• Home
  • »
  • News
  • »
  • trend
  • »
  • First Flight Journey: ಹಾರುತಾ ಹಾರುತಾ, ಆಕಾಶದಲ್ಲಿ ತೇಲುತಾ! ಮೊದಲ ಬಾರಿ ವಿಮಾನ ಪ್ರಯಾಣ ಮಾಡಿದ 27 ಅಜ್ಜಿಯರು!

First Flight Journey: ಹಾರುತಾ ಹಾರುತಾ, ಆಕಾಶದಲ್ಲಿ ತೇಲುತಾ! ಮೊದಲ ಬಾರಿ ವಿಮಾನ ಪ್ರಯಾಣ ಮಾಡಿದ 27 ಅಜ್ಜಿಯರು!

ಮೊದಲ ವಿಮಾನ ಪ್ರಯಾಣಕ್ಕೆ ತೆರಳುತ್ತಿರುವ ಅಜ್ಜಿ

ಮೊದಲ ವಿಮಾನ ಪ್ರಯಾಣಕ್ಕೆ ತೆರಳುತ್ತಿರುವ ಅಜ್ಜಿ

ಎನ್‌ಜಿಒ ಒಂದು ಹಣ್ಣು ಹಣ್ಣು ಮೈಯ, ಬೊಚ್ಚು ಬಾಯಿಯ ಅಜ್ಜಿಯರ (Old Women’s) ಕನಸನ್ನು ನನಸಾಗಿಸಿದೆ. ಒಟ್ಟು 27 ಮಂದಿ ಅಜ್ಜಿಯರು ಏಕಕಾಲದಲ್ಲಿ ವಿಮಾನದಲ್ಲಿ (Plane) ಮೊದಲ ಬಾರಿ ಪ್ರಯಾಣ (Journey) ಮಾಡುವ ಮೂಲಕ ತಮ್ಮ ಜೀವನದ ಕನಸು (Dreams) ನನಸಾಗಿಕೊಂಡಿದ್ದಾರೆ.

  • News18 Kannada
  • Last Updated :
  • Kannur | Kerala | Kochi [Cochin]
  • Share this:

ಕೇರಳ: ವಿಮಾನ ಯಾನ (Flight Journey) ಎನ್ನುವುದು ಶ್ರೀಮಂತರಿಗೇನೋ (Rich People) ಸಲೀಸು, ಆದ್ರೆ ಬಡವರಿಗೆ (Poor People) ಇನ್ನೂ ಗಗನ ಕುಸುಮವವೇ ಸರಿ. ಬಡವರ ಇಂತಹ ಪರಿಸ್ಥಿತಿಯನ್ನು ಮನಗಂಡಿದ್ದ ನಮ್ಮ ರಾಜ್ಯದವರೇ ಆದ ಉದ್ಯಮಿ (Industrialist) ಕ್ಯಾಪ್ಟನ್ ಗೋಪಿನಾಥ್ (Caption Gopinath) ಅತ್ಯಂತ ಕಡಿಮೆ ಬೆಲೆಯಲ್ಲಿ ವಿಮಾನ ಯಾನದ ಕನಸನ್ನು ನನಸಾಗಿಸಿದ್ದರು. ಇದೀಗ ಎನ್‌ಜಿಒ ಒಂದು ಹಣ್ಣು ಹಣ್ಣು ಮೈಯ, ಬೊಚ್ಚು ಬಾಯಿಯ ಅಜ್ಜಿಯರ (Old Women’s) ಕನಸನ್ನು ನನಸಾಗಿಸಿದೆ. ಒಟ್ಟು 27 ಮಂದಿ ಅಜ್ಜಿಯರು ಏಕಕಾಲದಲ್ಲಿ ವಿಮಾನದಲ್ಲಿ (Plane) ಮೊದಲ ಬಾರಿ ಪ್ರಯಾಣ (Journey) ಮಾಡುವ ಮೂಲಕ ತಮ್ಮ ಜೀವನದ ಕನಸು (Dreams) ನನಸಾಗಿಕೊಂಡಿದ್ದಾರೆ. ಈ ಅಪರೂಪದ ಘಳಿಗೆಗೆ ಕೇರಳದ (Kerala) ಕೊಚ್ಚಿ ಹಾಗೂ ಕಣ್ಣೂರು ವಿಮಾನ ನಿಲ್ದಾಣ ಸಾಕ್ಷಿಯಾಗಿದೆ. ಕೊಚ್ಚಿ ಕಾರ್ಪೊರೇಷನ್ ಹಾಗೂ ಹೆಲ್ಪೇಜ್ ಇಂಡಿಯಾ ಸಹಯೋಗದೊಂದಿಗೆ ಈ ವೃದ್ಧೆಯರು ಕೊಚ್ಚಿ (Kochi) ವಿಮಾನ ನಿಲ್ದಾಣದಿಂದ ಕಣ್ಣೂರಿಗೆ (Kannuru) ವಿಮಾನ ಪ್ರಯಾಣ ನಡೆಸಿದ್ದಾರೆ.


27 ಅಜ್ಜಿಯರ ಮೊದಲ ವಿಮಾನ ಪ್ರಯಾಣ


ಹಿರಿಯ ನಾಗರಿಕರಿಗೆ ಗುಣಮಟ್ಟದ ಮತ್ತು ಗೌರವಾನ್ವಿತ ಜೀವನವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಜಿಒ ಆಗಿರುವ ಹೆಲ್ಪ್ ಏಜ್ ಇಂಡಿಯಾ ಸಂಸ್ಥೆ ಮತ್ತೊಂದು ಉತ್ತಮ ಕೆಲಸ ಮಾಡಿದೆ. ಕೊಚ್ಚಿ ಕಾರ್ಪೊರೇಷನ್ ಸಹಯೋಗದೊಂದಿಗೆ 27 ವೃದ್ಧೆಯರ ವಿಮಾನ ಯಾನದ ಕನಸನ್ನು ನನಸಾಗಿಸಿದೆ.ಮೊದಲ ಬಾರಿ ವಿಮಾನಯಾನ ಮಾಡಿದ ಅಜ್ಜಿಯರು


ಕೊಚ್ಚಿ ಕಾರ್ಪೊರೇಶನ್‌ನ ಚುಲ್ಲಿಕಲ್ ವಿಭಾಗಕ್ಕೆ ಸೇರಿದ 27 ಅಜ್ಜಿಯರು ಮೊದಲ ಬಾರಿಗೆ ವಿಮಾನದಲ್ಲಿ ಸಂಚರಿಸಿ ಖುಷಿ ಪಟ್ಟಿದ್ದಾರೆ. ಅಜ್ಜಿಯರೆಲ್ಲ ಕೊಚ್ಚಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದು, ರಾತ್ರಿ 7.45 ರ ಸುಮಾರಿಗೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದಾರೆ.


ಇದನ್ನೂ ಓದಿ: Man v/s Donkey: ಕತ್ತೆಗೆ ಪದೇ ಪದೇ ಥಳಿಸಿ, ತನ್ನ ಕರ್ಮದ ಫಲ ಅಲ್ಲೇ ಪಡೆದ ವ್ಯಕ್ತಿ! ವೈರಲ್ ವಿಡಿಯೋ ನೀವೂ ನೋಡಿ


ಸಂತಸ ಹಂಚಿಕೊಂಡ ಅಜ್ಜಿ


ಮೇಯರ್ ಎಂ.ಅನಿಲಕುಮಾರ್ ವಯೋಜನಾ ಸೇವಾ ಕೇಂದ್ರದಿಂದ ಪ್ರವಾಸಕ್ಕೆ ಚಾಲನೆ ನೀಡಿದರು. ಈ ಗುಂಪಿನಲ್ಲಿ, 88 ವರ್ಷದ ಮೋನಿಕಾ ಸ್ಟಾನ್ಲಿ ಅತ್ಯಂತ ಹಿರಿಯವರು  ‘ಚತ್ತಾಯುಂ ಮುಂದುಂ’ ಎಂಬ ಸಾಂಪ್ರದಾಯಿಕ ಕ್ರೈಸ್ತ ವೇಷ ಧರಿಸಿ ಕೈಚೀಲ ಹಿಡಿದು ಆಗಮಿಸಿದ ಮೋನಿಕಾಗೆ ವಿಮಾನ ಹಾರಾಟ ಕನಸಿನ ಸಾಕಾರ ಕ್ಷಣವಾಗಿತ್ತು. ಅವರು ಆಕಾಶದಲ್ಲಿ ವಿಮಾನವನ್ನು ನೋಡಿದಾಗಲೆಲ್ಲಾ, ವಿಮಾನದಲ್ಲಿ ಪ್ರಯಾಣ ಹೇಗೆ ಅನಿಸುತ್ತದೆ ಎಂದು ಅವಳು ಯಾವಾಗಲೂ ಆಶ್ಚರ್ಯ ಪಡುತ್ತಿದ್ದರಂತೆ. ಇದೀಗ ಕನಸು ನನಸಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.


ಭಯ ಮತ್ತು ಸಂತಸದ ಪ್ರಯಾಣ


"ಏರೋಪ್ಲೇನ್‌ನಲ್ಲಿ ಕುಳಿತುಕೊಂಡು ಒಂದು ಕಪ್ ಚಹಾವನ್ನು ಕುಡಿಯುವುದು ಮತ್ತು ಕಿಟಕಿಯ ಮೂಲಕ ನೋಡುವುದು ಹೇಗೆ ಎಂದು ಅನುಭವಿಸಲು ನನಗೆ ಕುತೂಹಲವಿತ್ತು. ನಾನು ಸ್ವಲ್ಪ ಭಯಗೊಂಡಿದ್ದೆ. ಆದರೆ ಪ್ರಯಾಣವನ್ನು ಅನುಭವಿಸಲು ಉತ್ಸುಕನಾಗಿದ್ದೆ ಅಂತ ಅಜ್ಜಿಯರು ಹೇಳಿದ್ದಾರೆ.


ಬಾಲ್ಯದ ದಿನಗಳ ಮೆಲುಕು


ಏತನ್ಮಧ್ಯೆ, ಇಬ್ಬರು ಆತ್ಮೀಯ ಸ್ನೇಹಿತರಾದ67 ವರ್ಷದ ರೋಸ್ಮರಿ ಮತ್ತು 61 ವರ್ಷದ ಮಾರಿಯಾ ರೊಡ್ರಿಗಸ್ ಅವರು ಇಡೀ ಪ್ರವಾಸದ ಸಿದ್ಧತೆಯು ಬಾಲ್ಯದ ದಿನಗಳಿಗೆ ಮರಳಿದೆ ಎಂದು ಹೇಳಿದ್ದಾರೆ. “ಒಬ್ಬ ಶಾಲಾ ಬಾಲಕಿಯು ತನ್ನ ವಿಹಾರದ ದಿನದಂದು ಹೇಗೆ ಇರುತ್ತಾಳೋ ಹಾಗೆಯೇ ನಾವು ಉತ್ಸುಕರಾಗಿದ್ದೆವು. ನನ್ನ ಜೀವನದುದ್ದಕ್ಕೂ, ನಾನು ಸಂಬಂಧಿಕರನ್ನು ನೋಡಲು ವಿಮಾನ ನಿಲ್ದಾಣಕ್ಕೆ ಹೋಗಿದ್ದೇನೆ. ಈ ಬಾರಿ, ನಾನೇ ವಿಮಾನ ನಿಲ್ದಾಣದೊಳಗೆ ಹೆಜ್ಜೆ ಹಾಕುತ್ತಿದ್ದೇನೆ ಅಂತ ಸಂತಸ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Deceased Marriage: 30 ವರ್ಷದ ಹಿಂದೆ ಸಾವನ್ನಪ್ಪಿದ್ದ ವಧು-ವರ ಮೊನ್ನೆ ರಾತ್ರಿ ಮದುವೆ ಆದ್ರು!


ಪ್ರವಾಸ ಮುಗಿಸಿ ರೈಲಿನಲ್ಲಿ ವಾಪಸ್


ಅಜ್ಜಿಯರ ಈ ಟೀಮ್ ಪರಸ್ಸಿನಿಕಡವು ಸ್ನೇಕ್ ಪಾರ್ಕ್, ಮೂತಪನ್ ದೇವಸ್ಥಾನ, ಸೇಂಟ್ ಏಂಜೆಲೋ ಕೋಟೆ ಮತ್ತು ಮುಜಪ್ಪಿಲಂಗಾಡ್ ಬೀಚ್‌ಗೆ ಭೇಟಿ ನೀಡಲಿದೆ. ಗುಂಪು ಅದೇ ದಿನ ರೈಲಿನ ಮೂಲಕ ಕೊಚ್ಚಿಗೆ ಮರಳಲಿದೆ’ ಎಂದು ಪ್ರವಾಸ ಸಂಯೋಜಕರು ವಿವರಿಸಿದ್ದಾರೆ.

Published by:Annappa Achari
First published: