• Home
 • »
 • News
 • »
 • trend
 • »
 • Video Viral: ಗಾಳಿಪಟಕ್ಕೆ ಸಿಲುಕಿ 100 ಅಡಿ ಎತ್ತರಕ್ಕೆ ಹಾರಿದ 3 ವರ್ಷದ ಮಗು!

Video Viral: ಗಾಳಿಪಟಕ್ಕೆ ಸಿಲುಕಿ 100 ಅಡಿ ಎತ್ತರಕ್ಕೆ ಹಾರಿದ 3 ವರ್ಷದ ಮಗು!

ಗಾಳಿಪಟಕ್ಕೆ ಸಿಲುಕಿಕೊಂಡಿರುವ ಮಗು

ಗಾಳಿಪಟಕ್ಕೆ ಸಿಲುಕಿಕೊಂಡಿರುವ ಮಗು

ತೈವಾನ್​ ನನ್ಲಿಯೊವೋನಲ್ಲಿ ಈ ಘಟನೆ ನಡೆದಿದೆ. ಗಾಳಿಪಟ ಉತ್ಸವ ಕಾರ್ಯಕ್ರಮವನ್ನು ನನ್ಲಿಯೊವೋನಲ್ಲಿ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಮಗು ದೊಡ್ಡ ಗಾಳಿಪಟಕ್ಕೆ ಸಿಲುಕಿಕೊಂಡಿದೆ. ಗಾಳಿಯ ರಭಸಕ್ಕೆ ಗಾಳಿಪಟ ಮೇಲೆಕ್ಕೆ ಹಾರಿದಂತೆ ಮಗುವು ಗಾಳಿಯಲ್ಲಿ ತೇಲಾಡಿದೆ

 • Share this:

  ಮೂರು ವರ್ಷದ ಮಗುವೊಂದು ಗಾಳಿಪಟಕ್ಕೆ ಸಿಲುಕಿ 100 ಅಡಿ ಎತ್ತರಕ್ಕೆ ಹಾರಿರುವ ಘಟನೆ ತೈವಾನ್​ನಲ್ಲಿ ನಡೆದಿದೆ. ಇದೀಗ ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.


  ತೈವಾನ್​ ನನ್ಲಿಯೊವೋನಲ್ಲಿ ಈ ಘಟನೆ ನಡೆದಿದೆ. ಗಾಳಿಪಟ ಉತ್ಸವ ಕಾರ್ಯಕ್ರಮವನ್ನು ನನ್ಲಿಯೊವೋನಲ್ಲಿ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಹೆಣ್ಣು ಮಗು ದೊಡ್ಡ ಗಾಳಿಪಟಕ್ಕೆ ಸಿಲುಕಿಕೊಂಡಿದೆ. ಗಾಳಿಯ ರಭಸಕ್ಕೆ ಗಾಳಿಪಟ ಮೇಲೆಕ್ಕೆ ಹಾರಿದಂತೆ ಮಗುವು ಗಾಳಿಯಲ್ಲಿ ತೇಲಾಡಿದೆ. ಈ ದೃಶ್ಯವನ್ನು ಕಂಡು ಅಲ್ಲಿ ನೆರೆದಿದ್ದವರು ಜೋರಾಗಿ ಬೊಬ್ಬೆ ಹೊಡೆಯಲು ಆರಂಭಿಸುತ್ತಾರೆ.  ಸಮುದ್ರ ತಡವಾದ್ದರಿಂದ ಗಾಳಿ ಪ್ರಮಾಣ ಹೆಚ್ಚಾಗಿತ್ತು. ಗಾಳಿಪಟದಲ್ಲಿ ಸಿಲುಕಿಕೊಂಡ ಮಗುವು ಮೇಲಕ್ಕೆ ಹಾರಿದೆ. ಸ್ವಲ್ಪ ಹೊತ್ತಿನಲ್ಲೇ ಗಾಳಿ ರಭಸ ಕಡಿಮೆಯಾದಂತೆ ಗಾಳಿಪಟ ಕೆಲಕ್ಕೆ ಬಂದಿವೆ ಈ ವೇಳೆ ಅಲ್ಲಿದ್ದ ಜನರು ಮಗುವಿನ ರಕ್ಷಣೆಗೆ ಧಾವಿಸಿ ಪ್ರಾಣ ಉಳಿಸಿದ್ದಾರೆ. ಈ ಘಟನೆಯಿಂದ ಮಗುವಿಗೆ ತರಚಿದ ಗಾಯಗಳಾಗಿದೆ.

  Published by:Harshith AS
  First published: