Robbery: ಬೆನ್ನಿಗೆ Kiss ಮಾಡಿ ಹಣ ಕದ್ದ ಭೂಪನಿಗೆ ಆಗಿದ್ಧೇನು ನೋಡಿ

ಸಂತ್ರಸ್ತೆ ವಕೀಲೆ ಎಟಿಎಂನಿಂದ ಹಣ ತೆಗೆದುಕೊಳ್ಳುತ್ತಿದ್ದಾಗ, ಆರೋಪಿ ಕಸರ್ ಎಟಿಎಂ ಆವರಣವನ್ನು ಪ್ರವೇಶಿಸಿ, ವಕೀಲೆಯ ಬೆನ್ನಿಗೆ ಮುತ್ತಿಟ್ಟರು  ನಂತರ  ಎಟಿಎಂನಿಂದ ಪಡೆದ ನಗದು ಹಣದೊಂದಿಗೆ ಅಲ್ಲಿಂದ ಪರಾರಿಯಾದ್ದಾನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ನಿಮ್ಮ ಎಟಿಎಂನಿಂದ ಹಣ ತೆಗೆದುಕೊಳ್ಳಬೇಕಾದರೆ ತುಂಬಾನೇ ಹುಷಾರಾಗಿರಬೇಕು(Care full) ಎಂದು ಅನೇಕರು ಹೇಳುವುದನ್ನು ನಾವು ಕೇಳುತ್ತೇವೆ. ಏಕೆಂದರೆ ಯಾವಾಗ ಯಾರು ನಮ್ಮ ಹಿಂದೆ ಬಂದು ನಾವು ತೆಗೆದುಕೊಳ್ಳುತ್ತಿರುವ ಹಣವನ್ನು(Money) ದೋಚಿಕೊಂಡು ಹೋಗುತ್ತಾರೋ ಗೊತ್ತಾಗುವುದಿಲ್ಲ. ಏಕೆಂದರೆ ನಾವು ಎಟಿಎಂನಿಂದ(ATM) ಹಣವನ್ನು ಡ್ರಾ ಮಾಡಿಕೊಳ್ಳುವಾಗ ನಮ್ಮ ಸಂಪೂರ್ಣ ಗಮನ ಹಣದ ಮೇಲೆ ಇರುತ್ತದೆ ಮತ್ತು ಹಿಂದೆ ಯಾರೇ ಬಂದು ನಿಂತರೂ ನಾವು ಆ ಕಡೆಗೆ ಗಮನ ಕೊಡುವುದಿಲ್ಲ. ಹಾಗೇ ನಿಮ್ಮ ಹಿಂದೆಯೇ ಎಟಿಎಂನಿಂದ ಅವರು ದುಡ್ಡು ಡ್ರಾ (Draw) ಮಾಡಿಕೊಳ್ಳಲು ಬಂದಿರಬೇಕು ಎಂದು ನೀವು ತಿಳಿದುಕೊಂಡು ಬಿಡಬೇಡಿ. ನಿಮ್ಮ ಹಿಂದೆ ಇರುವವರ ಬಗ್ಗೆ ಸ್ವಲ್ಪ ಗಮನ (Attention) ಹರಿಸಿ.

ಮಹಿಳಾ ವಕೀಲರಿಗೆ ಕಿರುಕುಳ
ಇಲ್ಲೊಂದು ಅದೇ ರೀತಿಯ ಘಟನೆ ನಡೆದಿದೆ ನೋಡಿ, ಮಹಾರಾಷ್ಟ್ರದ ಮುಂಬೈನಿಂದ ವರದಿಯಾದ ಆಘಾತಕಾರಿ ಘಟನೆಯಲ್ಲಿ, ನಲಸೋಪಾರದ ಒಬ್ಬ ವ್ಯಕ್ತಿ ಎಟಿಎಂ ಬೂತ್‌ನಲ್ಲಿ ಮಹಿಳಾ ವಕೀಲರಿಗೆ ಕಿರುಕುಳ ನೀಡಿ ಅವರ ಬಳಿ ಇರುವ ಹಣವನ್ನು ದರೋಡೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು.

ಈ ಘಟನೆಯ ನಂತರ, 29 ವರ್ಷದ ಅವಿನಾಶ್ ಕಸರ್ ಎಂಬ ವ್ಯಕ್ತಿಯನ್ನು ಅಂಧೇರಿ ಪೊಲೀಸರು ಅಪರಾಧ ನಡೆದ 24 ಗಂಟೆಗಳಲ್ಲಿಯೇ ಬಂಧಿಸಿದ್ದಾರೆ. ಈ ಘಟನೆಯ ಬಗ್ಗೆ ತಿಳಿದ ನಂತರ ಪೊಲೀಸರು ಅಂಧೇರಿ ಮತ್ತು ನಲಸೋಪಾರಾ ನಡುವಿನ ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾಗಳ ರೆಕಾರ್ಡಿಂಗ್‌ಗಳನ್ನು ಜಾಲಾಡಿದ್ದಾರೆ ಮತ್ತು ಅಪರಾಧ ನಡೆದ 24 ಗಂಟೆಗಳಲ್ಲಿಯೇ ಆರೋಪಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಓದಿದ್ದು Engineering, ಮಾಡಿದ್ದು ಬ್ಯಾಂಕ್ Robbery: ಪೇಪರ್ ನಲ್ಲಿ ಬಂದ ಸುದ್ದಿ ನೋಡಿ ಪ್ಲಾನ್; ಅರೆಸ್ಟ್ ಆದ್ಮೇಲೆ ಹೇಳಿದ್ದು ಪಾಪರ್ ಕಥೆ!

ಎಟಿಎಂ ಹಣ ಪಡೆದು ಪರಾರಿ
“ಜನವರಿ 19ರಂದು ಅಂಧೇರಿ ರೈಲ್ವೆ ನಿಲ್ದಾಣದ ಹೊರಗಿನ ಎಟಿಎಂನಲ್ಲಿ ರಾತ್ರಿ 8:40ರ ಸುಮಾರಿಗೆ ಈ ಘಟನೆ ನಡೆದಿದೆ. ಸಂತ್ರಸ್ತೆ ವಕೀಲೆ ಎಟಿಎಂನಿಂದ ಹಣ ತೆಗೆದುಕೊಳ್ಳುತ್ತಿದ್ದಾಗ, ಆರೋಪಿ ಕಸರ್ ಎಟಿಎಂ ಆವರಣವನ್ನು ಪ್ರವೇಶಿಸಿ, ವಕೀಲೆಯ ಬೆನ್ನಿಗೆ ಮುತ್ತಿಟ್ಟರು  ನಂತರ  ಎಟಿಎಂನಿಂದ ಪಡೆದ ನಗದು ಹಣದೊಂದಿಗೆ ಅಲ್ಲಿಂದ ಪರಾರಿಯಾದ್ದಾನೆ ಎಂದು ಸುದ್ದಿ ಮಾಧ್ಯಮಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಈ ಘಟನೆಯ ನಂತರ ಸಂತ್ರಸ್ತೆ ಅಂಧೇರಿ ಪೊಲೀಸ್ ಠಾಣೆಗೆ ಧಾವಿಸಿ ಆ ವ್ಯಕ್ತಿಯ ವಿರುದ್ಧ ದೂರು ನೀಡಿದರು.

ತನಿಖೆ ಯಶಸ್ವಿ
ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಪೊಲೀಸರು, ವಿವರವಾದ ತನಿಖೆಯ ನಂತರ  ತಾಂತ್ರಿಕ ಗುಪ್ತಚರದ ಸಹಾಯದಿಂದ ಆರೋಪಿ ಬಂದರು ಮಾರ್ಗದ ಗೊರೆಗಾಂವ್‌ಗೆ ರೈಲು ಹತ್ತುತ್ತಿರುವುದು ಕಂಡು ಬಂದಿದೆ. ನಂತರ ಆರೋಪಿ ಬೊರಿವೇಲಿ ರೈಲ್ವೆ ನಿಲ್ದಾಣದಿಂದ ವಿರಾರ್ ಹೋಗುವ ರೈಲು ಹತ್ತಿದ್ದಾನೆ, ಅವನು ಮಧ್ಯದಲ್ಲಿ ನಲಸೋಪಾರಾದಲ್ಲಿ ಇಳಿದುಕೊಂಡಿದ್ದಾನೆ. ಆರೋಪಿ ಎಲ್ಲಿದ್ದಾನೆ ಎಂಬ ವಿವರಗಳನ್ನು ಕಂಡು ಹಿಡಿಯಲು, ಘಟನೆಯ ಮೊದಲು ಮತ್ತು ನಂತರ ಎಟಿಎಂನಿಂದ ಹಣವನ್ನು ತೆಗೆದುಕೊಂಡ ಖಾತೆದಾರರ ವಿವರಗಳನ್ನು ಪಡೆಯಲು ಪೊಲೀಸರ ತಂಡವು ಬ್ಯಾಂಕಿನ ಅಧಿಕಾರಿಗಳ ಸಹಾಯವನ್ನು ತೆಗೆದುಕೊಂಡಿತು ಮತ್ತು ಅವರು ಕಸರ್‌ನ ಬ್ಯಾಂಕ್ ವಿವರಗಳನ್ನು ಪಡೆಯುವಲ್ಲಿ ಯಶಸ್ವಿಯಾದರು ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: Robbery: ಪೊಲೀಸ್ ವೇಷದಲ್ಲಿ ಹೋಗಿ ಹಣ ದೋಚಿದ ಖದೀಮರು

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತಷ್ಟು ಸ್ಕ್ಯಾನ್ ಮಾಡಿದರು ಮತ್ತು ಕಸರ್‌ನ ಕರೆ ವಿವರಗಳನ್ನು ಪರಿಶೀಲಿಸಿದರು ಮತ್ತು ಅವನ ಸೆಲ್ ಫೋನ್ ಸ್ಥಳದಿಂದ ಅವನು ನಲಸೋಪಾರಾದಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡು ಆತನನ್ನು ಗುರುವಾರ ರಾತ್ರಿ ಬಂಧಿಸಲಾಯಿತು.ಇದಲ್ಲದೆ, ಪೊಲೀಸರು ಒಬ್ಬ ವ್ಯಕ್ತಿಯನ್ನು ದರೋಡೆ ಮಾಡಿದ್ದಕ್ಕಾಗಿ ಮತ್ತು ವ್ಯಕ್ತಿಯನ್ನು ಹಿಂಬಾಲಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದರು.
Published by:vanithasanjevani vanithasanjevani
First published: