• Home
  • »
  • News
  • »
  • trend
  • »
  • Two Headed Snake: 25 ಕೋಟಿ ಬೆಲೆಬಾಳುವ ಎರಡು ತಲೆಯ ಹಾವು!

Two Headed Snake: 25 ಕೋಟಿ ಬೆಲೆಬಾಳುವ ಎರಡು ತಲೆಯ ಹಾವು!

ಎರಡು ತಲೆಯ ಹಾವು

ಎರಡು ತಲೆಯ ಹಾವು

ಎರಡು ತಲೆಯ ಹಾವುಗಳು ನೋಡುವುದಕ್ಕೆ ಸಿಗುವುದು ತುಂಬಾನೇ ಅಪರೂಪ. ಅದರಲ್ಲೂ ನಮ್ಮ ದೇಶದಲ್ಲಿಯಂತೂ ತುಂಬಾನೇ ವಿರಳ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈಗ ಅಪರೂಪಕ್ಕೆ ಎಂಬಂತೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಈ ರೀತಿಯ ಎರಡು ತಲೆಯ ಹಾವೊಂದು ಕಾಣಿಸಿಕೊಂಡಿದೆ.

  • Share this:

ಹಾವು (Snake) ಅನ್ನೋ ಎರಡು ಅಕ್ಷರಗಳ ಈ ಪದವನ್ನು ಕೇಳಿದರೆ ಸಾಕು ಅನೇಕರಲ್ಲಿ ನಡುಕ ಶುರುವಾಗುತ್ತದೆ. ಹೌದು ಅದರಲ್ಲೂ ಈ ಹೆಬ್ಬಾವು, ನಾಗರಹಾವು ಮತ್ತು ಎರಡು ತಲೆಯಿರುವ ಹಾವುಗಳನ್ನು ನೋಡಿದರಂತೂ ಮೈ ಬೆವರುವುದು ಗ್ಯಾರೆಂಟಿ ಅಂತ ಹೇಳಬಹುದು. ಅದರಲ್ಲೂ ಈ ರೀತಿಯ ವಿಭಿನ್ನ ಸರ್ಪಗಳ ವೀಡಿಯೋಗಳು (Video) ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಸದಾ ಹರಿದಾಡುತ್ತಲೇ ಇರುತ್ತವೆ ಅಂತ ಹೇಳಬಹುದು. ಈ ಎರಡು ತಲೆಯ ಹಾವು ಪತ್ತೆಯಾಗಿದೆ ಅಂತ ಸುದ್ದಿಯನ್ನು (News) ಸಹ ನಾವು ಆಗೊಮ್ಮೆ ಈಗೊಮ್ಮೆ ಟಿವಿ ನ್ಯೂಸ್ ನಲ್ಲಿ ನೋಡಿರುತ್ತೇವೆ.


ಇಂತಹ ಎರಡು ತಲೆಯ ಹಾವುಗಳು ನೋಡುವುದಕ್ಕೆ ಸಿಗುವುದು ತುಂಬಾನೇ ಅಪರೂಪ. ಅದರಲ್ಲೂ ನಮ್ಮ ದೇಶದಲ್ಲಿಯಂತೂ ತುಂಬಾನೇ ವಿರಳ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈಗ ಅಪರೂಪಕ್ಕೆ ಎಂಬಂತೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಈ ರೀತಿಯ ಎರಡು ತಲೆಯ ಹಾವೊಂದು ಕಾಣಿಸಿಕೊಂಡಿದೆ. ಇದರ ಬೆಲೆ ಕೇಳಿದರೆ ನೀವು ಬೆಚ್ಚಿ ಬೀಳುವುದು ಗ್ಯಾರೆಂಟಿ. ಈ ಹಾವಿನ ಬೆಲೆ ಬರೋಬ್ಬರಿ 25 ಕೋಟಿ ರೂಪಾಯಿಯಂತೆ ಅಂತ ಹೇಳಲಾಗುತ್ತಿದೆ ನೋಡಿ.


ಈ ಎರಡು ತಲೆಯ ಸರ್ಪವನ್ನು ನ್ಯಾಯಾಲಯಕ್ಕೆ ತಂದಿದ್ದಾರಂತೆ..


ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿರುವ ನ್ಯಾಯಾಲಯದ ಮುಂದೆ ಈ ಎರಡು ತಲೆಯ ಸರ್ಪವನ್ನು ಬುಧವಾರ ಹಾಜರುಪಡಿಸಿದರು. ಎರಡು ತಲೆ ಎಂದರೆ ಈ ಹಾವಿಗೆ ಒಂದೇ ಕಡೆ ಎರಡು ತಲೆಗಳಿವೆ ಅಂತ ತುಂಬಾ ಜನರು ಅಂದುಕೊಳ್ಳಬಹುದು. ಆದರೆ ಈ ಹಾವು ತನ್ನ ಬಾಲವನ್ನು ಸಹ ಹೆಡೆಯಂತೆ ಎತ್ತಬಹುದಾದ ಸಾಮರ್ಥ್ಯವನ್ನು ಹೊಂದಿದೆಯಂತೆ, ಆದ್ದರಿಂದ ಇದಕ್ಕೆ ಹಾಗೆ ಕರೆಯುತ್ತಾರೆ ಅಂತ ಹೇಳಲಾಗುತ್ತಿದೆ.


ಇದನ್ನೂ ಓದಿ: ಒಂದು ಬಾಟಲಿ ವಿಸ್ಕಿ ಬೆಲೆ 6.5 ಕೋಟಿ ರೂಪಾಯಿ! ಕುಡಿದರೆ ಸ್ವರ್ಗಕ್ಕೆ ಮೂರೇ ಗೇಣಂತೆ!


ಈ ಅಪರೂಪದ ಸರೀಸೃಪವನ್ನು ಬೆಗುಸರಾಯ್ ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸತೀಶ್ ಚಂದ್ರ ಝಾ ಅವರ ನ್ಯಾಯಾಲಯಕ್ಕೆ ಕಂಟೇನರ್ ನಲ್ಲಿ ತರಲಾಯಿತು. ನ್ಯಾಯಾಧೀಶರ ನಿರ್ದೇಶನದಂತೆ ನ್ಯಾಯಾಲಯದಲ್ಲಿ ಹಾಜರಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಪವನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಸೂಚನೆ ನೀಡಿದ ನಂತರ ಅದನ್ನು ತೆಗೆದುಕೊಂಡು ಹೋದರು.


ಈ ಅಪರೂಪದ ಹಾವಿನ ಬಗ್ಗೆ ನ್ಯಾಯಾಧೀಶರು ಹೇಳಿದ್ದೇನು ಗೊತ್ತೇ?


ಪ್ಯಾರಾ-ಲೀಗಲ್ ಸ್ವಯಂಸೇವಕರಿಂದ ಬರೌನಿ ಬ್ಲಾಕ್ ವೊಂದರಲ್ಲಿ ಗ್ರಾಮಸ್ಥರು ಈ ಹಾವನ್ನು ನೋಡಿ ಹಿಡಿದಿರುವ ಬಗ್ಗೆ ತಮಗೆ ತಿಳಿದಿದೆ ಎಂದು ನ್ಯಾಯಾಧೀಶರು ಹೇಳಿದರು.


"ಈ ಎರಡು ತಲೆಯ ಹಾವು ತನ್ನ ಬಾಲವನ್ನು ಹೆಡೆಯಂತೆ ಮೇಲಕ್ಕೆತ್ತಲು ಸಮರ್ಥವಾಗಿದೆ ಮತ್ತು ಆದ್ದರಿಂದ ಅದನ್ನು ಎರಡು ತಲೆಗಳೆಂದು ವರ್ಣಿಸಲಾಗಿದೆ ಎಂದು ನನಗೆ ತಿಳಿಸಲಾಯಿತು. ಇದು ಅಪರೂಪದ ತಳಿ ಎಂದು ನನಗೆ ತಿಳಿದಿತ್ತು. ಆದ್ದರಿಂದ, ನಾನು ಸ್ವಯಂಸೇವಕ ಮುಖೇಶ್ ಪಾಸ್ವಾನ್ ಅವರಿಗೆ ಈ ಹಾವನ್ನು ಸಂರಕ್ಷಣೆಯ ಆದೇಶವನ್ನು ಹೊರಡಿಸಲು ನ್ಯಾಯಾಲಯಕ್ಕೆ ತರಲು ಹೇಳಿದ್ದೆ" ಎಂದು ನ್ಯಾಯಾಧೀಶರು ಹೇಳಿದರು.


ಇದನ್ನೂ ಓದಿ: ಸಾಮಾಜಿಕ ಬಾಂಧವ್ಯ ಹೆಚ್ಚಿಸಲು ಈ ಹಳ್ಳಿಯವರು ತೆ್ಗೆದುಕೊಂಡ ನಿರ್ಧಾರವಿದು!


“ನಾನು ಇಂಟರ್ನೆಟ್ ನಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದೆ, ಇದನ್ನು ‘ರೆಡ್ ಸ್ಯಾಂಡ್ ಬೋವ’ ಹಾವು ಅಂತ ಕರೆಯುತ್ತಾರೆ ಮತ್ತು ಇದನ್ನು ಬೇರೆ ದೇಶಗಳಿಗೆ ಒಯ್ದು ಮಾರಿಕೊಳ್ಳುತ್ತಾರೆ, ಏಕೆಂದರೆ ಇದರ ಬೆಲೆ 25 ಕೋಟಿ ರೂಪಾಯಿಯಾಗಿದೆ” ಅಂತ ಹೇಳಿದರು. “ಈ ಹಾವು ಬರೀ ಚಿಕ್ಕ ಪುಟ್ಟ ಕೀಟಗಳು ಮತ್ತು ಇಲಿಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತದೆ, ಬೇರೆ ಪ್ರಾಣಿಗಳನ್ನು ಬೇಟೆಯಾಡುವ ಸ್ವಭಾವವನ್ನು ಹೊಂದಿಲ್ಲ" ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


ಆದಾಗ್ಯೂ, ಕಾಮೋತ್ತೇಜಕ ಗುಣಲಕ್ಷಣಗಳಿಗಾಗಿ ಅದರ ಮಾಂಸವನ್ನು ಸೇವಿಸುವ ಚೀನಾದಂತಹ ದೇಶಗಳಲ್ಲಿ ಹೆಚ್ಚಿನ ಬೇಡಿಕೆಯ ಕಾರಣ ಈ ತಳಿಯನ್ನು ಹೆಚ್ಚು ಬೇಟೆಯಾಡಲಾಗಿದೆ ಎಂದು ತಿಳಿದು ಬಂದಿದೆ ಎಂದು ಅವರು ಹೇಳಿದರು.

First published: