೊತ್ತೇ? ಈ ವಿಡಿಯೋ ನೋಡಿ ಗೊತ್ತಾಗುತ್ತೆ

    ಕೈಲ್ ಗೋರ್ಡಿ ಪ್ರಾರಂಭದಲ್ಲಿ ಲೆಸ್ಬಿಯನ್ ದಂಪತಿಯ ಕೋರಿಕೆಯ ಮೇರೆಗೆ 8 ವರ್ಷಗಳ ಹಿಂದೆ ವೀರ್ಯ ದಾನವನ್ನು ಪ್ರಾರಂಭಿಸಿದರು. ಇದರ ನಂತರ, ಆನ್‌ಲೈನ್ ವಿನಂತಿಗೆ ಪ್ರತಿಕ್ರಿಯಿಸಿದ ಅವರು ವಿವಿಧ ಮಹಿಳೆಯರಿಗೆ ವೀರ್ಯವನ್ನು ದಾನ ಮಾಡಲು ಪ್ರಾರಂಭಿಸಿದರು.
    Published by:Harshith AS
    First published: