Insurance Plan: ಎಲ್ಲದ್ದಕ್ಕೂ ಭದ್ರತೆ ಅನ್ನೋದು ಇದ್ದಾಗ ಮಳೆಗಾಲದ ಖುಷಿಯನ್ನು ದುಪ್ಪಟಾಗಿಸುತ್ತದೆ. ಆದರೆ ಮುಂಗಾರಿನಲ್ಲಿ ಮಳೆ ಸೃಷ್ಟಿಸೋ ಅವಘಡಗಳಿಗೆ ಆರ್ಥಿಕ ಪೆಟ್ಟು ಬಿದ್ರೆ ಮುಗೀತು. ಸುಧಾರಿಸಿಕೊಳ್ಳುವುದಕ್ಕೆ ಬಹಳ ಸಮಯ ಬೇಕು. ಈ ನಿಟ್ಟಿನಲ್ಲಿ ಮುಂಗಾರಿನಲ್ಲಿ ನಿಮ್ಮ ಮನೆ, ವಾಹನ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ. ಮುಂಗಾರು ಆರಂಭಕ್ಕೂ ಮುನ್ನ ತೌಕ್ತೆ ಮತ್ತು ಯಾಸ್ ಚಂಡಮಾರುತಕ್ಕೆ ಭಾರತ ನಲುಗಿದೆ. ಅಲ್ಲದೇ ಈಗಾಗಲೇ ಕೋವಿಡ್ ನಿಯಮಗಳು ಸಡಿಲಗೊಂಡಿದೆ. ಈ ಎರಡು ಕಾರಣಗಳು ಕೂಡ ವಿಮಾ ಪಾಲಿಸಿಯ ಅಗತ್ಯವನ್ನು ಒತ್ತಿ ಹೇಳುತ್ತಿವೆ.
ಮೋಟಾರ್ ಮತ್ತು ಗೃಹ ವಿಮಾ ಪಾಲಿಸಿ
ಲಾಕ್ಡೌನ್, ವೈದ್ಯಕೀಯ ತುರ್ತು, ಆದಾಯ ನಷ್ಟದಿಂದ ಬಹುತೇಕರು ಬಳಲಿದ್ದಾರೆ. ವಿಮಾ ಪಾಲಿಸಿಗಳ ಬಗ್ಗೆ ಎಚ್ಚೆತ್ತುಕೊಳ್ಳಲು ಇದು ಸಕಾಲವಾಗಿದೆ. ಹೊಸ ಪಾಲಿಸಿ ಇಲ್ಲವೇ ಹಳೆಯ ಪಾಲಿಸಿ ರಿನೀವಲ್ ಮರೆತಿದ್ದರೆ ಈಗ ಹೊಸ ವಿಮಾ ಪಾಲಿಸಿಕೊಳ್ಳಲು ಸಕಾಲ.
ಮುಂಗಾರಿನಿಂದ ನಿಮ್ಮ ಮನೆ, ವಾಹನ ಮತ್ತು ನಿಮ್ಮ ಆರೋಗ್ಯ ಸುರಕ್ಷಿತವಾಗಿರಲು ಈ ಎಲ್ಲದರ ವಿಮಾ ಪಾಲಿಸಿ ನಿಮಗೆ ನೆರವಿಗೆ ಬರುತ್ತದೆ. ಆರ್ಥಿಕ ದಿವಾಳಿಯಿಂದ ರಕ್ಷಿಸುತ್ತದೆ ಎಂದು ಟಾಟಾ ಎಐಜಿ ಜನರಲ್ ಇನ್ಶ್ಯೂರೆನ್ಸ್ ಅಧ್ಯಕ್ಷ-ಗ್ರಾಹಕ ವ್ಯವಹಾರದ ಪರಾಗ್ ವೆಡ್ ಹೇಳುತ್ತಾರೆ.
ಈಗಾಗಲೇ ಲಸಿಕೆ ಪಡೆವರು ಸಾರ್ವಜನಿಕ ಸಾರಿಗೆ ಬಿಟ್ಟು, ಸ್ವಂತ ವಾಹನವನ್ನು ಅವಲಂಬಿಸಿದ್ದಾರೆ. ಹಾಗಿದ್ದರೆ ನಿಮ್ಮ ಮೋಟಾರು ವಿಮಾ ಪಾಲಿಸಿ ಖರೀದಿಯಲ್ಲಿ ಎಚ್ಚರಿಕೆ ಇರಲಿ.
'ಸಾಂಪ್ರಾದಾಯಿಕ ಸಮಗ್ರ ಮೋಟಾರು ವಿಮಾ ಪಾಲಿಸಿ ಮಳೆಯ ಪ್ರವಾಹದ ಹಿನ್ನೆಲೆ ಉಂಟಾದ ಎಂಜಿನ್ ಭಾಗ ಮತ್ತು ಇನ್ನಿತರ ನಷ್ಟವನ್ನು ತುಂಬುತ್ತದೆ. ಆದರೆ ನೀವು ಪ್ರವಾಹದ ಸ್ಥಳದಲ್ಲಿ ಕಾರನ್ನು ಚಲಿಸಿದರೆ ಅದರ ನಷ್ಟಕ್ಕೆ ಹಣ ನೀಡುವುದಿಲ್ಲ' ಎಂದು ಜೆ ಬಿ ಬೋಡಾ ಇನ್ಶ್ಯೂರೆನ್ಸ್ ಮತ್ತು ರೀ ಇನ್ಶ್ಯೂರೆನ್ಸ್ ಬ್ರೋಕರ್ಸ್ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಸರೋಜ್ ಕಾಂತ ಸತ್ಪತಿ ಹೇಳುತ್ತಾರೆ.
ಈ ನಿಟ್ಟಿನಲ್ಲಿ ಹೊಸ ಕಾರು ಖರೀದಿಸುವಾಗ ಸುರಕ್ಷತೆ ಸಲುವಾಗಿ ಎಂಜಿನ್ ಪ್ರೊಟೆಕ್ಷನ್ ರೈಡರ್ ಜೊತೆಗೆ ಶೂನ್ಯ-ಸವಕಳಿ ಮೋಟಾರ್ ವಿಮಾ ಪಾಲಿಸಿಯನ್ನು ಖರೀದಿಸಿ.
'ಮಳೆಯಿಂದ ಉಂಟಾದ ನೀರಿನ ರಸ್ತೆಯಲ್ಲಿ ಚಲಿಸುವಾಗ ನಿಧಾನವಾಗಿ ಚಲಿಸಿ ಇದರಿಂದ ಎಂಜಿನ್ನಲ್ಲಿ ನೀರು ಸೇರುವ ಸಾಧ್ಯತೆ ತಪ್ಪಿಸಬಹುದು. ನೀರಿನಲ್ಲಿ ಸಿಲುಕಿಕೊಂಡರೆ ಕ್ರ್ಯಾಂಕ್ ಮಾಡಬಾರದು. ಇದರಿಂದ ಎಂಜಿನ್ ಅಪಾರ ಪ್ರಮಾಣದಲ್ಲಿ ಹಾನಿಗೆ ಒಳಗಾಗುವುದನ್ನು ತಪ್ಪಿಸುತ್ತದೆ' ಎಂದು ರಹೇಜಾ ಕ್ಯೂಬಿಇ ಜೆನರಲ್ ಇನ್ಶ್ಯೂರೆನ್ಸ್ನ ಎಂಡಿ ಮತ್ತು ಸಿಇಒ ಪಂಕಜ್ ಅರೋರಾ ಹೇಳುತ್ತಾರೆ. 'ಅಲ್ಲದೇ ಎಂಜಿನ್ ಪ್ರೊಟೆಕ್ಟ್ ಆಡ್-ಆನ್ ರೈಡರ್ ಪಾಲಿಸಿ ತೆಗೆದುಕೊಂಡರೆ ನೀರಿನ ಪ್ರವೇಶ ಮತ್ತು ಆಯಿಲ್ ಲೀಕೇಜ್ ನಷ್ಟವನ್ನು ತುಂಬಿಕೊಡಲಾಗುತ್ತೆ' ಎಂದು ಹೇಳುತ್ತಾರೆ.
ಗೃಹ ವಿಮಾ ಪಾಲಿಸಿ
ಗೃಹ ವಿಮಾ ಪಾಲಿಸಿಯಲ್ಲಿ ಮನೆಯ ಮೌಲ್ಯಯುತ ವಸ್ತುಗಳ ಪರಿಗಣನೆ ಇರಲಿ. ಪೋರ್ಟಬಲ್ ಎಲೆಕ್ಟ್ರಾನಿಕ್ ಉಪಕರಣ, ಆಭರಣ ಮತ್ತು ಬೆಲೆಬಾಳುವಂತಹ ವಸ್ತುಗಳ ಆಡ್ ಆನ್ ವಿಮೆಯನ್ನು ಹೆಚ್ಚಿಸಲು ಬಳಸಬಹುದು ಎಂದು ಸಲಹೆ ನೀಡುತ್ತಾರೆ.
ಸಮಗ್ರ ಆರೋಗ್ಯ ವಿಮಾ ಪಾಲಿಸಿ ಖರೀದಿಸಿ
'ಮಾನ್ಸೂನ್ ಅಂದ್ರೆ ಮಳೆಗಾಲದ ಈ ಸಮಯದಲ್ಲಿ ಮಲೇರಿಯಾ, ಡೆಂಘಿ, ಸೊಳ್ಳೆಯಿಂದ ಹರಡುವ ಆರೋಗ್ಯ ಸಮಸ್ಯೆಗಳಿಗೆ ನಿರ್ದಿಷ್ಟ ಕವರೇಜ್ಗಳಿವೆ. ಆದರೂ ಸಮಗ್ರ ಆರೋಗ್ಯ ಪಾಲಿಸಿ ಜೊತೆಗೆ ಟಾಪ್ ಅಪ್ ಪಾಲಿಸಿಗಳನ್ನು ಖರೀದಿಸಬಹುದು' ಎಂದು ಆಪ್ಟಿಮಾ ಮನಿ ಮ್ಯಾನೇಜರ್‌ಗಳ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಮತ್ಪಾಲ್ ಹೇಳುತ್ತಾರೆ.
ಸ್ವತಂತ್ರ ವೈಯಕ್ತಿಕ ಅಪಘಾತ ವಿಮಾ ಪಾಲಿಸಿಯನ್ನು ಖರೀದಿಸಲು ಮರೆಯಬೇಡಿ. ಇದು ತಾತ್ಕಾಲಿಕ ಅಂಗವೈಕಲ್ಯದ ಪ್ರಯೋಜನವನ್ನು ನೀಡುತ್ತದೆ.
ವಿಮಾ ಪಾಲಿಸಿ ಬಗ್ಗೆ ಜಾಗ್ರತೆ ಇರಲಿ
ನಿಮ್ಮ ಪಾಲಿಸಿಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಿ.
ನೀವು ಖರೀದಿಸಿರುವ ವಿಮಾ ಪಾಲಿಸಿ ಬಗ್ಗೆ ಕುಟುಂಬಕ್ಕೆ ತಿಳಿಸಿ.
ಡಿಜಿಟಲ್ ಲಾಕರ್ ಖಾತೆಯಂತಹ ವಿಮಾ ಭಂಡಾರವಿರಲಿ.
ಎಲ್ಲಾ ವಿಮಾ ಪಾಲಿಸಿಗಳ ನಕಲು ಪ್ರತಿಯನ್ನು ಕುಟುಂಬಕ್ಕೆ ಸಿಗುವಂತೆ ಇಡಿ.
ಇದರಿಂದ ಟ್ರ್ಯಾಕ್ ಮಾಡಲು ಸುಲಭವಾಗುತ್ತದೆ ಎಂದು ಮತ್ಪಾಲ್ ತಿಳಿಸುತ್ತಾರೆ.
ತಪ್ಪದೇ ಈ ನಿಯಮ ಪಾಲಿಸಿ
ಮಳೆ ಬರುವ ಸಂದರ್ಭದಲ್ಲಿ ಶಿಥಿಲಗೊಂಡ ಕಟ್ಟಡ, ಮರದ ಕೆಳಗೆ ವಾಹನ ನಿಲ್ಲಿಸಬಾರದು.ವಿಮಾ ವೆಚ್ಚ ಸಿಗಬಹುದು. ಆದರೆ ಸಂಪೂರ್ಣ ನಿಮ್ಮ ವಾಹನ ಬದಲಾಗುವುದಿಲ್ಲ. ಇದು ಸಂಕಟಕ್ಕೆ ಕಾರಣವಾಗುತ್ತದೆ.
ಹಾನಿಯ ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸಿಡಿ.
ಮಳೆಯಿಂದ ಮನೆ ಹಾನಿಯಾಗಿದ್ದರೆ, ಮೊಬೈಲ್ ಬಳಸಿ ನೀರಿನ ಮಟ್ಟ ಮತ್ತು ಹಾನಿಯನ್ನು ವಿಡಿಯೋ ಮಾಡಿಟ್ಟುಕೊಳ್ಳಿ. ಇದು ಕಡ್ಡಾಯವಲ್ಲ. ಆದರೂ ಗೃಹ ವಿಮಾ ಹಕ್ಕು ಹಾನಿ ಸಾಬೀತು ಮಾಡಲು ನೆರವಾಗುತ್ತದೆ ಎಂದು ಸತ್ಪತಿ ಅಭಿಪ್ರಾಯ ಪಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ