Viral News: 30ನೇ ವಯಸ್ಸಿನಲ್ಲಿ 47 ಮಕ್ಕಳ ತಂದೆಯಾದ ಯುವಕ: ಶೀಘ್ರದಲ್ಲಿಯೇ ಜನಿಸಲಿವೆ ಇನ್ನೂ 10 ಕಂದಮ್ಮಗಳು!

ವೀರ್ಯ ದಾನ ನೀಡುವ ವ್ಯಕ್ತಿಗಳು ತಮ್ಮ ಕೆಲಸವನ್ನು ಬಹಿರಂಗವಾಗಿ ಹೇಳಿಕೊಳ್ಳಲು ಸಂಕೋಚ ಪಡುತ್ತಾರೆ. ಆದ್ರೆ ಇಲ್ಲೋರ್ವ ಯುವಕ ತಾನೂ ವೀರ್ಯ ದಾನಿ (Sperm Donation) ಎಂದು ಹೇಳಿಕೊಂಡಿದ್ದು, ಇದುವರೆಗೂ 47 ಮಕ್ಕಳ ತಂದೆ ಆಗಿರುವ ವಿಷಯವನ್ನು ಬಹಿರಂಗಪಡಿಸಿದ್ದಾನೆ.

ವೀರ್ಯಾಣು ದಾನಿ ಕೈಲ್

ವೀರ್ಯಾಣು ದಾನಿ ಕೈಲ್

  • Share this:
ತಂದೆಯಾಗುವ (Father) ಖುಷಿ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಮದುವೆಯಾದ (Marriage) ನಂತರ ಬಹು ದಿನ ಮಕ್ಕಳಾಗದೇ ಇದ್ದವರಿಗೆ ಮಗುವಾದಾಗ (Baby) ಸಿಗುವ ಆನಂದಕ್ಕೆ ಪಾರವೇ ಇರಲ್ಲ. ಅಂತಹವರನ್ನು ಕೇಳಿದ್ರೆ ತಂದೆಯ ಸ್ಥಾನದ (Father Position) ಮಹತ್ವವನ್ನು ಅತ್ಯಂತ ಭಾವನಾತ್ಮಕವಾಗಿ ಹೇಳುತ್ತಾರೆ. ಇನ್ನೂ ಕೆಲವರು ತಂದೆ ಅನ್ನೋ ಪದವನ್ನ ಸುಂದರವಾಗಿ ವ್ಯಾಖ್ಯಾನಿಸುತ್ತಾರೆ. ಸದ್ಯ ಕಾಲ ಬದಲಾಗಿದ್ದು, ಮಹಿಳೆಯರು (Women) ಮದುವೆ ಆಗದೇ ತಾಯಿ (Mother) ಆಗಲು ಇಷ್ಟಪಡುತ್ತಿದ್ದಾರೆ. ದಾನಿಗಳಿಂದ ವೀರ್ಯ ಪಡೆದು ತಾಯ್ತನದ ಆನಂದವನ್ನು ಅನುಭವಿಸುತ್ತಾರೆ. ವೈದ್ಯರು ವೀರ್ಯ ದಾನ ಮಾಡುವ ದಾನಿಯ ಹೆಸರನ್ನು ರಹಸ್ಯವಾಗಿ ಇರಿಸುತ್ತಾರೆ. ವೀರ್ಯ ದಾನ ನೀಡುವ ವ್ಯಕ್ತಿಗಳು ತಮ್ಮ ಕೆಲಸವನ್ನು ಬಹಿರಂಗವಾಗಿ ಹೇಳಿಕೊಳ್ಳಲು ಸಂಕೋಚ ಪಡುತ್ತಾರೆ. ಆದ್ರೆ ಇಲ್ಲೋರ್ವ ಯುವಕ ತಾನೂ ವೀರ್ಯ ದಾನಿ (Sperm Donation) ಎಂದು ಹೇಳಿಕೊಂಡಿದ್ದು, ಇದುವರೆಗೂ 47 ಮಕ್ಕಳ ತಂದೆ ಆಗಿರುವ ವಿಷಯವನ್ನು ಬಹಿರಂಗಪಡಿಸಿದ್ದಾನೆ.

ಅಮೆರಿಕದ ಕ್ಯಾಲಿಫೋರ್ನಿಯಾದ (California) ನಿವಾಸಿ 30 ವರ್ಷದ ಕೈಲ್ ಗೋರ್ಡಿ (Kyle Gordy) ಓರ್ವ ವೀರ್ಯಾಣು ದಾನಿಯಾಗಿದ್ದಾನೆ. ಸದ್ಯ 47 ಮಕ್ಕಳಿಗೆ ಬಯೋಲಾಜಿಕಲ್ ತಂದೆಯಾಗಿರುವ (Biological Father) ಕೈಲ್ ಗೋರ್ಡಿ, ಶೀಘ್ರದಲ್ಲಿಯೇ ಇನ್ನು 10 ಜೈವಿಕ ಮಕ್ಕಳು ಜನಿಸಲಿವೆ ಎಂದು ಹೇಳಿಕೊಂಡಿದ್ದಾನೆ.

57 ಮಕ್ಕಳ ತಂದೆ

ದಿ ಮಿರರ್ ವರದಿ ಪ್ರಕಾರ,  ವೀರ್ಯ ದಾನ ಮಾಡುತ್ತಿರೋದರಿಂದ ಕೈಲ್ ಗೋರ್ಡಿ ಡೇಟಿಂಗ್ ಜೀವನದ ಮೇಲೆ ಪರಿಣಾಮ ಬೀರಿದೆ. ವೀರ್ಯ ದಾನದಿಂದ ದೀರ್ಘವಾದ ರಿಲೇಶನ್ ಶಿಪ್ ನಲ್ಲಿರಲು (Sperm Donor’s dating life ruined)  ಕೈಲ್ ಗೋರ್ಡಿಗೆ ಸಾಧ್ಯವಾಗುತ್ತಿಲ್ಲ. ಅವಿವಾಹಿತನಾಗಿರುವ ಕೈಲ್ ಗೋರ್ಡಿ ಒಟ್ಟು 57 ಮಕ್ಕಳಿಗೆ ಜೈವಿಕ ತಂದೆಯಾಗಿದ್ದಾನೆ.

ಇದನ್ನೂ ಓದಿ:  ರೋಗಿಗಳಿಗೆ ಗೊತ್ತಾಗದಂತೆ ತನ್ನ ವೀರ್ಯ ನೀಡಿ ನೂರಾರು ಮಕ್ಕಳ ಅಪ್ಪ ಎನಿಸಿಕೊಂಡ ವೈದ್ಯ..!

ವರದಿಗಳ ಪ್ರಕಾರ, ವೀರ್ಯ ದಾನದ ಬಗ್ಗೆ ಮಾತನಾಡಲು ಮಹಿಳೆಯರೇ ಕೈಲ್ ಗೋರ್ಡಿಗೆ ಇನ್ ಸ್ಟಾಗ್ರಾಂನಲ್ಲಿ ಸಂದೇಶ ಕಳುಹಿಸುತ್ತಾರೆ. ವೀರ್ಯ ದಾನದ ಬಳಿಕ ಬಹುತೇಕ ಮಹಿಳೆಯರ ಗರ್ಭಧಾರಣೆ ಯಶಸ್ವಿಯಾಗಿದೆ.

ವೀರ್ಯಕ್ಕಾಗಿ 1 ಸಾವಿರಕ್ಕೂ ಅಧಿಕ ಮಹಿಳೆಯರಿಂದ ಬೇಡಿಕೆ

ಸುಮಾರು 1 ಸಾವಿರಕ್ಕೂ ಹೆಚ್ಚು ಮಹಿಳೆಯರು ನನ್ನ ವೀರ್ಯವನ್ನು ದಾನವಾಗಿ ಕೇಳುತ್ತಾರೆ. ತನ್ನಿಂದ ವೀರ್ಯ ಪಡೆದ ಮಹಿಳೆಯರು ಗರ್ಭದಾರಣೆಯ ಬಳಿಕ ಮಕ್ಕಳ ಪೋಟೋಗಳನ್ನು ಸಹ ಕಳುಹಿಸಿದ್ದಾರೆ ಎಂದು ಕೆಲ್ ಗೋರ್ಡಿ ಹೇಳಿಕೊಂಡಿದ್ದಾನೆ.

ವೀರ್ಯಕ್ಕಾಗಿ ಸಂಪರ್ಕಿಸುವ ಮಹಿಳೆಯರು ಬಹುತೇಕರು ಶ್ರೀಮಂತರು. ಸ್ಪರ್ಮ್ ಬ್ಯಾಂಕ್ ಗೆ ಹೋಗುವ ಬದಲು ನೇರವಾಗಿ ನನ್ನನ್ನು ಇನ್ ಸ್ಟಾಗ್ರಾಂ ಮೂಲಕ ಸಂಪರ್ಕಿಸುತ್ತಾರೆ. ಕೆಲ ಮಹಿಳೆಯರು ಕೈಲ್ ಗೋರ್ಡಿಯನ್ನು ನೋಡಲು ಮತ್ತು ಆತನ ಬಗ್ಗೆ ತಿಳಿದುಕೊಳ್ಳಲು ಯುವಕನ ಜೊತೆ ಡೇಟಿಂಗ್ ಸಹ ಮಾಡಿದ್ದಾರೆ. ಆದ್ರೆ ಯಾವುದೇ ಸಂಬಂಧ ದೀರ್ಘ ಕಾಲದವರೆಗೆ ಗಟ್ಟಿಯಾಗಿ ಉಳಿದಿಲ್ಲ ಮತ್ತು  ಅವರ ಜೊತೆಗಿನ ಸಂಬಂಧವನ್ನು ಹಲವು ಕಾರಣಗಳಿಂದ ಮುಂದುವರಿಸಲು ಸಾಧ್ಯವಾಗಿಲ್ಲ ಎಂದು ಕೈಲ್ ಹೇಳುತ್ತಾರೆ.

ವೀರ್ಯ ದಾನಿಯಾಗಿ ಮುಂದುವರಿಯಲಿದ್ದಾನೆ ಕೈಲ್

ಸದ್ಯಕ್ಕೆ ಆರೋಗ್ಯವಾಗಿರಲು ಮತ್ತು ವೀರ್ಯ ದಾನಿಯಾಗಿ ಉಳಿಯಲು ಕೇಲ್ ಬಯಸಿದ್ದಾನೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಕೈಲ್, ಯಾವುದೇ ಮಾದಕ ಪದಾರ್ಥಗಳ ಸೇವನೆ ಮಾಡಲ್ಲ. ಮುಂದೆಯೂ ವೀರ್ಯ ದಾನಿಯಾಗಿರಲು ಕೈಲ್ ಬಯಸುತ್ತಾನೆ. ತನ್ನ ಸೇವೆ ಬಯಸುವವರು ಇನ್ ಸ್ಟಾಗ್ರಾಂ ಮೂಲಕ ಅಥವಾ ನೇರವಾಗಿ ಸಂಪರ್ಕಿಸಬಹುದು.

ಇದನ್ನೂ ಓದಿ:  Viral Story: 67ನೇ ವಯಸ್ಸಿನಲ್ಲಿ 127 ಮಕ್ಕಳ ತಂದೆಯಾಗಿದ್ದೇನೆಂದು ಬಹಿರಂಗವಾಗಿ ಹೇಳಿಕೊಂಡ ನಿವೃತ್ತ ಶಿಕ್ಷಕ!

ಮುಂದೊಂದು ದಿನ ನನಗೂ ಒಳ್ಳೆಯ ಸಂಗಾತಿ ಸಿಗುತ್ತಾಳೆ ಎಂಬ ನಂಬಿಕೆ ಇದೆ. ನನ್ನ ಜೊತೆ ಜೀವನ ನಡೆಸಲು ಉದಾರ ಮತ್ತು ವಿಶೇಷ ಮಹಿಳೆಯಿಂದ ಮಾತ್ರ ಸಾಧ್ಯ. ನಾನು ನನ್ನ ಕೆಲಸದ ಬಗ್ಗೆ ಯಾವುದೇ ಮುಚ್ಚು ಮರೆಯನ್ನು ನಾನು ಮಾಡಲ್ಲ ಅಂತಾರೆ ಕೈಲ್.
Published by:Mahmadrafik K
First published: