• Home
  • »
  • News
  • »
  • trend
  • »
  • Viral Photo: ಶೀತಕ್ಕೆ ಔಷಧಿ ಕೊಡಿ ಆಂಟಿ!; ಒಂಟಿಯಾಗಿ ಆಸ್ಪತ್ರೆಗೆ ಬಂದ 3 ವರ್ಷದ ಮಗುವನ್ನು ನೋಡಿ ವೈದ್ಯರೇ ಶಾಕ್

Viral Photo: ಶೀತಕ್ಕೆ ಔಷಧಿ ಕೊಡಿ ಆಂಟಿ!; ಒಂಟಿಯಾಗಿ ಆಸ್ಪತ್ರೆಗೆ ಬಂದ 3 ವರ್ಷದ ಮಗುವನ್ನು ನೋಡಿ ವೈದ್ಯರೇ ಶಾಕ್

ವೈದ್ಯರ ಜೊತೆ ಕುಳಿತಿರುವ 3 ವರ್ಷದ ಬಾಲಕಿ

ವೈದ್ಯರ ಜೊತೆ ಕುಳಿತಿರುವ 3 ವರ್ಷದ ಬಾಲಕಿ

Nagaland Girl Photo: ನಾಗಾಲ್ಯಾಂಡ್​ನ ಲಿಪವಿ ಎಂಬ 3 ವರ್ಷದ ಬಾಲಕಿ ತಾನೊಬ್ಬಳೇ ಕ್ಲಿನಿಕ್​ಗೆ ಹೋಗಿ, ನೆಗಡಿಗೆ ವೈದ್ಯರ ಬಳಿ ಔಷಧ ತೆಗೆದುಕೊಂಡಿದ್ದಾಳೆ. ಆಕೆಯ ಧೈರ್ಯ, ಜಾಣತನಕ್ಕೆ ನೆಟ್ಟಿಗರು ಮರುಳಾಗಿದ್ದಾರಎ.

  • Share this:

ನೀವು 'ಬೇಬೀ'ಸ್ ಡೇ ಔಟ್' ಸಿನಿಮಾ ನೋಡಿದ್ದೀರಾ? ಆ ಸಿನಿಮಾದಲ್ಲಿ ಚಿಕ್ಕ ಮಗುವೊಂದು ಅಪ್ಪ-ಅಮ್ಮ ಮನೆಯಲ್ಲಿ ಇಲ್ಲದಿದ್ದಾಗ ಏಕಾಂಗಿಯಾಗಿ ಹೊರಗೆ ಹೋಗಿ ಯಾವ ರೀತಿ ಎಲ್ಲ ಸಂಕಷ್ಟಗಳಿಂದ ಪಾರಾಗುತ್ತದೆ? ಚಿಕ್ಕ ಪುಟ್ಟ ವಿಷಯಗಳನ್ನೂ ಹೇಗೆಲ್ಲ ಎಂಜಾಯ್ ಮಾಡುತ್ತದೆ? ಎಂಬ ಕಥಾಹಂದರವುಳ್ಳ ಆ ಸಿನಿಮಾ ಬಹಳ ಫೇಮಸ್ ಆಗಿತ್ತು. ಅದೇ ರೀತಿಯ ನಿಜವಾದ ಘಟನೆಯೊಂದು ನಾಗಾಲ್ಯಾಂಡ್​ನಲ್ಲಿ ನಡೆದಿದೆ.


ಆಕೆ 3 ವರ್ಷದ ಪುಟಾಣಿ ಹುಡುಗಿ. ಆಕೆಯ ಅಪ್ಪ-ಅಮ್ಮ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿದ್ದ ಆಕೆಗೆ ವಿಪರೀತ ಶೀತ ಶುರುವಾಯಿತು. ಅಪ್ಪ-ಅಮ್ಮ ಕೆಲಸದಿಂದ ಬರುವುದು ತಡವಾಗುತ್ತದೆಂದು ತಾನೇ ಮಾಸ್ಕ್ ಧರಿಸಿಕೊಂಡು ರೆಡಿಯಾಗಿ, ಮನೆಯಿಂದ ಕೊಂಚ ದೂರವಿದ್ದ ಕ್ಲಿನಿಕ್​ಗೆ ಹೋದಳು. 3 ವರ್ಷದ ಮಗು ಏಕಾಂಗಿಯಾಗಿ ತಮ್ಮ ಆಸ್ಪತ್ರೆಗೆ ಬಂದಿದ್ದನ್ನು ಕಂಡ ವೈದ್ಯರು, ಕ್ಲಿನಿಕ್​ನ ಸಿಬ್ಬಂದಿಗೆ ಅಚ್ಚರಿಯಾಯಿತು!ಈ ಘಟನೆ ನಡೆದಿರುವುದು ನಾಗಾಲ್ಯಾಂಡ್​ನಲ್ಲಿ. ಲಿಪವಿ ಎಂಬ 3 ವರ್ಷದ ಬಾಲಕಿ ತನಗೆ ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ತಾನೊಬ್ಬಳೇ ಕ್ಲಿನಿಕ್​ಗೆ ಹೋಗಿ, ವೈದ್ಯರ ಬಳಿ ಔಷಧ ತೆಗೆದುಕೊಂಡಿದ್ದಾಳೆ. ಹೆಲ್ತ್​ ಸೆಂಟರ್​ಗೆ ಬಂದ ಈ ಮುದ್ದಾದ ಮಗುವನ್ನು ನೋಡಿ ಅಲ್ಲಿದ್ದವರಿಗೆ ಸರ್​ಪ್ರೈಸ್ ಆಗಿದೆ. ಆಕೆಯನ್ನು ಒಳಗೆ ಕರೆದು ಕೂರಿಸಿಕೊಂಡು ಏನಾಯಿತೆಂದು ವಿಚಾರಿಸಿದ್ದಾರೆ.


ನನಗೆ ಉಸಿರಾಡಲಾಗದಷ್ಟು ಶೀತವಾಗಿದೆ. ನನ್ನ ಅಪ್ಪ-ಅಮ್ಮ ಗದ್ದೆ ಕೆಲಸಕ್ಕೆ ಹೋಗಿದ್ದಾರೆ. ಹಾಗಾಗಿ, ನಾನೊಬ್ಬಳೇ ಆಸ್ಪತ್ರೆಗೆ ಬಂದೆ. ನನಗೆ ಮಾತ್ರೆ ಕೊಡ್ತೀರಾ? ಎಂದು ಕೇಳಿದ್ದಾಳೆ. ಆಕೆಯನ್ನು ತಪಾಸಣೆ ಮಾಡಿದ ವೈದ್ಯರು ಶೀತಕ್ಕೆ ಔಷಧ ಕೊಟ್ಟು ಕಳುಹಿಸಿದ್ದಾರೆ.


ಡಾಕ್ಟರ್ ಪಕ್ಕದ ಕುಳಿತಿರುವ 3 ವರ್ಷದ ಲಿಪವಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಿದೆ. ಬಾಲಕಿಯ ಧೈರ್ಯ, ಬುದ್ಧಿವಂತಿಕೆ, ಸ್ವಾವಲಂಬನೆಗೆ ಟ್ವಿಟ್ಟಿಗರು ಅಚ್ಚರಿ ಹೊರಹಾಕಿದ್ದಾರೆ.


ಇಷ್ಟು ಚಿಕ್ಕ ವಯಸ್ಸಿನಲ್ಲಿ ಆಕೆಗೆ ಆರೋಗ್ಯದ ಬಗ್ಗೆ ಇರುವ ಕಾಳಜಿ, ಎಲ್ಲವನ್ನೂ ತಾನೊಬ್ಬಳೇ ನಿಭಾಯಿಸುವ ಜಾಣ್ಮೆ ನೋಡಿ ಅಚ್ಚರಿಯಾಯಿತು. ಆಕೆಯನ್ನು ನೋಡಿ ಬೇಬೀಸ್ ಡೇಔಟ್ ಸಿನಿಮಾ ನೆನಪಾಯಿತು. ಆಕೆಯನ್ನು ದೇವರು ಸದಾ ಕಾಪಾಡಲಿ ಎಂದು ಟ್ವಿಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

Published by:Sushma Chakre
First published: