• Home
  • »
  • News
  • »
  • trend
  • »
  • Relationship: 58 ವರ್ಷದ ಅಂಕಲ್ ಜೊತೆ 26ರ ಹುಡುಗಿಯ ಡೇಟಿಂಗ್: ತನ್ನ ಸೆಕ್ಸ್ ಜೀವನದ ರಹಸ್ಯ ಬಿಚ್ಚಿಟ್ಟ ಯುವತಿ

Relationship: 58 ವರ್ಷದ ಅಂಕಲ್ ಜೊತೆ 26ರ ಹುಡುಗಿಯ ಡೇಟಿಂಗ್: ತನ್ನ ಸೆಕ್ಸ್ ಜೀವನದ ರಹಸ್ಯ ಬಿಚ್ಚಿಟ್ಟ ಯುವತಿ

ಜೋಡಿ

ಜೋಡಿ

ನಾವು ಉತ್ತಮ ಲೈಂಗಿಕ ಜೀವನವನ್ನು ಹೊಂದಿದ್ದೇವೆ. ಡರ್ಮೋಟ್ ದೈಹಿಕವಾಗಿ ಸದೃಢವಾಗಿದ್ದಾರೆ. ಅವರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಲೈಂಗಿಕ ಜೀವನದ ಬಗ್ಗೆಯೂ ಜೆಸ್ಸಿಕಾ ಹೇಳಿಕೊಂಡಿದ್ದಾರೆ.

  • Share this:

ಪ್ರೀತಿ (Love) ಯಾವಾಗ ಹುಟ್ಟುತ್ತೆ ಅನ್ನೋದು ಗೊತ್ತಿಲ್ಲ. ಪ್ರೀತಿ ಹುಟ್ಟುವಾಗ ಆಸ್ತಿ, ಬಣ್ಣ, ವಯಸ್ಸು ಯಾವುದೂ ಗಮನಕ್ಕೂ ಬರಲ್ಲ. ಇತ್ತೀಚೆಗೆ ಯುವತಿಯರು ತಮಗಿಂತ 15 ರಿಂದ 20 ವರ್ಷ ದೊಡ್ಡ ವ್ಯಕ್ತಿಗಳ ಪ್ರೇಮದಲ್ಲಿ ಸಿಲುಕುತ್ತಿದ್ದಾರೆ. ಈ ಕಥೆಗಳ ಆಧಾರದ ಮೇಲೆ ಧಾರವಾಹಿ(TV Serials)ಗಳು ಸಹ ಪ್ರಸಾರ ಆಗುತ್ತಿವೆ. ಜೋಡಿ ಮಧ್ಯೆ ವಯಸ್ಸಿನ (Age Difference) ಅಂತರ ಹೆಚ್ಚಾದ್ರೆ ಸಂಸಾರದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಇದರಿಂದ ಜೋಡಿ ಮಧ್ಯೆ ವೈಮನಸ್ಸು ಉಂಟಾಗುತ್ತವೆ ಎಂದು ಹೇಳುತ್ತಾರೆ. ಯುವತಿಯೊಬ್ಬಳು 32 ವರ್ಷ ದೊಡ್ಡವನಾದ ಅಜ್ಜನ ಜೊತೆ ಡೇಟಿಂಗ್ (Dating) ನಡೆಸುತ್ತಿರುವ ವಿಷಯವನ್ನು ಹಂಚಿಕೊಂಡಿದ್ದಾಳೆ.


26 ವರ್ಷದ ಹುಡುಗಿ ತಾನು 58 ವರ್ಷದ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾಳೆ. ಜನರು ನಮ್ಮ ಸಂಬಂಧದ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಿದ್ದಾರೆ. ನಮ್ಮಿಬ್ಬರನ್ನ ಜೊತೆಯಾಗಿ ನೋಡುವ ಜನರು, ತಂದೆ ಮಗಳು ಅಂತ ಹೇಳ್ತಾರೆ. ಹಾಗಾಗಿ ಜನರ ತಪ್ಪು ಗ್ರಹಿಕೆ ದೂರ ಮಾಡಲು ನಮ್ಮಿಬ್ಬರ ಸಂಬಂಧ ಏನು ಅನ್ನೋದನ್ನ ಹೇಳುತ್ತಿರೋದಾಗಿ ಎಂದು 26 ವರ್ಷದ ಜೆಸ್ಸಿಕಾ ಹೇಳಿಕೊಂಡಿದ್ದಾಳೆ.


10 ತಿಂಗಳಿನಿಂದ ಜೊತೆಯಲ್ಲಿರುವ ಜೋಡಿ


ಜೆಸ್ಸಿಕಾ ಇಂಗ್ಲೆಂಡ್ ನ ಲಿಂಕನ್ ಶೈರ್ ನ ನಿವಾಸಿ. ಕಳೆದ ಒಂದು ವರ್ಷದಿಂದ 58 ವರ್ಷದ ಡರ್ಮೋಟ್ ಜೊತೆ ಜೆಸ್ಸಿಕಾ ರಿಲೇಶನ್ ಶಿಪ್ ನಲ್ಲಿದ್ದಾರೆ. ಕಳೆದ ಹತ್ತು ತಿಂಗಳಿನಿಂದ ಇಬ್ಬರು ಜೊತೆಯಲ್ಲಿ ವಾಸವಾಗಿದ್ದು, ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲು ಜೆಸ್ಸಿಕಾ ಮತ್ತು ಡರ್ಮೋಟ್ ನಿರ್ಧರಿಸಿದ್ದಾರೆ.


ಮೊದಲ ಭೇಟಿಯಲ್ಲಿಯೇ ಆತ್ಮೀಯತೆ


'ಡೈಲಿ ಸ್ಟಾರ್' ವರದಿಯ ಪ್ರಕಾರ, ಜೆಸ್ಸಿಕಾ ಹಾಕಿಂಗ್ ಮತ್ತು ಡರ್ಮಾಟ್ ಫೆಬ್ರವರಿ 2021 ರಲ್ಲಿ ಭೇಟಿಯಾಗಿದ್ದರು. ಆದ್ರೆ ಇಬ್ಬರಿಗೂ ತಾವು ಮುಂದೊಂದು ದಿನ ಸಂಬಂಧ ಹೊಂದುತ್ತೇವೆ ಅಂತ ಅಂದುಕೊಂಡಿರಲಿಲ್ಲ.


ಇದನ್ನೂ ಓದಿ:  WWE ರೋಚಕ ಕದನ; ವಿಶ್ವದ ಭಯಾನಕ ಮನುಷ್ಯ ಮಾರ್ಟಿನ್ ಫೋರ್ಡ್ vs The Rock ಮುಖಾಮುಖಿ ಹೋರಾಟ!


ನನಗೆ ಪುರುಷರಲ್ಲಿ ಹೆಚ್ಚಿನ ನಂಬಿಕೆ ಇರಲಿಲ್ಲ, ಆದ್ದರಿಂದ ನನಗೆ ತುಂಬಾ ಕಷ್ಟವಾಯಿತು. ಆದರೆ ನಾನು ಕೆಲಸ ಮಾಡಿದ ಮಹಿಳೆಯೊಂದಿಗೆ ಡರ್ಮಟ್ ಉತ್ತಮ ಸ್ನೇಹವನ್ನು ಹೊಂದಿದ್ದಳು. ಹೀಗಾಗಿ ಮೊದಲು ಮೂವರು ಗೆಳೆಯರಾದೆವು. ಭೇಟಿ ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆಯಿತು ಎಂದು ಜೆಸ್ಸಿಕಾ ಹೇಳುತ್ತಾಳೆ.


ಸ್ನೇಹ ಬೆಳೆದಂತೆ ಇಬ್ಬರು ಜೊತೆಯಾಗಿ ಭೇಟಿಯಾಗಲು ಪ್ರಾರಂಭಿಸಿದರು. ಹೀಗೆ ಹಲವು ಭೇಟಿಗಳಲ್ಲಿ ಇಬ್ಬರು ತಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಂಡ ನಂತರ ಜೊತೆಯಾಗಿರಲು ನಿರ್ಧರಿಸಿದ್ದಾರೆ. ಜೆಸ್ಸಿಕಾ ಮತ್ತು ಡರ್ಮೊಟ್ ತಮ್ಮ ಎಲ್ಲಾ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳಲು ಪ್ರಾರಂಭಿಸಿದರು. ಕಳೆದ ವರ್ಷ ಏಪ್ರಿಲ್ ‌ನಲ್ಲಿ ಇಬ್ಬರೂ ತಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಆದರೆ ವಯಸ್ಸಿನ ವ್ಯತ್ಯಾಸದಿಂದ ಅದನ್ನು ಪ್ರಪಂಚದಿಂದ ಮರೆಮಾಡಿದ್ದರು.


ಸಂಬಂಧದ ಬಗ್ಗೆ ದಂಪತಿ ಹೇಳೋದೇನು?


ಡರ್ಮೋಟ್ ತುಂಬಾ ದೊಡ್ಡವನು ಎಂದು ನನಗೆ ತಿಳಿದಿತ್ತು. ಆದರೆ ಜೊತೆಯಾಗಿ ಸಂಬಂಧ ಮುಂದುವರಿಯಲು ಪ್ರಾರಂಭಿಸಿದಾಗ, ನಾವಿಬ್ಬರೂ ನಮ್ಮ ನಡುವಿನ ವಯಸ್ಸಿನ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿದ್ದೇವು ಅಂತಾತೆ ಜೆಸ್ಸಿಕಾ.


ಜೆಸ್ಸಿಕಾ ಪ್ರಕಾರ ಮೊದಲಿಗೆ ನಾವು ನಮ್ಮ ಸಂಬಂಧವನ್ನು ರಹಸ್ಯವಾಗಿರಿಸಿದ್ದೇವೆ ಏಕೆಂದರೆ ವಯಸ್ಸಿನ ವ್ಯತ್ಯಾಸದ ಬಗ್ಗೆ ಜನರು ಏನು ಯೋಚಿಸುತ್ತಾರೆ ಎಂದು ನಮಗೆ ತಿಳಿದಿಲ್ಲ. ಆದರೆ ನಂತರ ನಾವು ಅದನ್ನು ಹೆಚ್ಚು ಕಾಲ ರಹಸ್ಯವಾಗಿಡಲು ಸಾಧ್ಯವಾಗದ ಕಾರಣ ಅದನ್ನು ಸಾರ್ವಜನಿಕಗೊಳಿಸಬೇಕೆಂದು ನಾವು ನಿರ್ಧರಿಸಿದ್ದೀವಿ ಎಂದು ಜೋಡಿ ಹೇಳುತ್ತಾರೆ.


ಲೈಂಗಿಕ ಜೀವನದ ಬಗ್ಗೆ ಜೆಸ್ಸಿಕಾ ಮಾತು


ನಾವು ಉತ್ತಮ ಲೈಂಗಿಕ ಜೀವನವನ್ನು ಹೊಂದಿದ್ದೇವೆ. ಡರ್ಮೋಟ್ ದೈಹಿಕವಾಗಿ ಸದೃಢವಾಗಿದ್ದಾರೆ. ಅವರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಲೈಂಗಿಕ ಜೀವನದ ಬಗ್ಗೆಯೂ ಜೆಸ್ಸಿಕಾ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Viral News: ವೇದಿಕೆ ಮೇಲೆಯೇ ವಧು-ವರ ಡಿಶುಂ ಡಿಶುಂ; ಈಗಲೇ ಹಿಂಗಾದ್ರೆ ಮುಂದೇಗೆ?


ಇನ್ನೂ ವಿಶೇಷ ಅಂದ್ರೆ  ಜೆಸ್ಸಿಕಾಳ ತಾಯಿ ಕೂಡ ಡರ್ಮೊಟ್ ಜೊತೆಗಿನ ತನ್ನ ಸಂಬಂಧವನ್ನು ಬೆಂಬಲಿಸಿದ್ದಾರೆ. ಡರ್ಮೋಟ್ ಗಿಂತ ಜೆಸ್ಸಿಕಾ ತಾಯಿ ಕೇವಲ ನಾಲ್ಕು ವರ್ಷ ದೊಡ್ಡವರಾಗಿದ್ದಾರೆ.

Published by:Mahmadrafik K
First published: