• Home
  • »
  • News
  • »
  • trend
  • »
  • Ancient Statues: ಇಟಲಿಯಲ್ಲಿ 2300 ವರ್ಷಗಳಷ್ಟು ಹಳೆಯದಾದ ಕಂಚಿನ ಪ್ರತಿಮೆ ಪತ್ತೆ!

Ancient Statues: ಇಟಲಿಯಲ್ಲಿ 2300 ವರ್ಷಗಳಷ್ಟು ಹಳೆಯದಾದ ಕಂಚಿನ ಪ್ರತಿಮೆ ಪತ್ತೆ!

ವಿಗ್ರಹ

ವಿಗ್ರಹ

ರೋಮ್‌ನ ಉತ್ತರಕ್ಕೆ ಸುಮಾರು 160 ಕಿಲೋಮೀಟರ್ ದೂರದಲ್ಲಿರುವ ಸಿಯೆನಾ ಪ್ರಾಂತ್ಯದ ಬೆಟ್ಟದ ಪಟ್ಟಣವಾದ ಸ್ಯಾನ್ ಕ್ಯಾಸಿಯಾನೊ ಡೀ ಬಾಗ್ನಿಯಲ್ಲಿ ಈ ಪ್ರತಿಮೆಗಳು ಕಂಡು ಬಂದಿವೆ.

  • Share this:

ಇಟಲಿಯಲ್ಲಿನ (Italy) ಪುರಾತತ್ವಶಾಸ್ತ್ರಜ್ಞರು ಟಸ್ಕನಿಯ ಉಷ್ಣ ಸ್ನಾನಗೃಹಗಳಲ್ಲಿ ಪ್ರಾಚೀನ ರೋಮನ್ ಕಾಲದ 2300 ವರ್ಷಗಳಷ್ಟು ಹಳೆಯದಾದ (Old) 24ಕ್ಕಿಂತ ಹೆಚ್ಚು ಸುಂದರವಾಗಿ ಸಂರಕ್ಷಿಸಲ್ಪಟ್ಟ ಕಂಚಿನ ಪ್ರತಿಮೆಗಳನ್ನು ಪತ್ತೆಹಚ್ಚಿದ್ದಾರೆ, ದೇವರುಗಳು, ಮಾತೃಗಳು, ಕನ್ಯೆಯರು, ಚಕ್ರವರ್ತಿಗಳ ಪ್ರತಿಮೆಯು ನೀರಿನಲ್ಲಿ ಮುಳುಗಿ ಹೋಗಿದ್ದವು. ಈದೀಗ ಈ ಸುಂದರವಾದ ಎಲ್ಲಾ ಪ್ರತಿಮೆಗಳನ್ನು(Statues) ಪತ್ತೆ ಹಚ್ಚಿ ಹೊರತರಲಾಗಿದೆ.


2019 ರಿಂದ ಅನ್ವೇಷಣೆ ಕಾರ್ಯ
ರೋಮ್‌ನ ಉತ್ತರಕ್ಕೆ ಸುಮಾರು 160 ಕಿಲೋಮೀಟರ್ ದೂರದಲ್ಲಿರುವ ಸಿಯೆನಾ ಪ್ರಾಂತ್ಯದ ಬೆಟ್ಟದ ಪಟ್ಟಣವಾದ ಸ್ಯಾನ್ ಕ್ಯಾಸಿಯಾನೊ ಡೀ ಬಾಗ್ನಿಯಲ್ಲಿ ಈ ಪ್ರತಿಮೆಗಳು ಕಂಡು ಬಂದಿವೆ. ಟಸ್ಕನಿಯಲ್ಲಿ ಎಟ್ರುಸ್ಕನ್ನರು ನಿರ್ಮಿಸಿದ ಪ್ರಾಚೀನ ಸ್ನಾನಗೃಹದಲ್ಲಿ 2019 ರಿಂದ ಜಾಕೊಪೊ ಟಬೊಲ್ಲಿ ಅವರ ನೇತೃತ್ವದಲ್ಲಿ ಈ ಸ್ಥಳದಲ್ಲಿ ಮಣ್ಣಿನ ಅವಶೇಷಗಳನ್ನು ಪುರಾತತ್ತ್ವಜ್ಞರು ಅನ್ವೇಷಿಸುತ್ತಿದ್ದರು. ಮೂರು ವರ್ಷಗಳ ಸತತ ಪ್ರಯತ್ನದಿಂದಾಗಿ ತಜ್ಞರು ಸದ್ಯ 24ಕ್ಕಿಂತ ಹೆಚ್ಚು ಅದ್ಭುತವಾದ ಪ್ರತಿಮೆಗಳನ್ನು ನೀರಿನಿಂದ ಹೊರ ತಂದಿದ್ದಾರೆ.


ಯಾವೆಲ್ಲಾ ಪ್ರತಿಮೆಗಳು ಲಭ್ಯವಾಗಿವೆ?
ಲಭ್ಯವಾಗಿರುವ 24 ಪ್ರತಿಮೆಗಳು, 2,300 ವರ್ಷಗಳಷ್ಟು ಹಿಂದಿನವು ಮತ್ತು ಇದು ಇತ್ತೀಚಿನ ದಿನದ ಮಹತ್ವದ ಸಂಶೋಧನೆ ಎನ್ನಲಾಗಿದೆ. ಆರೋಗ್ಯದ ದೇವತೆಯಾದ ಹೈಜಿಯಾ, ಅದರ ಪಕ್ಕದಲ್ಲಿ ಮಲಗಿರುವ ಎಫೆಬೆ ಮತ್ತು ಅವರ ತೋಳಿನ ಸುತ್ತಲೂ ಹಾವು ಸುತ್ತಿಕೊಂಡಿರುವ ರೀತಿಯಲ್ಲಿ ಪ್ರತಿಮೆಗಳು ಲಭ್ಯವಾಗಿವೆ.


ಹದಿಹರೆಯದ ಪುರುಷ
ಎಫೆಬೆಗೆ ಹತ್ತಿರದಲ್ಲಿದೆ ಹದಿಹರೆಯದ ಪುರುಷ. ಸುಮಾರು 17-18 ವರ್ಷ ವಯಸ್ಸಿನ ಹುಡುಗನ ಪ್ರತಿಮೆ ಮತ್ತು ಹೈಜಿಯಾ ಅಪೊಲೊ ಪ್ರತಿಮೆ ಮತ್ತು ಮಾಟ್ರಾನ್‌ಗಳು, ಮಕ್ಕಳು ಮತ್ತು ಚಕ್ರವರ್ತಿಗಳನ್ನು ಪ್ರತಿನಿಧಿಸುವ ಇತರರ ಪ್ರತಿಮೆಗಳು ದೊರೆತಿವೆ.


24 ಕಂಚಿನ ಪ್ರತಿಮೆಗಳಲ್ಲಿ ಐದು ಪ್ರತಿಮೆಗಳು ಸುಮಾರು ಒಂದು ಮೀಟರ್ ಎತ್ತರವಿದೆ, ಪುರಾತತ್ತ್ವಜ್ಞರು ಸಾವಿರಾರು ನಾಣ್ಯಗಳನ್ನು ಮತ್ತು ಎಟ್ರುಸ್ಕನ್ ಮತ್ತು ಲ್ಯಾಟಿನ್ ಶಾಸನಗಳನ್ನು ಕಂಡುಕೊಂಡಿದ್ದಾರೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ತಮ್ಮ ಆರೋಗ್ಯಕ್ಕಾಗಿ ಅದೃಷ್ಟದ ಸೂಚಕವಾಗಿ ಸ್ನಾನದ ಕೊಳಕ್ಕೆ ನಾಣ್ಯಗಳನ್ನು ಎಸೆಯುತ್ತಿದ್ದರು, ಈ ಎಲ್ಲಾ ನಾಣ್ಯಗಳು ಪ್ರವಾಸಿಗರು ಎಸೆದು ಹೋದಂತವು ಎನ್ನಲಾಗಿದೆ.


ಇದನ್ನೂ ಓದಿ: OMG, ಹುಡುಗಿಯರು ರಾತ್ರಿ ಇಂಟರ್‌ನೆಟ್‌ನಲ್ಲಿ ಇವನ್ನೆಲ್ಲಾ ಸರ್ಚ್ ಮಾಡ್ತಾರಾ? ಗೂಗಲ್‌ ತೆರೆದಿಟ್ಟಿದೆ ಶಾಕಿಂಗ್ ಹಿಸ್ಟ್ರಿ!


ಉನ್ನತ ಅಧಿಕಾರಿ ಹೇಳಿಕೆ
ಸಂಸ್ಕೃತಿ ಸಚಿವಾಲಯದ ಉನ್ನತ ಅಧಿಕಾರಿ ಮಾಸ್ಸಿಮೊ ಒಸನ್ನಾ, ಇದು "ಪ್ರಾಚೀನ ಮೆಡಿಟರೇನಿಯನ್ ಇತಿಹಾಸದಲ್ಲಿ" ಅತ್ಯಂತ ಗಮನಾರ್ಹವಾದ ಆವಿಷ್ಕಾರಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. 2 ನೇ ಶತಮಾನ BC ಮತ್ತು 1 ನೇ ಶತಮಾನದ AD ನಡುವೆ ಇರುವ ಹೆಚ್ಚಿನ ಪ್ರತಿಮೆಗಳು ಲಭಿಸಿವೆ. ಮತ್ತು ಈ ಪ್ರತಿಮೆಗಳನ್ನು ಆ ಕಾಲದ ಸ್ಥಳೀಯ ಕುಶಲಕರ್ಮಿಗಳು ಕೆತ್ತಿದ್ದಾರೆ ಎಂದು ಹೇಳಲಾಗಿದೆ. ಇದು ಎಟ್ರುಸ್ಕನ್‌ನಿಂದ ರೋಮನ್ ಆಳ್ವಿಕೆಗೆ ಬದಲಾದ "ಪ್ರಾಚೀನ ಟಸ್ಕನಿಯಲ್ಲಿ ಮಹಾನ್ ರೂಪಾಂತರ" ದ ಅವಧಿಯಾಗಿದೆ ಎಂದು ಸಂಸ್ಕೃತಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.


ಉಷ್ಣ ಸ್ನಾನದ ಗೃಹದ ವಿಶೇಷತೆ
ಪುರಾತತ್ತ್ವಜ್ಞರು ಸಿಯೆನಾ ಬಳಿಯ ಸ್ಯಾನ್ ಕ್ಯಾಸಿಯಾನೊ ಡೀ ಬಾಗ್ನಿಯಲ್ಲಿರುವ ಪ್ರಾಚೀನ ಈ ಉಷ್ಣ ಸ್ನಾನದ ಗೃಹ 42 ಬಿಸಿನೀರಿನ ಬುಗ್ಗೆಗಳನ್ನು ಹೊಂದಿದೆ, ಇದು ಇಟಲಿಯ ಅತ್ಯಂತ ಜನಪ್ರಿಯ ಸ್ಪಾ ತಾಣಗಳಲ್ಲಿ ಒಂದಾಗಿತ್ತು. ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಟಸ್ಕನಿಯಲ್ಲಿ ಎಟ್ರುಸ್ಕನ್ನರು ನಿರ್ಮಿಸಿದ್ದಾರೆಂದು ನಂಬಲಾಗಿದೆ.


ಚಿಮ್ಮುವ ಕಾರಂಜಿಗಳು
ಕಾರಂಜಿಗಳು ಮತ್ತು ಬಲಿಪೀಠಗಳನ್ನು ಒಳಗೊಂಡಿರುವ ಸ್ನಾನಗೃಹ ರೋಮನ್ ಅವಧಿಯಲ್ಲಿ ಹೆಚ್ಚು ಶ್ರೀಮಂತವಾಗಿತ್ತು. ಆಗಸ್ಟಸ್ ಸೇರಿದಂತೆ ಇತರೆ ಎಲ್ಲಾ ಚಕ್ರವರ್ತಿಗಳು ತಮ್ಮ ಆರೋಗ್ಯ ಮತ್ತು ಚಿಕಿತ್ಸಕ ಪ್ರಯೋಜನಗಳಿಗಾಗಿ ಇಲ್ಲಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು.


ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸೇರಿದಂತೆ ಖನಿಜಗಳಿಂದ ಸಮೃದ್ಧವಾಗಿರುವ ಬಿಸಿನೀರಿನ ಬುಗ್ಗೆಗಳು ಐದನೇ ಶತಮಾನದವರೆಗೂ ಚಾಲ್ತಿಯಲ್ಲಿದ್ದವು. ನಂತರ ಕ್ರಿಶ್ಚಿಯನ್ ಕಾಲದಲ್ಲಿ ಇವುಗಳನ್ನು ಮುಚ್ಚಲಾಯಿತು, ಮುಚ್ಚುವ ಮೊದಲು ಕೊಳಗಳನ್ನು ಬೃಹತ್ ಕಲ್ಲಿನ ಕಂಬಗಳಿಂದ ಮುಚ್ಚಲಾಯಿತು ಮತ್ತು ದೈವಿಕ ಪ್ರತಿಮೆಗಳನ್ನು ಪವಿತ್ರ ನೀರಿನಲ್ಲಿ ಬಿಡಲಾಯಿತು ಎಂದು ಇತಿಹಾಸವು ಹೇಳುತ್ತದೆ.

First published: