ಪ್ರೀತಿಗೆ (Love) ವಯಸ್ಸಿನ (Age) ಮಿತಿಯಿಲ್ಲ. ಜಾತಿಯ ಅಂತರವಿಲ್ಲ. ಯಾರು ಯಾರನ್ನು ಬೇಕಾದರು ಪ್ರೀತಿಸಬಹುದು. ಆದರೆ ಪ್ರೀತಿಯ ಅರ್ಥ ಗೊತ್ತಿದ್ದು ಪ್ರೀತಿಸಿದರೆ ಸೂಕ್ತ. ಏಕೆಂದರೆ ಕೆಲವೊಮ್ಮೆ ಯೌವನದಲ್ಲಿ ಯಾರನ್ನೋ ಪ್ರೀತಿಸುತ್ತಾರೆ ಇನ್ಯಾರನ್ನೋ ಮದುವೆಯಾಗುತ್ತಾರೆ (Marriage). ಹಾಗಿದ್ದಾಗ ಪ್ರೀತಿ ಅಲ್ಲಿಗೆ ಸತ್ತೋಗುತ್ತದೆ. ಹಾಗಾಗಿ ಪ್ರೀತಿಯಲ್ಲಿ ಸಕ್ಸಸ್ (Success) ಕಾಣುವವರು ಕೆಲವೇ ಕೆಲವು ಮಂದಿ.
ಕೆಲವೊಮ್ಮೆ ಪ್ರೀತಿಯ ಕುರಿತಾದ ಸುದ್ದಿಗಳು(News) ಆಗಾಗ ಕೇಳಿಬರುತ್ತದೆ. ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಮಾಡಿ ಕೊನೆಗೆ ಸಾವಿನ ಮೂಲದ ಬದುಕು ಅಂತ್ಯ ಕಂಡವರು ಇದ್ದಾರೆ. ಆದರೆ ಇನ್ನು ಕೆಲವರು ಹಾಗಲ್ಲ ಏನೇ ಕಷ್ಟಬಂದರು ಅದನ್ನು ಎದುರಿಸಲು ಪ್ರಯತ್ನಿಸುತ್ತಾರೆ. ಸಕ್ಸಸ್ ಕಾಣಲು ಪ್ರಯತ್ನಿಸುತ್ತಾರೆ.
ಅಚ್ಚರಿಯ ವಿಚಾರವೆಂದರೆ ಇಲ್ಲೊಬ್ಬಳು 24 ವರ್ಷದ ಹುಡುಗಿಗೆ ತನ್ನ ತಂದೆಯ ಸ್ನೇಹಿತ ಮೇಲೆ ಲವ್ ಆಗಿದೆ. ಈ ವಿಚಾರವನ್ನು ಆಕೆಯೇ ಸ್ವತಃ ಹೇಳಿಕೊಂಡಿದ್ದಾಳೆ. ಬ್ರಿಟನ್ನ ಟಿವಿ ಶೋ 'ದಿಸ್ ಮಾರ್ನಿಂಗ್' ನ ಫೋನ್-ಇನ್ ವಿಭಾಗದ ಡಿಯರ್ ಡೀಡ್ರೆ ಎದುರು ಈ ವಿಚಾರವನ್ನು ಹಂಚಿಕೊಂಡಿದ್ದಾಳೆ. ಆದರೆ ವಿಚಾರ ಅದಲ್ಲ, ಆಕೆಯ ಪ್ರೀತಿಯನ್ನು ಒಂದು ಮಾಡಲು ಕಷ್ಟ ಪಡುತ್ತಿದ್ದಾಳೆ. ಅತ್ತ ತಂದೆ ಒಪ್ಪಿಗೆ ಒಂದೆಡೆಯಾದರೆ, ಇತ್ತ ತಂದೆಯ ವಯಸ್ಸಿನ ಅಂಕಲ್ ಪ್ರೀತಿ ಇವೆರಡನ್ನು ಎದುರಿಸಿಕೊಂಡು ಸಕ್ಸಸ್ ಕಾಣಲು ಪ್ರಯತ್ನಿಸುತ್ತಿದ್ದಾಳೆ.
51 ವರ್ಷದ ಅಂಕಲ್ ಪ್ರೀತಿಗೆ ಬಿದ್ದಳು:
24 ವರ್ಷದ ಯುವತಿ ತನ್ನ ತಂದೆಯ ಸ್ನೇಹಿತನ ಮೇಲೆ ಇದ್ದಕ್ಕಿಂದ್ದಂತೆಯೇ ಲವ್ ಆಗಿದೆ. 51 ವರ್ಷದ ‘ಅಂಕಲ್ ಅನ್ನು ಆಕೆ ಬಾಲ್ಯದಿಂದಲೂ ನೋಡುತ್ತಾ ಬಂದಿದ್ದಾಳೆ. ಎರಡು ವರ್ಷಗಳ ಹಿಂದೆ, ತಂದೆಯ 50 ನೇ ಹುಟ್ಟುಹಬ್ಬದಂದು ತಂದೆಯ ಸ್ನೇಹಿತನ ಮನೆಯಲ್ಲಿದ್ದೆ ಎಂದು ಹುಡುಗಿ ಹೇಳಿದ್ದಾಳೆ.
ಅಂಕಲ್ ಮತ್ತು ನಾವಿಬ್ಬರೂ ಸೇರಿ ಅಪ್ಪನಿಗೆ ಸರ್ಪ್ರೈಸ್ ಪಾರ್ಟಿ ಕೊಡಲು ತಯಾರಿ ನಡೆಸಿದ್ದೆವು. ಬರ್ತ್ಡೇ ಪಾರ್ಟಿಯ ತಯಾರಿಯ ಸಮಯದಲ್ಲಿ ಇಬ್ಬರೂ ಒಬ್ಬರಿಗೊಬ್ಬರು ತುಂಬಾ ಹತ್ತಿರವಾದೆವು. ಇಬ್ಬರೂ ಅಡುಗೆ ಮನೆಯಲ್ಲಿದ್ದಾಗ ದೈಹಿಕ ಸಂಬಂಧ ಬೆಳೆಸಿಯಿತು.
ಈ ಘಟನೆಯ ನಂತರ ಇಬ್ಬರ ನಡುವೆ ಉತ್ತಮ ತಿಳುವಳಿಕೆಯೂ ಏರ್ಪಟ್ಟಿತ್ತು. ಆದರೆ ಈ ಸಂಬಂಧ ಕೇವಲ ದೈಹಿಕ ಸಂಬಂಧಕ್ಕೆ ಸೀಮಿತವಾಗಿಲ್ಲ, ಇಬ್ಬರೂ ಉತ್ತಮ ಸ್ನೇಹಿತರಂತೆಯೇ ಕಾಳಜಿಯುಳ್ಳ ಸಂಬಂಧವನ್ನು ಹೊಂದಿದ್ದರು ಎಂದು ಯುವತಿ ಕಾರ್ಯಕ್ರಮದಲ್ಲಿ ಹೇಳಿದ್ದಾಳೆ.
ಅಂಕಲ್ ಜೊತೆಗೆ ಸಂಬಂಧದಲ್ಲಿರುವುದು ಗೊತ್ತಾದ ಬಳಿಕ ಹುಡುಗಿ ತನ್ನ ತಂದೆಯ ಭಯದಿಂದ ಕಿರುಕುಳಕ್ಕೊಳಗಾಗಿದ್ದಾಳೆ. ತಂದೆಗೆ ಈ ಸಂಬಂಧ ಗೊತ್ತಾದ ಮೇಲೆ ತುಂಬಾ ಕೋಪ ಬಂದಿದೆ ಮತ್ತು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ಧೈರ್ಯದಿಂದ ಹೇಳಿದ್ದಾಳೆ.
ನಿರಾಸೆ ವ್ಯಕ್ತ ಪಡಿಸುವ ಅಂಕಲ್
ಯುವತಿ ಅಂಕಲ್ ಜೊತೆಗಿನ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುವ ಬಗ್ಗೆ ಅವನೊಂದಿಗೆ ಮಾತನಾಡಿದಾಗ, ಅಂಕಲ್ ಈ ಪ್ರಶ್ನೆಯನ್ನು ತಪ್ಪಿಸಲು ಪ್ರಾರಂಭಿಸುತ್ತಾನಂತೆ. ಆತನ ವರ್ತನೆಯಿಂದ ತನಗೆ ತೀವ್ರ ನಿರಾಸೆಯಾಗಿದೆ ಎಂದು ಯುವತಿ ಹೇಳಿದ್ದಾಳೆ.
ಇದನ್ನು ಓದಿ: Lottery: ಶುಭಾಶಯ ಕೋರಿ ಒಂದು ಲಾಟರಿ ಟಿಕೆಟ್ ಕಳ್ಸಿದ್ರು, 7 ಕೋಟಿ ರೂ ಗೆದ್ದೇಬಿಟ್ಟ Lucky Fellow!
ಆದರೀಗ ನನ್ನ ತಂದೆಯ ಸ್ನೇಹಿತ ಬೇರೆ ಮಹಿಳೆಯರೊಂದಿಗೆ ಮಾತನಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಈ ವಿಷಯದಲ್ಲಿ ಅವರು ನನಗೆ ಉತ್ತರಿಸುವ ಅಗತ್ಯವಿಲ್ಲ, ನಾವು ಸರಿಯಾಗಿ ಒಟ್ಟಿಗೆ ಇಲ್ಲ, ಆದ್ದರಿಂದ ಅವರು ಯಾರನ್ನು ಬೇಕಾದರೂ ಭೇಟಿಯಾಗಿ ಮಾತನಾಡಲಿ ಎನ್ನುತ್ತಾಳೆ 24 ವರ್ಷದ ಯುವತಿ.
ಬೇಸರದಲ್ಲಿರುವ 24 ವರ್ಷಧ ಯುವತಿ
ನಾವು ಈ ಬಗ್ಗೆ ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ, ನಮ್ಮ ಭಾವನೆಗಳನ್ನು ಒಬ್ಬರಿಗೊಬ್ಬರು ಹೇಳಲು ಸಾಧ್ಯವಿಲ್ಲ ಮತ್ತು ಅವನು ಸಿಕ್ಕ ಸಿಕ್ಕ ಮಹಿಳೆಯರೊಂದಿಗೆ ಮಾತನಾಡುತ್ತಿದ್ದಾನೆ ಎಂದು ತಿಳಿದುಕೊಂಡಿದ್ದೇನೆ. ಇದರಿಂದ ನನಗೆ ನೋವುಂಟಾಗಿದೆ’ಎಂದು ಹೇಳಿದ್ದಾಳೆ.
ಇದನ್ನು ಓದಿ: 45 ದಿನ ಕೋಮಾದಲ್ಲಿದ್ದ Corona ಸೋಂಕಿತೆಗೆ ಸಂಜೀವಿನಿಯಾದ Viagra
ಯುವತಿ ಈ ಸಲಹೆಯನ್ನು ಪಡೆದಳು
ಹುಡುಗಿಯ ಮಾತುಗಳನ್ನು ಕೇಳಿದ ಡೀಡ್ರೆ, ಅಂಕಲ್ ಜೊತೆಗಿನ ಸಂಬಂಧದ ಬಗ್ಗೆ ತಂದೆಯೊಂದಿಗೆ ಮಾತನಾಡಬೇಕು. ಅತನು ಕೂಡ ನಿನ್ನ ತಂದೆಯೊಂದಿಗೆ ಮಾತನಾಡಬೇಕು. ಹಾಗಿದ್ದಾಗ ಸರಿಯಾದ ಉತ್ತರ ಸಿಗುತ್ತದೆ ಮತ್ತು ಭವಿಷ್ಯದಲ್ಲಿ ಆತನು ನಿನ್ನ ಜೊತೆ ಇರುತ್ತಾನೆಯೇ ಎಂದು ಗೊತ್ತಾಗುತ್ತದೆ.
ಡೀಡ್ರೆ ತನ್ನ ಗೆಳೆಯನೊಂದಿಗಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಲು ಯುವತಿಯನ್ನು ಕೇಳಿದಳು, ಈ ಸಂಬಂಧದ ಬಗ್ಗೆ ತಂದೆ ಹೇಳಬೇಕು. ಇದರ ನಂತರವೂ ಅವರು ಒಪ್ಪದಿದ್ದರೆ, ಈ ಸಂಬಂಧವು ಮುಂದುವರಿಯುವುದಿಲ್ಲ ಎಂದು ಒಪ್ಪಿಕೊಳ್ಳಬೇಕು ಎಂದು ಯುವತಿ ಹೇಳಿದ್ದಾಳೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ