ಅರೆ! ಇದೇನಪ್ಪ ಇದು ಎಂದು ಆಶ್ಚರ್ಯವಾಗುತ್ತಿದೆಯೇ? ಶಾಕ್ (Shock) ಎನಿಸಿದರೂ ನಂಬಲೇಬೇಕಾದ ಸುದ್ದಿಯಿದು! ಇತ್ತೀಚಿನ ವರ್ಷಗಳಲ್ಲಿ ಹೆಣ್ಣಾಗಲೀ, ಗಂಡಾಗಲೀ ವಯಸ್ಸಿನಲ್ಲಿ ತನಗಿಂತ ಅತ್ಯಂತ ಹಿರಿಯರಾದವರನ್ನು ಮದುವೆಯಾಗುವುದು ಅಪರೂಪವಾಗಿಯೇನೂ ಉಳಿದಿಲ್ಲ. 60 ವರ್ಷದ ಮಹಿಳೆ 20 ರ ಯುವಕನನ್ನು ಮದುವೆಯಾದರಂತೆ, 30 ರ ಯುವಕ 70 ವಯಸ್ಸಿನ ಮಹಿಳೆಯನ್ನು (Women) ಮದುವೆಯಾದನಂತೆ – ಇಂತಹ ಸುದ್ದಿಗಳನ್ನು ಇತ್ತೀಚೆಗೆ ನಾವೆಲ್ಲಾ ಕೇಳುತ್ತಲೇ ಇದ್ದೇವೆ. ಆದರೆ, ಈ ಜೋಡಿಯ (Couple) ವಯಸ್ಸಿನ ಅಂತರ ಕೇಳಿದರೆ, ನೀವೆಲ್ಲಾ, “ಅಬ್ಬಬ್ಬಾ” ಎಂದು ಸೋಜಿಗಪಡದೇ ಇರುವುದಿಲ್ಲ.
ಹೌದು, ಯುಎಸ್ ನಲ್ಲಿ ಇತ್ತೀಚಿಗೆ 24 ವರ್ಷದ ಯುವತಿಯೊಬ್ಬಳು ವಯಸ್ಸಿನಲ್ಲಿ ತನಗಿಂತ ಬರೋಬ್ಬರಿ 61 ವರ್ಷ ದೊಡ್ಡವರಾದ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದಾಳೆ. ಯುಎಸ್ ನ ವಾಸಿ 24 ವರ್ಷದ ಮಿರಾಕಲ್ ಪೋಗ್ ಹಾಗೂ 85 ವರ್ಷ ವಯಸ್ಸಿನ ಚಾರ್ಲ್ಸ್ ಅವರೇ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ದಂಪತಿ.
ತನ್ನ ಅಜ್ಜನಿಗಿಂತ ಹಿರಿಯ!
ಹೌದು, ಮಿರಾಕಲ್ ಪೋಗ್ ಮದುವೆಯಾಗಿರುವುದು ವಯಸ್ಸಿನಲ್ಲಿ ತನ್ನ ತಾತನಗಿಂತ ಹಿರಿಯನಾದ ವ್ಯಕ್ತಿಯನ್ನು. ಈಕೆಯ ತಾತ ಜೋ ಬ್ರೌನ್ ನ ವಯಸ್ಸು ಎಪ್ಪತ್ತೆರಡಾದರೆ, ಈಕೆ ಈಗ ಮದುವೆಯಾಗಿರುವುದು ಬರೋಬ್ಬರಿ 85 ವಯಸ್ಸಿನ ಚಾರ್ಲ್ಸ್ ರನ್ನು.
ಕೆಲಸದ ಸ್ಥಳದಲ್ಲಿ ಅಂಕುರಿಸಿದ ಪ್ರೀತಿ!
ಮಿರಾಕಲ್ ಪೋಗ್ ಹಾಗೂ ಚಾರ್ಲ್ಸ್ ರ ಭೇಟಿಯಾಗಿದ್ದು, ಯುಎಸ್ ನ ಮಿಸಿಸಿಪ್ಪಿ, ಸ್ಟಾರ್ಕ್‌ವಿಲ್ಲೆಯಲ್ಲಿ ಲಾಂಡ್ರೊಮ್ಯಾಟ್ ನ ತಮ್ಮ ಕೆಲಸದ ಸ್ಥಳದಲ್ಲಿ. ಮಿರಾಕಲ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಚಾರ್ಲ್ಸ್ ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಎಜೆಂಟ್.
ಇದನ್ನೂ ಓದಿ: ಹೆಂಡತಿಗೆ ಡಿವೋರ್ಸ್ ಕೊಟ್ಟೆ ಅನ್ನೋ ಖುಷಿಗೆ ಬಂಗಿ ಜಂಪಿಂಗ್ ಮಾಡಿದ ವ್ಯಕ್ತಿ, ಆದರೆ ಆಗಿದ್ದೇ ಬೇರೆ
2019ರಲ್ಲಿ ಭೇಟಿಯಾದ ಇವರು ಮೊದಲಿಗೆ ಕೇವಲ ಸ್ನೇಹಿತರಾಗಿದ್ದರಾದರೂ, ನಂತರದ ದಿನಗಳಲ್ಲಿ ಚಾರ್ಲ್ಸ್ ಮದುವೆಯ ಪ್ರಸ್ತಾಪವನ್ನಿಟ್ಟರಂತೆ. ಮಿರಾಕಲ್ ಪೋಗ್ ಸಹ ಅವರ ಪ್ರೀತಿಯನ್ನು ಒಪ್ಪಿಕೊಂಡು ಮದುವೆಯಾಗಿದ್ದಾರೆ. “ಚಾರ್ಲ್ಸ್ ನ ವ್ಯಕ್ತಿತ್ವ ಹಾಗೂ ತನ್ನತನ ನನಗೆ ಬಹಳ ಇಷ್ಟ. ಆತನ ವಯಸ್ಸು ನನಗೆ ಸಮಸ್ಯೆಯಲ್ಲ’’ ಎಂದು ಕೆನಡಿಯನ್ ನ್ಯೂಸ್ ಗೆ ಮಿರಾಕಲ್ ತಿಳಿಸಿದ್ದಾರೆ.
ಕುಟುಂಬದವರ ವಿರೋಧವನ್ನು ಲೆಕ್ಕಿಸದೆ ಮದುವೆ!
ವಯಸ್ಸಿನಲ್ಲಿ ತನಗಿಂತ ಅತಿ ಹಿರಿಯ ವ್ಯಕ್ತಿಯನ್ನು ಮದುವೆಯಾಗುತ್ತೇನೆಂದರೆ ಯಾವುದೇ ಪೋಷಕರಾದರೂ ವಿರೋಧಿಸುವುದು ಸಹಜವೇ. ಅಂತೆಯೇ ಇಲ್ಲಿಯೂ ಸಹ ಮಿರಾಕಲ್ ಅವರ ತಂದೆ ಕರೀಮ್ ಫಿಲಿಪ್ಸ್ ಸಹ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ತಾಯಿ ತಮಿಕಾ ಫಿಲಿಪ್ಸ್ ಹಾಗೂ ಅಜ್ಜ ಜೋ ಬ್ರೌನ್ ಸಹಕಾರದಿಂದ ಮಿರಾಕಲ್ ತಾನು ಮೆಚ್ಚಿದವನನ್ನು ಮದುವೆಯಾಗಲು ಸಾಧ್ಯವಾಗಿದೆ.
ಟಿಕ್ ಟಾಕ್ ನಲ್ಲಿ ಟ್ರೋಲ್ ಗೆ ಒಳಗಾದ ಜೋಡಿ!
ವಯಸ್ಸಿನ ಅಂತರದಿಂದಾಗಿ ಈ ದಂಪತಿ ಟಿಕ್ ಟಾಕ್ ನಲ್ಲಿ ಭಾರಿ ಟ್ರೋಲ್ಗೆ ಒಳಗಾಗುತ್ತಿದ್ದು, ನೆಟ್ಟಿಗರು ಸ್ವಲ್ಪ ಹೆಚ್ಚಾಗಿಯೇ ಕಾಲೆಳೆಯುತ್ತಿದ್ದಾರೆ. ಇನ್ನು ಮಿರಾಕಲ್ ರ ವಯಸ್ಸಿನ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದು, ಆಕೆ 42 ವಯಸ್ಸಿನವಳಂತೆ ಕಾಣುತ್ತಿದ್ದಾಳೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ರಾತ್ರಿ ಬಲ್ಬ್ ಸುತ್ತ ಹುಳುಗಳು ಹಾರೋದು ಇದೇ ಕಾರಣಕ್ಕೆ, ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ
ಅದಕ್ಕೆ ಉತ್ತರಿಸಿರುವ ಮಿರಾಕಲ್, “ನಾನು ಜನಿಸಿದ್ದು 1998ರಲ್ಲಿ. ನನಗೆ ಹೆಚ್ಚು ಡ್ರೆಸ್ ಮಾಡಿಕೊಳ್ಳುವುದು ಇಷ್ಟವಿಲ್ಲ. ಹಾಗಾಗಿ, ನಿಮಗೆ ಹಾಗೆ ಕಾಣುತ್ತಿರಬಹುದು” ಎಂದಿದ್ದಾಳೆ.
ಹೀಗೆ ಕೆಲವು ನೆಟ್ಟಿಗರು ಇವರ ಕಾಲೆಳೆಯುತ್ತಿದ್ದರೆ, ಇನ್ನು ಸ್ವಲ್ಪ ಮಂದಿ “ಇಲ್ಲಿ ನೀವು ಯಾರಿಗೂ ಉತ್ತರ ನೀಡಬೇಕಿಲ್ಲ, ಜೀವನವನ್ನು ಸಂತೋಷದಿಂದ ಕಳೆಯಿರಿ’’ ಎಂದು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಹೆಚ್ಚಾಗುತ್ತಿರುವ ಪ್ರಕರಣಗಳು!
ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬಹಳಷ್ಟು ಮಂದಿ ವಯಸ್ಸಿನ ಅಂತರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ತನ್ನಷ್ಟಿದ ವ್ಯಕ್ತಿಯನ್ನು ಮದುವೆಯಾಗುತ್ತಿದ್ದಾರೆ.
ಈಗಷ್ಟೇ ಕೆಲವು ದಿನಗಳ ಹಿಂದೆ ಯುಎಸ್ ನಲ್ಲಿಯೇ ಇಂತಹುದೇ ಘಟನೆಯೊಂದು ನಡೆದಿತ್ತು. ಯು ಎಸ್ ನ 61 ವರ್ಷದ ರಾಯನಾಲ್ಡೋ 27 ವರ್ಷದ ಫ್ರೀಲಾನ್ಸ್ ಮಾಡೆಲ್ ಒಬ್ಬಳನ್ನು ಮದುವೆಯಾಗಿದ್ರು. ಅವರ ವಯಸ್ಸಿನ ಅಂತರ 34 ಆಗಿತ್ತು. ಆದರೆ, ಮಿರಕಾಲ್-ಚಾರ್ಲ್ಸ್ ರ ಜೋಡಿ ಅವೆಲ್ಲವನ್ನು ಮೀರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ