• Home
  • »
  • News
  • »
  • trend
  • »
  • Viral Video: ಒಂದೇ ರಿಕ್ಷಾದಲ್ಲಿ ಬರೋಬ್ಬರಿ 27 ಪ್ರಯಾಣಿಕರು! ನೀವೇ ವಿಡಿಯೋ ನೋಡಿ

Viral Video: ಒಂದೇ ರಿಕ್ಷಾದಲ್ಲಿ ಬರೋಬ್ಬರಿ 27 ಪ್ರಯಾಣಿಕರು! ನೀವೇ ವಿಡಿಯೋ ನೋಡಿ

ಒಂದು ರಿಕ್ಷಾದಲ್ಲಿದ್ದ 27  ಪ್ರಯಾಣಿಕರು

ಒಂದು ರಿಕ್ಷಾದಲ್ಲಿದ್ದ 27 ಪ್ರಯಾಣಿಕರು

ಇಲ್ಲೊಂದು ಆಟೋದಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದವರ ಸಂಖ್ಯೆ ನೀವು ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರೆಂಟಿ. ಉತ್ತರ ಪ್ರದೇಶದ ಪೊಲೀಸರು ಈ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿದ ನಂತರ ಅದರಲ್ಲಿರುವವರ ಸಂಖ್ಯೆ ಬಯಲಾಗಿದೆ ನೋಡಿ. ವಯಸ್ಕರು ಮತ್ತು ಮಕ್ಕಳು ಸೇರಿದಂತೆ ಒಟ್ಟು 27 ಪ್ರಯಾಣಿಕರು ಈ ಆಟೋ ರಿಕ್ಷಾದಿಂದ ಇಳಿದಿರುವುದನ್ನು ನೋಡಿದ ಪೊಲೀಸರು ಸಹ ಒಂದು ಕ್ಷಣ ಶಾಕ್ ಆಗಿದ್ದಾರೆ.

ಮುಂದೆ ಓದಿ ...
  • Share this:

ನಮ್ಮ ಜನಕ್ಕೆ ಯಾವುದನ್ನು ಮಾಡಬೇಡಿ ಅಂತ ನಾವು ಹೇಳುತ್ತೇವೆಯೋ, ಅವರು ಅದನ್ನೆ ಮೊದಲು ಮಾಡುವುದು ಅಂತ ಕಾಣುತ್ತದೆ. ಪೊಲೀಸರು (Police) ಒಂದು ದ್ವಿಚಕ್ರ ವಾಹನದಲ್ಲಿ ಇಬ್ಬರು ಮಾತ್ರ ಪ್ರಯಾಣಿಸಬೇಕು, ಹಾಗೆಯೇ ಮೂರು ಚಕ್ರದ ಆಟೋ ರಿಕ್ಷಾದಲ್ಲಿ (Auto Rickshaw) ಚಾಲಕನನ್ನು ಹೊರತು ಪಡಿಸಿ ಮೂವರು ಅಥವಾ ಅಬ್ಬಬ್ಬಾ ಅಂದ್ರೆ ಅವರ ಜೊತೆ ಒಬ್ಬ ಚಿಕ್ಕ ಮಗು ಹಿಂದೆ ಕುಳಿತು ಪ್ರಯಾಣಿಸಬಹುದು ಅಂತ ಹೇಳುತ್ತಾರೆ. ಇದಕ್ಕಿಂತ ಹೆಚ್ಚಿನ ಜನರನ್ನು ಕೂರಿಸಿಕೊಂಡು ಅಪಾಯಕ್ಕೆ ದಾರಿ ಮಾಡಿಕೊಳ್ಳಬೇಡಿ ಅಂತ ಸಾವಿರ ಸಲ ಹೇಳಿದರೂ ಸಹ ಈ ಆಟೋ ಚಾಲಕರು (Driver) ದುಡ್ಡಿನ ಆಸೆಗಾಗಿ ಮತ್ತು ಕೆಲವೊಮ್ಮೆ ಪ್ರಯಾಣಿಕರ (Passenger) ಒತ್ತಡಕ್ಕೆ ಮಣಿದು ಜಾಸ್ತಿ ಜನರನ್ನು ತುಂಬಿಸಿಕೊಂಡು ಹೋಗುವುದನ್ನು ನಾವು ಹೆಚ್ಚಾಗಿ ಈ ಬೆಳಿಗ್ಗೆ ಹೊತ್ತಿನಲ್ಲಿ ಶಾಲೆಯ ಮಕ್ಕಳನ್ನು ಕೂರಿಸಿಕೊಂಡು ಹೋಗುವ ಆಟೋ ರಿಕ್ಷಾಗಳಲ್ಲಿ ನೋಡುತ್ತೇವೆ.


ಒಂದು ರಿಕ್ಷಾದಲ್ಲಿದ್ದ 27 ಪ್ರಯಾಣಿಕರು
ಇದೇನು ಅಲ್ಲ ಎಂಬಂತೆ ಇಲ್ಲೊಂದು ಆಟೋದಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದವರ ಸಂಖ್ಯೆ ನೀವು ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರೆಂಟಿ. ಉತ್ತರ ಪ್ರದೇಶದ ಪೊಲೀಸರು ಈ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿದ ನಂತರ ಅದರಲ್ಲಿರುವವರ ಸಂಖ್ಯೆ ಬಯಲಾಗಿದೆ ನೋಡಿ. ವಯಸ್ಕರು ಮತ್ತು ಮಕ್ಕಳು ಸೇರಿದಂತೆ ಒಟ್ಟು 27 ಪ್ರಯಾಣಿಕರು ಈ ಆಟೋ ರಿಕ್ಷಾದಿಂದ ಇಳಿದಿರುವುದನ್ನು ನೋಡಿದ ಪೊಲೀಸರು ಸಹ ಒಂದು ಕ್ಷಣ ಶಾಕ್ ಆಗಿದ್ದಾರೆ.


ಇದನ್ನೂ ಓದಿ: Viral Video: ಜಲಾವೃತವಾದ ಮುಂಬೈ ರಸ್ತೆಯಲ್ಲಿ ಹಾಯಾಗಿ ಮಲಗಿದ ವ್ಯಕ್ತಿ! "ಮಾಲ್ಡೀವ್ಸ್ ಇನ್ ಮಲಾಡ್" ಎಂದ ನೆಟ್ಟಿಗರು


ಬೆನ್ನಟ್ಟಿ ಆ ಆಟೋವನ್ನು ತಡೆದು ನಿಲ್ಲಿಸಿದ ಪೊಲೀಸರು
ಫತೇಪುರದ ಬಿಂಡ್ಕಿ ಕೊತ್ವಾಲಿ ಪ್ರದೇಶದ ಬಳಿ ಈ ಆಟೋ ಪತ್ತೆಯಾಗಿದೆ. ಪೊಲೀಸರು ಸ್ಪೀಡ್ ಗನ್ ಅನ್ನು ಪರಿಶೀಲಿಸಿದರು ಮತ್ತು ಅತಿ ವೇಗವಾಗಿ ಚಲಿಸುತ್ತಿದ್ದ ಆಟೋವನ್ನು ಬೆನ್ನಟ್ಟಿ ಆ ಆಟೋವನ್ನು ತಡೆದು ನಿಲ್ಲಿಸಿದರು. ಪೊಲೀಸರು ಅದರಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲು ಪ್ರಾರಂಭಿಸಿದಾಗ ಅವರು 27 ಜನರನ್ನು ನೋಡಿ ದಿಗ್ಭ್ರಮೆಗೊಂಡರು. ಡ್ರೈವರ್ ಸೇರಿದಂತೆ ಎಲ್ಲರೂ ಒಟ್ಟಿಗೆ ಇಕ್ಕಟ್ಟಿಗೆ ಸಿಲುಕಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಆಟೋ ವಿಡಿಯೋ 
ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದಲೂ 8000ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ ಮತ್ತು ಇದನ್ನು 3,000ಕ್ಕೂ ಹೆಚ್ಚು ಬಾರಿ ಮರು ಟ್ವೀಟ್ ಮಾಡಿದ್ದಾರೆ. ಇದನ್ನು ನೋಡಿದ ಒಬ್ಬರು "ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ನಿಮ್ಮ ಹೆಸರನ್ನು ದಾಖಲಿಸಿಕೊಳ್ಳಲು ಪ್ರಯತ್ನಿಸಿ" ಎಂದು ಅಣಕಿಸಿದ್ದಾರೆ. ಇನ್ನೊಬ್ಬ ವ್ಯಕ್ತಿಯು "ಇದು ಭಾರತ ದೇಶ, ಇಲ್ಲಿ ಅಸಾಧ್ಯವಾದುದನ್ನು ಸಾಧ್ಯ ಮಾಡಿ ತೋರಿಸುತ್ತಾರೆ" ಎಂದು ಬರೆದಿದ್ದಾರೆ. ವರದಿಗಳ ಪ್ರಕಾರ, ಈ ಆಟೋ ರಿಕ್ಷಾವನ್ನು ಪೊಲೀಸರು ಈಗ ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ:  Marriage Dhoka: ವಯಸ್ಸು 30 ಅಂತ ಯಾಮಾರಿಸಿ ಯುವಕನನ್ನು ಮದ್ವೆಯಾದ 52ರ ಆಂಟಿ! ಮೇಕಪ್‌ ನೋಡಿ ಮೋಸ ಹೋದ ಹುಡುಗ


ವಿಡಿಯೋ ನೋಡಿ ನೆಟ್ಟಿಗರಿಂದ ತಮಾಷೆಯ ಕಾಮೆಂಟ್ 
ಈ ವಿಡಿಯೋವನ್ನು ಅಶ್ವಿನಿ ಉಪಾಧ್ಯಾಯ ಎಂಬುವವರು ಹಂಚಿಕೊಂಡಿದ್ದಾರೆ ಮತ್ತು ಟನ್ ಗಟ್ಟಲೆ ಕಾಮೆಂಟ್ ಗಳನ್ನು ಗಳಿಸಿದ್ದಾರೆ. "ಈ ಆಟೋವನ್ನು ಬಸ್ ಅಂತ ಘೋಷಿಸಿ ಮತ್ತು ಈ ಚಾಲಕನ ಬಳಿ ಸ್ಥಳವನ್ನು ಹೇಗೆ ನಿರ್ವಹಿಸುವುದು ಎಂಬುದರ ಬಗ್ಗೆ ತರಗತಿಗಳನ್ನು ತೆಗೆದುಕೊಳ್ಳಬೇಕು" ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ”ಈ ಆಟೋ ಚಾಲಕ ಯಾವ ಕಂಪನಿಯ ಟೈರ್ ಗಳನ್ನು ಬಳಸುತ್ತಿದ್ದಾರೆ” ಅಂತ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.


ಇಂತಹ ಚಿತ್ರ ವಿಚಿತ್ರವಾದ ಘಟನೆಗಳು ಈ ಸಾರಿಗೆ ವ್ಯವಸ್ಥೆಗಳಲ್ಲಿ ನಡೆಯುತ್ತಲೇ ಇರುತ್ತವೆ ಎಂದು ಹೇಳಬಹುದು. ಇತ್ತೀಚೆಗೆ ಬೆಂಗಳೂರು ಮೂಲದ ಪ್ರಯಾಣಿಕರೊಬ್ಬರು ಕಚೇರಿಗೆ ಹೋಗುವಾಗ ತನ್ನ ಆಟೋ ಚಾಲಕನೊಂದಿಗೆ ನಡೆಸಿದ ಸಂಭಾಷಣೆಯನ್ನು ಹಂಚಿಕೊಂಡರು. ಮಾರ್ಗ ಮಧ್ಯೆ ಸಿಎನ್‌ಜಿ ಹಾಕಿಸಬೇಕು ಎಂದು ಆಟೋ ಚಾಲಕ ಪ್ರಯಾಣಿಕರಿಗೆ ಮಾಹಿತಿ ನೀಡಿದರು. ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಂಡ ನಂತರ, ಪ್ರಯಾಣಿಕನು ಚಾಲಕನಿಗೆ ವೇಗವನ್ನು ಹೆಚ್ಚಿಸಲು ಹೇಳಿದನು. ಆಗ ಆಟೋ ಡ್ರೈವರ್ "ನೀವು ಕಚೇರಿಯಲ್ಲಿ ಎಷ್ಟೊತ್ತಿಗೆ ಲಾಗಿನ್ ಆಗಬೇಕು" ಅಂತ ಕೇಳಿದ್ದನ್ನು ಪ್ರಯಾಣಿಕ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿ ಕೊಂಡಿದ್ದರು.

Published by:Ashwini Prabhu
First published: