Viral News: 30ರ ಹರೆಯದ ಯುವ Crypto Billionaire ತನ್ನ ಸಂಪತ್ತನ್ನು ದಾನಮಾಡಬೇಕಂತೆ!

ಅವರು ತಮ್ಮದೇ ಆದ ಕೆಲಸದ ಲೋಕದಲ್ಲಿ ಜೀವಿಸುತ್ತಿರುತ್ತಾರೆ, ಅವರು ಕೆಲಸದಲ್ಲಿ ಎಷ್ಟು ತಲ್ಲೀನರಾಗಿರುತ್ತಾರೆ ಎಂದರೆ 2 - 3 ದಿನಗಳ ಕಾಲ ಸ್ನಾನವನ್ನೂ ಸಹ ಮಾಡುವುದಿಲ್ಲ!

ಯುವ ಉದ್ಯಮಿ ಸ್ಯಾಮ್ ಬಾಂಕ್ಮನ್ ಫ್ರೈಡ್

ಯುವ ಉದ್ಯಮಿ ಸ್ಯಾಮ್ ಬಾಂಕ್ಮನ್ ಫ್ರೈಡ್

 • Share this:
  ಅಮೆರಿಕದ (America) ನ್ಯೂಯಾರ್ಕ್ (New York) ನಗರದ (City) ಪ್ರತಿಷ್ಠಿತ ಎಕನಾಮಿಕ್ ಕ್ಲಬ್ (Economic Club) ನಡೆಸುತ್ತಿದ್ದ ಸಭೆಯೊಂದರಲ್ಲಿ ದಿಗ್ಗಜ ಉದ್ದಿಮೆದಾರರು (iconic businessmen) ಪಾಲ್ಗೊಂಡಿದ್ದರು. ಅದರಲ್ಲಿ ಅಮೆಜಾನ್ ಸಂಸ್ಥೆಯ ಜೆಫ್ ಬಿಜಾಸ್, ಜೆಪಿ ಮೊರ್ಗನ್ ಸಂಸ್ಥೆಯ ಜಾಮಿ ಡೈಮನ್ ಹೀಗೆ ಹಲವು ಗಣ್ಯ ವ್ಯಕ್ತಿಗಳಿದ್ದರು. ಇದೇ ಚರ್ಚಾಗೋಷ್ಠಿಯಲ್ಲಿ ಪ್ರಥಮ ಬಾರಿಗೆ ಎಂಬಂತೆ ಯುವ ಕ್ರಿಪ್ಟೋ ಕರೆನ್ಸಿ ಬಿಲಿಯನೇರ್‌ (crypto currency billionaire) ಚರ್ಚೆಯಲ್ಲಿ ಭಾಗವಹಿಸಿದ್ದಾಗಲೇ ಕಂಪ್ಯೂಟರ್ ಗೇಮಿಂಗ್ ಚಟುವಟಿಕೆಯಲ್ಲಿ ನಿರತನಾಗಿದ್ದರು. ಈ ಯುವಕ ಜೂಮ್ ತಂತ್ರಾಂಶದ ಮೂಲಕ ವರ್ಚ್ಯೂವಲ್ ಆಗಿ ಭಾಗಿಯಾಗಿದ್ದ.

  ವಿಶೇಷ ಅತಿಥಿಯಾಗಿದ್ದ ಸ್ಯಾಮ್ ಬಾಂಕ್ಮನ್ ಫ್ರೈಡ್

  ಫೆಬ್ರುವರಿಯ ನಿಗದಿತ ದಿನದಂದು ನಡೆದಿದ್ದ ಈ ಸಭೆಯಲ್ಲಿ ಸ್ಯಾಮ್ ಬಾಂಕ್ಮನ್ ಫ್ರೈಡ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಗುಂಗರು ಕೂದಲು, ಹೆಡ್ ಫೋನ್ ಹಾಕಿ ಕುಳಿತಿದ್ದ ವ್ಯಕ್ತಿಯ ಕ್ಯಾಬಿನ್ ನೋಡಿದಾಗ ಈತ ಕಚೇರಿಯಲ್ಲೇ ಜಿವಿಸುತ್ತಾನೆನೋ ಎಂಬಂತೆ ಭಾವ ಮೂಡುತ್ತಿತ್ತು. ಅಲ್ಲಲ್ಲಿ ಬಿದ್ದ ಲಿಪ್ ಬಾಮ್‌ಗಳು, ತಿಂಡಿ-ತಿನಿಸುಗಳ ಪ್ಯಾಕೆಟ್, ಮಲಗಲು ಅಥವಾ ವಿಶ್ರಾಂತಿ ಪಡೆಯಲು ಇರಿಸಲಾಗಿದ್ದ ಬೀನ್ ಬ್ಯಾಗ್ ಆ ತರುಣನ ಜೀವನಶೈಲಿ ಹೇಗಿದೆ ಎಂದು ತೋರಿಸುತ್ತಿದ್ದವು ಎಂದರೂ ತಪ್ಪಾಗಲಿಕ್ಕಿಲ್ಲ.

  ಸಭೆಯ ನಡುವೆಯೇ ಉದ್ಯಮಿಯ ಆಟ!

  ಈ ಸಂದರ್ಭದಲ್ಲಿ ಚರ್ಚೆಯಲ್ಲಿ ಭಾಗೈಯಾಗಿದ್ದ ಬ್ಯಾಂಕ್ಮನ್ ನಿರಾಯಾಸವಾಗಿ ತನ್ನ ಅವಕಾಶ ಬಂದಾಗ ಅಲ್ಲಿ ಭಾಗವಹಿಸಿದ್ದ ದಿಗ್ಗಜರನ್ನುದ್ದೇಶಿಸುತ್ತ, "ಅಮೆರಿಕವು ನನ್ನ ಉದ್ದಿಮೆಯನ್ನು ಹೇಗೆ ನಿಯಂತ್ರಿಸಬಹುದು" ಎಂಬ ಪ್ರಶ್ನೆ ಕೇಳಿ ತನ್ನ ಗೇಮಿಂಗ್ ಉಪಕರಣ ಹೊರತೆಗೆದು ತನ್ನ ನೆಚ್ಚಿನ ಗೇಮ್ ಆಡಲು ತಯಾರಿ ನಡೆಸಲು ಪ್ರಾರಂಭಿಸಿದ. ಈ ನಡುವೆ ಆಟ ಆಡುತ್ತಲೇ "ನಾವು ಅಮೆರಿಕದಲ್ಲಿ ಭಾರಿ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದೇವೆ" ಎಂದು ಬ್ಯಾಂಕ್ಮನ್ ಹೇಳಿದ. ಈ ಸಂದರ್ಭದಲ್ಲಿ ಬ್ಯಾಂಕ್ಮನ್ ತನ್ನ ಕ್ರಿಪ್ಟೋ ಕರೆನ್ಸಿ ಸಂಸ್ಥೆಯಾದ FTX ಬಗ್ಗೆ ಮಾತನಾಡುತ್ತಿದ್ದ.

  ಇದನ್ನೂ ಓದಿ: ಹಸುವಿನ ಸಗಣಿಯಿಂದ Eco Friendly ಇಟ್ಟಿಗೆ, ಪ್ಲಾಸ್ಟರ್‌ ತಯಾರಿಸಬಹುದಂತೆ! ಇದರಲ್ಲಿ ಕಟ್ಟಿದ ಮನೆಯಲ್ಲಿ ಬದುಕು ಸುಂದರ ಅಂತಾರೆ ಇವರು

  ಸಾಧಾರಣ ವ್ಯಕ್ತಿಯಲ್ಲ ಈ ಯುವ ಉದ್ಯಮಿ

  ಬ್ಯಾಂಕ್ಮನ್ ಒಬ್ಬ ಸಾಧಾರಣ ವ್ಯಕ್ತಿಯಂತೂ ಖಂಡಿತ ಅಲ್ಲ. ಈಗಾಗಲೇ ಆತ 20 ಬಿಲಿಯನ್ ಡಾಲರ್ ಆಸ್ತಿಯ ಮಾಲೀಕ ಎಂದು ಬ್ಲೂಮ್‍ಬರ್ಗ್ ಬಿಲಿಯನೇರ್‌ ಸೂಚ್ಯಂಕವು ಇತ್ತೀಚೆಗೆ ವೆಂಚ್ಯೂರ್ ಕ್ಯಾಪಿಟಲ್ಸ್ ಸಂಸ್ಥೆಯು ಬ್ಯಾಂಕ್ಮನ್ ಅವರ FTX ಸಂಸ್ಥೆಯಲ್ಲಿ ಹಣ ಹೂಡಿದ ಮೇಲೆ ವರದಿ ಮಾಡಿದೆ. ಹಾಗೆ ನೋಡಿದರೆ ಬ್ಯಾಂಕ್ಮನ್ ಬಲು ಬ್ಯುಸಿಯಾದ ವ್ಯಕ್ತಿ ತನ್ನ ಅದ್ಭುತ ಪ್ರತಿಭೆಯಿಂದ ಜಗತ್ತಿನ ದೊಡ್ಡ ದೊಡ್ಡ ಉದ್ದಿಮೆದಾರರು ಹಾಗೂ ಗಣ್ಯ ವ್ಯಕ್ತಿಗಳನ್ನು ಭೇಟಿಯಾಗುತ್ತಿರುತ್ತಾನೆ. ಬ್ಯಾಂಕ್ಮನ್ ಯಾವ ರೀತಿ ಪ್ರಸಿದ್ಧಿ ಪಡೆದಿದ್ದಾನೆಂದರೆ ಅಮೆರಿಕದ ಟಾಪ್ ಸಿನಿಮಾ ಸೆಲಿಬ್ರಿಟಿ, ಕ್ರೀಡಾ ಸೆಲಿಬ್ರಿಟಿ ಹಾಗೂ ಸಂಗೀತ ಲೋಕದ ತಾರೆಯರೊಂದಿಗೆ ಸಾಕಷ್ಟು ಭೇಟಿಗಳನ್ನು ಮಾಡಿದ್ದಾನೆ.

  ಈತನ ಬಗ್ಗೆ ಸ್ನೇಹಿತರು ಹೇಳುವುದೇನು?

  ಸುಮಾರು ಐದು ವರ್ಷಗಳ ಹಿಂದೆ ಬ್ಯಾಂಕ್ಮನ್ ಪರಹಿತ ಚಿಂತನೆ ಮಾಡುವ ಚಾರಿಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಆತ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಇನ್ನೊಬ್ಬರಿಗೆ ಯಾವ ರೀತಿ ಉಪಕಾರಿಯಾಗಬಹುದೆಂಬುದರ ಬಗ್ಗೆ ಕಾರ್ಯ ನಿರ್ವಹಿಸುತ್ತಿದ್ದ. ತದನಂತರ ಬ್ಯಾಂಕ್ಮನ್ ಅವರಿಗೆ ಕ್ರಿಪ್ಟೋ ಕುರಿತು ಮಾಹಿತಿ ಸಿಕ್ಕಾಗ ಅದಕ್ಕಿಂತ ನೈಜವಾಗಿ ದುಡ್ಡು ಮಾಡುವ ವಿಧಾನ ಮತ್ತೊಂದಿಲ್ಲ ಅನಿಸಿತು. ಹಾಗೂ ಮುಂದೆ ನಡೆದದ್ದೆಲ್ಲ ಇತಿಹಾಸ ಎಂದು ಅವರ ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ.

  ಈತ ಕ್ರಿಪ್ಟೋ ರಾಬಿನ್ ಹುಡ್ ಅಂತೆ!

  ಇದೇ ಸಂದರ್ಭದಲ್ಲಿ ಬ್ಯಾಂಕ್ಮನ್ ಅವರ ಸ್ನೇಹಿತರು ಹೇಳುವಂತೆ, ಬ್ಯಾಂಕ್ಮನ್ ಒಬ್ಬ ಕ್ರಿಪ್ಟೋ ರಾಬಿನ್ ಹುಡ್ ಇದ್ದಂತೆ. ಅವರು ಕಾಲೇಜಿನ ದಿನಗಳಿಂದಲೂ ಯಾವಾಗಲೂ ಭಿನ್ನವಾಗಿಯೇ ಜೀವಿಸುತ್ತಿದ್ದಾರೆ. ಸದಾ ಕೆಲಸ ಕೆಲಸ ಅಂತಲೇ ಅದರಲ್ಲೇ ಮುಳುಗಿರುತ್ತಾರೆ ಎಂದು ಹೇಳುವ ಸ್ನೇಹಿತರು, ನಿಜಕ್ಕೂ ಬ್ಯಾಂಕ್ಮನ್ ಅವರು ನಿದ್ರಿಸುವುದು ಅನವಶ್ಯಕ ಲಕ್ಷುರಿ, ಅದರಲ್ಲಿ ಎಷ್ಟೊಂದು ದುಡ್ಡನ್ನು ಕಳೆದುಕೊಳ್ಳುತ್ತೇವೆ ಎಂಬ ಅಭಿಪ್ರಾಯ ಹೊಂದಿದವರಾಗಿದ್ದಾರೆ ಎನ್ನುತ್ತಾರೆ.

  ದಾನ ಮಾಡುವುದರಲ್ಲಿ ಎತ್ತಿದ ಕೈ

  ಸದ್ಯ ಬಹಾಮಾದಲ್ಲಿ ತಮ್ಮ FTX ಕಚೇರಿ ಹೊಂದಿರುವ ಬ್ಯಾಂಕ್ಮನ್ ಶೀಘ್ರದಲ್ಲೇ ಸಾವಿರ ಉದ್ಯೋಗಿಗಳಿರುವ ಸಮುದ್ರಕ್ಕೆ ಮುಖ ಮಾಡಿರುವ ದೊಡ್ಡ ಕ್ಯಾಂಪಸ್ ಇರುವ ಕಚೇರಿಯೊಂದನ್ನು ಸ್ಥಾಪಿಸುವ ಯೋಜನೆಯಲ್ಲಿದ್ದಾರೆ. ಅವರ ನಿಕಟ ಸ್ನೇಹಿತರ ಪ್ರಕಾರ, ಬ್ಯಾಂಕ್ಮನ್ ತಾವು ಗಳಿಸುವ ಆದಾಯದಲ್ಲಿ ತಾವು ಆರಾಮದಾಯಕವಾಗಿ ಇರಲು ಬೇಕಾಗುವ ದುಡ್ಡು ಎಷ್ಟೋ ಅದನ್ನಷ್ಟೇ ಇಟ್ಟುಕೊಂಡು ಮಿಕ್ಕೆಲ್ಲವನ್ನು ಕೊಟ್ಟು ಬಿಡುವ ಜಾಯಮಾನ ಹೊಂದಿದ್ದಾರಂತೆ.

  ಕೆಲದಲ್ಲಿದ್ದರೆ ಸ್ನಾನವನ್ನೂ ಮಾಡುವುದಿಲ್ಲ!

  ಅವರು ತಮ್ಮದೇ ಆದ ಕೆಲಸದ ಲೋಕದಲ್ಲಿ ಜೀವಿಸುತ್ತಿರುತ್ತಾರೆ, ಅವರು ಕೆಲಸದಲ್ಲಿ ಎಷ್ಟು ತಲ್ಲೀನರಾಗಿರುತ್ತಾರೆ ಎಂದರೆ 2 - 3 ದಿನಗಳ ಕಾಲ ಸ್ನಾನವನ್ನೂ ಸಹ ಮಾಡುವುದಿಲ್ಲ. ಇದೇ ಕಾರಣಕ್ಕಾಗಿ ಅವರು ಯಾವ ಸಂಬಂಧಗಳನ್ನೂ ಸಹ ಹೊಂದಿಲ್ಲ ಎಂದು ಅವರ ಸ್ನೇಹಿತರು ಹೇಳುತ್ತಾರೆ.

  ಪ್ರಸ್ತುತ, ಬ್ಯಾಂಕ್ಮನ್ ಅವರು ಅಮೆರಿಕದಲ್ಲಿ ಕ್ರಿಪ್ಟೋ ಸಂಬಂಧಿತ ಹಣಕಾಸಿನ ವಿಷಯದಲ್ಲಿ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಅವರ ಪ್ರಕಾರ, ಈ ಕ್ಷೇತ್ರವು ದಿನಕ್ಕೆ 25 ಬಿಲಿಯನ್ ಡಾಲರ್ ಟ್ರಾನ್ಸ್ಯಾಕ್ಷನ್ ಸಾಮರ್ಥ್ಯ ಹೊಂದಿದ್ದು ಅವರ ಕನಸಿನಂತೆ FTX ಮುಂಬರುವ ದಿನಗಳಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ಹಣಕಾಸಿನ ಕಂಪನಿಯಾಗಿ ರೂಪಗೊಳ್ಳಬೇಕಾದ ಗುರಿ ಹೊಂದಿದ್ದಾರೆ.

  ಶ್ರೀಮಂತರು ದಾನ ಮಾಡುತ್ತಾ ಇರಬೇಕು

  ಆದರೂ ಬ್ಯಾಂಕ್ಮನ್ ಹೆಚ್ಚಿನ ದುಡ್ಡು ಹೊಂದುವ ಮೂಲಕ ಚಾರಿಟಿಯ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡಬಹುದೆನ್ನುತ್ತಾರೆ. ಅಲ್ಲದೆ ಅವರು ಸಿರಿವಂತರು ದೊಡ್ಡ ದೊಡ್ಡ ಮೊತ್ತವನ್ನು ದಾನ ಮಾಡದೆ ಹೋದರೆ ಅದು ಒಂದು ಮಗು ಕೆಸರಿನ ಗದ್ದೆಯಲ್ಲಿ ಮುಳುಗಿಹೋಗುವಂತೆ ಮಾಡಿದಂತೆ ಎನ್ನುತ್ತಾರೆ. ಏಕೆಂದರೆ, ಅವರ ಪ್ರಕಾರ, ನಮ್ಮ ಬಟ್ಟೆಗಳು ಕೊಳೆಯಾದರೂ ಸರಿ ನಾವು ಆ ಸಮಯದಲ್ಲಿ ಮಗು ಕೆಸರಿನಲ್ಲಿ ಮುಳುಗದಂತೆ ಕಾಪಾಡಬಹುದೆಂಬ ಆಳದ ದೃಷ್ಟಿಯನ್ನು ಬ್ಯಾಂಕ್ಮನ್ ಹೊಂದಿದ್ದಾರೆ.

  ಕೋವಿಡ್‌ ಪರಿಹಾರ ನಿಧಿಗೆ 50 ಮಿಲಿಯನ್ ಡಾಲರ್ ದಾನ

  ಬ್ಯಾಂಕ್ಮನ್ ಸ್ನೇಹಿತರು ಹೇಳುವಂತೆ, ಬ್ಯಾಂಕ್ಮನ್ ಕಳೆದ ಬಾರಿ ಕನಿಷ್ಠ 50 ಮಿಲಿಯನ್ ಡಾಲರ್ ಅನ್ನು ಕೋವಿಡ್ ಸಹಾಯ ನಿಧಿಗೆ ದಾನ ಮಾಡಿದ್ದಾರಂತೆ. ಇದು ಭಾರತದಲ್ಲಿನ ಕೋವಿಡ್ ಪರಿಹಾರ ನಿಧಿಗೂ ಸಿಕ್ಕಿದೆಯಂತೆ. ಅಲ್ಲದೆ ಬ್ಯಾಂಕ್ಮನ್ ಈ ವರ್ಷದಲ್ಲೂ ಕನಿಷ್ಠ ನೂರಾರು ಮಿಲಿಯನ್ ಇಲ್ಲವೇ ಒಂದು ಬಿಲಿಯನ್ ಡಾಲರ್ ಅನ್ನು ದಾನ ಮಾಡುವ ಅಭಿಲಾಷೆ ಹೊಂದಿದ್ದಾರೆನ್ನಲಾಗಿದೆ.

  ಇದನ್ನೂ ಓದಿ: Viral News: ಕಣ್ಣಿಲ್ಲದವರಿಗೆ ದಾರಿದೀಪವಾಗುತ್ತೆ ಈ Special Shoe! ಬಾಲಕನ ಕಾರ್ಯಕ್ಕೆ ಸಾರ್ವಜನಿಕರ ಶಹಬ್ಬಾಸ್

  ಒಟ್ಟಿನಲ್ಲಿ ಬ್ಯಾಂಕ್ಮನ್ ಇಂದಿನ ದಿಗ್ಗಜ ಶ್ರೀಮಂತರ ಪೈಕಿ ಒಬ್ಬನಾಗಿಯೂ ಅವರಿಗಿಂತ ಭಿನ್ನವಾಗಿ ನಿಲ್ಲುವಂತೆ ತಮ್ಮ ವ್ಯಕ್ತಿತ್ವ ನಿರ್ಮಿಸಿಕೊಂಡಿದ್ದಾರೆಂದರೆ ಅತಿಶಯೋಕ್ತಿಯಾಗಲಾರದು.
  Published by:Annappa Achari
  First published: